ಹಿಂದೂ ಯುವತಿಯರಿಗೆ ನಾನು 25 ವರ್ಷಗಳಿಂದ ಹೇಳುತ್ತಾ ಬಂದಿದ್ದಾನೆ. ವಿಚಾರ ಮಾಡಿ ಮುಂದೆ ಹೆಜ್ಜೆ ಇಡಿ ಅಂತಾ. ಇಂತಹ ಘಟನೆಗಳು ಆದಮೇಲೂ ನಿಮ್ಮ ಕಣ್ಣು ತೆರೆದಿಲ್ಲ ಎಂದ್ರೆ ಏನು ಹೇಳೋದು? ಅಲ್ತಾಪ್ ಎಂಬ ಹೆಸರನ್ನು ನೋಡಿದರೆ ನೀವು ತಿಳಿದುಕ್ಕೊಳ್ಳಬೇಕಿತ್ತು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ಬೆಂಗಳೂರು (ಆ.25): ಕಾರ್ಕಳದ ಹಿಂದೂ ಯುವತಿ ಮೇಲೆ ಕ್ರೌರ್ಯವಾಗಿ, ಹೇಯವಾಗಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಅಲ್ತಾಪ್ ಎಂಬ ಯುವಕ ಹಿಂದೂ ಯುವತಿಯನ್ನ ಇನ್ಸ್ಟಾಗ್ರಾಂ ನಲ್ಲಿ ಪರಿಚಯ ಮಾಡಿಕ್ಕೊಂಡಿದ್ದಾನೆ. ಅವಳನ್ನು ಕರೆದುಕೊಂಡು ಹೋಗಿ ಅಮಲು ಪದಾರ್ಥ ನೀಡಿ ಅತ್ಯಾಚಾರ ಮಾಡಿದ್ದಾನೆ. ಅವನ ಜೊತೆ ಆತನ ಗೆಳೆಯರು ಇದ್ದಾರೆ ಇದು ಸಾಮೂಹಿಕ ಅತ್ಯಾಚಾರ ನಾನಿದನ್ನು ಖಂಡಿಸುತ್ತೇನೆ ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಯುವತಿಯರಿಗೆ ನಾನು 25 ವರ್ಷಗಳಿಂದ ಹೇಳುತ್ತಾ ಬಂದಿದ್ದಾನೆ. ವಿಚಾರ ಮಾಡಿ ಮುಂದೆ ಹೆಜ್ಜೆ ಇಡಿ ಅಂತಾ. ಇಂತಹ ಘಟನೆಗಳು ಆದಮೇಲೂ ನಿಮ್ಮ ಕಣ್ಣು ತೆರೆದಿಲ್ಲ ಎಂದ್ರೆ ಏನು ಹೇಳೋದು? ಅಲ್ತಾಪ್ ಎಂಬ ಹೆಸರನ್ನು ನೋಡಿದರೆ ನೀವು ತಿಳಿದುಕ್ಕೊಳ್ಳಬೇಕಿತ್ತು. ಹಿಂದೂ ಹೆಣ್ಣು ಮಕ್ಕಳನ್ನು ಬಳಸಿಕೊಂಡು ಲವ್ ಜಿಹಾದ್ ಮಾಡೋದು, ಹಿಂದೂ ಮಹಿಳೆಯರನ್ನು ರೇಪ್ ಮಾಡಲಿಕ್ಕೆ, ಕೊಲೆ ಮಾಡಲಿಕ್ಕೆ ಎಂಬುದನ್ನು ಹಿಂದೂ ಯುವತಿಯರು ಅರ್ಥ ಮಾಡಿಕೊಳ್ಳಬೇಕು. ಹಿಂದೂ ಯುವತಿಯರನ್ನ ಪ್ರೀತಿ ಪ್ರೇಮ ದ ಹೆಸರಲ್ಲಿ ಬಲೆಗೆ ಬೀಳಿಸೋದು ಮತಾಂತರ ಮಾಡೋದು ಭಯೋತ್ಪಾದನೆಗೆ ಬಳಕೆ ಮಾಡಿಕೊಳ್ಳುವುದು ಎಂಬುದು ಬಹಿರಂಗವಾಗಿದೆ ಇಷ್ಟಾದರೂ ಹಿಂದೂ ಯುವತಿಯರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದರೆ ಏನು ಹೇಳಬೇಕು? ಎಂದರು.
undefined
ಹಿಂದೂ ಯುವತಿ ಮೇಲೆ ನನ್ನ ಮಗ ಅತ್ಯಾಚಾರ ನಡೆಸಿದ್ದು ನನಗೆ ಗೊತ್ತಿಲ್ಲ: ಆರೋಪಿ ಅಲ್ತಾಫ್ ತಾಯಿ ಮಾತು!
ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ 23 ಬಾರಿ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಇದೆಲ್ಲ ಇಸ್ಲಾಂನ ಕೃತ್ಯ. ಇಷ್ಟಾದರೂ ಹಿಂದೂ ಯುವತಿಯರಿಗೆ ಬುದ್ಧಿ ಬಂದಿಲ್ಲ. ಇಸ್ಲಾಂ ಇಂತಹ ಘಟನೆ ಮಾಡೋದಕ್ಕೆ ಪ್ರಚೋದನೆ ಕೊಡೋದಕ್ಕೆ ನಾನು ಧಿಕ್ಕಾರ ಹೇಳ್ತೇನೆ. ಮುಲ್ಲಾ, ಮೌಲ್ವಿಗಳು ಇಂತಹ ಪ್ರಕರಣಗಳನ್ನು ತಡೆಗಟ್ಟಬೇಕು. ರಾಜ್ಯದಲ್ಲಿ ಒಂದೇ ವಾರದಲ್ಲಿ 18 ಘಟನೆಗಳು ನಡೆದಿವೆ. ಪೊಲೀಸ್ ಇಲಾಖೆ ರಾಜಕಾರಣಿಗಳು, ಮಂತ್ರಿಗಳ ಪ್ರಭಾವದಿಂದ ಪ್ರಕರಣ ಮುಚ್ಚಿಹಾಕುವ ಕೆಲಸ ಮಾಡದೇ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಈ ರೀತಿ ಹತ್ಯೆ, ಅತ್ಯಾಚಾರಕ್ಕೆ ಒಳಗಾದ ಹಿಂದೂ ಯುವತಿಯರಿಗೆ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಪೊಲೀಸರು ಮಾಡಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ , ಬಹಿಷ್ಕಾರ ಹಾಕಬೇಕು ಎಂದರು.
ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿದರೆ ಸಾಲದು. ಕಾರ್ಕಳದ ಮುಸ್ಲಿಮರಿಗೆ ವ್ಯಾಪಾರದಲ್ಲೂ ಬಹಿಷ್ಕಾರ ಹಾಕಬೇಕು. ಅತ್ಯಾಚಾರಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು. ಇಂತಹ ಪ್ರಕರಣಗಳಲ್ಲಿ ಕೋರ್ಟ್ ಕೂಡಾ ಬೇಗನೆ ನಿರ್ಣಯ ತೆಗೆದುಕ್ಕೊಳ್ಳಬೇಕು. ಅಲ್ತಾಫ್ ವಿಚಾರದಲ್ಲಿ ಯಾವ ವಕೀಲರು ಕೂಡ ವಕಾಲತ್ತು ಮಾಡಬಾರದು ಎಂದರು.