ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿದೆ. ಇದು ಜೈಲಿನಲ್ಲಿ ನಿಯಮಗಳ ಉಲ್ಲಂಘನೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೆಂಗಳೂರು (ಆ.25): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿ (RenukaSwamy) ಕೊಲೆ ಮಾಡಿದ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿರುವ ಆರೋಪಿ ನಟ ದರ್ಶನ್ ಬಗೆಗೆ ಏಷ್ಯಾನ್ಯೂಟ್ ಸುವರ್ಣನ್ಯೂಸ್ ನ ಬಿಗ್ ಎಕ್ಸ್‌ಕ್ಲೂಸಿವ್ ಸುದ್ದಿ ಇದು. 65 ದಿನಗಳಿಂದ ಜೈಲಿನಲ್ಲಿರುವ ನಟ ದರ್ಶನ್ (Actor Darshan) ಜೈಲಿನಲ್ಲಿ ಸಿಗರೇಟ್ ಸೇದುತ್ತಿರುವ ಫೋಟೋವೊಂದು ವೈರಲ್ ಆಗಿದೆ.
ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಕುಳಿತು ಬೆಂಗಳೂರಿನ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಕುಳಿತುಕೊಂಡು ದರ್ಶನ್ ಸಿಗರೇಟ್ ಸೇದುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ. ಪ್ಲಾಸ್ಟಿಕ್ ಚಯರ್ ನಲ್ಲಿ ಕುಳಿತುಕೊಂಡಿರುವ ದರ್ಶನ್, ಒಂದು ಕೈನಲ್ಲಿ ಟೀ ಕಪ್ ಮತ್ತು ಇನ್ನೊಂದು ಕೈನಲ್ಲಿ ಸಿಗರೇಟ್ ಹಿಡಿದುಕೊಂಡಿದ್ದಾನೆ. ಆತನ ಜೊತೆಗೆ ಮತ್ತೊಬ್ಬ ಕೈದಿಯಾಗಿರುವ ಮ್ಯಾನೇಜರ್ ನಾಗರಾಜ್ ಕೂಡ ಇದ್ದಾನೆ. ದರ್ಶನ್ ಕೂದಲು ತೆಗೆದಿರುವುದು ಫೋಟೋದಲ್ಲಿ ಕಂಡುಬಂದಿದೆ. ಮತ್ತೋರ್ವ ಕುಳ್ಳ ಸೀನ ಎಂದು ತಿಳಿದುಬಂದಿದೆ.
ಅಕ್ರಮ ಚಟುವಟಿಕೆ: ನಟ ದರ್ಶನ್ ಇದ್ದ ಜೈಲಿನ ಮೇಲೆ ದಿಢೀರ್ ದಾಳಿ
ಮಾತ್ರವಲ್ಲ ಈ ಫೋಟೋ ಹೇಗೆ ಹೊರಗಡೆ ಬಂತು ಎಂಬ ಕಥೆ ಕೂಡ ಕುತೂಹಲವಾಗಿದೆ. ವೇಲು ಅನ್ನುವ ಖೈದಿ ಈ ಫೋಟೋವನ್ನು ತೆಗೆದಿದ್ದು, ತನ್ನ ಹೆಂಡತಿಗೆ ಆತ ಜೈಲಿನಿಂದ ಫೊಟೋ ಕಳುಹಿಸಿದ್ದ. ಈಗ ಅದು ಹೊರಬಂದಿದೆ. ಜೈಲಿನಲ್ಲಿ ನಿಯಮಗಳನ್ನು ಮೀರಿ ಖೈದಿಗಳಿಗೆ ಮದ್ಯ ಸಿಗರೇಟ್ ಸಪ್ಲೈ ಮಾಡಲಾಗುತ್ತಿದೆ ಎಂದು ಹಲವು ಬಾರಿ ಆರೋಪ ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಈ ಫೋಟೋ ಸಾಕ್ಷ್ಯ ಹೇಳುತ್ತಿದೆ ದರ್ಶನ್ ಈ ಸುದ್ದಿ.
ಜೈಲು ಅವ್ಯವಸ್ಥೆ ಬಗ್ಗೆ ಹಲವು ಅನುಮಾನ, ಪ್ರಶ್ನೆಗಳು: ಇದೀಗ ಕೊಲೆ ಆರೋಪಿ ದರ್ಶನ್‌ಗೆ ಜೈಲಲ್ಲಿ ಸಿಗರೇಟ್ ಸಿಕ್ಕಿದ್ದು ಹೇಗೆ..? ದುಡ್ಡು ಕೊಟ್ರೆ ಜೈಲಲ್ಲಿ ಏನು ಬೇಕಾದ್ರೂ ಸಿಗುತ್ತಾ? ಜೈಲಲ್ಲೂ ಕೊಲೆ ಆರೋಪಿಯ ಐಷಾರಾಮಿ ಲೈಫ್ ಇರುತ್ತಾ ಎಂಬ ಪ್ರಶ್ನೆಗಳು ಎದ್ದಿದೆ. ಬೆಳಗಾದ್ರೆ ಸಾಕು ಬೆಡ್ ಕಾಫಿ ಸಿಗ್ತಿದೆಯಾ? ಬೇಕು ಎಂದಾಗಲೆಲ್ಲಾ ಸಿಗರೇಟ್ ಸಿಗುತ್ತಾ? ಮನೆ ಊಟ ಬೇಕು ಎಂದವನಿಗೆ ಸಿಗ್ತಿದೆಯಾ ಎಲ್ಲಾ ಭಾಗ್ಯ? ಮನೆಯೂಟ ಬೇಕು ಎನ್ನುತ್ತಿರುವುದು ಕೇವಲ ತೋರಿಕೆಗೆ ಮಾತ್ರವಾ? ದರ್ಶನ್ ಫೋಟೋ ತೆಗೆದ ವೇಲುಗೆ ಮೊಬೈಲ್ ಸಿಕ್ಕಿದ್ದು ಹೇಗೆ? ಆತ ಇಂಟರ್ನೆಟ್ ಬಳಸಿ ಮನೆಗೆ ಫೋಟೋ ಕಳಿಸಿದ್ದು ಹೇಗೆ? ಜೈಲು ವ್ಯವಸ್ಥೆ ಬಗ್ಗೆಯೇ ಅತೀ ದೊಡ್ಡ ಅನುಮಾನ ಮೂಡುತ್ತಿದೆ.
ದರ್ಶನ್ ಕೂತಿರುವ ಜಾಗ ಯಾವುದು ಗೊತ್ತಾ..?
ಜೈಲಲ್ಲಿರುವ ವಿಡಿಯೋ ಕಾನ್ಫರೆನ್ಸ್ ಹಾಲ್ನ ಹಿಂಭಾಗದ ಸ್ಥಳವಿದು. ವಿಲ್ಸನ್ ಗಾರ್ಡನ್ ನಾಗನ ಸೆಲ್ ಪಕ್ಕದ ಜಾಗದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಈ ವೇಳೆ ಕೈದಿ ವೇಲು ಫೋಟೋ ತೆಗೆದು, ಜೈಲಿನಿಂದಲೇ ಹೆಂಡತಿಗೆ ಫೋಟೋವನ್ನು ವಾಟ್ಸಾಪ್ ಮಾಡಿದ್ದಾನೆ. ಕೊಲೆ ಆರೋಪಿ ದರ್ಶನ್‌ಗೆ ಜೈಲಲ್ಲಿ ಅನುಕೂಲಕರ ವ್ಯವಸ್ಥೆ ಇದೆ. ಆರೋಪಿಗಳು ಜೈಲಿನ ಆವರಣದಲ್ಲಿ ಕುಳಿತುಕೊಳ್ಳಲು ಚೇರಿನ ವ್ಯವಸ್ಥೆ ಇದೆ. ದರ್ಶನ್‌ಗೆ ಜೈಲಲ್ಲಿ ವಿಲ್ಸನ್ ಗಾರ್ಡನ್ ನಾಗ ಸಾಥ್ ನೀಡಿದ್ದಾನೆ. ದರ್ಶನ್ ಪಕ್ಕದಲ್ಲೇ ವಿಲ್ಸನ್ ಗಾರ್ಡನ್ ನಾಗ ಕುಳಿತು ಹರಟೆ ಹೊಡೆಯುತ್ತಿದ್ದಾನೆ.
ಕಳೆದ ಜೂನ್ ನಲ್ಲಿ ನಾಗನ ಭೇಟಿಗೆ ಉದ್ದೇಶಿಸಿದ್ದ ದರ್ಶನ್: ಜೈಲಿಗೆ ಹೋದ ಕ್ಷಣದಿಂದ ಜೈಲು ಅಧಿಕಾರಿಗಳ ಬಳಿ ವಿಲ್ಸನ್ ಗಾರ್ಡನ್ ನಾಗನನ್ನ(Wilson Garden Naga) ಭೇಟಿಮಾಡಲು ಅವಕಾಶ ಕೊಡಿ ಎಂದು ದರ್ಶನ್ ದಂಗಾಲು ಬಿದ್ದಿದ್ದ. ರೌಡಿ ಮಹೇಶನ ಕೊಲೆ ಕೇಸ್‌ನಲ್ಲಿ ವಿಲ್ಸನ್ ಗಾರ್ಡನ್ ನಾಗ ಜೈಲು ಸೇರಿದ್ದಾನೆ. ಕಳೆದ 11 ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಇದ್ದಾನೆ. ನಾಗನ ವಿರುದ್ಧ ಕೊಲೆ, ಕೊಲೆಯತ್ನ, ಸುಲಿಗೆ ಸೇರಿ 15 ಕ್ಕೂ ಹೆಚ್ಚು ಕೇಸ್ ಗಳು ಇವೆ. ಯಾವ ಕಾರಣಕ್ಕೆ ನಾಗನ ಭೇಟಿಗೆ ನಟ ದರ್ಶನ್ ಯತ್ನಿಸುತ್ತಿದ್ದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ದಾಸನ ಆತಿಥ್ಯಕ್ಕೆ ನಡೆದಿತ್ತು ಎರಡು ರೌಡಿ ಗ್ಯಾಂಗ್ ಪೈಪೋಟಿ:
13 ವರ್ಷಗಳ ನಂತರ ಮತ್ತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ(Parappana Agrahara Jail) ದರ್ಶನ್‌ಗೆ ಅತಿಥ್ಯ ನೀಡಲು ರೌಡಿಗಳ ಪಡೆ ನಾ ಮುಂದು ತಾ ಮುಂದು ಎಂದು ಬಂದಿದೆ ಎಂದು ಕಳೆದ ಜೂನ್ ನಲ್ಲಿ ಸುದ್ದಿಯಾಗಿತ್ತು. ಈ ವಿಚಾರವನ್ನು ಕೂಡ ಸುವರ್ಣನ್ಯೂಸ್ ಬ್ರೇಕ್ ಮಾಡಿತ್ತು. ಕುಖ್ಯಾತ ವಿಲ್ಸನ್ ಗಾರ್ಡನ್ ನಾಗ ಹಾಗೂ ಸೈಕಲ್ ರವಿ ಕಡೆಯಿಂದ ದರ್ಶನ್ ನೋಡಿಕೊಳ್ಳಲು ಪೈಪೋಟಿ ಇದೆ ಎನ್ನಲಾಗಿತ್ತು. 2011ರಲ್ಲಿ ದರ್ಶನ್ ಜೈಲಲ್ಲಿದ್ದಾಗ ಸೈಕಲ್ ರವಿ ಅತಿಥ್ಯ ನೀಡಿದ್ದ ಎನ್ನಲಾಗಿದೆ. ಈಗಲೂ ತಾನೇ ನೀಡುತ್ತೇವೆ ಎಂದು ಸೈಕಲ್ ಗ್ಯಾಂಗ್ ಮುಂದಾಗಿತ್ತು. ಆದರೆ ಸೈಕಲ್ ರವಿ ಜೈಲಲ್ಲಿ ಇಲ್ಲ. ಇದಕ್ಕಾಗಿ ರವಿಯ ಬಂಟನೊಬ್ಬ ಹಳೆ ಕೇಸಲ್ಲಿ ಜೈಲು ಸೇರೋ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಈಗ ಕೊನೆಗೂ ವಿಲ್ಸನ್ ಗಾರ್ಡನ್ ನಾಗನ ಬಳಿಮ ದರ್ಶನ್ ಹರ ಎ ಹೊಡೆಯುತ್ತಿರುವುದು ಬೆಳಕಿಗೆ ಬಂದಿದೆ.