ಜಿಲ್ಲೆಯಲ್ಲಿ ಲವ್ ಜಿಹಾದ್, ಅತ್ಯಾಚಾರದಂತ ಕ್ರಿಮಿನಲ್ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ಅದರಲ್ಲೂ ಇತ್ತೀಚೆಗೆ ಮತಾಂತರಕ್ಕೆ ಯತ್ನ ನಡೆದಿರುವುದು. ಯಾದಗಿರಿಯಲ್ಲಿ ಸದ್ದಿಲ್ಲದೇ ಮತಾಂತರ ಜಾಲ ಹೆಚ್ಚಳವಾಗುತ್ತಿರುವುದು ಬೆಚ್ಚಿಬಿಳಿಸಿದೆ.
ಯಾದಗಿರಿ (ಆ.25): ಜಿಲ್ಲೆಯಲ್ಲಿ ಲವ್ ಜಿಹಾದ್, ಅತ್ಯಾಚಾರದಂತ ಕ್ರಿಮಿನಲ್ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ಅದರಲ್ಲೂ ಇತ್ತೀಚೆಗೆ ಮತಾಂತರಕ್ಕೆ ಯತ್ನ ನಡೆದಿರುವುದು. ಯಾದಗಿರಿಯಲ್ಲಿ ಸದ್ದಿಲ್ಲದೇ ಮತಾಂತರ ಜಾಲ ಹೆಚ್ಚಳವಾಗುತ್ತಿರುವುದು ಬೆಚ್ಚಿಬಿಳಿಸಿದೆ.
ಹೌದು ಯಾದಗಿರಿ ಜಿಲ್ಲೆಯಲ್ಲಿ ಕಳೆದ ವಾರವಷ್ಟೇ ಬಡವರನ್ನು ಟಾರ್ಗೆಟ್ ಮಾಡಿಕೊಂಡು ಬೆಂಗಳೂರು ಮೂಲದ ಇಬ್ಬರು ಕ್ರಿಶ್ಚಿಯನ್ ಮಹಿಳೆರಿಂದ ಮತಾಂತರ ಯತ್ನ ನಡೆದಿತ್ತು. ಹಿಂದೂ ದೇವರುಗಳನ್ನು ನಿಂದಿಸಿ ಭೂಲೋಕದಲ್ಲಿ ದೇವರಿದ್ದರೆ ಅದು ಯೇಸು ಕ್ರಿಸ್ತ ಮಾತ್ರ ಎಂದು ಮುಗ್ಧ ಜನರಿಗೆ ಬ್ರೈನ್ ವಾಶ್ ಮಾಡುವ ಕೆಲಸ ಮಾಡಿದ್ದ ಮಿಷನರಿಗಳು ಈ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಪೊಲೀಸರು ವಶಕ್ಕೆ ಪಡೆದಿದ್ದರು. ಅದಾಗಿ ವಾರ ಕಳೆದಿಲ್ಲ. ಇದೀಗ ಮತ್ತೊಮ್ಮೆ ಮತಾಂತರ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.
undefined
ಹಿಂದೂಗಳ ಮನೆಗೆ ತೆರಳಿ ಮತಾಂತರಕ್ಕೆ ಯತ್ನ? ಕ್ರಿಶ್ಚಿಯನ್ ಮಹಿಳೆಯರನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು
ನಿನ್ನೆ ರಾತ್ರಿ ಸಹ ನಗರದ ಹೊರ ಭಾಗದಲ್ಲಿರುವ ಗಿರಿನಗರಕ್ಕೆ ಫಾಸ್ಟರ್ ಸೇರಿ ಕ್ರಿಶ್ಚಿಯನ್ ಧರ್ಮದ ಆರೇಳು ಜನರ ತಂಡ ಬಂದಿದೆ. ಬಡಾವಣೆಯ ಆಂಜನೇಯ ದೇವಸ್ಥಾನದ ಬಳಿ ನಿಂತು ಪ್ರಾರ್ಥನೆ ಮಾಡು ಮತಾಂತರಕ್ಕೆ ಪ್ರೇರಣೆ ನೀಡಿದ್ದರು. ಈ ಬಡಾವಣೆಯಲ್ಲಿ ಬುಡುಗ ಜಂಗಮ ಸಮುದಾಯದವರೇ ಹೆಚ್ಚಿದ್ದಾರೆ. ಹೀಗಾಗಿ ಮಿಷನರಿಗಳು ಗಿರಿನಗರ ಬಡಾವಣೆಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಮೂಡಿಸಿದೆ.
ಬಡಾವಣೆಗೆ ಬಂದು ಹಿಂದೂ ಧರ್ಮ ಹಾಗೂ ದೇವರುಗಳನ್ನು ಹಿಯಾಳಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಆಹ್ವಾನ ನೀಡಿದ್ದಾರೆ. ಮುಂದೊಂದು ದಿನ ಎಲ್ಲ ಧರ್ಮಗಳು ಅಳಿದು ಕ್ರಿಶ್ಚಿಯನ್ ಧರ್ಮ ಮಾತ್ರ ಉಳಿಯೋದು. ಜಗತ್ತಿಗೆ ಒಳತಿ ಮಾಡೋದು ಕೇವಲ ಯೇಸು ಕ್ರಿಸ್ತ ಮಾತ್ರ ಎಂದು ಹೇಳಿದ್ದಾರೆ. ಈ ವೇಳೆ ಜನರಿಗೆ ಹಣ, ನಿವೇಶನದ ಆಸೆ ತೋರಿಸಿರುವ ಆರೋಪವೂ ಕೇಳಿಬಂದಿದೆ. ಇಲ್ಲಿನ ಜನರ ಬಡತನವನ್ನೇ ಬಂಡವಾಳ ಮಾಡಿಕೊಂಡು ಕ್ರಿಶ್ಚಿಯನ್ ಧರ್ಮಕ್ಕೆ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಈಗಾಗಲೇ ಕಳೆದ ಒಂದುವರೆ ವರ್ಷದಿಂದ 30 ಕ್ಕೂ ಅಧಿಕ ಕುಟುಂಬಗಳು ಮತಾಂತರವಾಗಿದ್ದಾರೆ.
ಆ ಬಾಲಿವುಡ್ ಹೀರೋಯಿನ್ ಅನ್ನು ಮದುವೆಯಾಗಲು ಆತ ಹಿಂದೂ ಧರ್ಮ ತೊರೆದು ಇಸ್ಲಾಂ ಸೇರಿದ!
ಹಂತ ಹಂತವಾಗಿ ಮತಾಂತರ ಮಾಡಲು ಮುಂದಾಗಿರುವ ಫಾಸ್ಟರ್ ಆ್ಯಂಡ್ ಟೀಮ್. ಮೊನ್ನೆಯಷ್ಟೇ ಯಾದಗಿರಿ ನಗರದ ಲಕ್ಷ್ಮಿ ಬಡಾವಣೆಯಲ್ಲಿ ಹಿಂದೂಗಳ ಮನೆಗಳಿಗೆ ಹೋಗಿ ಧರ್ಮ ಪ್ರಚಾರ ಮಾಡಿದ್ದ ಇಬ್ಬರು ಕ್ರಿಶ್ಚಿಯನ್ ಮಹಿಳೆಯರು. ಮತಾಂತರಕ್ಕೆ ಮುಂದಾಗಿದ್ದ ವಿರುದ್ಧ ಕ್ರಮಕ್ಕೆ ಸ್ಥಳೀಯರು ಹಿಂದೂಪರ ಸಂಘಟನೆಗಳು ಆಗ್ರಹಿಸಿ ದೂರು ನೀಡಿದ್ದರು. ಇದೀಗ ಘಟನೆ ನಡೆದು ವಾರ ಕಳೆಯುವ ಮುನ್ನವೇ ಮತ್ತೆ ಮತಾಂತರಕ್ಕೆ ಯತ್ನ ನಡೆಸಿರುವುದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.