ಮೋದಿ ರೀತಿ ಟಿವಿ ಮುಂದೆ ಕೂತು ನಾವು ಭಜನೆ, ಚಪ್ಪಾಳೆ ಹೊಡೆಯಲ್ಲ, SIR ಕುರಿತು ಪ್ರಿಯಾಂಕ್ ವಾಗ್ದಾಳಿ

Published : Oct 03, 2026, 05:08 PM IST
Priyank Kharge

ಸಾರಾಂಶ

ನಾವು ಮೋದಿ ರೀತಿ ರೇಡಿಯೋ, ಟಿವಿ ಮುಂದೆ ಕೂತು ಭಜನೆ ಮಾಡಲ್ಲ, ಚಪ್ಪಾಳೆ ಹೊಡೆಯಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಎಸ್ಐಆರ್ ಅಕ್ರಮ ಕುರಿತು ಪ್ರತಿಕ್ರಿಯೆ ನೀಡಿದ ಖರ್ಗೆ, ಮೋದಿ, ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.

ಬೆಂಗಳೂರು (ಅ.03) ಎಸ್ಐಆರ್‌ನಲ್ಲಿ ಅಕ್ರಮ ನಡೆಯುತ್ತಿದೆ. ಈ ಕುರಿತು ತನಿಖೆ ಮಾಡುತ್ತೇವೆ. ಎಸ್ಐಟಿ, ಸಿಐಡಿಯಿಂದಲೂ ತನಿಖೆ ಮಾಡಿಸುತ್ತೇವೆ ಎಂದು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅಲ್ಪಸಂಖ್ಯಾತರು, ಎಸ್ ಸಿ ಎಸ್ ಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಟಾರ್ಗೆಟ್ ಮಾಡಿ‌ ತೆಗೆಸಿದ್ದಾರೆ. ಈ ಬಗ್ಗೆ ಸಮಗ್ರವಾದ ತನಿಖೆ ನಡೆಯಬೇಕು. ಎಸ್ ಐಟಿ ರಚನೆ ಅಥವಾ ಸಿಐಡಿಯಿಂದಲೂ ತನಿಖೆ ಮಾಡಿಸುತ್ತೇವೆ. ಹಲವು ಪ್ರಕರಣಗಳಲ್ಲಿ ಸಿಐಡಿಯಿಂದ ತನಿಖೆ ನಡೆಸಿದ್ದೇವೆ. ಎಸ್ ಐಆರ್ ಅಂದ್ರೆ ಸಂಘದ ಮತಪಟ್ಟಿ‌ ಪರಿಷ್ಕರಣೆ, ನಾವು ಮೋದಿ ರೀತಿ ರೇಡಿಯೋ, ಟಿವಿ ಮುಂದೆ ಕೂತು ಭಜನೆ ಮಾಡಲ್ಲ, ಚಪ್ಪಾಳೆ ಹೊಡೆಯಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬಿಜೆಪಿಯವರ ವಿರುದ್ಧ ದೂರು ನೀಡಬೇಕು

ನಮ್ಮ ವಿರುದ್ದ ಕಂಪ್ಲೇಂಟ್ ಕೊಡೋಕೆ ಬಿಜೆಪಿಯನರು ಎಡಿಜಿಪಿ ಕಚೇರಿಗೆ ಹೋಗಿದ್ದಾರೆ. ಮೊದಲು ಇವರ ವಿರುದ್ದ ಕೇಸ್ ಹಾಕಬೇಕು. ವಿಜಯಪುರದಲ್ಲಿ 1200 ಕ್ಕೂ ಹೆಚ್ಚು ಫಾರ್ಮ್ ಸೆವೆನ್ ಹೇಗೆ ಕೊಟ್ರು..? ನಮ್ಮ ವೋಟ್ ತೆಗೆಸಲು ಇವರು ಯಾರು..? ನಾವು ಸಿಇಓಗೆ ಕಂಪ್ಲೇಂಟ್ ಕೊಡಲು ಹೋಗಿದ್ವಿ. ಸಿಇಓ ನಮ್ಮ ಮೇಲೆ‌ ಕಂಪ್ಲೇಂಟ್ ಏನಾದ್ರೂ ಕೊಟ್ಟಿದ್ದಾರಾ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆಸಿದ್ದಾರೆ.

ಯಾರು ಸಾಂವಿಧಾನ ಉಳಿಸಬೇಕು

1600 ಪ್ರಿಂಟ್ ಕೊಡಲು ಸಾಧ್ಯನಾ? ಪೂರ್ವ ನಿಯೋಜಿತವಾಗಿ ಎರಡು ಸಮುದಾಯದ ಮತಗಳನ್ನ ತೆಗೆಯುವ ಕೆಲಸ ಆಗುತ್ತಿದೆ. ಅಕ್ರಮ ಆಗುತ್ತಿರುವ ಬಗ್ಗೆ ಧ್ವನಿ ತೆಗೆಯಬಾರದಾ? ಯಾರು ಸಾಂವಿಧಾನ ಉಳಿಸಬೇಕು. ಅವರೇ ಬಿಜೆಪಿ ಆರ್ ಎಸ್ ಎಸ್ ಮಾತು ಕೇಳಿ ಈ ರೀತಿ ಮಾಡಿದ್ದಾರೆ. ಅದನ್ನು ನಾವು ಪ್ರಶ್ನಿಸಬಾರದಾ? ರಾಹುಲ್ ಗಾಂಧಿ ಜನರ ಹಕ್ಕುಗಳ ಬಗ್ಗೆ ಮತನಾಡುತ್ತಿದ್ದಾರೆ. ಇವರು ಮನ್ ಕಿ ಬಾತ್ ಕೇಳಿಕೊಂಡು ಬರುತ್ತಾರೆ. ಇ ಸಿ ಅವರು ದೂರು ಕೊಟ್ಟರೆ ತನಿಖೆ ಮಾಡಬಹುದು. ಅಳಂದ ಪ್ರಕರಣದಲ್ಲಿ ಎಸ್ ಐ ಟಿ ಮಾಡದೆ ತನಿಖೆ ಮಾಡಿದ್ವಿ. ಎಸ್ ಐ ಟಿ ಅಂತ ಅಲ್ಲ ಸಿ ಐಡಿಯಿಂದಲೂ ತನಿಖೆ ಮಾಡಬಹುದು. ದೂರುಗಳೇ ಈಗಾಗಲೇ ಬರ್ತಿವೆ ಎಂದು ಖರ್ಗೆ ಹೇಳಿದ್ದಾರೆ.

ರಾಜ್ಯದಿಂದ ಸಾಕಷ್ಟು ತೆರಿಗೆ ಕೊಡುತ್ತಿದ್ದೇವೆ. ಅದಕ್ಕೆ ತಕ್ಕಂತೆ ಅನುದಾನ ಕೊಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಬರ ಪರಿಸ್ಥಿತಿ ನಿರ್ವಹಣೆಗೆ ಅನುದಾನಕ್ಕೆ ಮನವಿ ಮಾಡಿದ್ದೇವೆ . ಆದರೆ ಅದನ್ನು ಅವರು ತಿರಸ್ಕಾರ ಮಾಡಿದ್ದಾರೆ . 16ನೇ ಹಣಕಾಸು ಆಯೋಗದಲ್ಲಿ ಅಲ್ಪ ಸ್ವಲ್ಪ ಸಹಾಯ ಮಾಡಲು ಮುಂದಾಗಿದ್ದಾರೆ. ಬರದ ವಿಚಾರದಲ್ಲಿ ನಮ್ಮ ಕೈಯನ್ನು ಕಟ್ಟಿ ಹಾಕಿದ್ದಾರೆ. ಮಾನದಂಡ ಕೇಂದ್ರದ್ದು ಪರಿಹಾರ ಕೊಡುವಂತದ್ದು . ಕೇಂದ್ರ ಸರ್ಕಾರ ನಮ್ಮ ಕಡೆಯಿಂದ ಬರ ಸಮಸ್ಯೆಯ ಬಗ್ಗೆ ಎಲ್ಲಾ ರಿಪೋರ್ಟುಗಳು ರೆಡಿ ಇದೆ. ಕೇಂದ್ರ ಸರ್ಕಾರ ಮಾನವೀಯತೆ ದೃಷ್ಟಿಯಿಂದ ನೋಡಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಪಕ್ಷಾತೀತವಾಗಿ ಪರಿಹಾರ ಕೇಳಲು ಹೋಗೋಣ ಎಂದು ಸಿಎಂ ಹೇಳಿದ್ದಾರೆ. ಆದರೆ ಬಿಜೆಪಿಯವರು ಬರಲು ಆಗುವುದಿಲ್ಲ ಎಂದು ದೂರ ಉಳಿದಿದ್ದಾರೆ. ನಮ್ಮ ಬಳಿ ತೆರಿಗೆ ತೆಗೆದುಕೊಳ್ಳುವಾಗ ಸಂಬಂಧಗಳು ಬಿಜೆಪಿಯವರಿಗೆ ನೆನಪು ಬರುವುದಿಲ್ಲ. ಅಲ್ಲಿ ಬಿಜೆಪಿ ಇದೆ ಇಲ್ಲಿ ಕಾಂಗ್ರೆಸ್ ಇದೆ ಎಂದು ಕೂಡಲೇ ಸಂಬಂಧ ಕೆಟ್ಟಿ ಹೋಗುತ್ತಾ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದಲ್ಲಿನ ಬಿಜೆಪಿ ಜೆಡಿಎಸ್ ಸರ್ಕಾರಕ್ಕೆ ತಾರತಮ್ಯಾ ಮಾಡಿದ್ದೀವಾ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಬಿಜೆಪಿಯವರಿಗೆ ಟಿವಿ ಮತ್ತು ರೇಡಿಯೋ ಮುಂದೆ ಮೇಜು ಕುಟ್ಟುತ್ತಾರೆ. ಮೋದಿ ಮುಂದೆ ಬಾಯ ಬಿಚ್ಚುವುದಿಲ್ಲ ತುಟಿಗೆ ಹೊಲಿಗೆ ಹಾಕಿಕೊಂಡಿದ್ದಾರೆ. ನಮ್ಮ ಮೇಲೆ ಬಿಜೆಪಿಯವರು ತೋರಿಸುವ ಪೌರುಷ ಮತ್ತು ಧೈರ್ಯವನ್ನ ಅರ್ಧ ಮೋದಿ ಅವರ ಮೇಲೆ ತೋರಿಸಿ. ಬಿಜೆಪಿಯವರ ಒಗ್ಗಟ್ಟು ಹೇಗಿದೆ ಎಂದು ಅಸೆಂಬ್ಲಿಯಲ್ಲಿ ನೋಡಿದ್ದೇವೆ. ವಿಜಯೇಂದ್ರ ಬಾವಿಗೆ ಇಳಿಯೋಣ ಅನ್ನುತ್ತಾರೆ . ಅಶೋಕ್ ಸಭಾ ತ್ಯಾಗ ಅನ್ನುತ್ತಾರೆ ಎಂದು ಖರ್ಗೆ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರೀಕ್ಷೆ ಬರೆಯೋ ಮುನ್ನವೇ SSLC ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಶಾಕ್‌!
ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟ! ರಾಯಚೂರು ಮೂಲದ ಆರು ಜನ ಗಂಭೀರ ಗಾಯ!