Priyank Kharge: ನನ್ನ 'ಕರ್ನಾಟಕದ ಪಪ್ಪು' ಅಂತಾರೆ, ಚರ್ಚೆಗೆ ಬರಲಿ ಬಿಜೆಪಿಗೆ ಖರ್ಗೆ ಸವಾಲು!

Published : May 24, 2025, 07:55 PM ISTUpdated : May 24, 2025, 08:04 PM IST
Karnataka Minister Priyank Kharge. (Photo/ANI)

ಸಾರಾಂಶ

ಕಲಬುರಗಿಯಲ್ಲಿ ನಡೆದ ಬಿಜೆಪಿ ಪ್ರತಿಭಟನೆ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾರಾಯಣಸ್ವಾಮಿ ಅವರನ್ನು 'ನಾಯಿ' ಎಂದು ಬೈದಿದ್ದಕ್ಕೆ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದ ವೀರರು ಎಂದು ಟೀಕಿಸಿದ್ದಾರೆ.

ಬೆಂಗಳೂರು (ಮೇ.24): ಕಲಬುರಗಿಯಲ್ಲಿ ಬಿಜೆಪಿಯವರು ಬೃಹತ್ ಪ್ರತಿಭಟನೆ ಮಾಡ್ತಿದ್ದಾರೆ. ನನ್ನನ್ನ ಕ್ಯಾಬಿನೆಟ್‌ನಿಂದ ಕೈ ಬಿಡಬೇಕು ಅಂತಾ, 'ಪ್ರಿಯಾಂಕ್ ಖರ್ಗೆ ಹಠಾವೋ, ನಾರಾಯಣಸ್ವಾಮಿ ಬಚಾವೋ' ಮಾಡ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್‌ನವರು ಮೋದಿಯವರಿಗೆ ಪ್ರಶ್ನೆ ಮಾಡಬಾರದು, ದೇಶದ ಆರ್ಥಿಕ ವಿಚಾರ ಬಂದಾಗಲೂ ಪ್ರಶ್ನೆ ಮಾಡಬಾರದು ಅಂತಾ ಪ್ರೆಸ್ ಮೀಟ್ ಮಾಡ್ತಾರೆ. ಇವತ್ತು ರಿಪಬ್ಲಿಕ್ ಆಫ್ ಕಲಬುರಗಿ ಅಂತಾ ಹೋಗಿದ್ದಾರೆ. ನಾರಾಯಣಸ್ವಾಮಿಯವರು ಅಲ್ಲಿ ಹೋಗಿ ಅಳುತ್ತಾ ಇದ್ದಾರೆ, 'ತನ್ನ ಮೇಲೆ ಬಲತ್ಕಾರ ಆಗಿದೆ ಅನ್ನೋ ಹಂಗೆ. ಅವ್ರೇನೂ ಸಂತ್ರಸ್ತರಾ? ನಾಯಿ ಅಂತ ಬೈದಿದ್ದು ನನಗೆ ಆದ್ರೆ ಅವರು ಸಂತ್ರಸ್ತರ ರೀತಿ ಅಳುತ್ತಿದ್ದಾರೆ. ಉಲ್ಟಾ ನನ್ನ ವಿರುದ್ದವೇ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ:

ಅಶೋಕ್, ವಿಜಯೇಂದ್ರ, ಸಿಟಿ ರವಿ, ಮಾಜಿ ಸಿಎಂಗಳು ಕಲಬುರಗಿಗೆ ಬಂದಿದ್ದಾರೆ. ಅಧಿಕಾರ ಇದ್ದಾಗ ಅಭಿವೃದ್ದಿಗೆ ಒಬ್ಬರೂ ಬರಲಿಲ್ಲ, ಆದ್ರೆ ಈಗ ನಾಲ್ಕು ಬಾರಿ ವಿಸಿಟ್ ಮಾಡಿದ್ದಾರೆ. ಬಿಜೆಪಿಗರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ. ನಾಲ್ಕು ಸಲ ಬಂದಾಗಲೂ ಪ್ರಿಯಾಂಕ್ ಖರ್ಗೆ ವಿರುದ್ದವೇ ಪ್ರತಿಭಟನೆ ಮಾಡಲು ಬಂದಿದ್ದಾರೆ. ನೀವಿಲ್ಲಿ ರಾಜಕೀಯ ಮಾಡೋಕೆ ಬಂದಿದ್ರೆ ನಿಮಗೆ ಮುಖಭಂಗನೇ ಎಂದು ಖರ್ಗೆ ಎಚ್ಚರಿಸಿದರು.

ಸಚಿನ್ ಪಾಂಚಾಳ ಕತೆ ಏನಾಯ್ತು?

ಬಿಜೆಪಿಯವರು ಹಿಂದೆ ಹಾಲಿನ ಪೌಡರ್ ಕದ್ದು ಶಿಕ್ಷೆ ಆದಂತಹ ವ್ಯಕ್ತಿ ಪರ ಬಂದಿದ್ರು. ಅವ್ರನ್ನ‌ ಮರ್ಡರ್ ಮಾಡಲು ಪ್ರಯತ್ನ ಆಗಿದೆ ಅಂತಾ ಆರೋಪ ಮಾಡಿದ್ರು. ಆದ್ರೆ ಅವರವರೇ ಕುಡಿದು ಗಲಾಟೆ ಮಾಡಿಕೊಂಡಿದ್ರು ಅಂತಾ ವರದಿ ಬಂತು. ಲೋಕಲ್ ಲೀಡರ್ ಶಿಪ್ ನಂಬಿಕೊಂಡು ಬಂದರಲ್ಲಾ ಏನಾಯ್ತು? ಅಕ್ಕಿ ಕಳ್ಳನಿಗೆ ಟಿಕೆಟ್ ಕೊಟ್ಟು ಅವನ ಪರವಾಗಿ ಬಂದ್ರಲ್ಲಾ ಏನಾಯ್ತು? ಸ್ವಲ್ಪನಾ ಕಾಮನ್ ಸೆನ್ಸ್ ಯೂಸ್ ಮಾಡಿದ್ರೆ ಗೊತ್ತಾಗುತ್ತೆ ಅಲ್ವಾ? ಎಂದು ಖರ್ಗೆ ವ್ಯಂಗ್ಯವಾಡಿದರು.

ಬೀದರ್ ಯುವಕ ಸಚಿನ್ ಪಾಂಚಾಳ್ ಅಂತಾ ಡೆತ್ ನೋಟ್ ಪ್ರಕರಣ ಏನಾಯ್ತು? ಯಾಕೆ ಆ ವಿಚಾರವನ್ನ ಸದನದಲ್ಲಿ ಪ್ರಸ್ತಾಪ ಮಾಡಿಲ್ಲ? ಪಾಪ ಆ ಸಚಿನ್ ಪಾಂಚಾಳ ಮನೆ ಕಡೆ ತಿರುಗಿಯೂ ನೋಡಿಲ್ಲ ನೀವು. ನಿಮ್ಮ ಲೋಕಲ್ ಲೀಡರ್ ಗಳನ್ನ ನಂಬಬೇಡಿ, ಒಬ್ಬರಿಗಿಂತ ಒಬ್ಬರು ಅಪರಂಜಿ ಇದ್ದಾರೆ. ನಿಮ್ಮ ಜಿಲ್ಲಾ ಮುಖಂಡರ ರೆಕಾರ್ಡ್ ನೋಡಿ, ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಅಕ್ಕಿ ಕಳ್ಳ. ಮುನಿರತ್ನ ವಿಚಾರ ಹೇಳಬೇಕಾಗಿಲ್ಲ, ಮಾಧ್ಯಮದವರಿಗೆ ಚೆನ್ನಾಗಿ ಗೊತ್ತಿದೆ ಎಂದು ಖರ್ಗೆ ಕಿಡಿಕಾರಿದರು.

ಅಖಂಡ ಭಾರತ ಕನಸು ಕಾಣೋರು ಪಾಕಿಸ್ತಾನಕ್ಕೆ ಹೋಗಿ ಸೆಟ್ಲ್ ಆಗಿ:

ಮಾತೆತ್ತಿದರೆ ನಿಜಾಮರು, ರಜಾಕರು, ಮುಸ್ಲಿಂ, ಪಾಕಿಸ್ತಾನ ಅಂತಾ ಎಷ್ಟು ಸಲ‌ ಮಾತಾಡ್ತಿದ್ದಾರೆ. ಅಖಂಡ ಭಾರತ ಕನಸು ಕಾಣ್ತಿದ್ದೀರಿ ಅಲ್ವಾ? ಪಾಕಿಸ್ತಾನಕ್ಕೆ ಹೋಗಿ ಸೆಟ್ಲ್ ಆಗಿ ಅಲ್ಲಿಂದ ಶುರು ಮಾಡಿ. ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ಕೋರ್ಟ್‌ಗೆ ಯಾಕೆ ಹೋದ್ರಿ? ಸುಪ್ರೀಂ ಕೋರ್ಟ್‌ಗೆ ಹೋಗಿ ಸ್ಟೇ ತರ್ತೀರಿ. ಶ್ರೀರಾಮುಲು ರಿಪಬ್ಲಿಕ್ ಆಫ್ ಬಳ್ಳಾರಿ ಕಟ್ಟಿದೋರು, ಅವ್ರೂ ಬಂದು ಮಾತಾಡ್ತಾರೆ, ನಂಗೆ ಆಶ್ಚರ್ಯ ಆಗ್ತಿದೆ," ಎಂದು ಖರ್ಗೆ ಟೀಕಿಸಿದರು.

ನಾನು ಕರ್ನಾಟಕದ ಪಪ್ಪು ಆದರೆ ಬಿಜೆಪಿಯವರೇನು?

ನನಗೆ ಉಪದೇಶ ಮಾಡಿ ತೊಂದರೆ ಇಲ್ಲ. ನನ್ನ ಕರ್ನಾಟಕದ ಪಪ್ಪು ಅಂತಾರೆ. ನಾನೇ ಪಪ್ಪು ಆದ್ರೆ ಅವರೇನು? ಹತ್ತು ಸಾಲು ಕನ್ನಡ ಮಾತಾಡೋಕೆ ಬರಲ್ಲ. ಚರ್ಚೆ ಮಾಡೋಣ ಬನ್ನಿ, ಯಾರು ಪಪ್ಪು ಅಂತಾ ಗೊತ್ತಾಗುತ್ತೆ ಎಂದು ಸವಾಲು ಹಾಕಿದರು.

ಡಿಸಿಎಂ ಹುಟ್ಟುಹಬ್ಬಕ್ಕೆ ಸಿಎಂ ವಿಶ್ ಮಾಡಿಲ್ಲ ?

ಡಿಸಿಎಂ ಹುಟ್ಟುಹಬ್ಬಕ್ಕೆ ಸಿಎಂ ವಿಶ್ ಮಾಡಿಲ್ಲ ಅಂತಾ ಪೋಸ್ಟ್ ಹಾಕ್ತಾರೆ. ಇದೊಂದು ಇಶ್ಯೂನಾ? ಇವರಿಗೆ ಗೊತ್ತಿದ್ಯಾ, ಸಿಎಂ ಕಾಲ್ ಮಾಡಿ ವಿಶ್ ಮಾಡಿದ್ರು, ನಾನೂ ಇದ್ದೆ. ಹತಾಷರಾಗಿ ಬಿಟ್ಟಿದ್ದಾರೆ ಬಿಜೆಪಿಯವರು. ನಾರಾಯಣಸ್ವಾಮಿಗೆ ಎರಡು ನಾಲಗೆ ಇದೆ, ಬೆಂಗಳೂರಿನಲ್ಲಿ ಒಂದು, ಕಲಬುರಗಿಯಲ್ಲಿ ಒಂದು. ಚಲವಾದಿಗೆ ತಲೆಯಲ್ಲಿ ಏನೂ ಇಲ್ಲ. ವಾಟ್ಸಾಪ್‌ನಲ್ಲಿ ಏನು ಬರುತ್ತೆ ಅದನ್ನೇ ಹೇಳಬೇಕು. ಖರ್ಗೆ, ಸಿಎಂ, ಡಿಕೆಶಿ, ಪ್ರಿಯಾಂಕ್ ಬಗ್ಗೆ ಹೇಳಬೇಕು. ಅಷ್ಟೇ ಇವರಿಗೆ ಗೊತ್ತಿರೋದು. ಇಂತಹ ವಿಪಕ್ಷ ನಾಯಕರಿದ್ದರೆ ಪಕ್ಷ ಉಳಿಯಲ್ಲ. ಬಿಜೆಪಿಯವರು ದಿನವೂ ನನ್ನ ಮೇಲೆ ಹೇಳ್ತಿರ್ತಾರೆ. ನನ್ನನ್ನ ಲೇವಡಿ ಮಾಡದಿದ್ದರೆ ಏನೂ ಇಲ್ಲ. ವೈಯುಕ್ತಿಕವಾಗಿ ನನ್ನ ಮೇಲೆ, ನನ್ನ ತಮ್ಮ, ಅಣ್ಣನ ಮೇಲೆ ಮಾತನಾಡ್ತಾರೆ. ಇವರಿಗೆ ನಮ್ಮನ್ನ ಬೈಯ್ಯೋಕೆ ಪ್ರತ್ಯೇಕ ಭತ್ಯೆ ಸಿಗಬಹುದು ಎಂದು ಖರ್ಗೆ ಆರೋಪಿಸಿದರು.

ಬಿಜೆಪಿಯವರು ಸೋಷಿಯಲ್ ಮೀಡಿಯಾ ವೀರರು:

ಮೇಕ್ ಇನ್ ಇಂಡಿಯಾ ಬಗ್ಗೆ ನಾವು ಕೇಳಬಾರ್ದಾ? ಟ್ರಂಪ್ ಯಾಕೆ ಮಧ್ಯස್ಥಿಕೆ ಅಂತ ಕೇಳಬಾರ್ದಾ? ಟೆರರಿಸ್ಟ್ 25 ಕಿ.ಮೀ ಒಳಗೆ ಬಂದು ಹೇಗೆ ಹೊಡೆದು ಹೋದ್ರು, ಕೇಳೋದು ತಪ್ಪಾ? ಇದಕ್ಕೆ ಇವರಿಗೆ ಉತ್ತರ ಕೊಡೋಕೆ ಆಗಲ್ವಾ? ಇವರೆಲ್ಲ ಸಾಮಾಜಿಕ ಜಾಲತಾಣದ ವೀರರು, ನೇರವಾಗಿ ಚರ್ಚೆ ಮಾಡೋಕೆ ಬರಲ್ಲ ಎಂದು ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಕಲಬುರಗಿ ಜನ ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿದ್ದಾರೆ:

ಚಿತ್ತಾಪುರದ ಜನ ಅಭಿವೃದ್ಧಿ ಪರ ವೋಟ್ ಹಾಕ್ತಾರೆ. ಕಲಬುರಗಿ ಜನ ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿದ್ದಾರೆ. ನೀವು ಏನೇ ತಿಪ್ಪರಲಾಗ ಹಾಕಿ, ಅಲ್ಲಿನ ಜನ ನಮ್ಮನ್ನ ಬೆಂಬಲಿಸ್ತಾರೆ. ಮೊದಲು ಸಾರ್ವರ್ಕರ್ ಪತ್ರದ ಬಗ್ಗೆ ಹೇಳಿ. ಪ್ರೂವ್ ಮಾಡಿ ರಾಜೀನಾಮೆ ಕೊಡ್ತೇನೆ ಅಂದ್ರು, ಪ್ರೂವ್ ಮಾಡಿದಮೇಲೆ ಯಾಕೆ ರಾಜೀನಾಮೆ ಕೊಡ್ತಿಲ್ಲ? ಸಚಿವರನ್ನ ನಾಯಿ ಅಂತ ಕರೆಯಬಹುದಾ? ಒಬ್ಬ ಮನುಷ್ಯನನ್ನ‌ ನಾಯಿ ಅಂತ ಕರೆಯಬಹುದಾ? ನಾವು ಬಿಜೆಪಿಯವರನ್ನ ಕರೆಯೋದಾ? ನಿಮಗೆ ಕಾಮನ್ ಸೆನ್ಸ್ ಇಲ್ವಾ? ಎಂದು ಖರ್ಗೆ ಪ್ರಶ್ನಿಸಿದರು.

ಕೇಶವ ಕೃಪಾದ ಟ್ರೈನಿಂಗ್ ಪಡೆದು ಬ್ರೈನ್ ಇಲ್ಲ. ಅವರ ಮನವೊಲಿಸೋಕೆ‌ ಹೋಗಿ ಮರ್ಯಾದೆ ಕಳೆದುಕೊಳ್ತಿದ್ದೀರಾ. ಕಲಬುರಗಿ ಚಲೋ ಸುಮ್ಮನೆ ಮಾಡಬೇಕಷ್ಟೇ ಎಂದು ವ್ಯಂಗ್ಯವಾಡಿದರು. ಇದೇ ವೇಳೆ 'ಹಿಟ್ಲರ್‌ನಂತೆ ನವ ಹಿಟ್ಲರ್ ಮಣ್ಣಾಗ್ತಾನೆ' ಎಂಬ ಸಿಟಿ ರವಿ ಹೇಳಿಕೆ‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಮೊನ್ನೆ ಎಲೆಕ್ಷನ್‌ನಲ್ಲಿ ಯಾರು ಮಣ್ಣಾಗಿದ್ದು? ಮೊದಲು ಅದರ ಬಗ್ಗೆ ಸಿಟಿ ರವಿ ಹೇಳಲಿ. ಯಾಕೆ ವಾಯ್ಸ್ ಸ್ಯಾಂಪಲ್ ಕೊಡ್ತಿಲ್ಲ? ಪೂಜ್ಯ ಅಪ್ಪಾಜಿ, ಮುನಿರತ್ನ ಬಗ್ಗೆ ಯಾಕೆ ಮಾತನಾಡ್ತಿಲ್ಲ? ಯತ್ನಾಳ್ ಅವರನ್ನ ಹೊರಗೆ ಹಾಕಿದ್ರು, ಅದಕ್ಕೆ ಇವರು ಕಪ್ಪಾಗಿದ್ದಾರೆ' ಎಂದು ಹರಿಹಾಯ್ದರು.

ಜಲಜೀವನ್ ಮಿಷನ್ ಹಣ ಬಂದಿಲ್ಲ:

ಜಲಜೀವನ್ ಮಿಷನ್‌ನಲ್ಲಿ 2300 ಕೋಟಿ ಬಂದಿಲ್ಲ, ಬಂದಿರೋದು 500 ಕೋಟಿ ಮಾತ್ರ. ಕೇಂದ್ರದಿಂದ ಇನ್ನೂ ಬಂದಿಲ್ಲ. ನರೇಗಾದಡಿ ಕೂಲಿ ಕೊಡೋಕೆ ಇವರಿಗೆ ಆಗಿಲ್ಲ. ನಾನು ಶಿವರಾಜ್ ಸಿಂಗ್‌ಗೆ ಪತ್ರ ಬರೆದಿದ್ದೇನೆ ಎಂದು ಸಚಿವ ಖರ್ಗೆ ಹೇಳಿದರು.

ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ :

ಸುಪ್ರೀಂ ಕೋರ್ಟ್ ಇಡಿಗೆ ಮೂರನೇ ಬಾರಿ ಛೀಮಾರಿ ಹಾಕಿದೆ. ಕೋರ್ಟ್ ಸಮಯ ಹಾಳು ಮಾಡಬೇಡಿ, ಶಿಕ್ಷೆ ಕೊಡಬೇಕಾಗುತ್ತೆ ಎಂದಿದೆ. ಇದು ಒಂದು ತಂತ್ರ, ಹೆದರಿಸೋದು, ಬೆದರಿಸೋದು ಅಷ್ಟೇ. ಪರಮೇಶ್ವರ್, ಡಿ.ಕೆ ಶಿವಕುಮಾರ್, ಸಿಎಂ ವಿಚಾರದಲ್ಲಾಗಲಿ ಎಲ್ಲವೂ ಇದೆಯೇ ಆಗಿದೆ? ಕೋಲ್ ಸ್ಕ್ಯಾಮ್, 2ಜಿ ಸ್ಕ್ಯಾಮ್ ಏನಾಯ್ತು? ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಮೇಲೆ ಏನೆಲ್ಲಾ ಮಾಡಿದ್ರು? ಮೂಡಾದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಏನಾಯ್ತು? 193 ಪ್ರಕರಣಗಳ ಪೈಕಿ ಕೇವಲ ಎರಡು ಕೇಸ್‌ಗಳು ಮಾತ್ರ ಶಿಕ್ಷೆ ಆಗಿದೆ. ಯಾವ ಮಟ್ಟಕ್ಕೆ ಇವರು ದುರುದ್ದೇಶದಿಂದ ನಡೆಸುತ್ತಿದ್ದಾರೆ? ಇಡಿ ದಾಳಿ ಹಿಂದೆ ಮಹಾನ್ ನಾಯಕರಿದ್ದಾರೆ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಕಾಂಗ್ರೆಸ್ ಮಹಾನಾಯಕ ಇಡಿ ಡೈರೆಕ್ಷನ್ ಕೊಡ್ತಾರೆ ಎಂದರೆ ಇಡಿ ಇಂಡಿಪೆಂಡೆಂಟ್ ಇಲ್ಲ ಎನ್ನುವಂತಾಯ್ತು? ಎಂದು ಖರ್ಗೆ ಪ್ರಶ್ನಿಸಿದರು.

ತಮನ್ನಾ ಭಾಟಿಯಾ ರಾಯಭಾರಿ; ಖರ್ಗೆ ಸಮರ್ಥನೆ:

437 ಕೋಟಿ ಲಾಭ ಮಾಡಿದ್ದೇವೆ. ನಾವು ಅದನ್ನ ಸಾವಿರ ಕೋಟಿ ಮಾಡಬೇಕು. ಎಲ್ಲರ ಸಹಕಾರ ಮುಖ್ಯ. ಇನ್ವೆಸ್ಟ್ ಕರ್ನಾಟಕದಲ್ಲಿ 15, 20 ಸಾವಿರ ಕೋಟಿ ಬಂತಲ್ಲ, ರಾಜ್ಯಕ್ಕೆ ಬಂಡವಾಳ ಹರಿದು ಬಂದಿದೆ ತಮನ್ನಾ ಭಾಟಿಯಾ ರಾಯಭಾರಿಯಾಗಿ ನೇಮಕ ಮಾಡಿರುವುದು ಸಮರ್ಥಿಸಿಕೊಂಡರು.

ನರೇಗಾ ಸಿಬ್ಬಂದಿಗೆ 5 ತಿಂಗಳಿನಿಂದ ವೇತನ ಬಾಕಿ:

ಕೇಂದ್ರದಿಂದ ಅನುದಾನ ಬಿಡುಗಡೆಯಾಗಿಲ್ಲ. 5 ತಿಂಗಳಿನಿಂದ ನರೇಗಾ ಇಂಜನಿಯರ್‌ಗಳಿಗೆ ವೇತನ ಪಾವತಿಯಾಗಿಲ್ಲ. ಈ ಕುರಿತು ಕೇಂದ್ರ ಸಚಿವ ಶಿವರಾಜ ಸಿಂಗ್ ಚವ್ಹಾಣಗೆ ಪತ್ರ ಬರೆಯುತ್ತೇನೆ. ಬಿಜೆಪಿಯವರು ಇಂತಹ ವಿಚಾರಗಳ ಬಗ್ಗೆ ಮಾತನಾಡಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!