Bitcoin Scam| 'ಪ್ರಿಯಾಂಕ್‌ ಖರ್ಗೆ ದೊಡ್ಡ ಹಾಸ್ಯನಟ'

Kannadaprabha News   | Asianet News
Published : Nov 19, 2021, 07:34 AM IST
Bitcoin Scam| 'ಪ್ರಿಯಾಂಕ್‌ ಖರ್ಗೆ ದೊಡ್ಡ ಹಾಸ್ಯನಟ'

ಸಾರಾಂಶ

*  ಬಿಟ್‌ಕಾಯಿನ್‌ ಬಗ್ಗೆ ಅವರ ಪ್ರಶ್ನೆಗಳು ಬಾಲಿಶ *  ಬಿಟ್‌ಕಾಯಿನ್‌ ಪ್ರಕರಣದಲ್ಲಿ ನಗೆಪಾಟಲಿಗೆ ಈಡಾದ ಪ್ರಿಯಾಂಕ್‌ ಖರ್ಗೆ *  ಸಿದ್ದರಾಮಯ್ಯ ಜನತೆಯ ಕ್ಷಮೆ ಕೇಳಬೇಕು  

ಬೆಂಗಳೂರು(ನ.19): ಬಿಟ್‌ ಕಾಯಿನ್‌ ವಿಚಾರದಲ್ಲಿ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ(Priyank Kharge) ಕೇಳಿರುವ ಪ್ರಶ್ನೆಗಳು ಬಾಲಿಶವಾಗಿದ್ದು, ದೊಡ್ಡ ಹಾಸ್ಯ ನಟ ಆಗಿದ್ದಾರೆ ಎಂದು ಬಿಜೆಪಿ ವಕ್ತಾರ ಹಾಗೂ ಶಾಸಕ ಪಿ.ರಾಜೀವ್‌(R Rajeev) ತಿರುಗೇಟು ನೀಡಿದ್ದಾರೆ.

ಗುರುವಾರ ಬಿಜೆಪಿ(BJP) ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್‌ ಖರ್ಗೆ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು. ಕಾನೂನಿನ ಕನಿಷ್ಠ ಜ್ಞಾನ ಇರುವ ಯಾವ ವ್ಯಕ್ತಿಯೂ ಪ್ರಿಯಾಂಕ್‌ ಖರ್ಗೆ ರೀತಿ ಪ್ರಶ್ನೆಗಳನ್ನು ಕೇಳುವುದಿಲ್ಲ. ಈ ಪ್ರಕರಣದಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ. ಆರೋಪಿಯ ಹೇಳಿಕೆಯನ್ನೇ ಸತ್ಯ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ಆರೋಪಿಯ ತಪ್ಪೊಪ್ಪಿಗೆಗಳು ಕೆಲವೊಮ್ಮೆ ಭಾಗಶಃ ಸತ್ಯ, ಸುಳ್ಳು ಮತ್ತು ದಾರಿ ತಪ್ಪಿಸುವಂತಿರುತ್ತದೆ. ಅದೇ ಅಂತಿಮವಲ್ಲ. ಅದರ ಸತ್ಯಾಸತ್ಯ ತಿಳಿಯುವುದಕ್ಕೆ ತನಿಖೆ(Investigation) ನಡೆಸಲಾಗುತ್ತದೆ ಎಂದು ಕಿಡಿಕಾರಿದರು.

ಆರೋಪಪಟ್ಟಿಯ 93ನೇ ಪುಟದಲ್ಲಿನ ಅಂಶ ಅವರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕ್ರಿಪ್ಟೋ ಕರೆನ್ಸಿ(Cryptocurrency) ಪೊಲೀಸ್‌ ಇಲಾಖೆಗೆ ವರ್ಗಾವಣೆಯಾಗುತ್ತದೆ. ಆಗ ಹ್ಯಾಕರ್‌ ವ್ಯಾಲೆಟ್‌ನಲ್ಲಿ ಏನೂ ಉಳಿಯಲು ಸಾಧ್ಯವಿಲ್ಲ. ಪ್ರಿಯಾಂಕ್‌ ಖರ್ಗೆಗೆ ಇಷ್ಟೂಜ್ಞಾನ ಇಲ್ಲವೇ ಎಂದು ಹೇಳಿದರು.

Bitcoin Scam:: ನಮ್ಮ ಸರಳ ಪ್ರಶ್ನೆಗೆ ಉತ್ತರವಿಲ್ಲವೇಕೆ? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬಿಟ್‌ ಕಾಯಿನ್‌ ಮತ್ತು ಆರೋಪಿ ಶ್ರೀಕಿ(Shreeki) ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷವು ಜನರ ಮುಂದೆ ಬೆತ್ತಲಾಗಿದೆ. ಇನ್ನು ಕಾಂಗ್ರೆಸ್ಸನ್ನು ಜನರು ಯಾವತ್ತೂ ನಂಬುವುದಿಲ್ಲ. 2018ರಲ್ಲಿಯೇ ಆರೋಪಿಯ ಸ್ವ ಇಚ್ಛಾ ಹೇಳಿಕೆ ಪಡೆದಿದ್ದರೆ ಈ ಅಪರಾಧವಾಗುತ್ತಿರಲಿಲ್ಲ. ವಿದ್ವತ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗಲಾಟೆ ಪ್ರಕರಣದಲ್ಲಿ ಆರೋಪಿ ನಂಬರ್‌ 1 ಆಗಿ ಶಾಸಕ ಹ್ಯಾರಿಸ್‌ ಮಗ ಮಹಮ್ಮದ್‌ ನಲಪಾಡ್‌ ಇದ್ದರು. ಶ್ರೀಕಿಯನ್ನು ಸುಮ್ಮನೆ ಬಿಟ್ಟಿದ್ದರಿಂದ ಈ ಅಪರಾಧ ಪ್ರಕರಣ ನಡೆದಿದೆ. ಆಗಿನ ಸರ್ಕಾರ ಸೂಕ್ತವಾದ ತನಿಖೆ ನಡೆಸಿದ್ದರೆ ಇಷ್ಟುದೊಡ್ಡ ಅಪರಾಧವನ್ನು ನಿಲ್ಲಿಸಬಹುದಾಗಿತ್ತು. ಇದು ಕಾಂಗ್ರೆಸ್‌ ಸರ್ಕಾರದ ದೊಡ್ಡ ವೈಫಲ್ಯ ಎಂದು ಟೀಕಾಪ್ರಹಾರ ನಡೆಸಿದರು.

ಸಿದ್ದರಾಮಯ್ಯ ಜನತೆಯ ಕ್ಷಮೆ ಕೇಳಬೇಕು

ಬಿಟ್‌ಕಾಯಿನ್‌ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳಿದ್ದಾರೆ ಎಂಬ ಆರೋಪದ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ತಮ್ಮ ಆರೋಪವನ್ನು ಸಾಬೀತುಪಡಿಸಬೇಕು ಅಥಾವಾ ಆರೋಪವನ್ನು ವಾಪಸ್‌ ಪಡೆದು ಜನತೆಯ ಕ್ಷಮೆ ಕೇಳಬೇಕು ಎಂದು ಶಾಸಕ ಪಿ.ರಾಜೀವ್‌ ಆಗ್ರಹಿಸಿದ್ದಾರೆ.

ಬಿಜೆಪಿಯ ಬತ್ತಳಿಕೆಯಲ್ಲಿರುವ ದೊಡ್ಡ ಅಸ್ತ್ರವೆಂದರೆ ನಮ್ಮ ರಾಜ್ಯಾಧ್ಯಕ್ಷರು. ಖಾಲಿ ಬುಟ್ಟಿ, ಪುಂಗಿ ನಾದಕ್ಕೆಲ್ಲಾ ಈ ಅಸ್ತ್ರವನ್ನು ನಾವು ಬಳಸುವುದಿಲ್ಲ. ಪಕ್ಷದ ವಕ್ತಾರರಾಗಿ ನಾವು ಸಮರ್ಥರಿದ್ದೇವೆ. ನಾವೇ ಇದನ್ನು ಎದುರಿಸುತ್ತೇವೆ. ನಾವು ವಿಫಲರಾದರೆ ಅವರು ಬರುತ್ತಾರೆ ಎಂದು ಬಿಜೆಪಿ ವಕ್ತಾರ ಮತ್ತು ಶಾಸಕ  ಪಿ.ರಾಜೀವ್‌ ತಿಳಿಸಿದ್ದಾರೆ. 

ಮಾಜಿ ಸಚಿವ ಕೈ ನಾಯಕ ಪ್ರಿಯಾಂಕ ಖರ್ಗೆ ಹೊಸ ಬಾಂಬ್

ನಿಮ್ಮಪ್ಪನ ನೋಡಿ ಕಲಿತುಕೊಳ್ಳಿ: ಪ್ರಿಯಾಂಕ್ ಖರ್ಗೆಗೆ ಬಿಜೆಪಿ ಮುಖಂಡ

ವಿರೋಧ ಪಕ್ಷದಲ್ಲಿ ಇದ್ದೇವೆ ಅನ್ನುವ ಕಾರಣಕ್ಕೆ ಖರ್ಗೆ ಸುಖಾ ಸುಮ್ಮನೆ ಹೇಳಿಕೆ ನೀಡುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಘನತೆ ಇಲ್ಲ. ಅಷ್ಟಕ್ಕೂ ಕಾಂಗ್ರೆಸ್ನವರಿಗೆ (Congress) ಸರ್ಕಾರದ ವಿರುದ್ಧ ಯಾವುದಾದರೊಂದು ವಿಷಯದ ಬಗ್ಗೆ ಬೇಕಾಗಿದ್ದರಿಂದ ಈಗ ಬಿಟ್‌ ಕಾಯಿನ್‌ (Bitcoin) ವಿಚಾರ ಮುಂದಿಟ್ಟುಕೊಂಡು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ರಾಜುಗೌಡ ವಿಪಕ್ಷಗಳನ್ನು ಟೀಕಿಸಿದ್ದರು. 

ಶಾಸಕ ಪ್ರಿಯಾಂಕ್‌ ಅವರ ತಂದೆ ಮಲ್ಲಿಕಾರ್ಜುನ ಖರ್ಗೆಯವರು (Mallikarjun kharge) ಸಚಿವರಾಗಿಯೂ ಕೆಲಸ ಮಾಡಿದ್ದಾರೆ, ಅವರು ಯಾವ ಯಾವ ಖಾತೆ ಗಳಲ್ಲಿ ಕೆಲಸ ಮಾಡಿದ್ದಾರೆ ಅನ್ನೋದನ್ನು ಶಾಸಕ ಪ್ರಿಯಾಂಕ ಖರ್ಗೆ ಅರಿತುಕೊಳ್ಳಲಿ. ಪೊಲೀಸ್‌ ಇಲಾಖೆ (Police department) ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಹೋಮ್‌ ಮಿನಿಸ್ಟರ್‌ (Home Minister) ಆಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರಿಗೆ ಗೊತ್ತಿರುತ್ತದೆ. ಈಗ ಬಿಟ್‌ ಕಾಯಿನ್‌ ಬಗ್ಗೆ ಪೊಲೀಸರ (Police) ವಿರುದ್ಧ ಇಲ್ಲಸಲ್ಲದ ಆರೋಪ ಸಲ್ಲದು ಎಂದು ರಾಜುಗೌಡ ಪ್ರಿಯಾಂಕ ಖರ್ಗೆ ವಿರುದ್ಧ ಹರಿಹಾಯ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಾರಿಗೆ ಇಲಾಖೆಗೆ ನಕಲಿ ವ್ಯಾಸಂಗ ಪತ್ರ ದಾಖಲೆ ನೀಡಿದರೆ ತನಿಖೆ: ಸಚಿವ ರಾಮಲಿಂಗಾರೆಡ್ಡಿ
ರಾಜ್ಯದಲ್ಲಿ 9.67 ಲಕ್ಷ ಟನ್‌ ತೊಗರಿ ಖರೀದಿಗೆ ಕೇಂದ್ರ ಅಸ್ತು