ವಸತಿ ಶಾಲೆಯ ಪ್ರಾಂಶುಪಾಲರು ಶಾಲಾ ಮಕ್ಕಳ ಕೈಯಿಂದಲೇ ಮನೆ ಕೆಲಸ ಮಾಡಿಸಿಕೊಳ್ತಿರೋ ಅಮಾನವೀಯ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಜಕ್ಕಿನಕಟ್ಟಿ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ.
ಹಾವೇರಿ (ಫೆ.2): ವಸತಿ ಶಾಲೆಯ ಪ್ರಾಂಶುಪಾಲರು ಶಾಲಾ ಮಕ್ಕಳ ಕೈಯಿಂದಲೇ ಮನೆ ಕೆಲಸ ಮಾಡಿಸಿಕೊಳ್ತಿರೋ ಅಮಾನವೀಯ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಜಕ್ಕಿನಕಟ್ಟಿ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ.
ಸಂಗಮೇಶ್ ಪೂಜಾರ್, ವಸತಿ ಶಾಲಾ ಮಕ್ಕಳಿಂದ ಮನೆಕೆಲಸ ಮಾಡಿಸಿಕೊಳ್ತಿರೋ ಪ್ರಾಂಶುಪಾಲ. ವಸತಿಯ ಶಾಲೆಯಲ್ಲಿರೋ ತಮ್ಮ ಸ್ವಗೃಹದ ಮುಂದೆ ಶಾಲಾ ಮಕ್ಕಳಿಂದ ಕಸಗುಡಿಸುವುದು, ಮನೆ ಕೆಲಸಗಳನ್ನು ಮಾಡಿಸುವುದು, ನೀರು ಹಾಕಿಸುವುದು, ರಂಗೋಲಿ ಹಾಕಿಸುವುದು, ಮನೆ ಧೂಳು ಒರೆಸುವುದು ಮಾಡಿಸುತ್ತಾರೆ. ಇಷ್ಟು ಸಾಲದ್ದಕ್ಕೆ ಇವರ ಬಟ್ಟೆಗಳನ್ನು ಸಹ ಶಾಲಾ ಮಕ್ಕಳಿಂದಲೇ ತೊಳೆಸುತ್ತಾರೆ, ತಿಂದ ಪಾತ್ರೆಗಳನ್ನು ಮಕ್ಕಳೇ ತೊಳೆಯಬೇಕು. ರಾತ್ರಿ ಊಟಕ್ಕೆ ಸಹ ಮಕ್ಕಳಿಂದಲೇ ತರಿಸಿಕೊಳ್ಳುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರಾಂಶುಪಾಲರ ಮನೆಯಲ್ಲಿ ವಸತಿ ಶಾಲಾ ಮಕ್ಕಳು ಮಾಡುವ ಮನೆಗೆಲಸದ ವಿಡಿಯೋಗಳು ವೈರಲ್ ಆಗಿವೆ.
undefined
ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಶೌಚಾಲಯ ಗೋಡೆ ಬಿದ್ದು ಶಾಲಾ ಬಾಲಕಿಯರಿಗೆ ಗಂಭೀರ ಗಾಯ!
ದೂರದ ಊರುಗಳಿಂದ ಪೋಷಕರನ್ನು ಬಿಟ್ಟು ಬರುವ ಮಕ್ಕಳಿಗೆ ಅಧ್ಯಯನ ಮಾಡಿಸುವ ಬದಲು ಈ ರೀತಿ ದುರುಪಯೋಗಪಡಿಸಿಕೊಳ್ಳುವುದು ಎಷ್ಟು ಸರಿ? ಮಕ್ಕಳು ವಸತಿಗೆ ಶಾಲೆ ಸೇರುವ ಮಕ್ಕಳು ಬಡಕುಟುಂಬದಿಂದ ಬಂದವರಾಗಿದ್ದು, ಅಂಥ ಮಕ್ಕಳಿಂದ ಮನೆ ಕೆಲಸ ಮಾಡಿಸಿಕೊಳ್ಳುವುದು ಸರಿಯಲ್ಲ ಎಂದು ಸಾರ್ವಜನಿಕರು ಪ್ರಾಂಶುಪಾಲರ ವಿರುದ್ಧ ಕಿಡಿಕಾರಿದ್ದಾರೆ.
ಶೌಚಕ್ಕೂ ಸರತಿ ಸಾಲಿನಲ್ಲಿ ನಿಲ್ಲುವ ಕನ್ನಡ ಶಾಲೆಯ ಮಕ್ಕಳು!