* ದೇವಸ್ಥಾನ ಲೋಕಾರ್ಪಣೆಗೊಳಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
* ರುಕ್ಮಿಣಿ ಹಾಗೂ ಸತ್ಯಭಾಮ ಜೊತೆಗೆ ಗೋವಿಂದ ಮೂರ್ತಿ ಇರುವ ಗರ್ಭಗುಡಿ
* ತಿರುಪತಿ ಮಾದರಿಯಲ್ಲಿ ನಿರ್ಮಿಸಲಾಗಿರುವ ದೇವಸ್ಥಾನ
ಕನಕಪುರ(ಜೂ.14): ಬೆಂಗಳೂರಿನ ವಸಂತಪುರದಲ್ಲಿ ನಿರ್ಮಿಸಲಾದ ಇಸ್ಕಾನ್ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಾರ್ಪಣೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ.
ಹೌದು ತಿರುಪತಿ ಮಾದರಿಯಲ್ಲಿ ನಿರ್ಮಿಸಲಾಗಿರುವ ದೇವಸ್ಥಾನವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಾರ್ಪಣೆ ಮಾಡಿದ್ದಾರೆ. ಇಲ್ಲಿನ ಗರ್ಭಗುಡಿಯಲ್ಲಿ ರುಕ್ಮಿಣಿ ಹಾಗೂ ಸತ್ಯಭಾಮ ಜೊತೆಗಿರುವ ಗೋವಿಂದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಇನ್ನು ಕಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಬೆಂಗಳೂರು ನಗರ ಮಾತ್ರ ಅಲ್ಲ ವಿಶ್ವಕ್ಕೆ ಭಕ್ತಿಯ ಚೈತನ್ಯದ ದಿನ. ಪ್ರಭು ರಾಜಾಧಿರಾಜ ಗೋವಿಂದರ ಆಗಮನ ಇಲ್ಲಿ ಆಗಿದೆ. ಮಧುಪಂಡಿತ್ ದಾಸ್ ಅವರು ಎರಡು ದಶಕಗಳ ಕಾಲ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ದೇವರ ಮೂರ್ತಿ ಪ್ರತಿಷ್ಠಾಪಿಸಿ ಲೋಕ ಕಲ್ಯಾಣ ಸಂಕಲ್ಪ ಮಾಡಿದ್ದಾರೆ. ರಾಷ್ಟ್ರಪತಿಗಳು ಈ ದೇವಸ್ಥಾನ ಲೋಕಾರ್ಪಣೆ ಮಾಡಿದ್ದಾರೆ ಈ ಮೂಲಕ ನಮ್ಮ ದೇಶ ಎಂಥಾ ದೈವೀ ಸಂಸ್ಕೃತಿ ಹೊಂದಿದೆ ಎಂಬುದನ್ನ ತೋರಿಸಿದ್ದಾರೆ ಎಂದಿದ್ದಾರೆ.
ಇದೇ ವೇಳೆ ನಾಗರೀಕತೆ ಹಾಗೂ ಸಂಸ್ಕೃತಿ ಬಗ್ಗೆಯೂ ಮಾತನಾಡಿದ ಸಿಎಂ ಹಲವರಿಗೆ ಇವೆರಡರ ವ್ಯತ್ಯಾಸ ಗೊತ್ತಿಲ್ಲ. ನಾಗರೀಕತೆ ಅಂದರೆ ನಾವು ಏನು ಎಂದು ಅರ್ಥ, ಸಂಸ್ಕೃತಿ ಎಂದರೆ ನಮ್ಮ ಬಳಿ ಏನಿದೆ ಎಂಬುವುದಾಗಿದೆ. ಸಾಕಷ್ಟು ಜನರಿಗೆ ಸಂಸ್ಕೃತಿ ಹಾಗೂ ಆಧ್ಯಾತ್ಮದ ಜ್ಞಾನ ಕಡಿಮೆ. ಭಾರತದ ದೇಶದಲ್ಲೇ ಅತಿ ಹೆಚ್ಚು ಭಕ್ತಿ ಚಳವಳಿಗಳು ನಡೆದಿವೆ. ಇಸ್ಕಾನ್ ದೇಶದ ಅನೇಕ ಕಡೆ ದೇವಸ್ಥಾನಗಳನ್ನ ನಿರ್ಮಿಸಿದೆ. ಆದ್ಯಾತ್ಮದ ಚಿಂತನೆಗಳನ್ನ ಸಾರುವಲ್ಲಿ ಇಸ್ಕಾನ್ ಪಾತ್ರ ದೊಡ್ಡದಿದೆ. ಅಕ್ಷಯ ಪಾತ್ರೆ ಯೋಜನೆ ರಾಜ್ಯದಲ್ಲಿ ನಡೆಯುತ್ತಿದೆ. ನಮ್ಮ ಸರ್ಕಾರದ ಪೂರ್ಣ ಸಹಕಾರವನ್ನ ಈ ಯೋಜನೆ ನೀಡುತ್ತದೆ ಎಂದಿದ್ದಾರೆ.
ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಜ್ಯಪಾಲರು
ಇನ್ನು ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೂಡಾ ಮಾತನಾಡಿದ್ದಾರೆ. ಕನ್ನಡದಲ್ಲಿ ಭಾಷಣೆ ಆರಂಭಿಸಿದ ಗೆಹ್ಲೋಟ್ ಧನ್ಯವಾದ, ತಮ್ಮೆಲ್ಲರಿಗೂ ಆಧರದ ಸ್ವಾಗತ ಎಂದಿದ್ದಾರೆ. ಮುಂದುವರೆಸಿ ಮಾತನಾಡಿದ ಅವರು ಬೆಂಗಳೂರಿನ ರಾಜಾಜಿನಗರದ ಇಸ್ಕಾನ್ ದರ್ಶನಕ್ಕೆ ಸೌಭಾಗ್ಯ ಕಲ್ಪಿಸಲಾಗಿತ್ತು. ನಾನು ಕೂಡ ಇಸ್ಕಾನ್ ಗೆ ಭೇಟಿ ನೀಡಿ ಮೂಕವಿಸ್ಮಿತನಾದೆ. ದೇಶ ವಿದೇಶಗಳಿಂದ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಯಾವುದೇ ಜಾತಿ ಭೇದ ಇಲ್ಲದೆ ಸರ್ವರಿಗೂ ದೇವಾಲಯಕ್ಕೆ ಪ್ರವೇಶವಿದೆ. ಶ್ರೀಲಾ ಪ್ರಭುಪಾದರು ಹಲವೆಡೆ ದೇವಾಲಯಗಳನ್ನು ಸ್ಥಾಪಿಸಿದ್ದಾರೆ. ರಾಜಾದಿರಾಜ ಗೋವಿಂದ ದೇವಾಲಯ ಭಕ್ತಿ ಭಾವ ನೀಡಿ ಸಕಾರಾತ್ಮಕ ಚಿಂತನೆಯನ್ನು ಜನರ ಮನಸ್ಸಿನಲ್ಲಿ ಬಿತ್ತಲಿಸಿರುವ ವಿಶ್ವಾಸ ನನಗಿದೆ ಎಂದಿದ್ದಾರೆ.
ಇನ್ನು ಈ ಕಾರ್ಯಕ್ರಮದ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗೋವಾಕ್ಕೆ ನಿರ್ಗಮಿಸಲಿದ್ದು ಅಲ್ಲಿ ಬುಧವಾರ ಅಲ್ಲಿ ನಡೆಯಲಿರುವ ಹೊಸ ರಾಜಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಮಾತು
ಕಾರ್ಯಲ್ರಮದಲ್ಲಿ ಮಾಥನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ 'ಭಕ್ತಿಭಾವದ ಪ್ರತೀಕವೇ ಈ ದೇವಾಲಯ. ಇದು ಒಂದು ಸುಂದರ ದೇವಾಲಯ. ದೇವಾಲಯಗಳು ಹಿಂದೂಧರ್ಮದ ಚಿಹ್ನೆಗಳು. ಅದ್ವೈತ್ವ, ವಿಶಿಷ್ಟಾದೈತ್ವ , ಜ್ಞಾನ, ಕರ್ಮ, ಭಕ್ತಿ ಮಾರ್ಗಗಳಿಂದ ಬಂದಿವೆ. ಭಗವದ್ಗೀತಾ ಅನೇಕ ಪಾಠಗಳನ್ನು ಅನೇಕ ಬಗೆಯ ಜನರಿಗೆ ನೀಡುತ್ತದೆ. ಭಗವದ್ಗೀತೆಯನ್ನು ಸ್ಮರಿಸುವಾಗ ಪ್ರದುಪಾದರನ್ನು ನೆನೆಸುತ್ತೇವೆ. ದೇವಸ್ಥಾನಗಳು ಒಂದು ಶಾಂತಿಯುತವಾದ ಸ್ಥಳಗಳು. ಈ ವರ್ಷ ಶ್ರೀಪಭುಪಾದರು 125ನೇ ವರ್ಷ ಪೂರೈಸುತ್ತಿದ್ದಾರೆ. ನಾನು ಈ ದೇವಾಲಯದ ಕಲೆಯನ್ನು ಗಮನಿಸಿದೆ, ಇದು ನಿಜಕ್ಕೂ ಸುಂದರವಾದ ಕಲೆಯಾಗಿದೆ, ನನಗೆ ಇಷ್ಟವಾಯ್ತು ಎಂದು ಹೊಗಳಿದ್ದಾರೆ.