ರಾಷ್ಟ್ರಪತಿ ಕೋವಿಂದ್‌ ಬೆಂಗಳೂರಿಗೆ: ಕನಕಪುರ ರಸ್ತೆಯಲ್ಲಿ ಟ್ರಾಫಿಕ್ ಅಲರ್ಟ್

By Suvarna NewsFirst Published Jun 14, 2022, 9:20 AM IST
Highlights

* 2 ದಿನಗಳ ಭೇಟಿಗಾಗಿ ಇಂದು ರಾಷ್ಟ್ರಪತಿ ಕೋವಿಂದ್‌ ಬೆಂಗಳೂರಿಗೆ

* 11.30ಕ್ಕೆ ರಾಷ್ಟ್ರಪತಿ ಇಸ್ಕಾನ್ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ

* ಕನಕಪುರ ರಸ್ತೆಯಲ್ಲಿ ಟ್ರಾಫಿಕ್ ಅಲರ್ಟ್

ಕನಕಪುರ(ಜೂ.14): ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ರಾಜ್ಯ ರಾಜಧಾನಿ ಬೆಂಗಳೂರಿಗೆ ಎರಡು ದಿನಗಳ ಭೇಟಿಗಾಗಿ ಸೋಮವಾರ ಆಗಮಿಸಲಿದ್ದಾರೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. 

ಸೋಮವಾರದಂದು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲಿದ್ದಾರೆ. ಸಂಜೆ 4.30ಕ್ಕೆ ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ರಾಷ್ಟ್ರಪತಿಗಳು ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನ ಚಾಣಕ್ಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರ, ರಾಜ್ಯ ಸರ್ಕಾರದ ಗಣ್ಯರು, ಸೇನೆಯ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ರಾಷ್ಟ್ರಪತಿಯವರು ಸೋಮವಾರ ರಾತ್ರಿ ರಾಜಭವನದಲ್ಲಿ ತಂಗಲಿದ್ದಾರೆ. ಮಂಗಳವಾರ ಪೂರ್ವಾಹ್ನ 11.30 ವಸಂತಪುರದ ವೈಕುಂಠ ಗಿರಿಯಲ್ಲಿ ಇಸ್ಕಾನ್‌ನವರು ನಿರ್ಮಿಸಿರುವ ಶ್ರೀ ರಾಜಾಧಿಕಾರ ಗೋವಿಂದ ದೇಗುಲದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಬಳಿಕ ಗೋವಾಕ್ಕೆ ನಿರ್ಗಮಿಸಲಿದ್ದು ಅಲ್ಲಿ ಬುಧವಾರ ಅಲ್ಲಿ ನಡೆಯಲಿರುವ ಹೊಸ ರಾಜಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇಂದು ಬೆಳಗ್ಗೆ 11.30ಕ್ಕೆ ರಾಷ್ಟ್ರಪತಿ ಇಸ್ಕಾನ್ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ರಾಜಭವನದಿಂದ ಕನಕಪುರ ರಸ್ತೆ ದೊಡ್ಡಕಲಸಂದ್ರಕ್ಕೆ ತೆರಳಲಿದ್ದಾರೆ. ಹೀಗಿರುವಾಗ ಯಾವೆಲ್ಲಾ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಇರಲಿದೆ? ಇಲ್ಲಿದೆ ವಿವರ
ದೇವಸ್ಥಾನಕ್ಕೆ ಹೋಗುವ ಮಾರ್ಗ

ರಾಷ್ಟ್ರಪತಿಗಳು 14-6-2022 ರಂದು ಬೆಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ. ಪ್ರಯಾಣಿಕರು ಈ ವೇಳೆ ಸುಗಮ‌ ಸಂಚಾರಕ್ಕೆ ಈ ಕೆಳಕಂಡ ರಸ್ತೆ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಲಿದ್ದು, ಬದಲಿ ಮಾರ್ಗದಲ್ಲಿ ಸಂಚರಿಸಬಹುದಾಗಿದೆ

1. ಕ್ವೀನ್ಸ್ ರಸ್ತೆ,
2. ವಿಟ್ಟಲ್ ಮಲ್ಯ ರಸ್ತೆ,
3. RRMR ರಸ್ತೆ,
4. NR ವೃತ್ತ,
5. ದೇವಾಂಗ,
6. ಲಾಲ್ಬಾಗ್ ರಸ್ತೆ
7. ಕೃಂಬಿಗಲ್ ರಸ್ತೆ,
8. ಸೌತೆಂಡ್,
9. ಬನಶಂಕರಿ,
19. ಸಾರಕ್ಕಿ,
11. ಕೋಣನಕುಂಟೆ ಕ್ರಾಸ್,
12. ದೊಡ್ಡಕಲ್ಲಸಂದ್ರ, ಇಸ್ಕಾನ್ ದೇವಸ್ಥಾನ ರಸ್ತೆ (ದೊಡ್ಡಕಲ್ಲಸಂದ್ರದ ಹತ್ತಿರ)
 14-6-2022 ರಂದು 10.15 AM ನಿಂದ 11 AM ನಡುವೆ.

ಇದೇ ವೇಳೆ ಕನಕಪುರ ರಸ್ತೆಯಲ್ಲಿರುವ ಎಲ್ಲಾ ಅಂಗಡಿಗಳನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುಚ್ಚುವಂತೆ ತಿಳಿಸಲಾಗಿದೆ. ಕನಕಪುರ ರಸ್ತೆಯನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1230 ರವರೆಗೆ ವಾಸ್ತವಿಕವಾಗಿ ಮುಚ್ಚಲಾಗುತ್ತದೆ. 

ದೇವಸ್ಥಾನದಿಂದ ಹಿಂತಿರುಗುವ ವೇಳೆ
1. ಕನಕಪುರ ರಸ್ತೆ,
2. ಸೌತೆಂಡ್,
3. ಜೆಸಿ ರಸ್ತೆ,
4. ಟೌನ್ ಹಾಲ್,
5. ಕಾರ್ಪೊರೇಷನ್ ವೃತ್ತ,
6.ಕಸ್ತೂರ್ಬಾ ರಸ್ತೆ,
7. ಅನಿಲ್ ಕುಂಬ್ಳೆ ಜಂಕ್ಷನ್, 8. BRV,
9. ಹಳೆಯ ವಿಮಾನ ನಿಲ್ದಾಣ ರಸ್ತೆ
 14-6-2022 ರಂದು ಬೆಳಿಗ್ಗೆ 11.45 ರಿಂದ ಮಧ್ಯಾಹ್ನ 12.45 ರ ನಡುವೆ

click me!