* ಮುಂಬರುವ ದಿನಗಳಲ್ಲಿ ಗಡ್ಡಧಾರಿಯೊಬ್ಬರು ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರುತ್ತಾರೆ
* ಶ್ರೀಮೈಲಾರ ಲಿಂಗೇಶ್ವರ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ನುಡಿದಿದ್ದ ಭವಿಷ್ಯ
* ಒಡೆಯರ್ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು, ಸತ್ಯಕ್ಕೆ ದೂರವಾಗಿದೆ ಎಂದ ಗೊರವಯಯ್ಯ
ಬೆಂಗಳೂರು(ಆ.13): ‘ಮುಂಬರುವ ದಿನಗಳಲ್ಲಿ ಗಡ್ಡಧಾರಿಯೊಬ್ಬರು ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರುತ್ತಾರೆ’ ಎಂದು ಶ್ರೀಮೈಲಾರ ಲಿಂಗೇಶ್ವರ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು, ಸತ್ಯಕ್ಕೆ ದೂರವಾಗಿದೆ ಎಂದು ದೇವಾಲಯದ ವಂಶ ಪಾರಂಪರ್ಯ ಗೊರವಯ್ಯ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಧರ್ಮದರ್ಶಿಗಳು ಸ್ವಹಿತಾಸಕ್ತಿ ಮತ್ತು ಪ್ರಚಾರಕ್ಕಾಗಿ ಮನಬಂದಂತೆ ಹೇಳಿಕೆ ಕೊಟ್ಟಿದ್ದಾರೆ. ಧರ್ಮ ದರ್ಶಿಗಳು ತಾವು ಹೇಳಿದ ಮೈಲಾರವಾಣಿ ಕೇವಲ ರಾಜಕೀಯ ನಾಯಕರ ಆಕರ್ಷಣೆಗೆ ಹಾಗೂ ವೈಯಕ್ತಿಕ ದುರುದ್ದೇಶದಿಂದ ಕೂಡಿದೆ ಎಂದು ತಿಳಿಸಿದ್ದಾರೆ. ದೇವರಗುಡ್ಡ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ, ಧರ್ಮದರ್ಶಿಗಳು ಹೇಳಿಕೆ ಸ್ವಹಿತಾಸಕ್ತಿಗಾಗಿ ನೀಡಿದ್ದಾರೆ.
ಮೈಲಾರ ಕ್ಷೇ ತ್ರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಈ ಹಿಂದೆ ಹಲವು ಬಾರಿ ಕ್ಷೇತ್ರದ ಸಂಪ್ರದಾಯ ಉಲ್ಲಂಸಿ ನಡೆದುಕೊಂಡಿದ್ದಾರೆ. ಇದು ಕ್ಷೇತ್ರದ ಪರಂಪರೆಗೆ ಧಕ್ಕೆ ತಂದಿದೆ. ಭಕ್ತರಿಗೆ ಆಗುತ್ತಿರುವ ಗೊಂದಲ ಪರಿಹರಿಸಿಸಬೇಕೆಂದು ಒತ್ತಾಯಿಸಿದ್ದಾರೆ.