
ಬೆಂಗಳೂರು (ಏ.07): ರಾಜ್ಯದಲ್ಲಿ ವಿವಾದ ಎಬ್ಬಿಸಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆಯನ್ನು ಕೋರ್ಟ್‌ಗೆ ಹಾಜರು ಪಡಿಸುವ ವೇಳೆ ಯುವಕನೊಬ್ಬ ಆರೋಪಿಯ ಹಣೆಗೆ ಮುತ್ತಿಟ್ಟಿದ್ದಾನೆ. ಈ ಘಟನೆಯ ಬೆನ್ನಲ್ಲಿಯೆ ಕೊಲೆ ಆರೋಪಿಯ ಹತ್ತಿರ ಇನ್ನೊಬ್ಬ ವ್ಯಕ್ತಿಯನ್ನು ಹತ್ತಿರಕ್ಕೆ ಬಿಟ್ಟುಕೊಂಡು ಮುತ್ತು ಕೊಡಲು ಅವಕಾಶ ಮಾಡಿಕೊಟ್ಟ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಯ ಜೊತೆಗೆ ಪ್ರಸ್ತವನ್ನೂ ಮಾಡಿಸಿಕೊಟ್ಟಿಬಿಡಿ ಎಂದು ಟೀಕಿಸಲಾಗುತ್ತಿದೆ.
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಶಾಫಿ ಬೆಳ್ಳಾರೆಗೆ ಯುವಕನೊಬ್ಬ ಮುತ್ತು ಕೊಟ್ಟಿದ್ದಾನೆ. ಇಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಶಾಫಿ ಬೆಳ್ಳಾರೆ ಆಗಿದ್ದಾರೆ ಎಂಬ ಆರೋಪವಿದೆ. ಹೀಗಾಗಿ, ಈ ಪ್ರಕರಣ ರಾಜ್ಯದಲ್ಲಿ ಕೋಮು ದ್ವೇಷಕ್ಕೆ ತಿರುತಗಿತ್ತು. ಇದನ್ನು ಗೃಹ ಇಲಾಖೆಯಿಂದ ಗಂಭೀರ ಪ್ರಕರಣವೆಂದು ಪರಿಗಣಿಸಿತ್ತು. ಹೋಗಾಗಿ, ಶಾಫಿ ಬೆಳ್ಳಾರೆಗೆ ಭದ್ರತೆ ಒದಗಿಸಿ ಕರೆದುಕೊಂಡು ಹೋಗಲಾಗುತ್ತದೆ. ಆದರೆ, ಈ ಎಲ್ಲ ಭದ್ರತೆಯನ್ನೂ ಮೀರಿ ಯುವಕನೊಬ್ಬ ಶಾಫಿ ಬೆಳ್ಳಾರೆ ಹಣೆಗೆ ಮುತ್ತಿಟ್ಟು, ಕುಚೇಷ್ಟೆ ಮೆರೆದಿದ್ದಾನೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಪ್ರವೀಣ್ ನೆಟ್ಟಾರು ಆತ್ಮಹತ್ಯೆ ಆರೋಪಿ ಶಾಫಿ ಬೆಳ್ಳಾರೆಯನ್ನು ಪೊಲೀಸ್ ವಾಹನದಲ್ಲಿ ಭಧ್ರತೆಯಲ್ಲಿಯೇ ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಕೋರ್ಟ್ ಆವರಣದಲ್ಲಿ ಗೇಟಿನ ಬಳಿ ನಿಂತಿದ್ದ ಯುವಕನೊಬ್ಬ ಪೊಲೀಸರ ಭದ್ರತೆ ನಡುವೆಯೇ ಆರೋಪಿಯ ತಲೆಯನ್ನು ಹಿಡಿದುಕೊಂಡು ಹಣೆಗೆ ಮುತ್ತು ಕೊಟ್ಟು ಸ್ಮೈಲ್ ಮಾಡಿದ್ದಾನೆ. ಇದಕ್ಕೆ ಶಾಫಿ ಬೆಳ್ಳಾರೆ ಕೂಡ ನಾನು ಮಹಾನ್ ಸಾಧನೆ ಮಾಡಿದ ಹೀರೋ ಎಂಬಂತೆ ನಗುತ್ತಲೇ ಕೋರ್ಟ್ ಒಳಗೆ ಹೋಗುತ್ತಾನೆ. ಇಷ್ಟೆಲ್ಲಾ ಘಟನೆ ನಡೆದರೂ ಪೊಲೀಸರು ಏನೂ ಆಗಿಲ್ಲವೆಂಬಂತೆ ಯುವಕನನ್ನು ಪಕ್ಕಕ್ಕೆ ಸರಿಸಿ ಆರೋಪಿಯನ್ನು ಕರೆದುಕೊಂಡು ಹೋಗುತ್ತಾರೆ. ಆರೋಪಿಗೆ ಮುತ್ತಿಟ್ಟರೂ ಸುಮ್ಮನಿದ್ದ ಪೊಲೀಸರ ನಡೆಯನ್ನು ನೋಡಿದ ಜನರು ಮುಂದೆ ಪ್ರಸ್ತವನ್ನೂ ಮಾಡಿಸಬಹುದು ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ, 'ದೊಡ್ಡ ನಗರದಲ್ಲಿ ಇದೆಲ್ಲ ಆಗ್ತಾ ಇರುತ್ತೆ' ಎಂದ ಗೃಹ ಸಚಿವ ಪರಮೇಶ್ವರ್!
ಇನ್ನು ಶಾಫಿ ಬೆಳ್ಳಾರೆ ವಿರುದ್ಧ 2017ರಲ್ಲಿ ಆರ್.ಎಸ್.ಎಸ್ ಹಾಗೂ ಕಲ್ಲಡ್ಕ ಭಟ್ ವಿರುದ್ಧ ಭಾಷಣ ಮಾಡಿದ ಪ್ರಕರಣವೂ ಇವೆ. ಈ ಸಂಬಂಧ ಬೆಳ್ತಂಗಡಿ ಕೋರ್ಟ್‌ಗೆ ಬಾಡಿ ವಾರೆಂಟ್ ಮೂಲಕ ಶಾಫಿಯನ್ನು ಹಾಜರುಪಡಿಸಬೇಕಿತ್ತು. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ NIA ಯಿಂದ ಬಂಧನವಾಗಿ ನ್ಯಾಯಾಂಗ ಬಂಧನದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. SDPIನ ಮುಖಂಡನೂ ಆಗಿರುವ ಶಾಫಿ ಬೆಳ್ಳಾರೆ ನೋಡಲು ಹತ್ತಾರು ಸಹಚರರು ಕೂಡ ಕೋರ್ಟ್ ಆವರಣಕ್ಕೆ ಬಂದಿದ್ದರು.
ಕರ್ನಾಟಕ ಪೊಲೀಸರ ದಕ್ಷತೆ ಕಡಿಮೆ ಆಯ್ತಾ?
ಭಾರತದಲ್ಲಿ ಕರ್ನಾಟಕ ರಾಜ್ಯ ಪೊಲೀಸರ ಸ್ಥಾನ ಉನ್ನತ ಶ್ರೇಣಿಯಲ್ಲಿದೆ. ಆದರೆ, ಇದೀಗ ರಾಜ್ಯ ಪೊಲೀಸರ ದಕ್ಷತೆ, ಚಾಣಾಕ್ಷತೆ, ತನಿಖೆ ಚುರುಕುತನ ಹಾಗೂ ನ್ಯಾಯಪರತೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆಯೇ ಎಂಬ ಅನುಮಾನ ಕಂಡುಬರುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೈಮೀರಿ ಹೋಗಿದೆಯೇ ಎಂಬಂತೆ ನಡು ರಸ್ತೆಗಳಲ್ಲಿ ಕೊಲೆ, ಲೈಂಗಿಕ ಕಿರುಕುಳ, ದೌರ್ಜನ್ಯ, ಸುಲಿಗೆಗಳು ನಡೆಯುತ್ತಿವೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕಣ್ಣುಮುಚ್ಚಿ ಕುಳಿತಿದ್ದಾರೆ. ಸರ್ಕಾರದ ಅಧಿಕಾರಿಯಂತೆ ಕೆಲಸ ಮಾಡದೇ ಉಳ್ಳವರ ಪ್ರತಿನಿಧಿಗಳಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಘಟನೆಯನ್ನು ಕೊಡಬಹುದು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ SDPI ಟಿಕೆಟ್: ಸಚಿವ ಆರ್.ಅಶೋಕ್ ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ