ಬೆಂಗಳೂರಿನ ರಸ್ತೆಯಲ್ಲಿ ಕನ್ನಡ ಮಾತಾಡಿದ ಜಮ್ಮು-ಕಾಶ್ಮೀರದ ಹುಡುಗಿ! ಹಿಂದಿ ಭಾಷಿಕರಿಗೆ ಚಳಿ ಬಿಡಿಸಿದ್ದೇ ಅದ್ಭುತ!

ಬೆಂಗಳೂರಿನಲ್ಲಿ ಜಮ್ಮು-ಕಾಶ್ಮೀರದ ಯುವತಿಯೊಬ್ಬಳು ಕನ್ನಡದಲ್ಲಿ ಮಾತನಾಡಿ ಹಿಂದಿ ಹೇರಿಕೆ ಮಾಡುವವರ ವಿರುದ್ಧ ಧ್ವನಿ ಎತ್ತಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡ ಕಲಿಯುವ ಅಗತ್ಯತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

Jammu Girl speak fluency in Kannada language at Bengaluru Street viral Video sat

ಬೆಂಗಳೂರು (ಏ.07): ಭಾರತದ ಐಟಿ ಸಿಟಿ ಬೆಂಗಳೂರಿನಲ್ಲಿ ಬಾರತದ ಎಲ್ಲ ರಾಜ್ಯಗಳ ಜನರೂ ಬಂದು ನೆಲೆಸಿದ್ದಾರೆ. ಇಲ್ಲಿ ಕನ್ನಡವೇ ಅಧಿಕೃತ ಭಾಷೆಯಾದ್ದರಿಂದ ಕನ್ನಡ ಭಾಷೆಯ ಕುರಿತಂತೆ ಹಿಂದಿ ಭಾಷಿಕರು ಆಗಿಂದಾಗ್ಗೆ ಕ್ಯಾತೆ ತೆಗೆಯುತ್ತಲೇ ಇರುತ್ತಾರೆ. ಇದೀಗ ಜಮ್ಮು-ಕಾಶ್ಮೀರದ ಯುವತಿಯೊಬ್ಬಳು ಬೆಂಗಳೂರಿನ ರಸ್ತೆಯಲ್ಲಿ ನಿಂತು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾ ಹಿಂದಿ ಭಾಷಿಕರಿಗೆ ಚಳಿ ಬಿಡಿಸಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.

ಬೆಂಗಳೂರಿನ ರಸ್ತೆಯೊಂದಲ್ಲಿ ಸೋಶಿಯಲ್ ಮಿಡಿಯಾ ಇನ್ಲ್ಪೂಯೆನ್ಸರ್ ಒಬ್ಬರು ಯುವತಿಯನ್ನು ನಿಲ್ಲಿಸಿ ಮಾತನಾಡಿಸುತ್ತಾರೆ. ಆಗ ಮೈಕ್ ಮುಂದೆ ಮಾತನಾಡಿದ ಜಮ್ಮು ಮೂಲದ ಯುವತಿ ನಿರರ್ಗಳವಾಗಿ ಕನ್ನಡ ಮಾತನಾಡಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿದೆ. ಜೊತೆಗೆ, ಈ ಯುವತಿ ಕನ್ನಡ ಮಾತನಾಡಲು ಕ್ಯಾತೆ ತೆಗೆಯುವ ಅನ್ಯ ಭಾಷಿಕರ ಬಗ್ಗೆಯೂ ಟೀಕೆ ಮಾಡಿದ್ದಾಳೆ. ಇದರ ಬೆನ್ನಲ್ಲಿಯೇ ಸ್ಥಳೀಯ ಕನ್ನಡ ಭಾಷೆಗಳನ್ನು ಕಲಿಯುವ ಚರ್ಚೆಯು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಭಾಷೆಯ ಮೇಲಿನ ತಮ್ಮ ಹಿಡಿತವನ್ನು ಪ್ರದರ್ಶಿಸುವುದಲ್ಲದೆ, ಕರ್ನಾಟಕದಲ್ಲಿ ವಾಸಿಸುವಾಗ ಮತ್ತು ಕೆಲಸ ಮಾಡುವಾಗ ಸ್ಥಳೀಯರಲ್ಲದವರು ಕನ್ನಡವನ್ನು ಕಲಿಯುವ ಅಗತ್ಯತೆ ಬಗ್ಗೆ ಒತ್ತಿ ಹೇಳಿದ್ದಾರೆ.

Latest Videos

ಇದನ್ನೂ ಓದಿ: ಬಂಗಾರದ ನಿಧಿ ಸಿಕ್ಕರೆ ಭಾರತ ಶ್ರೀಮಂತ ದೇಶ ಕಣ್ರೀ; ಬ್ರಿಟಿಷರಿಗೂ ಟಕ್ಕರ್ ಕೊಟ್ಟ ಗುಹೆ

ಬೆಂಗಳೂರು ನಗರಕ್ಕೆ ನಮ್ಮ ದೇಶದ ಎಲ್ಲ ರಾಜ್ಯಗಳ ಜನರೂ ಬರುತ್ತಾರೆ. ಹೆಚ್ಚಾಗಿ ಉತ್ತರ ಪ್ರದೇಶ, ಬಿಹಾರ ರಾಜ್ಯ ಸೇರಿ ಮತ್ತು ನೇಪಾಳ ದೇಶದಿಂದಲೂ ಜನರು ಬಂದು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಕೆಲಸವನ್ನು ಹುಡುಕಿ 'ನೀವು ಕರ್ನಾಟಕಕ್ಕೆ ಬರುತ್ತಿದ್ದರೆ, ನೀವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ಸ್ಥಳೀಯ ಭಾಷೆಯನ್ನು ಕಲಿಯುವುದು' ಎಂದು ಜಮ್ಮು ಯುವತಿ ಹೇಳಿದ್ದಾರೆ. 'ಹೊರಗಿನಿಂದ ಇಲ್ಲಿಗೆ ಎಷ್ಟೋ ಜನರು ಬರುತ್ತಿರುವುದರಿಂದ ಇಲ್ಲಿ ಕರ್ನಾಟಕದ ಜನರಿಗೆ ಈಗ ಜಾಗವಿಲ್ಲ.  ಅದರ ಮೇಲೂ ನಾವು ಹಿಂದಿಯಲ್ಲಿ ಮಾತನಾಡಬೇಕೆಂದು ಅವರು ಒತ್ತಾಯಿಸುತ್ತಾರೆ. ಅವರು ಕನ್ನಡವನ್ನು ಏಕೆ ಕಲಿಯಲು ಸಾಧ್ಯವಿಲ್ಲ?' ಎಂದು ಜಮ್ಮು ಯುವತಿ ಹೇಳಿದ್ದಾಳೆ.

a jammu girl in bengaluru learned kannada and held the line, while bimarus stroll in demanding hindi like it’s some birthright
props to her for calling out pic.twitter.com/SQ4DZ815eC

— ವೀರ ಬಲ್ಲಾಳ ೫ (@VeeraBallalaV)

ಈ ವಿಡಿಯೋ ಎಕ್ಸ್‌ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ತರಹೇವಾರಿ ಕಾಮೆಂಟ್‌ಗಳು ಕೂಡ ಬಂದಿವೆ. 'ಕನ್ನಡಿಗರು, ಸ್ಥಳೀಯ ಭಾಷೆಗಾಗಿ ಧ್ವನಿ ಎತ್ತಿದ್ದಕ್ಕೆ ಯುವತಿಯನ್ನು ಶ್ಲಾಘಿಸಿದ್ದಾರೆ. 'ಅವರು ಒಬ್ಬ ರಾಣಿ. ಕನ್ನಡೇತರರು ಅವರಿಂದ ಕಲಿಯಬೇಕು' ಎಂದು ಒಬ್ಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು, 'ಕರ್ನಾಟಕದಲ್ಲಿದ್ದಾಗ ಕನ್ನಡ ಕಲಿಯಿರಿ ಮತ್ತು ಈ ನೆಲದ ಭಾಷೆಯನ್ನು ಗೌರವಿಸಿ ಎಂದು ಬರೆದಿದ್ದಾರೆ. ಮತ್ತೊಬ್ಬರು ಕೆಲವರು "ಉದ್ಯೋಗ ಮತ್ತು ಲಾಭವನ್ನು ಪಡೆಯಲು ಕರ್ನಾಟಕಕ್ಕೆ ಬರುವ ಮೊದಲು, ಕನ್ನಡ ಕಲಿಯಿರಿ ಅಥವಾ ಹೊರಡಿ! ಹರ್ಷನ ಸಾಮ್ರಾಜ್ಯವನ್ನು ಪುಡಿಮಾಡಿದ ಯೋಧರ ರಕ್ತ ನಮ್ಮಲ್ಲಿ ಹರಿಯುತ್ತದೆ. ಹಿಂದಿ ಹೇರಿಕೆ ವಿಫಲಗೊಳ್ಳುತ್ತದೆ" ಎಂದು ಹೆಚ್ಚು ದೃಢವಾದ ಧ್ವನಿಯನ್ನು ತೆಗೆದುಕೊಂಡರು.

ಇದನ್ನೂ ಓದಿ: ಬೆಂಗಳೂರು: ಜೆಸಿ ರಸ್ತೆಯಲ್ಲಿ ರಾಂಗ್ ರೂಟ್‌ನಲ್ಲಿ ಬಂದ ಅಂಕಲ್, ಜಪ್ಪಯ್ಯ ಅಂದ್ರೂ ಜರುಗಲಿಲ್ಲ!

vuukle one pixel image
click me!