ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ SDPI ಟಿಕೆಟ್: ಸಚಿವ ಆರ್.ಅಶೋಕ್ ಆಕ್ರೋಶ
ಎಸ್‌ಡಿಪಿಐನವರು ಟೆರರಿಸ್ಟ್‌ಗಳಿಗೆ ಟಿಕೆಟ್ ಕೊಡ್ತಾರೆ ಎಂದ ಸಚಿವ ಆರ್.ಅಶೋಕ್
ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆಗೆ ಎಸ್‌ಡಿಪಿಐ ಟಿಕೆಟ್
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಖಚಿತವೆಂದ ಎಸ್‌ಡಿಪಿಐ ಮುಖಂಡ
ಬೆಂಗಳೂರು (ಫೆ.13): ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕಣದ ಆರೋಪಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಟಿಕೆಟ್ ನೀಡುತ್ತಿದೆ. ಅವರು ಟೆರರಿಸ್ಟ್‌ಗಳನ್ನು ಕರೆತಂದು ಅವರಿಗೂ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲಿಸುತ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರ್ ಹತ್ಯೆಯಲ್ಲಿ ಭಾಗಿಯಾದವನು ಎಸ್‌ಡಿಪಿಐ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ. ಈಗಾಗಲೇ ಕೇಂದ್ರ ಸರ್ಕಾರದಿಂದ ದೇಶದ್ರೋಹಿ ಚಟುವಟಿಕೆಗಳನ್ನು ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಪಿಎಫ್‌ಐ ಸಂಘಟನೆಯನ್ನಯ ನಿಷೇಧಿಸಿದೆ. ದೇಶದಲ್ಲಿ ಈಗಾಗಲೇ ಪಿಎಫ್‌ಐ ಬ್ಯಾನ್ ಮಾಡಲಾಗಿದೆ. ಅದೇ ರೀತಿ ಎಸ್‌ಡಿಪಿಐ ಕೂಡ ಬ್ಯಾನ್ ಮಾಡಬೇಕು. ಹೀಗಾದಲ್ಲಿ ಮಾತ್ರ ಕೊಲೆ ಆರೋಪಿಗಳು ಮತ್ತು ಇನ್ನಿತರ ಅಪರಾಧಿಗಳನ್ನು ರಾಜಕೀಯಕ್ಕೆ ಕರೆತರುವುದನ್ನು ತಡೆಯಬಹುದು ಎಂದಿದ್ದಾರೆ.
ಅಮಿತ್ ಶಾ ಸಭೆಯಲ್ಲಿ ಪದಾಧಿಕಾರಿಗಳು ಗರಂ, ಬಾಯ್ಬಿಡದ ಶಾಸಕ-ಸಂಸದರು!
ಟೆರರಿಸ್ಟ್‌ಗಳಿಗೂ ಭದ್ರತೆ ಕೊಡಬೇಕಾಗುತ್ತದೆ: ಎಸ್‌ಡಿಪಿಐ ನಾಯಕರು ಟೆರರಿಸ್ಟ್‌ಗಳನ್ನ ಕರೆದುಕೊಂಡು ಬಂದು ಟಿಕೆಟ್ ಕೊಡ್ತಾರೆ. ಆಗ ಅವರಿಗೂ ಭದ್ರತೆ ಕೊಡಬೇಕಾಗುತ್ತದೆ. ನಂತರ ಅವರನ್ನ ಬಿಡುಗಡೆ ಮಾಡಿ ಅಂತಾ ಕೋರ್ಟ್ ಗೆ ಹೋಗ್ತಾರೆ. ಈ ಬಗ್ಗೆ ಸಿಎಂ ಜೊತೆ ಮಾತಾಡ್ತೇನೆ. ಎಸ್‌ಡಿಪಿಐ ಕೂಡ ಬ್ಯಾನ್ ಆಗಬೇಕು. ಇದೊಂದು ದೇಶ ವಿರೋಧಿ ಚಟುವಟಿಕೆಯ ಅಂಗವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಎಸ್ ಡಿಪಿಐ ಟಿಕೆಟ್ ವಿಚಾರ: ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗೀಪೇಟೆ ಮಾತನಾಡಿ, ಪುತ್ತೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ರಾಜ್ಯಾಧ್ಯಕ್ಷರು ಶಾಫಿ ಬೆಳ್ಳಾರೆ ಹೆಸರು ಹೇಳಿದ್ದಾರೆ. ಅಲ್ಲಿ ಸ್ಪರ್ಧೆಗೆ ಮೂರು ಹೆಸರಿತ್ತು, ಆದರೆ ಕಾರ್ಯಕರ್ತರು ಶಾಫಿ ಬೆಳ್ಳಾರೆ ಪರ ಇದ್ದರು. ಹೀಗಾಗಿ ರಾಜ್ಯಾಧ್ಯಕ್ಷರು ಘೋಷಣೆ ಮಾಡಿದ್ದಾರೆ. ಇದರಲ್ಲಿ ವಿವಾದ ಇಲ್ಲ. ಆರೋಪ ಹೊಂದಿದವರು ಚುನಾವಣೆಗೆ ಸ್ಪರ್ಧೆ ಮಾಡಿದ ಇತಿಹಾಸ ಇದೆ. ಹೀಗಾಗಿ ಜನಪ್ರತಿನಿಧಿ ಕಾಯ್ದೆಯನ್ವಯ ಜೈಲಿನಲ್ಲೇ ಇದ್ದು ಅವರು ಸ್ಪರ್ಧೆ ಮಾಡ್ತಾರೆ ಎಂದು ಹೇಳಿದ್ದಾರೆ.
ಸುಖಾಸುಮ್ಮನೆ ಕೇಸ್‌ನಲ್ಲಿ ಸಿಲುಕಿಲಾಗಿದೆ: ಜಾಮೀನು ಸಿಕ್ಕಿದರೆ ಅವರೇ ಪುತ್ತೂರಿನಲ್ಲಿ ಬಂದು ವಾಸವಿರುತ್ತಾರೆ. ಪಿಎಫ್ಐ ನಮ್ಮ ಯೂತ್ ವಿಂಗ್ ಅಲ್ಲ, ಅದು ಸಾಧ್ಯವೂ ಇಲ್ಲ. ಹೀಗಾಗಿ ಶಾಫಿ ಸ್ಪರ್ಧೆಯಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಇಲ್ಲ. ಅವರು ನಿರಪರಾಧಿಗಳು, ಅವರನ್ನು ಈ ಕೇಸ್ ನಲ್ಲಿ ಸಿಲುಕಿಸಲಾಗಿದೆ. ಇದನ್ನ ನಾವು ಅವರ ಬಂಧನ ಆದಾಗಿನಿಂದ ಹೇಳಿಕೊಂಡು ಬರ್ತಾ ಇದೀವಿ. ಬೆಳ್ಳಾರೆಯ ಇಬ್ಬರೂ ಸಹೋದರರನ್ನ ಫಿಕ್ಸ್ ಮಾಡಲಾಗಿದೆ. ಇದು ಸಂಘ ಪರಿವಾರದ ಷಡ್ಯಂತ್ರವಾಗಿದೆ. ನಾವೆಲ್ಲರೂ ಶಾಫಿ ಬೆಳ್ಳಾರೆ, ನಾಯಕರು, ಕಾರ್ಯಕರ್ತರು ಎಲ್ಲರೂ ಶಾಫಿ ಬೆಳ್ಳಾರೆ ಸ್ಪರ್ಧೆಎಗೆ ನಿಲ್ಲಬೇಕೆಂದು ಹೇಳಿದ್ದಾರೆ ಎಂದರು.
ಎಸ್‌ಡಿಪಿಐ ಮೇಲೆ ದಾಳಿಯ ದಾಖಲೆ ನೀಡಿ: ಹೈಕೋರ್ಟ್
ತಳಮಟ್ಟದಿಂದ ಶಾಫಿ ಬೆಳ್ಳಾರೆ ಪರ ಕೆಲಸ: ನಾವು ತಳಮಟ್ಟದಿಂದಲೇ ಶಾಫಿ ಬೆಳ್ಳಾರೆ ಅವರ ಪರವಾಗಿ ಕೆಲಸ ಮಾಡ್ತಾ ಇದೀವಿ. ಚುನಾವಣೆಗೆ ಪುತ್ತೂರಿನಲ್ಲಿ ಎಲ್ಲಾ ತಯಾರಿ ನಡೆದಿದೆ. ಈ ಬಾರಿ ನಾವು ಪುತ್ತೂರಿನ ಜೊತೆ ಬೇರೆ ಕಡೆಗಳಲ್ಲೂ ಅಭ್ಯರ್ಥಿ ಹಾಕಿದ್ದೇವೆ. ಜಾತ್ಯಾತೀತ ಮುಖವಾಡ ಹೊತ್ತ ಕಾಂಗ್ರೆಸ್ ಆರ್.ಎಸ್.ಎಸ್ ಹಿನ್ನೆಲೆ ವ್ಯಕ್ತಿಯನ್ನು ಪುತ್ತೂರಿನಲ್ಲಿ ಇಳಿಸಲು ತಯಾರಿ ಮಾಡಿದೆ. ಹೀಗಾಗಿ ನಾವು ಅವರ ವಿರುದ್ದ ಸ್ಪರ್ಧೆ ಮಾಡಿಯೇ ಸಿದ್ದ ಎಂದು ರಾಷ್ಟ್ರೀಯ ಪಕ್ಷಗಳಿಗೆ ಸವಾಲು ಹಾಕಿದ್ದಾರೆ.