ಟಿಪ್ಪು ಜಯಂತಿ ಪ್ರತಿಭಟನೆಗೆ ಪ್ರತಾಪ್ ಸಿಂಹ ಏಕೆ ಇರಲಿಲ್ಲ?

By Web DeskFirst Published Nov 11, 2018, 3:11 PM IST
Highlights

ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಈ ಪ್ರತಿಭೆನೆಗೆ ಸಂಸದ ಪ್ರತಾಪ್ ಸಿಂಹ ಗೈರಾಗಿದ್ದರು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. 

ಮೈಸೂರು : ರಾಜ್ಯ ಸರ್ಕಾರ ಆಚರಣೆ ಮಾಡಿದ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಪಾಳ್ಗೊಳ್ಳದ ಬಗ್ಗೆ ಸಂಸದ ಪ್ರತಾಪ್ ಸಿಂಹ ಇದೀಗ ಸ್ಪಷ್ಟನೆ ನೀಡಿದ್ದಾರೆ. 

 ನಾನು ನನ್ನ ಮಗಳ ಜತೆ ಅಜ್ಜಿ ಮನೆಗೆ ಹೋಗಿದ್ದೆ. ಆ ಕಾರಣದಿಂದ ನಾನು ಟಿಪ್ಪು ಜಯಂತಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.

ನಾಲ್ಕು ದಿನ ಲಾಂಗ್ ವೀಕ್ ಎಂಡ್ ಸಿಕ್ಕಿತ್ತು. ಮುಂದೆ ಚುನಾವಣೆ ಬರುತ್ತದೆ ಎಂದು ಮಗಳ ಜತೆ ಸಮಯ ಕಳೆದೆ. ನಾನು ರಾಜಕಾರಣಿಯಾಗಿದ್ದರೂ ಸಹ ಅದರ ಜತೆ ನನ್ನ ಪತ್ನಿಗೆ ಗಂಡನೂ ಹೌದು, ಮಗಳಿಗೆ ಅಪ್ಪನೂ ಹೌದು. ಮೂಡಿಗೆರೆ ಬಳಿ ರಿಮೋಟ್  ವಿಲೇಜ್‌ ಗೆ ತೆರಳಿದ ಕಾರಣ ಮೊಬೈಲ್  ಸಂಪರ್ಕ ಸಾಧ್ಯವಾಗಿಲ್ಲ. 

ರಜೆ ಇದ್ದ ಕಾರಣಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸಿದ್ದಕ್ಕೂ ನನ್ನ ರಜೆಗೂ ಸಂಬಂಧ ಇಲ್ಲ. ಟಿಪ್ಪು ವಿಚಾರವಾಗಿ  ಪ್ರತಾಪ್‌ ಸಿಂಹ ಹಾಗೂ ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸಿದ್ದರು. ಈ ವಿಚಾರವಾಗಿ ಸ್ಪಷ್ಟೀಕರಣ ‌ನೀಡಿದ್ದಾರೆ.

click me!