
ಮೈಸೂರು (ಮೇ.15) ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಹೊರಡಿಸಿದ ಹೊಸ ಆದೇಶವೊಂದು ಭಾರಿ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಶಾಲೆಗಳಲ್ಲಿ ಹಿಜಾಬ್ ನಿಷೇಧ ಆದೇಶ ರದ್ದು ಮಾಡಿ ಇದೀಗ ಸಿದ್ದರಾಮಯ್ಯ ಸರ್ಕಾರ ಹಿಬಾಜ್‌ಗೆ ಅವಕಾಶ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮುಸ್ಲಿಮರು ಯಾರು ಹಿಬಾಜ್‌ಗ ಅವಕಾಶ ಕೇಳಿಲ್ಲ. ಆದರೆ ಹಿಂದೂಗಳ ಉರಿಸಲು ಕಾಂಗ್ರೆಸ್ ಈ ರೀತಿ ಮಾಡಿದೆ ಎಂದಿದ್ದಾರೆ. ಕಳೆದ ಮೂರು ವರ್ಷದಲ್ಲಿ ಕರ್ನಾಟಕದಲ್ಲಿ ಮೂರುಕಾಸಿನ ಕೆಲಸ ಮಾಡದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮುಖ ಮುಚ್ಚಲು ಬುರ್ಖಾ ಬೇಕಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮುಸಲ್ಮಾನ ಹೆಣ್ಣುಮಕ್ಕಳಿಗೆ ಬುರ್ಖಾ ಬೇಕೋ ಬೇಡವೋ ಗೊತ್ತಿಲ್ಲ. ಆದರೆ ಕಳೆದ ಮೂರು ವರ್ಷಗಳಲ್ಲಿ ಕರ್ನಾಕದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡದ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವುಕುಮಾರ್ ಅವರಿಗೆ ಮುಖ ಮುಚ್ಚಿಕೊಳ್ಳಲು ಬುರ್ಖಾ ಬೇಕಿದೆ ಎಂದು ಪ್ರತಾಪ್ ಸಿಂಹ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ಸಮವಸ್ತ್ರ ಸಂಹಿತೆ ಬದಿಗಿಟ್ಟು ಹಿಜಾಬ್ ಗೆ ಅವಕಾಶ ಕೊಟ್ಟಿದ್ದಾರೆ. ಮುಸ್ಲಿಮರ ಪ್ರೀತಿ ಗಳಿಸುವುದಕ್ಕಿಂತ ಹಿಂದೂಗಳ ಉರಿಸುವುದೆ ಕಾಂಗ್ರೆಸ್ ನ ಅಜೆಂಡಾ ಆಗಿದೆ. ಮೂರು ಕಾಸಿನ ಕೆಲಸ ಮಾಡದ ಸಿಎಂ, ಡಿಸಿಎಂ ಹಾಗೂ ಸಚಿವರಿಗೆ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ಹೀಗಾಗಿ ಇವರಿಗೆಲ್ಲ ಬುರ್ಕಾ ಬೇಕೆ ಬೇಕಿದೆ ಎಂದು ಪ್ರತಾಪ್ ಸಿಂಹ್ ಹೇಳಿದ್ದಾರೆ.
ಸಿದ್ದರಾಮಯ್ಯ ಮಾಡುತ್ತಿರುವುದು ತಾಲಿಬಾನ್ ಸರಕಾರ. ಸಿದ್ದರಾಮಯ್ಯ ಕರ್ನಾಟಕದ ಖಮೇನಿ ಆಗೋಕೆ ಪ್ರಯತ್ನ ಪಡುತ್ತಿದ್ದಾರೆ. ಹಿಂದೂಗಳು ಜಾತಿ ಜಾತಿ ಅಂತಾ ಹೊಡೆದಾಡುವುದು ಬಿಡಿ.ಜಾತಿ ಜಾತಿ ಅಂತಾ ಸಾಯುವುದು ಬಿಡಿ. ಹಿಂದೂಗಳಾಗಿ ಒಗ್ಗೂಡುವ ಕಾಲ ಬಂದಿದೆ.ಸನಾತನ ಧರ್ಮ ನಾಶವನ್ನು ಮಾಡಲು ಸಿದ್ದರಾಮಯ್ಯ ರಂಥವರು ಯತ್ನಿಸಿದ್ದಾರೆ ಎಂದಿದ್ದಾರೆ.
ಜನಿವಾರ,ಶಿವಧಾರ ಒಟ್ಟೆ ಒಳಗೆ ಹಾಕುತ್ತೇವೆ. ಅದನ್ನು ಪ್ರದರ್ಶನ ಮಾಡಲ್ಲ. ಜನಿವಾರ, ಶಿವಧಾರಕ್ಕೆ ಅನುಮತಿ ಕೊಡುವುದಕ್ಕೆ ನೀವು ಯಾವ ದೊಣ್ಣೆ ನಾಯಕ. ಎರಡು ವರ್ಷ ಕಳೆಯಲಿ ಪೀಡೆ ತೊಲಗಿತು ಎಂದು ಕಾಂಗ್ರೆಸ್ ಗೆ ಜನರು ತರ್ಪಣ ಬಿಡುತ್ತಾರೆ.ಶಾಲೆಗಳಿಗೆ ಬುರ್ಕಾವೂ ಬೇಡ ಕೇಸರಿ ಶಾಲು ಬೇಡ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ