ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಈ ಬಾರಿಯೂ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಎರಡು ವರ್ಷ ಈ ನಿಧಿಗೆ ಹಣ ನೀಡಿರಲಿಲ್ಲ.
ಅಂಶಿ ಪ್ರಸನ್ನಕುಮಾರ್
ಮೈಸೂರು (ಫೆ.01): ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಈ ಬಾರಿಯೂ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಎರಡು ವರ್ಷ ಈ ನಿಧಿಗೆ ಹಣ ನೀಡಿರಲಿಲ್ಲ. ಕೋವಿಡ್ ಪರಿಸ್ಥಿತಿ ಸುಧಾರಿಸಿದ ನಂತರ ಮತ್ತೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಪ್ರತಾಪ್‌ಸಿಂಹ ಅವರು ಕೋವಿಡ್ ಪೂರ್ವದಲ್ಲೂ ಅನುದಾನ ಬಳಕೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರು. ಸಂಸದರ ಪ್ರತಿ ಕ್ಷೇತ್ರಕ್ಕೆ ವಾರ್ಷಿಕ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಆಯಾ ಕ್ಷೇತ್ರದ ಸಂಸದರು ವಿವಿಧ ಕಾಮಗಾರಿಗಳಿಗೆ ಈ ಅನುದಾನ ಶಿಫಾರಸು ಮಾಡಬಹುದು. ಅದರ ಆಧಾರದ ಮೇರೆಗೆ ಜಿಲ್ಲಾಧಿಕಾರಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ.
ಕೇಂದ್ರ ಸರ್ಕಾರ ಕೆಲ ಸಂಸದರಿಗೆ 9.50 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ರೀತಿ .9.50 ಕೋಟಿ (ಬಡ್ಡಿ ಸೇರಿಸಿ 12.14 ಕೋ ಬಿಡುಗಡೆಯಾಗಿರುವವರ ಪೈಕಿ ಅನುದಾನ ಬಳಕೆಯಲ್ಲಿ ಪ್ರತಾಪ್ ಸಿಂಹ ಮೊದಲ ಸ್ಥಾನದಲ್ಲಿದ್ದಾರೆ. ಪ್ರತಾಪ್‌ಸಿಂಹ ಅವರ ಕ್ಷೇತ್ರಕ್ಕೆ ನಿಗದಿಯಾದ 9.50 ಕೋಟಿ (ಬಡ್ಡಿ ಸೇರಿಸಿ 12.14 ಕೋಟಿ) ಬಿಡುಗಡೆ ಮಾಡಿದ್ದು, ಈ ಪೈಕಿ ಅವರು 11.87 ಕೋಟಿ ವೆಚ್ಚದ ಕಾಮಗಾರಿಗಳನ್ನು ಶಿಫಾರಸು ಮಾಡಿದ್ದಾರೆ. ಅಷ್ಟೂಹಣ ಮಂಜೂರಾಗಿದೆ. ಈ ಪೈಕಿ 11.74 ಕೋಟಿ ವೆಚ್ಚವಾಗಿದ್ದು, ಉಳಿಕೆ .0 ಲಕ್ಷ ಮಾತ್ರ. ಅವರ ಹಣ ಬಳಕೆ ಪ್ರಮಾಣ ಶೇ.121.60 ರಷ್ಟಿದೆ.
ಬಡವರು ಸೈಟ್ ಖರೀದಿಗೆ ಸರಳ ಕಾನೂನು: ಸಿಎಂ ಬೊಮ್ಮಾಯಿ ಭರವಸೆ
ಇನ್ನು ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡರು 9.80 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 9.79 ಕೋಟಿ ಮಂಜೂರಾಗಿದೆ. 9.50 ಕೋಟಿ ವೆಚ್ಚವಾಗಿದೆ. ಹಣ ಬಳಕೆಯ ಪ್ರಮಾಣ ಶೇ.99.11ರಷ್ಟಿದೆ. ಅದೇ ರೀತಿ ದಾವಣಗೆರೆಯ ಜಿ.ಎಸ್.ಸಿದ್ದೇಶ್ವರ 9.63 ಕೋಟಿ ಕಾಮಗಾರಿಗಳನ್ನು ಶಿಫಾರಸು ಮಾಡಿದ್ದು, 8.71 ಕೋಟಿ ವೆಚ್ಚವಾಗಿದೆ. ಬಳಕೆ ಪ್ರಮಾಣ ಶೇ.89.76 ರಷ್ಟಿದೆ. ಬೀದರ್‌ನ ಭಗವಂತ್ ಖೂಬಾ .11.82 ಕೋಟಿ ಕಾಮಗಾರಿಗಳನ್ನು ಶಿಫಾರಸು ಮಾಡಿದ್ದು, .7.31 ಕೋಟಿ ವೆಚ್ಚವಾಗಿದೆ. ಚಾಮರಾಜನಗರ ಸಂಸದ ಶ್ರೀನಿವಾಸಪ್ರಸಾದ್ .7.44 ಕೋಟಿ ಕಾಮಗಾರಿ ಶಿಫಾರಸು ಮಾಡಿದ್ದು, .7.13 ಕೋಟಿ ಬಳಕೆಯಾಗಿದೆ. ಪಿ.ಸಿ.ಗದ್ದಿಗೌಡರ್ ಅವರು .7.48 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, .6.62 ಕೋಟಿ ವೆಚ್ಚವಾಗಿದೆ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ 8.22 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 6.51 ಕೋಟಿ ವೆಚ್ಚವಾಗಿದೆ. ಶಿವಮೊಗ್ಗದ ಬಿ.ವೈ.ರಾಘವೇಂದ್ರ ಅವರು 14.02 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 8.52 ಕೋಟಿ ವೆಚ್ಚವಾಗಿದೆ. ಮಂಡ್ಯದ ಸುಮಲತಾ ಅಂಬರೀಶ್ 9.30 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 8.14 ಕೋಟಿ ವೆಚ್ಚವಾಗಿದೆ. ತುಮಕೂರಿನ ಜಿ.ಎಸ್.ಬಸವರಾಜ್ 11.13 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 7.82 ಕೋಟಿ ವೆಚ್ಚವಾಗಿದೆ.
ಹಾವೇರಿಯ ಶಿವಕುಮಾರ್ ಉದಾಸಿ 7.91 ಕೋಟಿ ಕಾಮಗಾರಿ ಶಿಫಾರಸು ಮಾಡಿದ್ದು, 7.33 ಕೋಟಿ ವೆಚ್ಟವಾಗಿದೆ. ರಾಯಚೂರಿನ ರಾಜಾ ಅಮರೇಶ ನಾಯಕ 9.62 ಕೋಟಿ ಕಾಮಗಾರಿಗಳನ್ನು ಶಿಫಾರಸು ಮಾಡಿದ್ದು, 7.05 ಕೋಟಿ ವೆಚ್ಚವಾಗಿದೆ. ಬೆಂಗಳೂರು ಗ್ರಾಮಾಂತರದ ಡಿ.ಕೆ.ಸುರೇಶ್ 7.15 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, .6.30 ಕೋಟಿ ವೆಚ್ಚವಾಗಿದೆ. ಚಿತ್ರದುರ್ಗದ ಎ.ನಾರಾಯಣಸ್ವಾಮಿ 8.50 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 6.10 ಕೋಟಿ ವೆಚ್ಚವಾಗಿದೆ. ಕೊಪ್ಪಳದ ಕರಡಿ ಸಂಗಣ್ಣ ಅವರು 6.86 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 6.08 ಕೋಟಿ ವೆಚ್ಚವಾಗಿದೆ. ಕೋಲಾರದ ಎಸ್.ಮುನಿಸ್ವಾಮಿ 5.75 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 5.17 ಕೋಟಿ ವೆಚ್ಚವಾಗಿದೆ. ಬಳ್ಳಾರಿಯ ವೈ.ದೇವೇಂದ್ರಪ್ಪ 4.89 ಕೋಟಿ ಕಾಮಗಾರಿಗೆ ಶಿಫಾರಸು ಮಾಡಿದ್ದು, ಈ ಪೈಕಿ .4.66 ಕೋಟಿ ವೆಚ್ಚವಾಗಿದೆ. ಶೋಭಾ ಕರಂದ್ಲಾಜೆ 4.93 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 4.29 ಕೋಟಿ ವೆಚ್ಚವಾಗಿದೆ.
ಚಿಕ್ಕೋಡಿಯ ಅಣ್ಣಾ ಸಾಹೇಬ್ ಜೊಲ್ಲೆ 6.10 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 3.99 ಕೋಟಿ ವೆಚ್ಚ ಮಾಡಲಾಗಿದೆ. ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದಗೌಡ 6.55 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 3.90 ಕೋಟಿ ವೆಚ್ಚವಾಗಿದೆ. ಧಾರವಾಡ ಸಂಸದ ಪ್ರಹ್ಲಾದ್ ಜೋಶಿ 5.71 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 3.50 ಕೋಟಿ ವೆಚ್ಚವಾಗಿದೆ. ಬೆಂಗಳೂರು ಕೇಂದ್ರದ ಪಿ.ಸಿ.ಮೋಹನ್ ಅವರು 3.15 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 2.60 ಕೋಟಿ ವೆಚ್ಚವಾಗಿದೆ. ವಿಜಯಪುರದ ರಮೇಶ್ ಜಿಗಜಿಣಗಿ 1.82 ಕೋಟಿ, ಬೆಂಗಳೂರು ದಕ್ಷಿಣದ ತೇಜಸ್ವಿ ಸೂರ್ಯ 1.67 ಕೋಟಿ, ಮಂಗಳಾ ಅಂಗಡಿ 1 ಕೋಟಿ ವೆಚ್ಚ ಮಾಡಿದ್ದಾರೆ.
ಉತ್ಸವಕ್ಕೆ ಕೋಟಿ ಖರ್ಚು ಮಾಡುವಿರಿ: ಶಾಲಾ ಸಮವಸ್ತ್ರ ಕೊಡದ ಸರ್ಕಾರಕ್ಕೆ ಹೈಕೋರ್ಟ್ ಚಾಟಿ
ಅನಂತಕುಮಾರ್ ಹೆಗಡೆ 11.76 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, 8.61 ಕೋಟಿ ವೆಚ್ಚವಾಗಿದೆ. ಪ್ರಜ್ವಲ್ ರೇವಣ್ಣ ಅವರು ಪ್ರತಿನಿಧಿಸುವ ಹಾಸನ ಕ್ಷೇತ್ರಕ್ಕೆ ಹಿಂದಿನ ಸಂಸದ ಎಚ್.ಡಿ.ದೇವೇಗೌಡರ ನಿಧಿಯೂ ಸೇರಿ ಒಟ್ಟು 19.50 ಕೋಟಿ ನಿಗದಿಯಾಗಿ, 14.50 ಕೋಟಿ ಬಿಡುಗಡೆಯಾಗಿದೆ. ಅವರು 18.93 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು 10.40 ಕೋಟಿ ವೆಚ್ಚವಾಗಿದೆ.
ಶೂನ್ಯ ಸಾಧಕ ಜಾಧವ್: ಕಲಬುರಗಿಯ ಉಮೇಶ್ ಜಾದವ್ ಅವರಿಗೆ 12 ಕೋಟಿ ಪೈಕಿ 2.50 ಕೋಟಿ ಬಿಡುಗಡೆಯಾಗಿದೆ. ಅವರು ಯಾವುದೇ ಕಾಮಗಾರಿಗಳಿಗೆ ಶಿಫಾರಸು ಮಾಡಿಲ್ಲ. ಹೀಗಾಗಿ ಬಳಕೆಯ ಪ್ರಮಾಣ ಶೂನ್ಯ!.