
ಉತ್ತರ ಕನ್ನಡ (ಸೆ.25): ಹಿಂದೂ ಹುಡುಗಿಯರು ದುಡ್ಡು ಕೊಟ್ರೆ ಬರ್ತಾರೆ, ಮುಸ್ಲಿಂ ಹುಡುಗಿಯರು ಬರಲ್ಲ ಅಂತಾ ಈ ಮುಕುಳೆಪ್ಪ ಇತರರಲ್ಲಿ ಹೇಳಿದ್ದಾನೆ. ಬಡ್ಡಿ ಮಗನೇ ನಿನ್ನ ಸೊಕ್ಕು ಅಡಗಿಸ್ತೀವಿ! ದುಡ್ಡು ಕೊಟ್ರೆ ಹುಡುಗಿಯರು ಬರ್ತಾರೆ ಅಂತಾ ಸೊಕ್ಕಿನಿಂದ ಹೇಳ್ತೀಯಲ್ಲಾ, ನೀನು ಹೇಗೆ ಯೂಟ್ಯೂಬ್ ನಡೆಸ್ತೀಯಂತಾ ನೋಡೋಣ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Mutalik) ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಯೂಟೂಬರ್ ಮುಕಳೆಪ್ಪ ಅಲಿಯಾಸ್ ಕ್ವಾಜಾ ಶಿರಹಟ್ಟಿ (YouTuber Mukaleppa Alias Khwaja Shirahatti) ಹಾಗೂ ಗಾಯತ್ರಿ ಜಾಲಿಹಾಳ್ (gayatri Jalihal) ಇಬ್ಬರೂ ಮುಂಡಗೋಡ ರಿಜಿಸ್ಟಾರ್ ಕಚೇರಿಯಲ್ಲಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಂಡಗೋಡದ ಶಿವಾಜಿ ಸರ್ಕಲ್‌ನಲ್ಲಿ (Mundagod Shivaji Circle) ನಡೆದ ಬೃಹತ್ ಪ್ರತಿಭಟನಾ ಸಭೆ ಆಯೋಜನೆ ಮಾಡಲಾಗಿದ್ದು, ಈ ಸಭೆಯಲ್ಲಿ ಪ್ರಮೋದ್ ಮತಾಲಿಕ್ ಮಾತನಾಡಿ ಲವ್ ಜಿಹಾದ್ ಪ್ರಕರಣಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮುಂಡಗೋಡದಲ್ಲಿ ನಡೆದ ಹಿಂದೂ-ಮುಸ್ಲಿಂ ಮದುವೆ ಪ್ರಕರಣದ ವಿಚಾರವಾಗಿ ಮುಕುಳೆಪ್ಪ ಎಂಬ ವ್ಯಕ್ತಿಯ ವಿರುದ್ಧ ಗುಡುಗಿದ ಅವರು, ಹಿಂದೂ ಸಮಾಜವನ್ನು ಕೆಣಕುವವರ ಸೊಕ್ಕು ಮುರಿಯುವುದಾಗಿ ಎಚ್ಚರಿಕೆ ನೀಡಿದರು.
ಮುಂಡಗೋಡದಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಮದುವೆಯಾದ ಮುಕುಳೆಪ್ಪ ಎಂಬ ವ್ಯಕ್ತಿಯ ಹೆಸರು ಹೇಳಲು ಕೂಡ ಅಸಹ್ಯವಾಗುತ್ತದೆ ಎಂದರು. ಈ ಮುಕುಳೆಪ್ಪ ಹಿಂದೂ ಹುಡುಗಿಯರ ಬಗ್ಗೆ ಲಘುವಾಗಿ ಮಾತನಾಡಿದ್ದಾನೆ. ಹಿಂದೂ ಹುಡುಗಿಯರು ದುಡ್ಡು ಕೊಟ್ರೆ ಬರ್ತಾರೆ, ಮುಸ್ಲಿಂ ಹುಡುಗಿಯರು ಬರಲ್ಲ ಅಂತಾ ಈ ಮುಕುಳೆಪ್ಪ ಇತರರಲ್ಲಿ ಹೇಳಿದ್ದಾನೆ. ಬಡ್ಡಿ ಮಗನೇ ನಿನ್ನ ಸೊಕ್ಕು ಅಡಗಿಸ್ತೀವಿ! ದುಡ್ಡು ಕೊಟ್ರೆ ಹುಡುಗಿಯರು ಬರ್ತಾರೆ ಅಂತಾ ಸೊಕ್ಕಿನಿಂದ ಹೇಳ್ತೀಯಲ್ಲಾ, ನೀನು ಹೇಗೆ ಯೂಟ್ಯೂಬ್ ನಡೆಸ್ತೀಯಂತಾ ನೋಡೋಣ ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.
ನಿನ್ನ ಯೂಟ್ಯೂಬ್ ಚಾನೆಲ್ ಹಾಗೂ ವಿಡಿಯೋ ನೋಡುವವರು ಮತ್ತು ಪ್ರಚಾರ ಮಾಡುವವರು ಹಿಂದೂಗಳೇ. ಆದ್ದರಿಂದ, 'ದುಡ್ಡು ಕೊಟ್ರೆ ಹುಡುಗಿಯರು ಬರ್ತಾರೆ' ಎಂದು ಸೊಕ್ಕಿನಿಂದ ಹೇಳುವ ಆ ವ್ಯಕ್ತಿಯ ಯೂಟ್ಯೂಬ್ ನೋಡೋದನ್ನ ನಿಲ್ಲಿಸಿ. ಎಲ್ಲ ಹಿಂದೂಗಳು 'ಮುಕುಳೆಪ್ಪನ ಯೂಟ್ಯೂಬ್ ಚಾನೆಲ್‌ನ (Mukaleppa YouTube Channel) ಟೋಟಲ್ ಬಹಿಷ್ಕಾರ ಮಾಡಬೇಕು. ಇಲ್ಲದಿದ್ದರೆ ಇದೇ ವ್ಯಕ್ತಿಗಳ ಮೂಲಕ ನಮ್ಮ ಮನೆಯ ಹೆಣ್ಣುಮಕ್ಕಳನ್ನು ಪುಸಲಾಯಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಸ್ಲಿಮರು ನಿಮ್ಮ ಹುಡುಗಿಯರನ್ನ ಮದುವೆಯಾಗಿ, ಹಿಂದೂ ಹುಡುಗಿಯರ ಮೇಲೆ ಏಕೆ ಕಣ್ಣು ಹಾಕ್ತಿದ್ದೀರಾ? ಹಿಂದೂ ಹುಡುಗಿಯರಿಗೆ ಯಾಕೆ ಬುರ್ಖಾ ಹಾಕಿಸ್ತಿದ್ದೀರಿ? ಹಿಂದೂ ಹುಡುಗಿಯರಿಗೆ ಯಾಕೆ ಗೋಮಾಂಸ ತಿನ್ನಿಸ್ತಿದ್ದೀರಿ?. ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಣು ಮಕ್ಕಳನ್ನು ಕೆಡಿಸಿ ತಮ್ಮ 'ಜನಸಂಖ್ಯೆ ಹೆಚ್ಚಿಸುವುದು ಇವರ ಮುಖ್ಯ ಉದ್ದೇಶ'ವಾಗಿದೆ. ಪೆಹಲ್ಗಾಮ್‌ನಲ್ಲಿ ಮುಸ್ಲಿಂ ಭಯೋತ್ಪಾದಕರು ಹಿಂದೂಗಳ ಹೆಸರು ಕೇಳಿ ಶೂಟ್ ಮಾಡಿ ಸಾಯಿಸಿದ್ದಾರೆ. ಪ್ರತೀ ನಿತ್ಯ ಇಂತಹ ನೂರಾರು ಲವ್ ಜಿಹಾದ್ ಪ್ರಕರಣಗಳನ್ನು ಹಿಂದೂ ಸಂಘಟನೆಗಳು ಹ್ಯಾಂಡಲ್ ಮಾಡುತ್ತಿವೆ' ಎಂದು ಹೇಳಿದರು.
ಲವ್ ಜಿಹಾದ್ ಜಾಲದಿಂದ ಹಿಂದೂ ಯುವತಿಯರನ್ನು ಮುಕ್ತಗೊಳಿಸಲು 'ಶ್ರೀರಾಮ ಸೇನೆಯಿಂದ 24 ಗಂಟೆ ಕಾರ್ಯ ನಿರ್ವಹಿಸೋ ಸಹಾಯವಾಣಿ'ಯನ್ನು ತೆರೆಯಲಾಗಿದೆ. 'ಎಲ್ಲಾದರೂ ಹಿಂದೂ ಹುಡುಗಿಯರನ್ನು ಪುಸಲಾಯಿಸ್ತಿದ್ದಾರೆ ಅನ್ನೋ ಮಾಹಿತಿ ಇದ್ರೆ ತಕ್ಷಣ ಸಹಾಯವಾಣಿಗೆ ಕರೆ ಮಾಡಿ. ಆ ಹುಡುಗಿಯನ್ನು ಜಾಲದಿಂದ ಸಂಪೂರ್ಣ ಮುಕ್ತಗೊಳಿಸಿ ಯಾವುದೇ ಕೇಸ್, ಗಲಾಟೆ ಇಲ್ಲದೇ ನಿಮ್ಮ ಮಗಳನ್ನು ಮನೆಗೆ ಸೇರಿಸುವ ಜವಾಬ್ದಾರಿ ನಮ್ಮದು' ಎಂದು ಭರವಸೆ ನೀಡಿದರು. ಈ ಮೂಲಕ ಹಿಂದೂ ಸಮಾಜವು ಜಾಗರೂಕವಾಗಿ ಲವ್ ಜಿಹಾದ್ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ