ಪರೇಶ್ ಮೇಸ್ತಾ ಕೇಸ್‌: ಸಿಬಿಐ 'ಬಿ' ರಿಪೋರ್ಟ್ ಹಾಕಿರೋದು ತಪ್ಪು, ಮುತಾಲಿಕ್ ಆಕ್ರೋಶ

Published : Oct 05, 2022, 01:00 AM IST
ಪರೇಶ್ ಮೇಸ್ತಾ ಕೇಸ್‌: ಸಿಬಿಐ 'ಬಿ' ರಿಪೋರ್ಟ್ ಹಾಕಿರೋದು ತಪ್ಪು, ಮುತಾಲಿಕ್ ಆಕ್ರೋಶ

ಸಾರಾಂಶ

ಸಿಬಿಐ ಬಿ ರಿಪೋರ್ಟ್ ಹಾಕಿರೋದು ತಪ್ಪು. ಇದನ್ನು ಧಿಕ್ಕರಿಸುತ್ತೇವೆ, ಇದು ಅತ್ಯಂತ ಮೋಸ ಮಾಡಿರುವುದಾಗಿದೆ. ಪರೇಶ್ ಮೇಸ್ತಾ ಪ್ರಕರಣ ನೂರಕ್ಕೆ ನೂರು ಕೊಲೆಯಾಗಿದೆ. ಸಿಬಿಐ ರಿಪೋರ್ಟ್ ಅತ್ಯಂತ ಮೋಸ ಮಾಡಿದೆ:  ಪ್ರಮೋದ್ ಮುತಾಲಿಕ್

ಬೆಂಗಳೂರು(ಅ.05): ಪರೇಶ್ ಮೇಸ್ತಾ ಸಾವಿನ ಕೇಸ್‌ ಮತ್ತೊಮ್ಮೆ ರೀ ಓಪನ್ ಮಾಡ್ಬೇಕು. ಇದು ಸಹಜ ಸಾವು ಅಂತ ಸಿಬಿಐ ಬಿ ರಿಪೋರ್ಟ್ ಹಾಕಿರೋದು ತಪ್ಪು. ಇದನ್ನು ಧಿಕ್ಕರಿಸುತ್ತೇವೆ, ಇದು ಅತ್ಯಂತ ಮೋಸ ಮಾಡಿರುವುದಾಗಿದೆ. ಪರೇಶ್ ಮೇಸ್ತಾ ಪ್ರಕರಣ ನೂರಕ್ಕೆ ನೂರು ಕೊಲೆಯಾಗಿದೆ. ಸಿಬಿಐ ರಿಪೋರ್ಟ್ ಅತ್ಯಂತ ಮೋಸ ಮಾಡಿದೆ ಅಂತ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡದ ಪರೇಶ್ ಮೇಸ್ತಾ ಸಾವು ಪ್ರಕರಣದಲ್ಲಿ ಸಿಬಿಐ 'ಬಿ' ರಿಪೋರ್ಟ್ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 2017 ರಲ್ಲಿ ಪರೇಶ್ ಮೇಸ್ತಾ ಹತ್ಯೆ ಆಯ್ತು. ಆಗ ರಾಜ್ಯಾದ್ಯಂತ ಹಿಂದೂಗಳ ಆಕ್ರೋಶ ಕಟ್ಟೆ ಒಡೆದಿತ್ತು. ಅಮಿತ್ ಶಾ ಕೂಡಾ ಅವ್ರ ಮನೆಗೆ ಬಂದು ಹೋಗಿದ್ರು. ಇಂತಹ ಗಂಭೀರ ಪ್ರಕರಣ ನಡೆದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿದ್ದ ಕಾಂಗ್ರೆಸ್ ಸರ್ಕಾರ ಸಾಕ್ಷ್ಯಗಳನ್ನ ನಾಶ ಮಾಡಿದೆ ಅಂತ ಮುತಾಲಿಕ್ ಆರೋಪಿಸಿದ್ದಾರೆ. 

ಪರೇಶ್ ಮೇಸ್ತಾ ಸಾವು ಪ್ರಕರಣ: ಸಿಬಿಐ "ಬಿ" ರಿಪೋರ್ಟ್ ಸಲ್ಲಿಕೆ, ಬಿಜೆಪಿ ಪಾಲಿನ ಅಸ್ತ್ರ ಇದೀಗ ಕಾಂಗ್ರೆಸ್ ಕೈಗೆ..!

ತಪ್ಪಿತಸ್ಥ ಮುಸ್ಲಿಂ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಶ್ರೀರಾಮಸೇನೆಯಿಂದ ಬಿ ರಿಪೋರ್ಟ್‌ ಕುರಿತು ಹೋರಾಟ ಮಾಡುತ್ತೇವೆ. ಇದು ಹಿಂದೂಗಳಿಗೆ ಮಾಡಿದ ಅವಮಾನವಾಗಿದೆ ಅಂತ ಕಿಡಿಕಾರಿದ್ದಾರೆ. 

ಜನರ ಒತ್ತಾಯದ ನಂತರ ಸಿಬಿಐಗೆ ನೀಡೋದರ ಉದ್ದೇಶ ಏನಿತ್ತು?: ಚಕ್ರವರ್ತಿ ಸೂಲಿಬೆಲಿ 

ಸಿದ್ದರಾಮಯ್ಯ ಅವ್ರ ಸರ್ಕಾರ ಇದ್ದಾಗ ರಾಜ್ಯದಲ್ಲಿ ಅನೇಕ ಹಿಂದೂ ಕಾರ್ಯಕರ್ತರ ಕೊಲೆಗಳು ನಡೆದಿದ್ದವು. ಆ ಸೀರಿಸ್‌ನಲ್ಲೇ ಪೆರೇಶ್ ಮೇಸ್ತಾ ಸಾವು ಸೇರಿಕೊಂಡಿದರಿಂದ ಸಹಜವಾಗಿಯೇ ಒಬ್ಬ ಹಿಂದೂ ಕಾರ್ಯಕರ್ತನ ಹತ್ಯೆಯಂತೆ ಅದನ್ನು ನೋಡಲಾಗಿತ್ತು. ದುರಂತದ ವಿಚಾರ ಅಂದ್ರೆ ಈ ಹತ್ಯೆ ಸಹಜ ಸಾವು ಅನ್ನೋದು ಸಿದ್ದರಾಮಯ್ಯ ಅವ್ರಿಗೆ ಡೇ ಒನ್ ನಿಂದ ಇದಿದ್ರೆ ಅವ್ರು ನೇರವಾಗಿ ಅವತ್ತೆ ಸಿಬಿಐಗೆ ನೀಡಬೇಕಿತ್ತು. ಮೂರ್ನಾಲ್ಕು ತಿಂಗಳ ನಂತರ ಜನರ ಒತ್ತಾಯದ ನಂತರ ಸಿಬಿಐಗೆ ನೀಡೋದರ ಉದ್ದೇಶ ಏನಿತ್ತು ಅಂತ ಚಕ್ರವರ್ತಿ ಸೂಲಿಬೆಲಿ ಪ್ರಶ್ನಿಸಿದ್ದಾರೆ. 

ಸಾಕ್ಷಿಗಳ ನಾಶವಾಗ್ಲಿ ಅಂತ ನಾಲ್ಕು ತಿಂಗಳು ಕಾದು ನಂತರ ಸಿಬಿಐಗೆ ನೀಡಿದ್ರಾ ಅನ್ನೋದು ಸಿದ್ದರಾಮಯ್ಯ ಅವ್ರಿಗೆ ನನ್ನ ಪ್ರಶ್ನೆಯಾಗಿದೆ.  ಆ ಸಂದರ್ಭದಲ್ಲಿ ಮೂರ್ನಾಲ್ಕು ತಿಂಗಳುಗಳಲ್ಲಿ ಏನ್ ನಡೀತ್ತು ಅನ್ನೋದರ ಬಗ್ಗೆ ತನಿಖೆಯಾದ್ರೆ ಒಳ್ಳೆಯದು. 1600 ಪಿಎಫ್ ಐ ಕಾರ್ಯಕರ್ತರ ಕೇಸ್‌ಗಳನ್ನು ತೆಗೆಯೋ ಮೂಲಕ ಅವರಿಗೆ ಬೆಂಬಲ ನೀಡಿ ಹಿಂದು ಕಾರ್ಯಕರ್ತರ ಹತ್ಯೆಗಳಿಗೆ ಕಾರಣರಾಗಿದ್ದಾರೆ. ಈ ಕೇಸ್ ಉನ್ನತ ತನಿಖೆಗೆ ಒಪ್ಪಿಸುವಲ್ಲಿ ವಿಳಂಬ ನೀತಿ ಯಾಕೆ ತೋರಿದ್ರು. ಪರೇಶ್ ಮೇಸ್ತಾ ಹತ್ಯೆಯಾದ ಕೆಲವೆ ಗಂಟೆಗಳಲ್ಲಿ ಪೊಲೀಸರು ಕೆಲವರನ್ನು ಬಂಧಿಸಿದ್ರು ಅವರೆಲ್ಲ ಯಾರು ಹಾಗಾದ್ರೆ? ಅಂತ ಕೇಳಿದ್ದಾರೆ. 

ಸಿಬಿಐ ರಿಪೋರ್ಟ್ ಪೂರ್ತಿಯಾಗಿ ಓದಿದ್ರೆ ನನಗೆ ಸಂಪೂರ್ಣವಾಗಿ ಅರ್ಥ ಆಗಬಹುದು ಅದಕ್ಕಾಗಿ ವೇಟ್‌ ಮಾಡ್ತಾ ಇದ್ದೀನಿ. ನಾನು ಬಹಳಷ್ಟು ಬಾರಿ ತಿಳಿಸಿದ್ದೇನೆ ಹಿಂದೂ ಕಾರ್ಯಕರ್ತರ ಕೊಲೆಗಳನ್ನು ಮುಚ್ಚಿ ಹಾಕಲಾಗುತ್ತೆ ಅಂತ, ಪಿಎಫ್ ಐ ಪ್ರೇರಿತ ಉಗ್ರರಿಗೆ ಹತ್ಯೆ ನಂತರ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಗೊತ್ತಿದೆ. ಯಾವ ಕೊಳದಲ್ಲಿ ಪರೇಶ್‌ ಮೇಸ್ತಾ ಶವ ಸಿಕ್ಕಿರುತ್ತೋ ಆ ಕೊಳದ ಗೇಟ್ ಲಾಕ್ ಆಗಿತ್ತು. ಆ ಕೊಳಕ್ಕೆ ಹೋಗೋದಿದ್ರೆ ಆತ ಕಾಂಪೌಂಡ್ ದಾಟಿಯೇ ಹೋಗಿರಬೇಕು. ಯಾರೋ ಆತನನ್ನು ಅಟ್ಟಿಸಿಕೊಂಡು ಹೋಗಿರಬೇಕು ಹಾಗೂ ಅವನು ಮತ್ತೆ ಮೇಲೆ ಬಾರದ ಹಾಗೆ ಕಾವಲು ಕಾದಿರಬೇಕು. ತಕ್ಷಣವೇ ತನಿಖೆಗೆ ನೀಡಿದ್ರೆ ಸರಿಯಾದ ರಿಸಲ್ಟ್ ಬರ್ತಾ ಇತ್ತು ಅನ್ನೋದು ನನ್ನ ಅನಿಸಿಕೆಯಾಗಿದೆ ಅಂತ ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ