ಆಯುಧ ಪೂಜೆಗೂ ದುಡ್ಡಿಲ್ವಂತೆ; ಪೂಜೆಗೆಂದು ಸಿಬ್ಬಂದಿಗೆ 100ರೂ. ಕೊಟ್ಟ ಸಾರಿಗೆ ನಿಗಮ!

By Ravi JanekalFirst Published Oct 4, 2022, 12:27 PM IST
Highlights

ಸಾರಿಗೆ ನಿಗಮದಲ್ಲಿ ಆಯುಧಪೂಜೆ ಮಾಡೋದಕ್ಕೂ ದುಡ್ಡಿಲ್ವಂತೆ. ಬಿಎಂಟಿಸಿ ಕೆಎಸ್‌ಆರ್‌ಟಿಸಿ ಬಸ್ ಗೆ ಪೂಜೆ ಮಾಡಲು ತಲಾ ಬಸ್ ಗೆ ಕೇವಲ 100 ನೀಡಲಾಗಿದೆ‌. ಹೀಗಾಗಿ 100 ರೂ. ನಲ್ಲಿ ಬಸ್ ಪೂಜೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ಬಸ್‌ಗಳಿಗೆ ಸಿಂಗರಿಸಲು ಹೂವು ಹಣ್ಣು ತರಲು ದುಡ್ಡಿಲ್ಲದೆ ಇಂದು ಆಯುಧಪೂಜೆ ಮಾಡದ್ದಕ್ಕೆ ಬೇಸರಗೊಂಡಿದ್ದಾರೆ.

ವರದಿ; ಮಮತಾ ಮರ್ಧಾಳ 

ಬೆಂಗಳೂರು (ಅ.4); ಇವತ್ತಿನ ದುಬಾರಿ ದುನಿಯಾದಲ್ಲಿ100 ರೂಪಾಯಿಗೆ ಬೆಲೆನೇ ಇಲ್ಲ. 100 ರೂ. ಕ್ಷಣಮಾತ್ರದಲ್ಲಿ ಖರ್ಚಾಗಿ ಕೈಯಲ್ಲಿ ಚಿಲ್ಲರೆನೂ ಉಳಿಯೊಲ್ಲ. ಅಂತದ್ದರಲ್ಲಿ 100 ರೂಗೆ ಒಂದು ಬಸ್ ಸ್ವಚ್ಛಗೊಳಿಸಿ ಪೂಜೆ ಮಾಡಿ ಡೆಕೋರೇಟ್(Decorate) ಮಾಡಿ ಸಂಭ್ರಮಿಸಿ ಎಂದು ಸಾರಿಗೆ ನಿಗಮಗಳು ಹೇಳಿರೋದು  ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ. 

Bengaluru: ಮತ್ತೆ ಸಿಲಿಕಾನ್ ಸಿಟಿಯ ರಸ್ತೆಗಿಳಿಯಲಿದೆ ಡಬಲ್ ಡೆಕ್ಕರ್ ಬಸ್..!

ಹೌದು. ಇಂದು ಎಲ್ಲೆಡೆ ದಸರಾ ಆಯುಧ ಪೂಜೆ ಸಂಭ್ರಮ. ಪ್ರತಿಯೊಬ್ವರೂ ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಿ ಪೂಜೆ ಮಾಡ್ತಾರೆ. ಸಾರಿಗೆ ನಿಗಮಗಳಲ್ಲಿಯೂ ವರ್ಷವಿಡೀ ತಾವು ಬಳಸುವ ಬಸ್‌ಗಳನ್ನು ಸ್ವಚ್ಛಗೊಳಿಸಿ, ಸಿಂಗರಿಸಿ ಪೂಜೆ ಮಾಡೋದು ಎಂದರೆ ಬಸ್ ಚಾಲಕ-ನಿರ್ವಾಹಕರಿಗೆ ಎಲ್ಲಿಲ್ಲದ ಸಂಭ್ರಮ. ಬೇರೆ ಯಾವುದೇ ಹಬ್ಬಗಳಲ್ಲಿ ಸಂಭ್ರಮಿಸದಷ್ಟು ಖುಷಿ, ಸಂತೋಷವನ್ನು ಆಯುಧಪೂಜೆಯಲ್ಲಿ ಅನುಭವಿಸುತ್ತಾರೆ. ಹಾಗಾಗಿಯೇ ಬಸ್‌ಗಳ ಸ್ವಚ್ಛತೆ ಹಾಗೂ ಸಿಂಗಾರಕ್ಕೆ ಒಂದಷ್ಟು ಹಣವನ್ನು ಬಿಡುಗಡೆ ಮಾಡುವ ಸಂಪ್ರದಾಯವೂ ಹಿಂದಿನಿಂದಲೂ ಸಾರಿಗೆ ನಿಗಮದಲ್ಲಿ ಇದೆ.

ಆದ್ರೆ ಈ ಬಾರಿ ಸಾರಿಗೆ ನಿಗಮದಲ್ಲಿ ಆಯುಧಪೂಜೆ ಮಾಡೋದಕ್ಕೂ ದುಡ್ಡಿಲ್ವಂತೆ. ಬಿಎಂಟಿಸಿ ಕೆಎಸ್‌ಆರ್‌ಟಿಸಿ ಬಸ್ ಗೆ ಪೂಜೆ ಮಾಡಲು ತಲಾ ಬಸ್ ಗೆ ಕೇವಲ 100 ನೀಡಲಾಗಿದೆ‌. ಹೀಗಾಗಿ 100 ರೂ. ನಲ್ಲಿ ಬಸ್ ಪೂಜೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ಬಸ್‌ಗಳಿಗೆ ಸಿಂಗರಿಸಲು ಹೂವು ಹಣ್ಣು ತರಲು ದುಡ್ಡಿಲ್ಲದೆ ಇಂದು ಆಯುಧಪೂಜೆ ಮಾಡದ್ದಕ್ಕೆ ಬೇಸರಗೊಂಡಿದ್ದಾರೆ.

ಪ್ರತಿ ವರ್ಷ ದಸರಾ(Dasara) ಬಂತಂದ್ರೆ ಸಾರಿಗೆ ಸಿಬ್ವಂದಿಗೆ ಸಂಭ್ರಮ ಇರುತ್ತಿತ್ತು. ಆಯುಧ ಪೂಜೆ ದಿನ ಹೂವು-ಬಾಳೆ ಕಂದು-ತೋರಣಗಳನ್ನು ಖರೀದಿಸಿ ಬಸ್ ಗಳನ್ನು ಚೆನ್ನಾಗಿ ತೊಳೆದು ಮದುವಣಗಿತ್ತಿಯಂತೆ ಸಿಂಗರಿಸಿ ಸಂಭ್ರಮಿಸುತ್ತಿದ್ದರು. ಬಸ್‌ಗಳನ್ನು ತೇರಿನಂತೆ ಆಲಂಕರಿಸಿ ದೊಡ್ಡದಾದ ಧ್ವನಿಯಲ್ಲಿ ಹಾಡನ್ನು ಹಾಕಿ, ಒಂದು ಸುತ್ತು ಹಾಕಿದರೇನೇ ಆಯುಧಪೂಜೆಗೆ ಸಾರ್ಥಕತೆ. 

BMTC: ಅಂತಿಮ ವರ್ಷದ ವಿದ್ಯಾರ್ಥಿಗಳ ಪಾಸ್‌ ವಿಸ್ತರಿಸಿದ ಬಿಎಂಟಿಸಿ

ಆದ್ರೆ ಸಾರಿಗೆ ನಿಗಮದ ಚಾಲಕ ಹಾಗೂ ನಿರ್ವಾಹಕರಿಗೆ ಆಯುಧ ಪೂಜೆ ಮಾಡಲು ಕೇವಲ ನೂರು ರೂಪಾಯಿ ನೀಡಿದೆ. ಇದರಲ್ಲಿ ಒಂದು ಮೊಳ ಹೂ, ಕಾಯಿನೂ ಬರೋದಿಲ್ಲ . ಇಲಾಖೆಯ ಕಾರು, ಜೀಪುಗಳಿಗೆ 40 ರೂಪಾಯಿ,ಕರೋನಾ ಹಾಗೂ ವೋಲ್ವೋ ಬಸ್​ಗೆ ಕೇವಲ 100 ರೂಪಾಯಿ ಬಿಡುಗಡೆ ಮಾಡಿದೆ. ದುಬಾರಿ ದುನಿಯಾಲ್ಲಿ ಬೂದುಗುಂಬಳಕಾಯಿಗೇ 40ರಿಂದ 60ರೂ ಬೆಲೆ ಇದೆ. ಅಂತದ್ರಲ್ಲಿ ನಿಗಮಗಳು ಬಿಡುಗಡೆ ಮಾಡಿರುವ ಪುಡಿಗಾಸಿನಲ್ಲಿ ಹೇಗೆ ಆಯುಧ ಪೂಜೆ ಮಾಡೋಕಾಗುತ್ತೆ? ವರ್ಷಕ್ಕೊಮ್ಮೆ ಮಾಡುವ ಆಯುಧ ಪೂಜೆಗೆ ಇಷ್ಟು ಕಡಿಮೆ ಹಣ ನೀಡಿದ್ರೆ ಹೇಗೆ? ನೀವು ಕೊಟ್ಟ ಹಣದಲ್ಲಿ ಆರು ನಿಂಬೆಹಣ್ಣು ಕೂಡಾ ಬರೋದಿಲ್ಲ. ಕೊಡೋದಾದ್ರೆ ಹೆಚ್ಚಿನ ಹಣ ನೀಡಿ, ಇಲ್ಲದಿದ್ರೆ ನಿಮ್ಮ ಹಣ ಬೇಡ ಎಂದಿರುವ  ಚಾಲಕ ಹಾಗು ನಿರ್ವಾಹಕರು ಆಯುಧಪೂಜೆ ಸಂಭ್ರಮವಿಲ್ಲದೆ ಎಂದಿನಂತೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ.

click me!