ನಾಳೆ ನಾನು ನಾಗಮಂಗಲಕ್ಕೆ ಹೋಗುತ್ತೇನೆ ತಾಕತ್ತು ಇದ್ರೆ ತಡೀರಿ; ಪ್ರಮೋದ್ ಮುತಾಲಿಕ್ ಸವಾಲು!

By Ravi JanekalFirst Published Sep 12, 2024, 3:53 PM IST
Highlights

ವೋಟ್‌ಬ್ಯಾಂಕ್‌ಗಾಗಿ ಮತಾಂಧರನ್ನ ಕಾಂಗ್ರೆಸ್ ಸರ್ಕಾರ ತಲೆಮೇಲೆ ಕೂರಿಸಿಕೊಂಡಿದೆ. ಅದರ ಪರಿಣಾಮವೇ ನಾಗಮಂಗಲದಲ್ಲಿ ಕೃತ್ಯಗಳು ನಡೆಯುತ್ತಿರುವುದು. ಕಳೆದ ವರ್ಷ ಇದೇ ಜಾಗದಲ್ಲಿ ಗಲಾಟೆ ಆಗಿತ್ತು. ಇದೆಲ್ಲ ಗೊತ್ತಿದ್ದು ಪೊಲೀಸರು ಬಂದೋಬಸ್ತ್ ಯಾಕೆ ಮಾಡಿಲ್ಲ? ಇಂಟೆಲಿಜೆನ್ಸ್ ಏನು ಮಾಡ್ತಿದೆ? ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹರಿಹಾಯ್ದರು.

ಹಾವೇರಿ (ಸೆ.12): ಹಾವೇರಿ ಜಿಲ್ಲೆ ರಟ್ಟಿಹಳ್ಳಿಯಲ್ಲಿ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಮಾಡಬೇಕಿತ್ತು. ಆದರೆ ನನಗೆ ಜಿಲ್ಲಾಡಳಿತದಿಂದ ನಿರ್ಬಂಧ ಹಾಕಿದ್ದಾರೆ. ಅದೇನು ಪಾಕಿಸ್ತಾನವಾ? ಗಣೇಶ ವಿಸರ್ಜನೆಗೆ ಅವಕಾಶ ಕೊಡಲ್ಲ ಎಂದರೆ ಹೇಗೆ? ಗಲಾಟೆ ಮಾಡುವವರನ್ನು ಬಂಧಿಸಿ ಪೊಲೀಸರು ಇರೋದ್ಯಾಕೆ  ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.

ಇಂದು ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಭಾಷಣದಿಂದ ಎಲ್ಲಿಯೂ ಗಲಭೆ ಆಗಿಲ್ಲ ಇದುವರೆಗೆ ನನ್ನ ಮೇಲೆ 30 ಕೇಸ್ ಹಾಕಿದ್ದಾರೆ. ಅದರಲ್ಲಿ 28 ಕೇಸ್ ಖುಲಾಸೆಯಾಗಿದೆ ಎರಡು ಕೇಸ್ ಮಾತ್ರ ಇವೆ ಎಂದರು.

Latest Videos

ನಾಗಮಂಗಲ ಕೋಮುಗಲಭೆ ಪ್ರಕರಣ:  ಗೃಹಸಚಿವರ ಉಡಾಫೆ ಹೇಳಿಕೆಗೆ ಬಿಕೆ ಹರಿಪ್ರಸಾದ್ ಆಕ್ಷೇಪ

ನಾಗಮಂಗಲ ಗಲಾಟೆ ಮುಸ್ಲಿಂ ಕಿಡಿಗೇಡಿಗಳಿಂದಲೇ ಆಗಿದೆ. ಚಪ್ಪಲಿ, ಚಾಕು ಚೂರಿ ಹಿಡಿದುಕೊಂಡು ಓಡಾಡಿದ್ದಾರೆ. ಮಸೀದಿಗಳು ಗಲಾಟೆ ಎಬ್ಬಿಸುವ ಸೆಂಟರ್ ಆಗಿದೆ. ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ಹೊರಟರೆ ಇವರಿಗೇನು? ಕಲ್ಲು ತೂರಾಟ ನಡೆಸಿ ಗಲಾಟೆ ಎಬ್ಬಿಸುತ್ತಾರೆಂದರೆ ಬಂಧಿಸಿ ಒದ್ದು ಒಳಗೆ ಹಾಕಬಹುದಲ್ಲ. ಯಾಕೆ ಸುಮ್ಮನಿದ್ದಾರೆ ಪೊಲೀಸರು?

ವೋಟ್‌ಬ್ಯಾಂಕ್‌ಗಾಗಿ ಇವರನ್ನೆಲ್ಲ ಕಾಂಗ್ರೆಸ್ ತಲೆಮೇಲೆ ಕೂರಿಸಿಕೊಂಡಿದೆ. ಅದರ ಪರಿಣಾಮವೇ ಇಂತಹ ಕೃತ್ಯಗಳು ನಡೆಯುತ್ತಿರುವುದು. ಕಳೆದ ವರ್ಷ ಇದೇ ಜಾಗದಲ್ಲಿ ಗಲಾಟೆ ಆಗಿತ್ತು. ಇದೆಲ್ಲ ಗೊತ್ತಿದ್ದು ಪೊಲೀಸರು ಬಂದೋಬಸ್ತ್ ಯಾಕೆ ಮಾಡಿಲ್ಲ? ಇಂಟೆಲಿಜೆನ್ಸ್ ಏನು ಮಾಡ್ತಿದೆ? ಎಂದು ಹರಿಹಾಯ್ದರು.

ಚಲುವರಾಯಸ್ವಾಮಿ ರಾಜೀನಾಮೆ ಕೊಡಲಿ:

ನಾಗಮಂಗಲ ಘಟನೆಗೆ ಚಲುವರಾಯಸ್ವಾಮಿ ಕಾರಣ. ಮತಾಂಧರು ಗಣೇಶನ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡಿದ್ದಾರೆ. ಪೂರ್ವನಿಯೋಜಿತ ಕೃತ್ಯ ಇದು. ಅದಕ್ಕೆ ಅಲ್ಲಿನ ಉಸ್ತುವಾರಿ ಸಚಿವ ಉತ್ತರ ಕೊಡಬೇಕಾಗುತ್ತದೆ. ಗಲಾಟೆಗೆ ಕಾರಣವಾದವರ ವಿರುದ್ಧ ಫತ್ವಾ ಹೊರಡಿಸಿ ಸಮಾಜದಿಂದ ಹೊರಗೆ ಹಾಕಿ. ಇಲ್ಲದಿದ್ರೆ ಆ ಘಟನೆ ನಿಮ್ಮ ಬೆಂಬಲವಿದೆ ಎಂದೇ ಅರ್ಥ. ಗಲಾಟೆಗೆ ಎಸ್ಪಿ, ಚಲುವರಾಯಸ್ವಾಮಿಯವರೇ ಕಾರಣ ಎಂದು ಆರೋಪಿಸಿದರು.

ಇಲ್ಲಿನ ಅನ್ನ-ನೀರು ತಿಂದು ನಮ್ಮ ದೇವರಿಗೆ ಅವಮಾನ ಮಾಡುತಿದ್ದೀರಿ. ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದೀರಿ. ನಾಳೆ ನಾನು ನಾಗಮಂಗಲಕ್ಕೆ ಹೋಗುತ್ತೇನೆ. ನನ್ನ ತಡೀರಿ ನೋಡೋಣ. ಹಿಂದೂ ದೇವರಿಗೆ ಅವಮಾನ ಮಾಡಿದವರಿಗೆ ಹಿಂದೂಗಳು ಬಹಿಷ್ಕಾರ ಹಾಕಬೇಕು ಎಂದರು.

ಇತ್ತೀಚೆಗೆ ಸಂಸತ್‌ನಲ್ಲಿ ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದನ್ನ ಶ್ರೀರಾಮಸೇನೆ ಬೆಂಬಲಿಸುತ್ತದೆ. ರಾಜ್ಯಾದ್ಯಂತ ಸಹಿ‌ ಅಭಿಯಾನ ಮಾಡಿ ಸಂಸತ್ ಗೆ ಕಳುಹಿಸುತ್ತೇವೆ. ಗಣೇಶ ಮಂಡಳಿಗಳು, ಜನರಲ್ಲಿ ಸಹಿ ಮಾಡಿಸಲಾಗುವುದು. ಸಂವಿಧಾನಬದ್ದವಾದ ದೇಶದಲ್ಲಿ ಒಂದು ಧರ್ಮದವರಿಗೆ ಕುಮ್ಮಕ್ಕು ಕೊಟ್ಟರೆ ಜಾತ್ಯಾತೀತ ಹೇಗೆ ಆಗುತ್ತದೆ? ಕಾಂಗ್ರೆಸ್ ನ ದೊಡ್ಡ ಗಂಡಾಂತರ‌ದ ಕೆಲಸ ವಕ್ಫ್ ಬೋಡ್೯ ರಚನೆ ಮಾಡಿದ್ದು. ಇವರು ಕೈ ಹಾಕಿದ ಜಾಗವನ್ನು ಸುಪ್ರೀಂಕೋರ್ಟ್ ಕೂಡ ಕೇಳುವಂತಿಲ್ಲ‌. ಸುಮಾರು 10 ಲಕ್ಷ ಎಕರೆ ಆಸ್ತಿ ವಕ್ಫ್ ಬೋಡ್ ಹೆಸರಲ್ಲಿದೆ. ಜಗತ್ತಿನ 50ಕ್ಕೂ ಅಧಿಕ ಮುಸ್ಲಿಂ ರಾಷ್ಟ್ರಗಳಷ್ಟು ಜಾಗ ದೇಶದ ವಕ್ಫ್ ಬೋರ್ಡ್‌ನಲ್ಲಿದೆ. ಭವಿಷ್ಯದಲ್ಲಿ ಹಿಂದೂಗಳ ಸ್ಥಿತಿ ಏನಾಗಬಹುದು ಎಂದು ಊಹಿಸಿ. ಬಹಳ ದೊಡ್ಡ ಪ್ರಮಾಣದ ಹಿಂದೂಗಳ ಆಸ್ತಿ ನುಂಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದ ನಿರ್ಧಾರಕ್ಕೆ ಸ್ವಾಗತ. ಕೇವಲ ತಿದ್ದುಪಡಿ ಸಾಕಾಗಲ್ಲ ಸಂಪೂರ್ಣ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ನಾಗಮಂಗಲ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ; ಇದೊಂದು ಆಕಸ್ಮಿಕ ಘಟನೆ ಎಂದ ಗೃಹ ಸಚಿವ!

ತಮಿಳನಾಡಿನ ಏಳು ಗ್ರಾಮವನ್ನೇ ವಕ್ಫ್ ಬೋರ್ಡ್ ನುಂಗಿಹಾಕಿದೆ. ಒಂದೂವರೆ ಸಾವಿರ ವರ್ಷಗಳ ಇತಿಹಾಸ ಇರುವ ದೇಗುಲ ನಮ್ಮದು ಅಂತಾರೆ. ಅನ್ವರ್ ಮಣಿಪ್ಪಾಡಿ ವಕ್ಫ್ ಆಸ್ತಿ ನುಂಗಿರುವ ಕುರಿತು ದಾಖಲೆ ಸಮೇತ ಬಿಡುಗಡೆ ಮಾಡಿರುವ ವರದಿ  ಇದೆ. ಅದನ್ನು ಸಚಿವ ಜಮೀರ್ ಅಹ್ಮದ್ ತಾಕತ್ ಇದ್ದರೆ ಜಾರಿ ಮಾಡಲಿ. ನಿಜವಾಗಿ ಕಾಳಜಿ ಇದ್ದರೆ ವರದಿ ಜಾರಿ ಮಾಡಿ ಎಂದು ಸವಾಲು ಹಾಕಿದರು.

ಗಣೇಶ ವಿಸರ್ಜನೆ ವೇಳೆ ಡಿಜೆ ಹಚ್ಚಲು ನನ್ನದೂ ವಿರೋಧವಿದೆ. ಈಗ ಡಬಲ್ ಡಿಜೆ ಹಚ್ಚಿ ಎನ್ನುವೆ. ಸರ್ಕಾರ ಮೊದಲು ದಿನಕ್ಕೆ ಐದು ಬಾರಿ ಮಸೀದಿ ಮೇಲೆ ಆಜಾನ್ ಕೂಗುವುದರ ವಿರುದ್ಧ ಕ್ರಮ ಕೈಗೊಳ್ಳಲಿ, ಆಗ ನಾನೇ ಡಿಜೆ ನಿಲ್ಲಿಸುತ್ತೇನೆ  ಎಂದರು.

click me!