ಹುಬ್ಬಳ್ಳಿ(ಏ.19): ಗಲಭೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬಂಧಿತರು ಅಮಾಯಕರು ಎಂದು ಇವರಿಗೆ ಹೇಗೆ ಗೊತ್ತು ಎಂದು ಪ್ರಶ್ನಿಸಿದ್ದಾರೆ. ಪೊಲೀಸರು ಇದ್ದಾರೆ. ನ್ಯಾಯಾಂಗ ಇದೆ. ತನಿಖೆಗೂ ಮೊದಲು ಅಮಾಯಕರು ಅಂತ ಹೇಗೆ ಹೇಳ್ತೀರಾ ಎಂದು ತಿರುಗೇಟು ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸರು ಇದ್ದಾರೆ. ನ್ಯಾಯಾಂಗ ಇದೆ. ತನಿಖೆಗೂ ಮೊದಲು ಅಮಾಯಕರು ಅಂತ ಹೇಗೆ ಹೇಳ್ತೀರಾ ಎಂದು ತಿರುಗೇಟು ನೀಡಿದರು. ಎಡಿಜಿಪಿ, ನಿಷ್ಪಪಕ್ಷಪಾತ ತನಿಖೆ ನಡೆಸುತ್ತಿದೆ. ಅಮಾಯಕರಿದ್ದರೆ ಅವರೇ ಬಿಡುತ್ತೇವೆ ಎಂದು ಹೇಳಿದ್ದಾರೆ. ಘಟನೆಯ ಹಿಂದೆ ಯಾವುದೇ ವ್ಯಕ್ತಿ, ಸಂಘಟನೆ ಇದ್ದರೂ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರು ಯಾರು ಅಮಾಯಕರಲ್ಲ: ಇದು ಪ್ರೀ ಪ್ಲಾನ್ ಗಲಾಟೆ
ಎಸ್‌ಡಿಪಿಐ, ಪಿಎಫ್‌ಐ ನಿಷೇಧದ ಪ್ರಶ್ನೆಗೆ, ಈ ಬಗ್ಗೆ ಕೆಲ ಪ್ರೊಸೆಸ್ ನಡೆಯುತ್ತಿದೆ. ಇವು ರಾಜಕೀಯ ಸಂಘಟನೆಗಳಾಗಿರುವುದರಿಂದ ಅದನ್ನು ಸರ್ಕಾರಕ್ಕೆ ಹೇಳಿದ್ದೇವೆ ಎಂದು ತಿಳಿಸಿದರು.ಗೂಂಡಾಗಳ ಆಸ್ತಿ ಜಪ್ತಿ ಮಾಡುವ ಕುರಿತು ಪ್ರಶ್ನೆಗೆ, ಅದನ್ನು ಎಲ್ಲೆಡೆ ಮಾಡಲು ಆಗುವುದಿಲ್ಲ. ಇರುವ ಕಾನೂನನ್ನು ಕಟ್ಟಾನಿಟ್ಟಾಗಿ ಬಳಸಿದರೆ ಸಾಕು, ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಅಮಾಯಕರಿದ್ದರೆ ಬಿಟ್ಟು ಬಿಡುತ್ತಾರೆ
ಎಡಿಜಿಪಿ, ನಿಷ್ಪಪಕ್ಷಪಾತ ತನಿಖೆ ನಡೆಸುತ್ತಿದೆ. ಅಮಾಯಕರಿದ್ದರೆ ಅವರೇ ಬಿಡುತ್ತೇವೆ ಎಂದು ಹೇಳಿದ್ದಾರೆ. ಘಟನೆಯ ಹಿಂದೆ ಯಾವುದೇ ವ್ಯಕ್ತಿ, ಸಂಘಟನೆ ಇದ್ದರೂ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಎಸ್‌ಡಿಪಿಐ, ಪಿಎಫ್‌ಐ ನಿಷೇಧದ ಪ್ರಶ್ನೆಗೆ, ಈ ಬಗ್ಗೆ ಕೆಲ ಪ್ರಗತಿ ನಡೆಯುತ್ತಿದೆ. ಇವು ರಾಜಕೀಯ ಸಂಘಟನೆ ಆಗಿರುವುದರಿಂದ ಅದನ್ನು ಸರ್ಕಾರಕ್ಕೆ ಹೇಳಿದ್ದೇವೆ ಎಂದು ತಿಳಿಸಿದರು.
ಬಂಧಿತ ಹುಬ್ಬಳ್ಳಿ ಗಲಭೆಕೋರರಿಗೆ ಅಮಾಯಕ ಸರ್ಟಿಫಿಕೇಟ್, ರಾಜಕೀಯ ಆಟ ಜೋರು!
ಹೊರಟ್ಟಿಬಗ್ಗೆ ನಡ್ಡಾ ನಿರ್ಣಯ
ಸಭಾಪತಿ ಬಸವರಾಜ ಹೊರಟ್ಟಿಬಿಜೆಪಿ ಸೇರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, ಈ ಬಗ್ಗೆ ಹೊರಟ್ಟಿಅವರೇ ಬಿಜೆಪಿ ಸೇರುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತಾರೆ. ಈ ವರೆಗೂ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಪಕ್ಷ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
75 ವರ್ಷ ಆದವರನ್ನು ಪಕ್ಷಕ್ಕೆ ಕರೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಈ ವಿಷಯಗಳನ್ನೆಲ್ಲ ಚರ್ಚಿಸಿ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದಷ್ಟೇ ಹೇಳಿದರು.
ಹಳೆ ಹುಬ್ಬಳ್ಳಿಯಲ್ಲಿ ಶನಿವಾರ ತಡರಾತ್ರಿ ದಾಂಧಲೆ ಹಿನ್ನೆಲೆಯಲ್ಲಿ ಜಖಂಗೊಂಡ ಪೊಲೀಸರ ವಾಹನಗಳನ್ನು ಸಾಕ್ಷಿದಾರರ ಸಮಕ್ಷಮದಲ್ಲಿ ಸೋಮವಾರ ಪಂಚನಾಮೆ ಮಾಡಲಾಯಿತು.ಗೋಕುಲ ಪೊಲೀಸ್ ಠಾಣೆ, ಕಸಬಾಪೇಟ, ಪೂರ್ವ ಸಂಚಾರಿ ಠಾಣೆ ಸೇರಿ ಇತರೆ ಪೊಲೀಸ್ ವಾಹನಗಳ ಮೇಲೆ ಅಧಿಕಾರಿಗಳು ಒಳಗಿದ್ದಂತೆ ಪುಂಡರು ಕಲ್ಲು ತೂರಾಟ ನಡೆಸಿದ್ದರು. ಜೀಪನ್ನು ಪಲ್ಟಿಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಪ್ರತ್ಯಕ್ಷದರ್ಶಿಗಳನ್ನು ಕರೆಸಿಕೊಂಡ ಪೊಲೀಸರು ಸಾಕ್ಷಿದಾರರನ್ನಾಗಿ ಮಾಡಿಕೊಂಡು ಪಂಚನಾಮೆ ನಡೆಸಿದರು. ಕಾರುಗಳ ಮೇಲೆ ಬಿದ್ದ ಕಲ್ಲು, ಗಾಜಿನ ಹರಳು ಇವನ್ನೆಲ್ಲ ಭೌತಿಕ ಸಾಕ್ಷಿಯಾಗಿ ಇಟ್ಟುಕೊಂಡು ಹಿರಿಯ ಅಧಿಕಾರಿಗಳ ಎದುರಲ್ಲಿ ಫೋಟೋ, ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಯಿತು.