ಸೂರಜ್ ರೇವಣ್ಣ ಸಲಿಂಗ ಕಾಮ ಕೇಸ್ ಸಿಐಡಿಗೆ ಹಸ್ತಾಂತರ; ಹಾಸನದಿಂದ ಬೆಂಗಳೂರಿಗೆ ಸೂರಜ್ ಶಿಫ್ಟ್

By Sathish Kumar KH  |  First Published Jun 23, 2024, 5:25 PM IST

ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತನನ್ನು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದಾರೆಂಬ ಪ್ರಕರಣವನ್ನು ರಾಜಗ್ಯ ಸರ್ಕಾರದಿಂದ ಸಿಐಡಿ ತನಿಖೆಗೆ ವಹಿಸಲಾಗಿದೆ.


ಬೆಂಗಳೂರು /ಹಾಸನ (ಜೂ.23): ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತನನ್ನು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದಾರೆಂಬ ಪ್ರಕರಣವನ್ನು ರಾಜಗ್ಯ ಸರ್ಕಾರದಿಂದ ಸಿಐಡಿ ತನಿಖೆಗೆ ವಹಿಸಲಾಗಿದೆ.

ಸೂರಜ್ ರೇವಣ್ಣ ಅವರು ತನ್ನನ್ನು ಉದ್ಯೋಗ ಅವಕಾಶ ಕೊಡಿಸುವುದಾಗಿ ಹೇಳಿ ಸಲಿಂಗ ಕಾಮಕ್ಕೆ ಬಳಕೆ ಮಾಡಿಕೊಂಡು ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೊಳೆ ನರಸೀಪುರ ಜೆಡಿಎಸ್ ಕಾರ್ಯಕರ್ತ ಶಿವ ಕುಮಾರ್ ಹಾಸನದಲ್ಲಿ ದೂರು ನೀಡಿದ್ದಾನೆ. ಇನ್ನು ಸಂತ್ರಸ್ತ ಈ ಮೊದಲೇ ಗೃಹ ಸಚಿವರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಅಡ್ರೆಸ್ ಮಾಡಿ ದೂರಿನ ಪತ್ರವನ್ನೂ ಬರೆದಿದ್ದನು. ಈ ಪತ್ರ ಪೊಲೀಸ್ ಠಾಣೆ ಸೇರುವ ಮೊದಲೇ ಮಾಧ್ಯಮಗಳ ಕೈ ಸೇರಿತ್ತು. ಆದರೆ, ನಿನ್ನೆ ಸಂಜೆವರೆಗೂ ಅಧಿಕೃತ ದೂರು ದಾಖಲಾಗಿರಲಿಲ್ಲ.

Tap to resize

Latest Videos

undefined

ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯೊಂದಿಗೆ ನಟಿ ಪವಿತ್ರಾಗೌಡ ಕಿರಿಕ್; ಒಳ್ಳೆ ಊಟ, ಮೆತ್ತನೆ ಹಾಸಿಗೆಗೆ ಹಠ

ನಿನ್ನೆ ಶನಿವಾರ ಸಂಜೆ ಸೂರಜ್ ರೇವಣ್ಣ ವಿರುದ್ಧ ಹಾಸನದಲ್ಲಿ ಅಧಿಕೃತವಾಗಿ ದೂರು ದಾಖಲಾಗಿದೆ. ಆದರೆ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸಂತ್ರಸ್ತ ಯುವಕ ಶಿವಕುಮಾರ್ ವಿರುದ್ಧ ದೂರು ನೀಡುವುದಕ್ಕೆಂದು ಹಾಸನದ ಸೆನ್ ಪೊಲೀಸ್ ಠಾಣೆಗೆ ಆಗಮಿಸಿದಾಗ ಪೊಲೀಸರು ಅವರನ್ನು ಅಲ್ಲಿಯೇ ಅರೆಸ್ಟ್ ಮಾಡಿ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದಾರೆ. ಇನ್ನು ಆರೋಪಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಬೇಕಾದ ಹಿನ್ನೆಲೆಯಲ್ಲಿ ಹಾಸನದಲ್ಲಿ ವೈದ್ಯಕೀಯ ಪರೀಕ್ಷೆಯನ್ನೂ ಮಾಡಿಸಲಾಗಿತ್ತು. ಆದರೆ, ಇದರ ಬೆನ್ನಲ್ಲಿಯೇ ಸಲಿಂಗ ಕಾಮ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿದೆ.

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಹೊಳೆನರಸಿಪುರ ಗ್ರಾಮಾಂತರ ಠಾಣೆಯಿಂದ  ಸಿಐಡಿಗೆ ವರ್ಗಾವಣೆ ಮಾಡಿ ಲಾ ಅಂಡ್ ಆರ್ಡರ್ ಎಡಿಜಿಪಿ ಹೀತೇಂದ್ರ ಅವರು ಆದೇಶ ಹೊರಡಿಸಿದ್ದಾರೆ. ಇನ್ನು ಕೂಡಲೇ ಕೇಸ್ ಫೈಲ್ ನೀಡುವಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮುನ್ನವೇ ಸಿಐಡಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಹಾಸನಕ್ಕೆ ತೆರಳಿ ಸಿಐಡಿ ಪೊಲೀಸರು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣನನ್ನು ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಮುಂದಿನ ತನಿಖೆ ಸಿಐಡಿ ತಂಡ ನಡೆಸಲಿದೆ.

ಹಾಸನ ಉಸ್ತುವಾರಿಯಾಗಿ ಸಂತ್ರಸ್ಥರಿಗೆ ಧೈರ್ಯ ಹೇಳಿದ್ಮೇಲೆ ಅಶ್ಲೀಲ ಕೇಸ್ ಹೊರಬರ್ತಿವೆ: ಕೆ.ಎನ್. ರಾಜಣ್ಣ

ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್: ಹಾಸನದಿಂದ ಬೆಂಗಳೂರಿಗೆ ಸೂರಜ್ ರೇವಣ್ಣ ಕರೆತರುತ್ತಿರುವ ಸಿಐಡಿ ಪೊಲೀಸರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಮೆಡಿಕಲ್ ಚೆಕಪ್ ಗೆ ಕರೆದೊಯ್ಯಲಿದ್ದಾರೆ. ಸದ್ಯ ಆಸ್ಪತ್ರೆ ವೈದ್ಯರಿಗೆ ಜನರಲ್ ಚೆಕಪ್ ಬಗ್ಗೆ ಮಾತ್ರ ಮಾಹಿತಿ ನೀಡಲಾಗಿದೆ. ಜೊತೆಗೆ, ಬೇರೆ ವೈದ್ಯಕೀಯ ಪರೀಕ್ಷೆಯ ಮಾಹಿತಿ ಇನ್ನೂ ವೈದ್ಯರಿಗೆ ಬಂದಿಲ್ಲ. ಈ ಹಿನ್ನಲೆ ಜನರಲ್ ಚೆಕಪ್‌ಗಳಾದ ಬಿಪಿ, ಶುಗರ್ ಪರೀಕ್ಷೆ ನಡೆಸಲಿದ್ದಾರೆ. ಆದರೆ, ಹಾಸನದಲ್ಲಿ ವೈದ್ಯರು ಸೂರಜ್ ರೇವಣ್ಣಗೆ 15ಕ್ಕೂ ಅಧಿಕ ಪರೀಕ್ಷೆಗಳನ್ನು ಮಾಡಿದ್ದಾರೆ. ಆ ದಾಖಲೆಗಳನ್ನು ಇಲ್ಲಿ ಪೂರೈಕೆ ಮಾಡುವರೇ ಎಂಬುದು ಕೂಡ ಸಿಐಡಿ ತನಿಖಾ ತಂಡದ ತೀರ್ಮಾನವನ್ನು ಅವಲಂಬಿಸಿದೆ.

click me!