ಬಡವರಿಗೆ 50ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಉಚಿತ ಚಿಕಿತ್ಸೆ!

By Kannadaprabha NewsFirst Published Jun 22, 2020, 11:14 AM IST
Highlights

ಕೊರೋನಾ: ಬಡವರಿಗೆ ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ| ಬಿಪಿಎಲ್‌ ಕಾರ್ಡ್‌ದಾರರಿಗೆ ಸೌಲಭ್ಯ| 50ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ವ್ಯವಸ್ಥೆ

 

ಬೆಂಗಳೂರು

ಇನ್ನು ಮುಂದೆ ಬಡ ಕೊರೋನಾ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದ್ದು, ‘ಆಯುಷ್ಮಾನ್‌ ಭಾರತ್‌ -ಆರೋಗ್ಯ ಕರ್ನಾಟಕ’ ಯೋಜನೆಯಡಿ ರಾಜ್ಯ ಸರ್ಕಾರ ಈ ಸೌಲಭ್ಯ ಒದಗಿಸಿದೆ.

ಬಿಪಿಎಲ್‌ ಕಾರ್ಡ್‌ ಹೊಂದಿರುವವರು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊರೋನಾಗೆ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ, ಸೋಂಕಿತರಿಗೆ ಸಂಬಂಧಪಟ್ಟಪಾಲಿಕೆ ಆಯುಕ್ತರು, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಕುಷ್ಠರೋಗ ಅಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಶಿಫಾರಸು ಮಾಡಿರಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆಸ್ಪತ್ರೆಗಳ ವಿವರ:

ಎಸಿಇ ಸುಹಾಸ್‌ ಆಸ್ಪತ್ರೆ-ಜಿಗಣಿ ಕೈಗಾರಿಕಾ ವಲಯ, ಆನೇಕಲ್‌. ಆಕಾಶ್‌ ಆಸ್ಪತ್ರೆ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ, ದೇವನಹಳ್ಳಿ. ಆಸ್ಟರ್‌ ಸಿಎಂಐ ಆಸ್ಪತ್ರೆ- ಬಳ್ಳಾರಿ ರಸ್ತೆ, ಸಹಕಾರನಗರ. ಅವೇಕ್ಷಾ ಆಸ್ಪತ್ರೆ-ಎಂ.ಎಸ್‌. ಪಾಳ್ಯ, ಸಿಂಗಾಪುರ. ಬಿ.ಡಬ್ಲ್ಯೂ. ಲಯನ್ಸ್‌ ಸೂಪರ್‌ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ- ಜೆ.ಸಿ.ರಸ್ತೆ. ಬೆಂಗಳೂರು ಕ್ಯಾನ್ಸರ್‌ ಸೆಂಟರ್‌ ಪ್ರೈವೇಟ್‌ ಲಿಮಿಟೆಡ್‌-ಮೂಕಾಂಬಿಕೆ ದೇವಾಲಯ ರಸ್ತೆ, ಮಾಚೋಹಳ್ಳಿ ಫಾರೆಸ್ಟ್‌ ಗೇಟ್‌, ಮಾಗಡಿ ಮುಖ್ಯರಸ್ತೆ. ಬೆಂಗಳೂರು ನೇತ್ರಾಲಯ-ಬಿಡಿಎ ಕಾಂಪ್ಲೆಕ್ಸ್‌ ಎದುರು, ಬನಶಂಕರಿ 2ನೇ ಹಂತ. ಬೆಳಕು ಕಣ್ಣಿನ ಆಸ್ಪತ್ರೆ-ಕೆಂಗೇರಿ ಉಪನಗರ. ಬಿಜಿಎಸ್‌ ಗ್ಲೋಬಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಅಂಡ್‌ ಹಾಸ್ಪೆಟಲ್‌-ಬಿಜಿಎಸ್‌ ಹೆಲ್ತ್‌ ಅಂಡ್‌ ಎಜುಕೇಷನ್‌ ಸಿಟಿ, ಉತ್ತರಹಳ್ಳಿ ಮುಖ್ಯ ರಸ್ತೆ, ಕೆಂಗೇರಿ. ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆ-ಮಿಲ್ಲ​ರ್‍ಸ್ ರಸ್ತೆ, ವಸಂತನಗರ. ಬಿಎಂಎಸ್‌ ಆಸ್ಪತ್ರೆ-ಬಸವನಗುಡಿ.

ಈಸ್ಟ್‌ ಪಾಯಿಂಟ್‌ ಆಸ್ಪತ್ರೆ-ಬಿದರಹಳ್ಳಿ, ಆವಲಹಳ್ಳಿ. ಎಚ್‌ಬಿಎಸ್‌ ಆಸ್ಪತ್ರೆ-ಶಿವಾಜಿನಗರ. ಹೆಲ್ತ್‌ಕೇರ್‌ ಗ್ಲೋಬಲ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌-ರಾಜಾರಾಮ್‌ ಮೋಹನ್‌ ರಾಯ್‌ ಎಕ್ಸ್‌ಟೆನ್ಷನ್‌. ಡಬಲ್‌ ರೋಡ್‌, ಕಿಮ್ಸ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ-ವಿ.ವಿ.ಪುರ. ಲೀನಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ-ಎಸ್‌. ನರಸಿಂಹಯ್ಯ ಲೇಔಟ್‌, ದೇವನಹಳ್ಳಿ. ಎಂ.ಎಸ್‌.ರಾಮಯ್ಯ ಆಸ್ಪತ್ರೆ, ಎಂ.ಎಸ್‌.ರಾಮಯ್ಯ ನಾರಾಯಣ ಹಾರ್ಟ್‌ ಸೆಂಟರ್‌-ಎಂಎಸ್‌ಆರ್‌ ನಗರ. ಮಾನಸ ಆಸ್ಪತ್ರೆ-ಡಿ.ಕ್ರಾಸ್‌ ಮುಖ್ಯರಸ್ತೆ, ದೊಡ್ಡಬಳ್ಳಾಪುರ. ಮೆಡ್‌ಹೋಪ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ-ಮಲ್ಲೇಶಪಾಳ್ಯ ಮುಖ್ಯರಸ್ತೆ, ನ್ಯೂ ತಿಪ್ಪಸಂದ್ರ. ಎಂವಿಜೆ ಮೆಡಿಲ್‌ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆ-ರಾಷ್ಟ್ರೀಯ ಹೆದ್ದಾರಿ 4 ಹೊಸಕೋಟೆ. ನಾಗಪ್ಪ ಹಡ್ಲಿ ಆಸ್ಪತ್ರೆ-ಎಂಎಸ್‌.ಪಾಳ್ಯ. ನಂದಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ-ದೊಡ್ಡಬಳ್ಳಾಪುರ. ನಾರಾಯಣ ಹೃದಯಾಲಯ ಪ್ರೈವೆಟ್‌ ಲಿಮಿಟೆಡ್‌- ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ. ಆನೇಕಲ್‌ ತಾಲೂಕು. ನೇತ್ರಾಕ್ಷಿ ಕಣ್ಣಿನ ಆಸ್ಪತ್ರೆ ಮತ್ತು ಮೈಕ್ರೋ ಸರ್ಜಿಕಲ್‌ ಸೆಂಟರ್‌-ಪದ್ಮನಾಭ ನಗರ. ನ್ಯೂ ಜನಪ್ರಿಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ-ಎನ್‌ಜಿಇಎಫ್‌ ಲೇಔಟ್‌ ಈಸ್ಟ್‌, ನ್ಯೂ ವರಲಕ್ಷ್ಮಿ ಆಸ್ಪತ್ರೆ-ರಾಜಾಜಿನಗರ 2ನೇ ಹಂತ.

ಎನ್‌ಯು ಹಾಸ್ಪೆಟಲ್‌ ಪ್ರೈವೇಟ್‌ ಲಿಮಿಟೆಡ್‌-ಪದ್ಮನಾಭನಗರ. ಪಿಎಂ ಸಂತೋಷ ಆಸ್ಪತ್ರೆ- ಹೆಮ್ಮಿಗೆಪುರ. ಪ್ರಶಾಂತ್‌ ಆಸ್ಪತ್ರೆ-ಬೊಮ್ಮನಹಳ್ಳಿ ವೃತ್ತ. ಟ್ರಿನಿಟಿ ಹಾಸ್ಪೆಟಲ್‌ ಅಂಡ್‌ ಹಾರ್ಟ್‌ ಫೌಂಡೇಷನ್‌-ಶ್ರೀರಾಮ ಮಂದಿರ ರಸ್ತೆ, ಬೆಂಗಳೂರು ದಕ್ಷಿಣ. ಸ್ಪೈನ್‌ ಕೇರ್‌ ಆಂಡ್‌ ಆರ್ಥೋಕೇರ್‌ ಆಸ್ಪತ್ರೆ-ಮಾಗಡಿ ರಸ್ತೆ ಟೋಲ್‌ಗೇಟ್‌. ತಥಾಗತ್‌ ಹಾರ್ಟ್‌ಕೇರ್‌ ಸೆಂಟರ್‌ ಎಲ್‌ಐಪಿ-ಮಲ್ಲಿಗೆ ಮೆಡಿಕಲ್‌ ಸೆಂಟರ್‌ ಆವರಣ, ಕ್ರೆಸೆಂಟ್‌ ರಸ್ತೆ. ರಕ್ಷಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ-ನಂದಿನಿ ಬಡಾವಣೆ. ರಾಮಯ್ಯ ಹರ್ಷಾ ಆಸ್ಪತ್ರೆ-ನಂ 93, 4, ಸೊಂಡೆಕೊಪ್ಪ ವೃತ್ತ, ನೆಲಮಂಗಲ.

ರೈನ್‌ಬೋ ಮಕ್ಕಳ ಆಸ್ಪತ್ರೆ-ಕೆ.ಆರ್‌.ಪುರ ವರ್ತುಲ ರಸ್ತೆ, ದೊಡ್ಡನೆಕ್ಕುಂದಿ. ರೈನ್‌ಬೋ ಮಕ್ಕಳ ಆಸ್ಪತ್ರೆ-ಬಿಳೇಕಹಳ್ಳಿ, ಬನ್ನೇರುಘಟ್ಟರಸ್ತೆ. ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ-ಕಂಬಿಪುರ, ಮೈಸೂರು ರಸ್ತೆ. ಸಾಗರ್‌ ಆಸ್ಪತ್ರೆ-ಕುಮಾರಸ್ವಾಮಿ ಬಡಾವಣೆ. ಸಂವೃದ್ಧಿ ಕಣ್ಣಿನ ಆಸ್ಪತ್ರೆ-ಕೊಡಿಗೆಹಳ್ಳಿ ಮುಖ್ಯರಸ್ತೆ, ತಿಂಡ್ಲು. ಸಂಜೀವಿನಿ ಆಸ್ಪತ್ರೆ- ಮಹಾಲಕ್ಷ್ಮಿ ಬಡಾವಣೆ. ಸಂತೋಷ್‌ ಆಸ್ಪತ್ರೆ-ಪ್ರೊ ಮೆನಡೆ ರಸ್ತೆ. ಸಪ್ತಗಿರಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ-ಹೆಸರಘಟ್ಟರಸ್ತೆ. ಎಸ್‌ಎಲ್‌ ವೇಗಾ ಆಸ್ಪತ್ರೆ ಪ್ರೈವೇಟ್‌ ಲಿಮಿಟೆಡ್‌(ರೀಗಲ್‌ ಆಸ್ಪತ್ರೆ)-ಹೆಗಡೆನಗರ ಮುಖ್ಯರಸ್ತೆ.

ಸ್ಪೆಷಲಿಸ್ಟ್‌ ಹೆಲ್ತ್‌ ಸಿಸ್ಟಮ್‌ ಆಸ್ಪತ್ರೆ-ಕಲ್ಯಾಣನಗರ. ಶ್ರೀಸಿದ್ಧಾರ್ಥ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌-ನೆಲಮಂಗಲ. ಎಸ್‌ಎಸ್‌ಎನ್‌ಎಂಸಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ- ರಾಜರಾಜೇಶ್ವರಿ ನಗರ. ಸೆಂಟ್‌ ಜಾನ್‌ ಮೆಡಿಕಲ್‌ ಕಾಲೇಜು-ಕೋರಮಂಗಲ. ಸೆಂಟ್‌ ಮಾರ್ಥಾಸ್‌ ಹಾರ್ಟ್‌ ಸೆಂಟರ್‌-ನೃಪತುಂಗಾ ರಸ್ತೆ. ದಿ ಐ ಫೌಂಡೇಷನ್‌-ಹೊರವರ್ತುಲ ರಸ್ತೆ, ಬೆಳ್ಳಂದೂರು. ದಿ ಹಾರ್ಟ್‌ ಸೆಂಟರ್‌-ಕನ್ನಿಂಗ್‌ಹ್ಯಾಂ ರಸ್ತೆ. ದಿ ಆಕ್ಸ್‌ಫರ್ಡ್‌ ಮೆಡಿಕಲ್‌ ಕಾಲೇಜು ಹಾಸ್ಪೆಟಲ್‌ ಅಂಡ್‌ ರಿಸಚ್‌ರ್‍ ಸೆಂಟರ್‌-ಅತ್ತಿಬೆಲೆ, ವಿಠ್ಠಲ ಇಂಟರ್‌ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಪ್ತಮಾಲಜಿ- ಬನಶಂಕರಿ ಮೂರನೇ ಹಂತ. ಹೊಸಕೆರೆಹಳ್ಳಿ. ವೈದೇಹಿ ಅಸ್ಪತ್ರೆ- ವೈಟ್‌ಫೀಲ್ಡ್‌.

click me!