ಬಳ್ಳಾರಿ ಚಡ್ಡಿ ದೋಸ್ತಿಗಳಾದ ಶ್ರೀರಾಮುಲು ಜನಾರ್ಧನ ರೆಡ್ಡಿ ನಡುವೆ ರಾಜಕೀಯ ತಿಕ್ಕಾಟ!

Published : Jan 23, 2025, 12:29 PM IST
ಬಳ್ಳಾರಿ ಚಡ್ಡಿ ದೋಸ್ತಿಗಳಾದ ಶ್ರೀರಾಮುಲು ಜನಾರ್ಧನ ರೆಡ್ಡಿ ನಡುವೆ ರಾಜಕೀಯ ತಿಕ್ಕಾಟ!

ಸಾರಾಂಶ

ಬಳ್ಳಾರಿಯಲ್ಲಿ ಬಿಜೆಪಿ ನಾಯಕರಾದ ಗಾಲಿ ಜನಾರ್ಧನ ರೆಡ್ಡಿ ಮತ್ತು ಬಿ. ಶ್ರೀರಾಮುಲು ನಡುವೆ ರಾಜಕೀಯ ತಿಕ್ಕಾಟ ಉಂಟಾಗಿದೆ. ಸಂಡೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲು ಮತ್ತು ಇತರ ರಾಜಕೀಯ ಕಾರಣಗಳು ಈ ತಿಕ್ಕಾಟಕ್ಕೆ ಕಾರಣವಾಗಿವೆ.

ಬೆಂಗಳೂರು (ಜ.223): ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಿದ್ದ ಮಾಜಿ ಸಚಿವಾರದ ಗಾಲಿ ಜನಾರ್ಧನ ರೆಡ್ಡಿ ಹಾಗೂ ಬಿ. ಶ್ರೀರಾಮುಲು ಅವರ ಮಧ್ಯೆ ರಾಜಕೀಯ ತಿಕ್ಕಾಟ ಶುರುವಾಗಿದೆ. ಇದಕ್ಕೆ ತತಕ್ಷಣದ ಕಾರಣ ಸಂಡೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಎಂದು ಹೇಳಬಹುದು. ಆದರೆ, ಅಸಲಿಯಾಗಿ ಹಲವು ರಾಜಕೀಯ ಕಾರಣಗಳು ಇವರಿಬ್ಬರ ನಡುವಿನ ತಿಕ್ಕಾಟಕ್ಕೆ ವೇದಿಕೆಯನ್ನು ಸೃಷ್ಟಿಸಿವೆ.

ಕರ್ನಾಟಕದಲ್ಲಿ 90ರ ದಶಕದಲ್ಲಿ ಕಾಂಗ್ರೆಸ್ ಭದ್ರಕೋಟೆ ಆಗಿದ್ದ ಬಳ್ಳಾರಿ ಲೋಕಸಭೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿಯ ಸುಷ್ಮಾ ಸ್ವರಾಜ್ ಅವರು ಸ್ಪರ್ಧಿಸಿದ ನಂತರ ಬಿಜೆಪಿ ನಾಯಕರಾಗಿ ಉದಯಿಸಿದ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ಬಳ್ಳಾರಿಯಲ್ಲಿ ಬಿಜೆಪಿಯ ಕಮಲವನ್ನು ಅರಳಿಸಿದ್ದರು. ಆದರೆ, ಕಾಲಾನಂತರದಲ್ಲಿ ಇವರಿಗೆ ಜನಾರ್ಧನ ರೆಡ್ಡಿಗೆ ಗಣಿ ಹಗರಣದ ಧೂಳು ಮೆತ್ತಿಕೊಂಡು ಜೈಲು ಶಿಕ್ಷೆಯನ್ನೂ ಅನುಭವಿಸಿ ಇದೀಗ ಹೊರಗೆ ಬಂದಿದ್ದಾರೆ. ಆದರೆ, ಜನಾರಧನರೆಡ್ಡಿ 2ನೇ ರಾಜಕೀಯ ಇನ್ನಿಂಗ್ಸ್ ಶುರುಮಾಡಲು ಶ್ರೀರಾಮುಲು ಸಾಥ್ ಕೊಡದಿರುವುದೇ ಇವರಿಬ್ಬರ ನಡುವಿನ ತಿಕ್ಕಾಟಕ್ಕೆ ಆರಂಭವಾಗಲು ಅಸಲಿ ಕಾರಣವಾಗಿದೆ.

ಇದನ್ನೂ ಓದಿ: ಮಿತ್ರ ಜನಾರ್ದನ ರೆಡ್ಡಿ ವಿರುದ್ಧ ತಿರುಗಿಬಿದ್ದ ಶ್ರೀರಾಮುಲು!

ಜನಾರ್ಧನ ರೆಡ್ಡಿ ಶ್ರೀರಾಮುನು ನಡುವಿನ ತಿಕ್ಕಾಟಕ್ಕೆ ಕಾರಣಗಳು:
ಜನಾರ್ಧನ ರೆಡ್ಡಿ ರಾಜಕೀಯದ 2ನೇ ಇನ್ನಿಂಗ್ಸ್ ಆರಂಭಿಸಲು ಶ್ರೀರಾಮುಲು ಸಾಥ್ ಕೊಟ್ಟಿಲ್ಲ.
ಜನಾರ್ಧನ ರೆಡ್ಡಿ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಗೆ ಮುಂದಾದಾಗಲೂ ಶ್ರೀರಾಮುಲು ಹಿರಿಯ ನಾಯಕರನ್ನು ಮನವೊಲಿಸುವ ಪ್ರಯತ್ನ ಮಾಡದೇ ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ.
ಜನಾರ್ಧನ ರೆಡ್ಡಿ ಕೆಆರ್‌ಪಿಪಿ ಪಕ್ಷ ಕಟ್ಟಿ, ಶ್ರೀರಾಮುಲು ವಿರುದ್ಧವೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಯಿತು.
ಜನಾರ್ಧನ ರೆಡ್ಡಿ ಲೋಕಸಭಾ ಚುನಾವನೆಯಲ್ಲಿ ಬಿಜೆಪಿಯೊಂದಿಗೆ ವಿಲೀನ ಮಾಡಿಕೊಂಡರೂ ಶ್ರೀರಾಮುಲು ಗೆಲುವಿಗೆ ಸಂಪೂರ್ಣ ಸಹಕಾರ ನೀಡಿಲ್ಲ.
ಜನಾರ್ಧನ ರೆಡ್ಡಿ ಬಳ್ಳಾರಿಗೆ ಬರಬಹುದು ಎಂದು ಕೋರ್ಟ್ ಅನುಮತಿ ಕೊಟ್ಟ ಬೆನ್ನಲ್ಲಿಯೇ ಬಳ್ಳಾರಿಯಲ್ಲಿ ರೆಡ್ಡಿ ಹವಾ ಜೋರಾಗಿದೆ.
ಸಂಡೂರು ವಿಧಾನಸಭಾ ಚುನಾವಣೆಯಲ್ಲಿ ಬಂಗಾರು ಹನುಮಂತು ಅವರಿಗೆ ಜನಾರ್ಧನ ರೆಡ್ಡಿ ಅವರೇ ಟಿಕೆಟ್ ಕೊಡಿಸಿದ್ದಾರೆ ಎಂದು ಶ್ರೀರಾಮುಲು ಭಾವಿಸಿದ್ದಾರೆ.
ಸಂಡೂರು ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಸಕ್ರಿಯವಾಗಿ ಭಾಗಿಯಾಗದೇ ತಟಸ್ಥವಾಗಿದ್ದರು.
ಶ್ರೀರಾಮುಲು ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ತಡವಾಗಿ ಆಗಮಿಸಿದ್ದಾರೆ.
ಶ್ರೀರಾಮುಲು ವಿರುದ್ಧ ಜನಾರ್ಧನ ರೆಡ್ಡಿ ಅವರೇ ಬಿಜೆಪಿ ಹೈಕಮಾಂಡ್‌ಗೆ ದೂರು ನೀಡಿದ್ದಾರೆ.
ಬಿಜೆಪಿ ಹೈಕಮಾಂಡ್‌ನಿಂದ ಶ್ರೀರಾಮುಲುಗೆ ತರಾಟೆ ತೆಗೆದುಕೊಂಡರೂ ಅದಕ್ಕೆ ಜನಾರ್ಧನ ರೆಡ್ಡಿಯೇ ಕಾರಣವೆಂದು ಭಾವಿಸಿದ್ದಾರೆ.

ಈ ಎಲ್ಲ ಕಾರಣಗಳಿಂದ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಅವರ ನಡುವೆ ತಿಕ್ಕಾಟ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಸಲಿ ಕಾರಣವನ್ನು ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಸುದ್ದಿಗೋಷ್ಠಿ ಮೂಲಕ ಬಹಿರಂಗಪಡಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್