ಗೃಹ ಸಚಿವರ ಮನೆಗೆ ಮುತ್ತಿಗೆ ಪ್ರಕರಣ: ಆರಗ ಜ್ಞಾನೇಂದ್ರ ನಿವಾಸದ ಎದುರು ಖಾಕಿ ಬಂದೋಬಸ್ತ್

By Girish GoudarFirst Published Jul 31, 2022, 4:35 PM IST
Highlights

ಗೃಹ ಸಚಿವರ ಮನೆ ಮುಂದೆ ಆದ ಬೆಳವಣಿಗೆಯಿಂದ ಸರ್ಕಾರಕ್ಕೆ ಮುಜುಗರ  
 

ಬೆಂಗಳೂರು(ಜು.31):  ಗೃಹ ಸಚಿವ ಆರಗ ಜ್ಞಾನೇಂದ್ರ ಮನೆ ಮುಂದೆ ಎತ್ತ ಕಣ್ಣು ಹಾಯಿಸಿದರು ಪೊಲೀಸರೇ, ನಿನ್ನೆ ನಡೆದ ಘಟನೆಯಿಂದ ಎಚ್ಚೆತ್ತುಕೊಂಡಿರೋ ಪೊಲೀಸರು ಗೃಹ ಸಚಿವರ ಮನೆ ಸುತ್ತಮುತ್ತ ಖಾಕಿ ಕಣ್ಗಾವಲಿನಲ್ಲಿದೆ ಗೃಹ ಸಚಿವರ ಮನೆ. ಜಯಮಹಲ್‌ನಲ್ಲಿರುವ ಗೃಹ ಸಚಿವರ ಮನೆಗೆ ನಿನ್ನೆ(ಶನಿವಾರ) ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಏಕಾಏಕಿ ನುಗ್ಗಿ ರಂಪಾಟ ಮಾಡಿದ್ದರಿಂದ ಇಂದು ಗೃಹ ಸಚಿವರ ಮನೆ ಮುಂದೆ ರಸ್ತೆಗೆ ಎರಡು ಕಡೆ 200 ಮೀಟರ್ ದೂರದಲ್ಲಿಯೇ ಬ್ಯಾರಿಕೇಡ್ ಅಳವಡಿಸಿ ನಾಕಾಬಂದಿ ಹಾಕಿ ಭದ್ರತೆ ಮಾಡಲಾಗಿದೆ.ಹೆಚ್ಚಿನ ಭದ್ರತೆಗಾಗಿ ಎರಡು ಕೆಎಸ್ಆರ್ ಪಿಯನ್ನು ನಿಯೋಜಿಸಲಾಗಿದೆ. 

ಗೃಹ ಸಚಿವರ ಮನೆ ಮುಂದೆ ಆದ ಬೆಳವಣಿಗೆಯಿಂದ ಸರ್ಕಾರಕ್ಕೆ ಆದ ಮುಜುಗರದಿಂದ ತಪ್ಪಿಸಿಕೊಳ್ಳು ಉಳಿದ ಸಚಿವರುಗಳ ಮನೆ ಮುಂದೆ ಬಂದೋಬಸ್ತ್ ಮಾಡಲು ಕಮೀಷನರ್ ಸೂಚನೆ ಕೊಡಲಾಗಿತ್ತು. ಕಮೀಷನರ್ ಸೂಚನೆ ಮೇರೆಗೆ ಜಯಮಾಹಲ್ ರಸ್ತೆಯಲ್ಲಿರೋ ಪ್ರಭುಚವ್ಹಾಣ್ , ಶಶಿಕಲಾ ಜೋಲ್ಲೆ ಮನೆಗಳ ಮುಂದೆ ಪೊಲೀಸ್ ಭದ್ರತೆಯನ್ನ ನೀಡಲಾಗಿದೆ.

ಗೃಹ ಸಚಿವರ ಮನೆಗೆ ಮುತ್ತಿಗೆ ಪ್ರಕರಣ; ಜೆ.ಸಿ.ನಗರ ಠಾಣೆಯ ಇಬ್ಬರು ಸಸ್ಪೆಂಡ್

ಒಟ್ನಲ್ಲಿ ಸರ್ಕಾರ ಗೃಹ ಸಚಿವ ಮನೆ ಮುಂದೆ ಆದ ಘಟನೆಯಿಂದ ಮುಜುಗರಕ್ಕೆ ಒಳಗಾಗಿದ್ದೆ ಮುಂದೆ ಇದೇ ರೀತಿ ಘಟನೆಗಳು ಮರುಕಳಿಸಿದಂತೆ ಎಲ್ಲಾ ಸಚಿವರ ಮನೆಗೆ ಭದ್ರತೆ ನೀಡಲಾಗಿದೆ.
 

click me!