ಸೌಜನ್ಯ ಕೇಸ್ ವಿಡಿಯೋ ಮಾಡಿದ್ದ ಯುಟ್ಯೂಬರ್ Dhootha ಸಮೀರ್‌ ಬಂಧನಕ್ಕೆ ಯತ್ನ; ಪೊಲೀಸರಿಂದ ನೋಟಿಸ್

Published : Mar 06, 2025, 09:57 AM ISTUpdated : Mar 06, 2025, 09:58 AM IST
ಸೌಜನ್ಯ ಕೇಸ್ ವಿಡಿಯೋ ಮಾಡಿದ್ದ ಯುಟ್ಯೂಬರ್ Dhootha ಸಮೀರ್‌ ಬಂಧನಕ್ಕೆ ಯತ್ನ; ಪೊಲೀಸರಿಂದ ನೋಟಿಸ್

ಸಾರಾಂಶ

ದಕ್ಷಿಣ ಕನ್ನಡ ಸೌಜನ್ಯ ಪ್ರಕರಣದ ಬಗ್ಗೆ ವಿಡಿಯೋ ಮಾಡಿದ ಸಮೀರ್ ಎಂಡಿ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಜೀವ ಬೆದರಿಕೆ ಕರೆಗಳು ಬಂದಿವೆ ಎಂದುಸಮೀರ್ ಎಂ.ಡಿ. ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ದಕ್ಷಿಣ ಕನ್ನಡ ಸೌಜನ್ಯ ಪ್ರಕರಣದ ಕುರಿತು ವಿಡಿಯೋ ಮಾಡಿದ್ದ ಸಮೀರ್ ಎಂಡಿ ಎಂಬವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಬಳ್ಳಾರಿಯಿಂದ ಪೊಲೀಸರು ಆಗಮಿಸಿ ಬಂಧನಕ್ಕೆ ಮುಂದಾಗಿದ್ದರು. ಆದ್ರೆ ವಿಚಾರಣೆಗೆ ಸಹಕರಿಸೋದಾಗಿ ಭರವಸೆ ನೀಡಿದ್ಮೇಲೆ ನೋಟಿಸ್ ನೀಡಿ ಹಿಂದಿರುಗಿದ್ದಾರೆ ಎಂದು ಫೇಸ್‌ಬುಕ್‌ ಲೈವ್‌ನಲ್ಲಿ  ಸಮೀರ್ ಹೇಳಿದ್ದಾರೆ. ಈ ವಿಡಿಯೋಗೆ ಒಂದು ಮಿಲಿಯನ್ ವ್ಯೂವ್ ಪಡೆದುಕೊಳ್ಳುತ್ತಲೇ ನನಗೆ ಭಯ ಶುರುವಾಯ್ತು. ಕೆಲವರು ನನ್ನ ವೈಯಕ್ತಿಕ ಮಾಹಿತಿ ಮತ್ತು ನನ್ನ ವಿಳಾಸವನ್ನು ಸೋಶಿಯಲ್ ಮೀಡಿಯದಲ್ಲಿ ಲೀಕ್ ಮಾಡಲಾಯ್ತು. ನಂತರ ನನಗೆ ಹಲವು ಜೀವಬೆದರಿಕೆ ಕರೆಗಳ ಬರಲು ಆರಂಭಿಸಿದವು. ಪೊಲೀಸರ ಬಳಿ ಹೋದ್ರೆ ರಕ್ಷಣೆ ಸಿಗುತ್ತೆ ಎಂಬ ನಂಬಿಕೆಯೂ ನನಗಿರಲಿಲ್ಲ. ನಂತರ ನಾನು ಕೂಡಲೇ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ತಂಡದ ಸದಸ್ಯರನ್ನು ಸಂಪರ್ಕಿಸಿದೆ. ನಂತರ ಅವರೇ ವಕೀಲರ ಸಹಾಯವನ್ನು ನೀಡಿದ್ದಾರೆ ಎಂದು ಸಮೀರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. 

ನನಗೆ ಜೀವ ಬೆದರಿಕೆ ಬರುತ್ತಿರುವ ಹಿನ್ನೆಲೆ ಸೌಜನ್ಯ ಪ್ರಕರಣದ ಮತ್ತೋರ್ವ ಹೋರಾಟಗಾರ ಗಿರಿಶ್ ಮಟ್ಟನವರ್ ಅವರನ್ನು ಮನೆಗೆ ಬರುವಂತೆ ಹೇಳುವಂತೆ ಮನವಿ ಮಾಡಿಕೊಂಡೆ. ಗಿರೀಶ್ ಮಟ್ಟನವರ್ ಮನೆಗೆ ಬಂದ ಸಂದರ್ಧದಲ್ಲಿಯೇ ಪೊಲೀಸರು ನಮ್ಮ ಮನೆಗೆ ಬಂದರು ಎಂದು ಸಮೀರ್ ಎಂಡಿ ಹೇಳಿದ್ದಾರೆ. ಸೌಜನ್ಯ ವಿಡಿಯೋ ಮಾಡುವ ಮುನ್ನ ಗಿರೀಶ್ ಅಥವಾ ಮಹೇಶ್ ಶೆಟ್ಟಿಯಯವರಿಗೂ ನಮಗೆ ಪರಿಚಯವೇ  ಇರಲಿಲ್ಲ. ಇವರು ಯಾರು ನನಗೆ ವಿಡಿಯೋ ಮಾಡುವಂತೆ ಹೇಳಿಲ್ಲ ಎಂದು ರಂಜಾನ್ ತಿಂಗಳಿನಲ್ಲಿ ಅಲ್ಲಾಹುವಿನ ಮೇಲೆ ಆಣೆ ಮಾಡುತ್ತೇನೆ. ವಿಡಿಯೋ ಬಿಡುಗಡೆಯಾದ ನಂತರ ನನಗೆ ಇವರ ಪರಿಚಯವಾಗಿದೆ ಎಂದು ಸಮೀರ್ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. 

ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿರುವ ಗಿರೀಶ್ ಮಟ್ಟನವರ್, ಸಮೀರ್ ತಮ್ಮ ವಿಡಿಯೋದಲ್ಲಿ ಯಾರ ಹೆಸರನ್ನು ಬಳಸಿಲ್ಲ. ಇನ್ನು ದೇವಸ್ಥಾನದ ಕುರಿತು ಯಾವುದೇ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿಲ್ಲ. ಸುಪ್ರೀಂಕೋರ್ಟ್‌ಗೆ ಅವರೇ ಬರೆದುಕೊಟ್ಟಂತಹ ಹೇಳಿಕೆಯನ್ನು ಸಮೀರ್ ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಸೌಜನ್ಯಳನ್ನು ನಿಮ್ಮ ಮನೆ ಮಗಳು ಎಂದು ತಿಳಿದುಕೊಳ್ಳಿ ಎಂದು ಮನವಿ ಮಾಡಿಕೊಡರು. 

ಸಮೀರ್ ಅವರನ್ನು ಬಂಧಿಸಬೇಕು ಎಂಬ ಉದ್ದೇಶದಿಂದಲೇ ಪೊಲೀಸರು ಬಳ್ಳಾರಿಯಿಂದ ಆಗಮಿಸಿದ್ದರು. ಬಳ್ಳಾರಿ ಕೌಲ್ ಬಜಾರ್ ಠಾಣೆಯ ಅಧಿಕಾರಿಗಳು, ಬಳ್ಳಾರಿ ಎಸ್‌ಪಿ, ಬೆಂಗಳೂರು ಗ್ರಾಮಾಂತರ ಎಸ್‌ಪಿ ಮತ್ತು ಇಲ್ಲಿಯ ಸ್ಥಳೀಯ ಆವಲಹಳ್ಳಿಯ ಪೊಲೀಸರೊಂದಿಗೂ ನಾವು ಮಾತನಾಡಿದ್ದೇವೆ. ತನಿಖೆಗೆ ಸಹಕರಿಸೋದಾಗಿ ಹೇಳಿದ್ಮೇಲೆ ನೋಟಿಸ್ ನೀಡಿ ಹಿಂದಿರುಗಿದ್ದಾರೆ. ತನಿಖೆಯಿಂದ ತಪ್ಪಿಸಿಕೊಳ್ಳುವ ಮಾತೇ ಇಲ್ಲ. ತನಿಖೆಗೆ ಸಮೀರ್ ಬರುತ್ತಾನೆ ಎಂದು ಹೇಳಿದ್ದೇವೆ. ನಮ್ಮ ಮಾತನ್ನು ಒಪ್ಪಿಕೊಂಡಿರೋದಕ್ಕೆ ಪೊಲೀಸರಿಗೆ ಧನ್ಯವಾದ ಹೇಳುತ್ತೇವೆ ಎಂದರು. 

ಈ ಸೌಜನ್ಯ ಪ್ರಕರಣದಲ್ಲಿ ಎಲ್ಲಾ ಧರ್ಮದವರನ್ನು ಸೇರಿಸುತ್ತಿದ್ದೇವೆ. ಇಲ್ಲಿ ಧರ್ಮದ ವಿಷಯವೇ ಇಲ್ಲ. ಸೌಜನ್ಯಾಳೇ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪರಿಚಯಿಸಿದ್ದು. ಆಕೆಯಿಂದಲೇ ನನಗೆ ಮಹೇಶ್ ಅವರ ಪರಿಚಯವಾಯ್ತು. ಇದೀಗ ಸಮೀರ್ ಜೊತೆಯಲ್ಲಿ ನಾವೆಲ್ಲಾ ಇದ್ದೇವೆ. ನಮ್ಮೆಲ್ಲರನ್ನು ಪರಿಚಯಿಸಿ ಒಂದೆಡೆ ಸೇರಿಸುತ್ತಿರೋದು ಸೌಜನ್ಯ. ದೇವಸ್ಥಾನದ ಕುರಿತು ಹೇಳಿಕೆಯು ದಾಖಲೆಯಲ್ಲಿವೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ ಅಥವಾ ಹಿಂದೂ ದೇಗುಲಕ್ಕೆ ಅವಮಾನ ಮಾಡಲಾಗ್ತಿದೆ ಎಂದು ಪ್ರಕರಣವನ್ನು ತಿರುಚಲಾಗುತ್ತಿದೆ ಎಂದು ಗಿರೀಶ್ ಬೇಸರ ಹೊರ ಹಾಕಿದರು. 

ಮಂಜುನಾಥ ಸ್ವಾಮಿ ಕಣ್ಣು ಬಿಟ್ಟಿದ್ದು, ನಿಜವಾದ ಆರೋಪಿಗಳು ಯಾರು ಅನ್ನೋದು ಸಮಾಜದ ಮುಂದೆ ಬರಲಿದೆ. ಆ ಮಂಜುನಾಥ ಸ್ವಾಮಿ ಕೃಪೆಯಿಂದಲೇ ನಾವು ಇಲ್ಲಿ ಸೇರುವಂತಾಗಿದೆ ಎಂದು ಸಮೀರ್ ಎಂ.ಡಿ. ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌