
ಬೆಂಗಳೂರು, [ನ.30]: ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಇಂಬು ನೀಡುವಂತೆ, ಸ್ಫೋಟಕ ಮಾಹಿತಿವೊಂದು ಬಯಲಾಗಿದೆ.
ಪ್ರಶ್ನೆ ಪತ್ರಿಕೆ ಲೀಕ್ ಮಾಡಲು ನನಗೆ ನಿವೃತ್ತ ಐಪಿಎಸ್ ಅಧಿಕಾರಿ ಸಾಥ್ ನೀಡಿದ್ದಾರೆ ಎಂದು ಶಿವಕುಮಾರ್ ಸಿಸಿಬಿ ಎದುರು ಸತ್ಯ ಬಾಯ್ಬಿಟ್ಟಿದ್ದಾನೆ.
ಜೊತೆಗೆ ವೀರಪ್ಪನ್ ಕಾರ್ಯಾಚರಣೆಗೆ ರಚಿಸಿದ್ದ STF ತಂಡದಲ್ಲಿ ಅಧಿಕಾರಿ ಕೆಲಸ ಮಾಡಿದ್ದಾನೆ ಎಂದು ಶಿವಕುಮಾರ್ ಹೇಳಿದ್ದಾನೆ.
ಐಪಿಎಸ್ ಅಧಿಕಾರಿ KPSC ಪ್ರಶ್ನೆ ಪತ್ರಿಕೆಯ ಸೋರಿಕೆಯಲ್ಲೂ ಬಾಗಿಯಾಗಿದ್ದ ಎಂದು ಬಾಯಿ ಬಿಟ್ಟಿದ್ದು, ಅಕ್ರಮದಲ್ಲಿ ನಿವೃತ್ತ ಐಜಿಪಿ ಹೆಸರು ಕೇಳಿ ಬಂದಿದ್ರಿಂದ ಸಿಸಿಬಿ ಅಧಿಕಾರಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕಲ್ಮಠದ ಶಾಲೆಯ ಟೇರೆಸ್ನಲ್ಲಿ ಪತ್ರಿಕೆ ಬಗ್ಗೆ 119 ವಿದ್ಯಾರ್ಥಿಗಳಿಗೆ ರಾಜಾರೋಷವಾಗಿ ಶಿವಕಮಾರ್ ಪ್ರಶ್ನೆ ಪತ್ರಿಕೆ ಬಗ್ಗೆ ಮಾಹಿತಿ ನೀಡುತ್ತಿದ್ದ. ಇನ್ನೂ ಈ ಪ್ರಕರಣವನ್ನು ಬೇದಿಸಲು ಸ್ವತಃ ಸಿಸಿಬಿ ಎಸಿಪಿ ವೇಣುಗೋಪಾಲ್, ಡಾಕ್ಟರ್ ವೇಷ ಧರಿಸಿ ಅಖಾಡಕ್ಕಿಳಿದ್ರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ