ಮತ್ತೋರ್ವ ಕಾಂಗ್ರೆಸ್ ಹಿರಿಯ ನಾಯಕ ನಿಧನ

Published : Nov 30, 2018, 01:47 PM ISTUpdated : Nov 30, 2018, 01:51 PM IST
ಮತ್ತೋರ್ವ  ಕಾಂಗ್ರೆಸ್  ಹಿರಿಯ ನಾಯಕ ನಿಧನ

ಸಾರಾಂಶ

 ಇತ್ತೀಚೆಗಷ್ಟೇ ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಹಾಗೂ ಅಂಬರೀಶ್ ನಿಧನರಾಗಿದ್ದರು. ಇದೀಗ ಮತ್ತೋರ್ವ ಕಾಂಗ್ರೆಸ್ ನಾಯಕ ವಿಧಿವಶರಾಗಿದ್ದಾರೆ.

ಬೆಂಗಳೂರು, [ನ.30]:  ಕಾಂಗ್ರೆಸ್​ ಹಿರಿಯ ನಾಯಕ ಮೀರ್ ಅಜೀಜ್ ಅಹಮ್ಮದ್(85) ಅವರು ನಿನ್ನೆ [ಗುರುವಾರ] ತಡರಾತ್ರಿ ನಿಧನರಾಗಿದ್ದಾರೆ.

 ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮೀರ್ ಅಜೀಜ್ ಅಹಮ್ಮದ್ ಅವರು ಬೆಂಗಳೂರಿನ ವಿಕ್ರಮ್​ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ನಿನ್ನೆ ಕೊನೆಯುಸಿರೆಳೆದರು.

2003 ರಲ್ಲಿ  ವಿಧಾನ ಪರಿಷತ್​ನ ಮಾಜಿ ಸದಸ್ಯರಾಗಿದ್ದರು. ಅಜೀಜ್​ ಎಂಎಂಎಸ್ ಹಾಗೂ ಎಸ್​ಟಿಎ ಬಸ್​ನ ಮಾಲೀಕರಾಗಿದ್ದರು.

ಅಜೀಜ್ ಅಹಮದ್ ಅವರಿಗೆ ಇಬ್ಬರು ಗಂಡು ಹಾಗೂ ಹೆಣ್ಣು ಮಕ್ಕಳು ಇದ್ದಾರೆ. ಮೊನ್ನೇ ಅಷ್ಟೇ  ಕಾಂಗ್ರೆಸ್, ಅಂಬರೀಶ್ ಹಾಗೂ ಜಾಫರ್ ಶರೀಫ್ ಅವರನ್ನ ಕಳೆದುಕೊಂಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಆಳಂದ ಮತಚೋರಿ ಆರೋಪ ರಾಜಕೀಯ ಪ್ರೇರಿತ: ಎಸ್‌ಐಟಿ ಕ್ರಮದ ವಿರುದ್ಧ ಸುಭಾಷ್ ಗುತ್ತೇದಾರ್ ಕಿಡಿ