ಗೊತ್ತೆ ಇಲ್ಲದ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಪತ್ತೆ ಹಚ್ಚಿದ್ದು ಹೇಗೆ? ಸಿನಿಮೀಯ ಕಾರ್ಯಾಚರಣೆ!

By Chethan Kumar  |  First Published Sep 5, 2024, 7:26 PM IST

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ನಟ ದರ್ಶನ್ ಗ್ಯಾಂಗ್ ನಡೆಸಿದ ಕ್ರೌರ್ಯ ಬಯಲಾಗಿದೆ. ಇದೇ ವೇಳೆ ನಕಲಿ ಅಕೌಂಟ್ ಮೂಲಕ ಮೆಸೇಜ್ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಪತ್ತೆ ಹಚ್ಚಿದ್ದು ಹೇಗೆ ಅನ್ನೋ ರೋಚಕ ಕತೆ ಕೂಡ ಬಯಲಾಗಿದೆ. ಸಿನಿಮಾ ಶೈಲಿಯಲ್ಲೇ ರೇಣುಕಾಸ್ವಾಮಿಯನ್ನು ಪತ್ತೆ ಹಚ್ಚಿದ ವಿವರ ಇಲ್ಲಿದೆ.


ಬೆಂಗಳೂರು(ಸೆ.05) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಚಾರ್ಜ್ ಶೀಟ್ ಇದೀಗ ನಟ ದರ್ಶನ್ ಗ್ಯಾಂಗ್ ನಡೆಸಿದ ಕ್ರೌರ್ಯದ ಕತೆ ಹೇಳುತ್ತಿದೆ. ನಕಲಿ ಖಾತೆ ಮೂಲಕ ಮೆಸೇಜ್ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಪತ್ತೆ ಹಚ್ಚಿ ಬೆಂಗಳೂರಿಗೆ ಕರೆಯಿಸಿ ಹತ್ಯೆ ಮಾಡಿದ್ದರು. ಹೆಸರು, ಊರು, ಯಾರು ಎಂದೇ ಗೊತ್ತಿಲ್ಲದ ನಕಲಿ ಖಾತೆಯ ಅಸಲಿ ವ್ಯಕ್ತಿಯನ್ನು ಪತ್ತೆ ಹಚ್ಚಲು ದರ್ಶನ್ ಗ್ಯಾಂಗ್ ಸಿನಿಮೀಯ ರೀತಿ ಕಾರ್ಯಾಚರಣೆ ಮಾಡಿದೆ. ಈ ಕುರಿತು ರೋಚಕ ಮಾಹಿತಿ ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. 

ರೇಣುಕಾಸ್ವಾಮಿ ನಕಲಿ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಪವಿತ್ರಾ ಗೌಡಗೆ ಮಸೇಜ್, ಫೋಟೋಗಳನ್ನು ಕಳುಹಿಸುತ್ತಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಇನ್‌ಸ್ಟಾಗ್ರಾಂನಲ್ಲಿ 4 ಖಾತೆ ಹೊಂದಿದ್ದ ಪವಿತ್ರಾ ಗೌಡ ಹೆಚ್ಚು ಬಳಸುತ್ತಿದ್ದ pavithragowda777_official ಖಾತೆಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ. ನಟ ದರ್ಶನ್ ಹಾಗೂ ಪವಿತ್ರಾ ಗೌಡ ಲಿವಿಂಗ ರಿಲೇಶನ್‌ಶಿಪ್‌ನಲ್ಲಿದ್ದರು ಅನ್ನೋದನ್ನು ಚಾರ್ಜ್‌ಶೀಟ್ ಉಲ್ಲೇಖಿಸಿದೆ.

Latest Videos

undefined

ಪತ್ನಿ ವಿಜಯಲಕ್ಷ್ಮೀ ಊಟ ತರ್ತಾಳೆಂದು ಜೈಲೂಟ ಬಿಟ್ಟು ಕುಳಿತ ನಟ ದರ್ಶನ್!

ನಕಲಿ ಖಾತೆಗಳ ಮೂಲಕ ಅಶ್ಲೀಲ ಫೋಟೋ, ಮೆಸೇಜ್ ಮಾಡುತ್ತಿದ್ದ ರೇಣುಕಾಸ್ವಾಮಿ ಕುರಿತು ಪವಿತ್ರಾ ಗೌಡ ಆಪ್ತರಾದ ಪವನ್ ಹಾಗೂ ವಿನಯ್‌ಗೆ ಮಾಹಿತಿ ನೀಡಿದ್ದರು. ಇವರಿಬ್ಬರು ನಟ ದರ್ಶನ್‌ಗೆ ಈ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆತನ ಪತ್ತೆ ಹಚ್ಚಿ ಬೆಂಗಳೂರಿಗೆ ಕಿಡ್ನಾಪ್ ಮಾಡಿಕೊಂಡು ಬರಲು ದರ್ಶನ್ ಸೂಚಿಸಿದ್ದಾನೆ.

ಫೆಬ್ರವರಿ 24 ರಂದು ಪವಿತ್ರಾ, ಪವನ್ ಹಾಗೂ ವಿನಯ್ ಸೇರಿ ಪ್ಲಾನ್ ಮಾಡಿದ್ದಾರೆ. ಬಳಿಕ ಪವಿತ್ರಾ ಗೌಡ, ರೇಣುಕಾಸ್ವಾಮಿ ಜೊತೆ ಚಾಟ್ ಆರಂಭಿಸಿದ್ದಾರೆ. ಜೂನ್ 3 ರಂದು ರೇಣುಕಾಸ್ವಾಮಿ ಮೆಸೇಜ್‌ಗೆ ತಕ್ಷಣವೇ ಪವಿತ್ರಾ ಗೌಡ ರಿಪ್ಲೇ ಮಾಡಿದ್ದಾಳೆ.  ನಕಲಿ ಖಾತೆಯಲ್ಲಿದ್ದ ರೇಣುಕಾಸ್ವಾಮಿ ಪತ್ತೆ ಹಚ್ಚಲು ಪ್ಲಾನ್ ಮಾಡಲಾಗಿತ್ತು. ಡ್ರಾಪ್ ಮಿ ಯುವರ್ ನಂಬರ್( ನಿನ್ನ ನಂಬರ್ ಕಳುಹಿಸು) ಎಂದು ಪವಿತ್ರಾ ಗೌಡ ರಿಪ್ಲೇ ಮಾಡಿದ್ದಾಳೆ. ಚಾಟಿಂಗ್ ಮಾಡುತ್ತಿದ ಪವಿತ್ರಾ ಗೌಡ ನಂಬರ್ ಕೇಳುತ್ತಿದ್ದಾಳೆ ಎಂದು ರೇಣುಕಾಸ್ವಾಮಿ ಕ್ಲೀನ್ ಬೋಲ್ಡ್ ಆಗಿದ್ದ. ನಂಬರ್ ಯಾಕೆ? ವಿಳಾಸ, ಲೋಕೇಶನ್ ಸೇರಿ ಎಲ್ಲವನ್ನೂ ಕಳುಹಿಸಿದ್ದ.

ಈ ನಂಬರ್ ಪಡೆದ  ಪವಿತ್ರಾ ಗೌಡ, ಪವನ್‌ಗೆ ಕಳುಹಿಸಿದ್ದಾಳೆ. ಇತ್ತ ಪವನ್ ತಾನೆ ಪವಿತ್ರಾ ಗೌಡ ಎಂದು ರೇಣುಕಾಸ್ವಾಮಿ ಜೊತೆ ಚಾಟಿಂಗ್ ಆರಂಭಿಸಿದ್ದಾನೆ. ಚಾಟ್ ವೇಳೆ ರೇಣುಕಾಸ್ವಾಮಿ ತನ್ನ ವಿಳಾಸ, ಕೆಲಸ ಸೇರಿದಂತೆ ಎಲ್ಲವನ್ನೂ ತಿಳಿಸಿದ್ದ. ಇಲ್ಲಿಂದ ಕಾರ್ಯಾಚರಣೆ ಶುರುವಾಗಿದೆ. ನಂಬರ್, ಲೋಕೇಶನ್ ಎಲ್ಲಾ ಪಡೆದು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಪತ್ತೆ ಹಚ್ಚಿದೆ. ಸಿನಿಮೀಯ ರೀತಿಯಲ್ಲಿ ಪತ್ತೆ ಹಚ್ಚಿ ಬಳಿಕ ಹತ್ಯೆ ಮಾಡದ ಇಂಚಿಂಚು ಘಟನೆ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ. 

ಚಾರ್ಜ್​ಶೀಟ್​ನಲ್ಲಿ ಬಯಲಾಯ್ತು ದರ್ಶನ್​ ಗ್ಯಾಂಗ್​ನ ಕ್ರೌರ್ಯ! 17 ಆರೋಪಿಗಳು, 231 ಸಾಕ್ಷಿಗಳು, ಮುಗೀತಾ ಡಿ ಗ್ಯಾಂಗ್​​ ಕಥೆ?
 

click me!