ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜೂನ್.20) ಸಂಜೆ ಮೈಸೂರಿಗೆ ಆಗಮಿಸಲಿದ್ದು, ಎರಡನೇ ಬಾರಿಗೆ ಮೈಸೂರಿನ ಅದೇ ಹೋಟೆಲ್‌ನಲ್ಲಿ ಮೋದಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೈಸೂರು, (ಜೂನ್.20): ವಿಶ್ವ ಯೋಗ ದಿನಾಚರಣೆಗೆ ಮೈಸೂರು ಸಜ್ಜಾಗಿದ್ದು, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುತ್ತಿರುವುದದು ವಿಶೇಷ. ಜಗತ್ ಪ್ರಸಿದ್ಧ ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಹಿನ್ನೆಲೆ ಅರಮನೆಯ ಪೂರ್ವ ದಿಕ್ಕಿನಲ್ಲಿ ಭವ್ಯ ವೇದಿಕೆ ನಿರ್ಮಾಣ ಮಾಡಲಾಗಿದೆ.ಜಯ ಮಾರ್ತಾಂಡ ದ್ವಾರದ ಬಳಿ ಭವ್ಯ ವೇದಿಕೆ ನಿರ್ಮಾಣವಾಗಿದ್ದು, ಅರಮನೆ ಆವರಣದ ಬಹುತೇಕ ಕಡೆ LED ಪರದೆಗಳ ಅಳವಡಿಕೆ ಮಾಡಲಾಗಿದೆ. ಇನ್ನು ಮೋದಿ ಆಗಮನದ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವರಣದಲ್ಲಿ ಹೆಚ್ಚಿನ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇಂದು(ಸೋಮವಾರ) ನಿಗದಿತ ಸಮಯಕ್ಕೆ ಅಂದ್ರೆ ಸಂಜೆ 6 ಗಂಟೆ ನಗರದ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಲಿದ್ದು.ಕೇಂದ್ರ ಸರ್ಕಾರದ ಪಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಸಂಜೆ 7:30ಕ್ಕೆ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಲಿದ್ದಾರೆ.ತದನಂತರ ರಾತ್ರಿ 8:15ರ ವೇಳೆಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆಯಲಿದ್ದಾರೆ.
PM Narendra Modi Karnataka Visit LIVE: ರಾಜ್ಯಕ್ಕೆ ಪ್ರಧಾನಿ ಮೋದಿ, ಹಲವು ಕಾಮಗಾರಿಗಳಿಗೆ ಚಾಲನೆ
ಮೋದಿ ತಂಗೊದು ಅದೇ ಕೊಠಡಿಯಲ್ಲಿ
ಹೌದು.. ಪ್ರಧಾನಿ ಅವರು ಸಾಂಂಸ್ಕೃತಿಕ ನಗರ ಮೈಸೂರಿಗೆ ಬರುತ್ತಿರುವುದು ಇದು 6ನೇ ಬಾರಿ. ಈ ಪೈಕಿ ಇದು ಎರಡನೇ ಬಾರಿ ಮೈಸೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಾಪ್ ಸಿಂಹ ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ರಾಡಿಸನ್ ಹೋಟೆಲ್‌ನಲ್ಲೇ ತಂಗಿದ್ದರು,
ಇದೀಗ ಬೆಂಗಳೂರಿನಿಂದ ಇಂದು (ಸೋಮಾರ) ಸಂಜೆ ಮೈಸೂರಿಗೆ ಆಗಮಿಸಲಿರುವ ಮೋದಿ ರಾತ್ರಿ ನಗರದ ಅದೇ Radisson ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಮುಖ್ಯವಾಗಿ ಹೊಟೆಲ್‌ನ ಅದೇ 4ನೇ ಮಹಡಿಯ ಪ್ರೆಸಿಡೆಂಟ್ ಸೂಟ್‌ನಲ್ಲಿ ಮೋದಿ ತಂಗಲು ವ್ಯವಸ್ಥೆ ಮಾಡಿರುವುದು ವಿಶೇಷ.
ಮೋದಿ ತಂಗಲಿರುವ ಮಹಡಿ ಎಲ್ಲಾ ಕೊಠಿಡಿಗಳನ್ನ ಖಾಲಿ ಮಾಡಿಸಲಾಗಿದ್ದು, ಹೊಟೆಲ್ ಸುತ್ತ ಎಸ್‌ಪಿಜಿ ನಿರಂತರ ತಪಾಸಣೆ ನಡೆಯುತ್ತಿದೆ. ಡಾಗ್ ಸ್ಕ್ವಾಡ್, ಬಾಂಬ್ ನಿಷ್ಕ್ರಿಯ ದಳಗಳಿಂದ ನಿರಂತರ ತಪಾಸಣೆ ನಡೆಸಲಾಗುತ್ತಿದ್ದು, ಹೆಜ್ಜೆ ಹೆಜ್ಜೆಗೂ ಪೊಲೀಸರ ಸರ್ಪಗಾವಲು. ಅಲ್ಲದೇ ಹೊಟೆಲ್ ಕಟ್ಟಡದಲ್ಲಿರುವ ಮಾಲ್ ಆಫ್ ಮೈಸೂರನ್ನು ಪ್ರಧಾನಿ ಭದ್ರತಾ ಪಡೆ ಬಂದ್ ಮಾಡಿಸಿದೆ.