ಬೆಳಗಾವೀಲಿ ನಾಳೆ ಮೋದಿ ರೋಡ್‌ ಶೋ

By Kannadaprabha News  |  First Published Feb 26, 2023, 12:00 AM IST

ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಆಯೋಜಿಸಲಾಗಿರುವ ಬೃಹತ್‌ ಬಹಿ​ರಂಗ ಸಮಾ​ವೇ​ಶ​ ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ, ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಸಮಾವೇಶ ನಡೆಯಲಿರುವ ಮಾಲಿನಿ ಸಿಟಿಯವರೆಗೆ 8 ಕಿ.ಮೀ. ದೂರ ಬೃಹತ್‌ ರೋಡ್‌ ಶೋ ಕೂಡ ನಡೆಸುವ ಸಾಧ್ಯತೆ. 


ಶಿವಮೊಗ್ಗ/ಬೆಳಗಾವಿ(ಫೆ.26): ಪ್ರಧಾನಿ ನರೇಂದ್ರ ಮೋದಿಯವರು ನಾಳೆ(ಸೋಮವಾರ ರಾಜ್ಯಕ್ಕೆ ಆಗಮಿಸಲಿದ್ದು, ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ, ಬೆಳಗಾವಿಗೆ ಭೇಟಿ ನೀಡುವ ಮೋದಿ, ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ಯ ಎರಡನೇ ಕಂತಾಗಿ 8 ಕೋಟಿ ರೈತರ ಖಾತೆಗೆ 16 ಸಾವಿರ ಕೋಟಿ ರು.ಹಣ ಬಿಡುಗಡೆ ಮಾಡಲಿದ್ದಾರೆ. ಜೊತೆಗೆ, ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಆಯೋಜಿಸಲಾಗಿರುವ ಬೃಹತ್‌ ಬಹಿ​ರಂಗ ಸಮಾ​ವೇ​ಶ​ ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ, ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಸಮಾವೇಶ ನಡೆಯಲಿರುವ ಮಾಲಿನಿ ಸಿಟಿಯವರೆಗೆ 8 ಕಿ.ಮೀ. ದೂರ ಬೃಹತ್‌ ರೋಡ್‌ ಶೋ ಕೂಡ ನಡೆಸುವ ಸಾಧ್ಯತೆಯಿದೆ. ಇದೇ ವೇಳೆ, ಬೆಳಗಾವಿಯ ನವೀಕೃತ ರೈಲು ನಿಲ್ದಾಣ ಲೋಕಾರ್ಪಣೆ ಸೇರಿ 6,125 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಲಿದ್ದಾರೆ.

ಶಿವಮೊಗ್ಗ ಕಾರ‍್ಯಕ್ರಮ

Tap to resize

Latest Videos

ಮಧ್ಯಾಹ್ನ 12ಕ್ಕೆ ಶಿವಮೊಗ್ಗಕ್ಕೆ ಆಗಮನ:
- 450 ಕೋಟಿ ರು.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣ ಉದ್ಘಾಟನೆ.
- ಬಳಿಕ, 990 ಕೋಟಿ ರು. ವೆಚ್ಚದ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ.
- 197 ಕೋಟಿ ರು.ವೆಚ್ಚದ ಕೋಟೆಗಂಗೂರಿನ ನೂತನ ರೈಲ್ವೆ ಕೋಚ್‌ ಫ್ಯಾಕ್ಟರಿಗೆ ಶಂಕುಸ್ಥಾಪನೆ.
- 215 ಕೋಟಿ ರು. ವೆಚ್ಚದ ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಗೆ ಶಿಕಾರಿಪುರದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ, ಮೇಗರವಳ್ಳಿಯಿಂದ ಆಗುಂಬೆವರೆಗಿನ ರಸ್ತೆ ಅಗಲೀಕರಣ, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ತೀರ್ಥಹಳ್ಳಿ ತಾಲೂಕಿನ ಭಾರತೀಪುರದಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ.
- ಜೊತೆಗೆ, ‘ಜಲಜೀವನ್‌ ಮಿಷನ್‌‘ ಯೋಜನೆಯಡಿ ವಿವಿಧ ಗ್ರಾಮಗಳಿಗೆ 950 ಕೋಟಿ ರು.ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಹಾಗೂ 895 ಕೋಟಿ ರು.ವೆಚ್ಚದ ಸ್ಮಾರ್ಚ್‌ಸಿಟಿ ಯೋಜನೆಗಳಿಗೆ ಶಂಕುಸ್ಥಾಪನೆ.
- ಶಿಮುಲ್‌ ಶಿವಮೊಗ್ಗ ಕೇಂದ್ರ ಡೇರಿ ಆವರಣದಲ್ಲಿ 45 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ 2 ಲಕ್ಷ ಲೀಟರ್‌ ಸಾಮರ್ಥ್ಯದ ಹಾಲು, ಮೋಸರು ಮತ್ತು ಮಜ್ಜಿಗೆ ಪ್ಯಾಕಿಂಗ್‌ ಘಟಕ ಕಟ್ಟಡ ಉದ್ಘಾಟನೆ.
- ಶಿವಮೊಗ್ಗ ಎಪಿಎಂಸಿ ಆವರಣದಲ್ಲಿ 8 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಮ್ಯಾಮ್‌ಕೋಸ್‌ನ 4 ಅಂತಸ್ತುಗಳ ಆಡಳಿತ ಕಚೇರಿ ಕಟ್ಟಡದ ಉದ್ಘಾಟನೆ.

ಮೋದಿ ಬಂದ ಮೇಲಷ್ಟೇ ದೇಶ ಅಭಿವೃದ್ಧಿ ಆಗಿಲ್ಲ; ನಾನು ಶ್ರಮಿಸಿದ್ದೇನೆ: ಎಚ್‌ಡಿಕೆ

ಬೆಳಗಾವಿ ಕಾರ‍್ಯಕ್ರಮ

- ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ಯ ಎರಡನೇ ಕಂತಾಗಿ 8 ಕೋಟಿ ರೈತರ ಖಾತೆಗೆ 16 ಸಾವಿರ ಕೋಟಿ ರು.ಹಣ ಬಿಡುಗಡೆ.
- 190 ಕೋಟಿ ರು.ವೆಚ್ಚದಲ್ಲಿ ನವೀಕರಣಗೊಂಡ ಬೆಳಗಾವಿ ರೈಲ್ವೆ ನಿಲ್ದಾಣ ಉದ್ಘಾಟನೆ.
- 922 ಕೋಟಿ ರು.ವೆಚ್ಚದಲ್ಲಿ ಬೆಳಗಾವಿ ಲೋಂಡಾ ರೇಲ್ವೆ ಲೈನ್‌ ಡಬ್ಲಿಂಗ್‌ ಕಾಮಗಾರಿ ಸೇರಿ ರೈಲ್ವೆ ಇಲಾಖೆಯ ಒಟ್ಟು 1,022 ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ.
- ‘ಜಲಜೀವನ್‌ ಮಿಷನ್‌‘ ಯೋಜನೆಯಡಿ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ 1,030 ಕೋಟಿ ರು.ಗಳ ವೆಚ್ಚದ 6 ಯೋಜನೆಗಳಿಗೆ ಶಂಕುಸ್ಥಾಪನೆ.
- ಚೆನ್ನಮ್ಮ ವೃತ್ತದಿಂದ ಸಮಾವೇಶ ನಡೆಯಲಿರುವ ಮಾಲಿನಿ ಸಿಟಿಯವರೆಗೆ 8 ಕಿ.ಮೀ.ದೂರ ಬೃಹತ್‌ ರೋಡ್‌ ಶೋ.
- ಬಳಿಕ, ಮಾಲಿನಿ ಸಿಟಿಯಲ್ಲಿ ನಡೆಯಲಿರುವ ಬೃಹತ್‌ ಬಹಿ​ರಂಗ ಸಮಾ​ವೇ​ಶ​ದಲ್ಲಿ ಭಾಗಿ. ಸಮಾವೇಶಕ್ಕಾಗಿ ಸುಮಾರು 10 ಎಕರೆಯಷ್ಟುವಿಸ್ತೀರ್ಣವಾದ ಪ್ರದೇಶದಲ್ಲಿ ಬೃಹತ್‌ ಪೆಂಡಾಲ್‌ ನಿರ್ಮಾಣ. ಸಮಾವೇಶಕ್ಕೆ ಸುಮಾರು 3 ಲಕ್ಷ ಜನ ಆಗಮನ ನಿರೀಕ್ಷೆ.

click me!