ಕಲಬುರಗಿ ಸೇರಿ 5 ಜಿಲ್ಲೆಗಳ 52 ಸಾವಿರ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ
ವರ್ಲ್ಡ್ ಬುಕ್ ಆಫ್ ರಿಕಾರ್ಡ್ ತಂಡದಿಂದ ಸರ್ಕಾರಕ್ಕೆ ಪ್ರಮಾಣ ಪತ್ರ ವಿತರಣೆ
ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯಿಂದ ದಾಖಲೆಗಳ ಪರಿಶೀಲನೆ
ಕಲಬುರಗಿ (ಜ.19): ತಾಂಡಾ ನಿವಾಸಿಗಳಿಗೆ ದೇಶದಲ್ಲೇ ಐತಿಹಾಸಿಕವಾಗಿ ಗುರುವಾರ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡದಲ್ಲಿ 5 ಜಿಲ್ಲೆಗಳ 342 ಗ್ರಾಮಗಳ 52,072 ತಾಂಡಾ ನಿವಾಸಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಕಕಾಲದಲ್ಲಿ ಹಕ್ಕು ಪತ್ರವನ್ನು ನೀಡಿದರು. ಈ ಕಾರ್ಯಕ್ರಮದ ಕುರಿತಾಗಿ ವರ್ಲ್ಡ್ ಬುಕ್ ಆಫ್ ರಿಕಾರ್ಡ್ ತಂಡವು ರಾಜ್ಯ ಸರ್ಕಾರಕ್ಕೆ ವೇದಿಕೆಯ ಮೇಲೆಯೇ ಪ್ರೋವಿಜನಲ್ ಪ್ರಮಾಣ ಪತ್ರವನ್ನು ನೀಡಿತು.
ಪ್ರಮಾಣ ಪತ್ರ ಸ್ವೀಕರಿಸಿ ಕಂದಾಯ ಸಚಿವ: ವರ್ಲ್ಡ್ ಬುಕ್ ಆಫ್ ರಿಕಾರ್ಡ್ ಕರ್ನಾಟಕ ತಂಡದ ಉಪಾಧ್ಯಕ್ಷೆ ವಸಂತ ಕವಿತಾ (ಕೆ.ಸಿ.ರೆಡ್ಡಿ) ಅವರು, ರಾಜ್ಯ ಕಂದಾಯ ಸಚಿವ ಆರ್. ಅಶೋಕ ಮತ್ತು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರಿಗೆ ಪ್ರಮಾಣ ಪತ್ರ ವಿತರಿಸಿದರು. ಹಕ್ಕು ಪತ್ರ ವಿತರಣೆ ಕುರಿತಂತೆ ಬೇಡಿಕೆ ಕೋರಿಕೆ ಗುರುವಾರ ವರ್ಲ್ಡ್ ಆಫ್ ರಿಕಾರ್ಡ್ ಕರ್ನಾಟಕ ತಂಡದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಬಂದು ಖುದ್ದಾಗಿ ದಾಖಲೀಕರಣ ಮಾಡಿದರು.
undefined
ಹೊಸ ದಾಖಲೆ ಬರೆದ ದಳಪತಿ: 'ಏಷ್ಯಾ ಬುಕ್ ಆಫ್ ರೆಕಾರ್ಡ್ಸ್' ದಾಖಲೆಗೆ ಪಾತ್ರರಾದ ಹೆಚ್.ಡಿ.ಕೆ
3 ತಿಂಗಳಿಂದ ದಾಖಲೆಗಳ ಪರಿಶೀಲನೆ: ಈ ಕುರಿತು ಪ್ರತಿಕ್ರಿಯೆ ನೀಡಿದ ವಸಂತ ಕವಿತಾ (ಕೆ.ಸಿ.ರೆಡ್ಡಿ) ಅವರು, ಕಲಬುರಗಿ ಜಿಲ್ಲೆಯ ಸಾರ್ವಜನಿಕರು ಮತ್ತು ಅಧಿಕಾರಿಗಳ ಕೋರಿಕೆಯಂತೆ ನಮ್ಮ ತಂಡ ಕಳೆದ 3 ತಿಂಗಳಿನಿಂದ 5 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯಿಂದ ದಾಖಲೆಗಳನ್ನು ಪಡೆದು ಪರಿಶೀಲಿಸಿ ಇಂದು ದಾಖಲೀಕರಣಕ್ಕೆ ಆಗಮಿಸಿತ್ತು. ಇಂದಿನ ಕಾರ್ಯಕ್ರಮದಲ್ಲಿ ಎಷ್ಟು ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರದ ನಿಖರ ಸಂಖ್ಯೆ ಪಡೆದ ನಂತರ ಅಂತಿಮವಾಗಿ ರೆಕಾರ್ಡ್ ಪ್ರಮಾಣ ಪತ್ರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ನಮಗೆ ಈಗ ಸ್ವಾತಂತ್ರ್ಯ ಸಿಕ್ಕಿದೆ- ಹಕ್ಕು ಪತ್ರ ಪಡೆದ ವ್ಯಕ್ತಿ ಬಾವುಕ: ನಮ್ಮ ದೇಶದ ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿದ್ದೇನೆ. ಅವರ ಕೈಯಿಂದಲೇ ಹಕ್ಕು ಪತ್ರ ಪಡೆದಿದ್ದೇನೆ. ಇನ್ನು ನಾನೂ ಸತ್ರೂ ಚಿಂತೆಯಿಲ್ಲ. ಮೋದಿ ಭೇಟಿ ಮಾಡಿದಿನಲ್ವಾ ಜೀವನಕ್ಕೆ ಇಷ್ಟು ಸಾಕು. ವೇದಿಕೆ ಹತ್ತಿ ಮೋದಿ ಕೈಯಿಂದ ಹಕ್ಕು ಪತ್ರ ಪಡೆದುಕೊಂಡ ಲಂಬಾಣಿ ವ್ಯಕ್ತಿಯ ಭಾವುಕವಾಗಿ ಮಾತನಾಡಿದರು. ಮೋದಿ ಹಕ್ಕು ಪತ್ರ ಕೊಟ್ಟು ನಮಗೆ ಸ್ವಾತಂತ್ರ ಕೊಟ್ಟಿದ್ದಾರೆ. ನಿಜಕ್ಕೂ ನಮಗೆ ನಿಜವಾದ ಸ್ವಾತಂತ್ರ್ಯ ಈಗ ಸಿಕ್ಕಿರುವುದು. ಮೋದಿ ಕೈಯಿಂದ ಹಕ್ಕು ಪತ್ರ ಪಡೆದ ಲಂಬಾಣಿ ಕುಟುಂಬಗಳ ಸಂಭ್ರಮ ವ್ಯಕ್ತಪಡಿಸಿವೆ.
ಕರ್ನಾಟಕ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ: ಐದು ಜಿಲ್ಲೆಗಳ ಬಂಜಾರ ಸಮುದಾಯದ ಮಹಿಳೆಯರಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಣೆ ಮಾಡಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಜನವರಿ ತಿಂಗಳಲ್ಲಿ ನಮ್ಮ ದೇಶದ ಸಂವಿಧಾನ ರಚನೆಗೊಂಡ ತಿಂಗಳು ಆಗಿದೆ. ಸಾಮಾಜಿಕ ನ್ಯಾಯದ ಅಡಿ ಕರ್ನಾಟಕ ಸರ್ಕಾರ ಬಹುದೊಡ್ಡ ಹೆಜ್ಜೆ ಇಟ್ಟಿದೆ. 50 ಸಾವಿರ ಅಧಿಕ ಕುಟುಂಬಕ್ಕೂ ಹಕ್ಕು ಪತ್ರ ಸಿಕ್ಕಿದೆ. ರಾಯಚೂರು ಕಲಬುರಗಿ, ಯಾದಗಿರಿ, ಬೀದರ್ ಸೇರಿ ಜಿಲ್ಲೆಯ ಎಲ್ಲಾ ಜನರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಬೊಮ್ಮಾಯಿ ಮತ್ತು ಅವರ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
Kalaburagi: ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್‌ಗೂ ಮಾನ್ಯಕೇಟಕ್ಕೂ ನಂಟು: ಮುನ್ನೆಲೆಗೆ ಬಂದ ಇತಿಹಾಸ
ಬಂಜಾರ ಸಮುದಾಯ ಹೊಸತಲ್ಲ: ಈ ಕಲಬುರಗಿ ಕ್ಷೇತ್ರವು ನನಗೆ ಹೊಸತೇನಲ್ಲ. ಆದರೆ, ಬಂಜಾರ ಸಮುದಾಯ ಕೂಡ ನನಗೆ ಹೊಸತಲ್ಲ. ರಾಜಸ್ಥಾನದ ಪೂರ್ವ ಪಶ್ಚಿಮದಲ್ಲೂ ಬಂಜಾರ್ ಸಮುದಾಯ ಇದೆ. 1994 ರ ವಿಧಾನಸಭೆ ಚುನಾವಣೆ ಸಮಯದಲ್ಲಿ ನಾನು ಇಲ್ಲಿಗೆ ಟ್ರೈನ್ ನಲ್ಲಿ ಬಂದಿದ್ದೆನು. ಆಗ ಬಂಜಾರ ಸಮುದಾಯದ ಪ್ರೀತಿ ಸಿಕ್ಕಿತ್ತು. ಅದನ್ನು ನಾನು ಮರೆತಿಲ್ಲ. ಕರ್ನಾಟಕ ಸರ್ಕಾರ ಇಂದು ಒಳ್ಳೆಯ ಕೆಲಸ ಮಾಡಿದೆ. ನೀವು ಇಂದು ನಿಶ್ಚಿಂತೆ ಇಂದ ಇರಿ. ನಿಮ್ಮ ಮಗ ದೆಹಲಿಯಲ್ಲಿ ಕುಳಿತಿದ್ದಾನೆ. ಬಂಜಾರ ಸಮುದಾಯದ ಮಗ, ನಾನು ನಿಮ್ಮ ಮಗ ಎಂದು ಪರೋಕ್ಷವಾಗಿ ಮೋದಿ ಹೇಳಿದ್ದಾರೆ.