6ನೇ ದಿನಕ್ಕೆ ಕಾಲಿಟ್ಟ ಪಂಚಮಸಾಲಿ ಧರಣಿ: ರಾಜ್ಯ ಸರ್ಕಾರದ ವಿರುದ್ಧ ಮೋದಿಯವರಿಗೆ ಪತ್ರದ ಮೂಲಕ ದೂರು

By Govindaraj SFirst Published Jan 19, 2023, 12:39 PM IST
Highlights

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಮತ್ತೆ ಹೋರಾಟ ಮುಂದುವರೆದಿದ್ದು, ಬಸವಜಯ ಮೃತೃಂಜಯ ಸ್ವಾಮೀಜಿ ನೇತೃತ್ವದ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ. 
 

ಹಾವೇರಿ (ಜ.19): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಮತ್ತೆ ಹೋರಾಟ ಮುಂದುವರೆದಿದ್ದು, ಬಸವಜಯ ಮೃತೃಂಜಯ ಸ್ವಾಮೀಜಿ ನೇತೃತ್ವದ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರದ ವಿರುದ್ಧ ಮೋದಿಯವರಿಗೆ ಪತ್ರದ ಮೂಲಕ ಸ್ವಾಮೀಜಿ ದೂರು ಕೊಟ್ಟಿದ್ದಾರೆ. ಜ.16ನೇ ತಾರೀಖು ಮೋದಿ, ಅಮಿತ್ ಶಾ, ನಡ್ಡಾರಿಗೆ ಲಿಖಿತ ಪತ್ರವನ್ನು ಸ್ವಾಮೀಜಿ ಬರೆದಿದ್ದಾರೆ. ರಾಜ್ಯ ಸರ್ಕಾರ ಸತತವಾಗಿ ನಮಗೆ ಮೋಸ ಮಾಡಿದ್ದಾರೆ. ನಮಗೆ ನರೇಂದ್ರ ಮೋದಿಯವರ ಬಗ್ಗೆ ನಂಬಿಕೆಯಿದೆ. ಪ್ರಧಾನಿಗಳಿಗೆ ಪತ್ರ ಬರೆದು ನಮ್ಮ ಬೇಡಿಕೆಯನ್ನ ತಿಳಿಸಿದ್ದೇವೆ. ಜೊತೆಗೆ 10 ಪ್ರಮುಖ ವಿಚಾರಗಳನ್ನ ಜಯಮೃತ್ಯುಂಜಯ ಸ್ವಾಮೀಜಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

1. ಲಿಂಗಾಯತ ಪಂಚಮಸಾಲಿ ಸಮಾಜ 1.30 ಲಕ್ಷ ಜನರಿರುವ ಸಮುದಾಯ 2a ಮೀಸಲಾತಿಗಾಗಿ ನಾವು ಎರಡು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಅದ್ರೆ ನಮ್ಮ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ. ಹಲವು ಬಾರಿ ನಮಗೆ ರಾಜ್ಯ ಸರ್ಕಾರ ಮೋಸ ಮಾಡಿದೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿ: ವಚನಾನಂದ ಸ್ವಾಮೀಜಿ

2. ಯಡಿಯೂರಪ್ಪರಿಗೆ ನಮ್ಮ ಸಮುದಾಯ ಬೆಂಬಲ ನೀಡಿದ್ವಿ, ನಂತರ ಬೊಮ್ಮಾಯಿಯವರಿಗೆ ಬೆಂಬಲ ನೀಡಿದ್ವಿ.

3. ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಪ್ರಭಾವವಾಗುತ್ತೆ.

4. ನಾವು ಕಳೆದ ಬಾರಿ ಬೆಜೆಪಿಗೆ ಬೆಂಬಲ ನೀಡಿದ್ವಿ. ಅದ್ರೆ ಈ ಬಾರಿಯ ಚುನಾವಣೆಯಲ್ಲಿ ನಾವು ಯಾರಿಗೆ ಬೆಂಬಲ‌ ನೀಡಬೇಕು ಎಂದು ನಿರ್ಧಾರ ಮಾಡ್ತೀವಿ.

5. ನೀವು ಮೀಸಲಾತಿ ಕಲ್ಪಿಸಿಲ್ಲ ಅಂದ್ರೆ ನಮ್ಮ ಹೋರಾಟ ತೀವ್ರವಾಗುತ್ತೆ.

6. ನಮ್ಮ ಸಮುದಾಯ ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದೇವೆ.

7. ಪ್ರಧಾನಿಗಳಾದ ನಿಮ್ಮ ಮೇಲೆ ನಮ್ಮ ಸಮುದಾಯ ನಂಬಿಕೆಯಿಟ್ಟಿದೆ.

8. ಈ ಪತ್ರದ ಮೂಲಕ ನಾವು‌ ನಮ್ಮ ಸಮುದಾಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ನೀವು ಕೂಡಲೇ ಇದಕ್ಕೆ ಸ್ಪಂದಿಸಬೇಕು.

9. ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಈ ಮೀಸಲಾತಿ ಬರುತ್ತೆ. ದಯವಿಟ್ಟು ಮುಖ್ಯಮಂತ್ರಿಗಳಿಗೆ ಪ್ರಧಾನಿಗಳಾದ ನೀವು ಸೂಚನೆ ನೀಡಿ.

10. 224 ಕ್ಷೇತ್ರಕ್ಕೆ ಹೋಗಿ ಜನರ ಬಳಿಗೆ ಹೋಗಿ ಯಾರಿಗೆ ಬೆಂಬಲ ಕೊಡಬೇಕು ಎಂದು ಚರ್ಚೆ ಮಾಡ್ತೀವಿ. 

ಮೀಸಲಾತಿ ನೀಡದಿದ್ದರೆ ಸಿಎಂ ನಿವಾಸ ಮುಂಭಾಗ ಧರಣಿ: ಜಯಮೃತ್ಯುಂಜಯ ಸ್ವಾಮೀಜಿ

ನಮ್ಮ ಸಮುದಾಯವನ್ನ ಕಡೆಗಣಿಸಿದ್ರೇ ನಾವು‌ ನಿಮ್ಮನ್ನ ಚುನಾವಣೆಯಲ್ಲಿ ಕಡೆಗಣಿಸುತ್ತೇವೆ. ಚುನಾವಣೆಯಲ್ಲಿ ನಮ್ಮ ಸಮುದಾಯ ನಿಮಗೆ ಉತ್ತರ ನೀಡುತ್ತೆ. ಕೂಡಲೇ ನಮ್ಮ ಬೇಡಿಕೆ ಈಡೇರಿಸಿ, ಇಲ್ಲ ನಮ್ಮ ದಾರಿ ನಾವು‌ ನೋಡಿಕೊಳ್ಳುತ್ತೇವೆ ಎಂದು ಪತ್ರದ ಮೂಲಕ ಸ್ವಾಮೀಜಿಗಳು ಎಚ್ಚರಿಕೆ ಕೊಟ್ಟಿದ್ದಾರೆ.

click me!