Modi Bengaluru Visit Live Updates: ಮೋದಿಗೆ ಕೆಂಪೇಗೌಡ ಪೇಟಾ ತೊಡಿಸಿದ ಸಿಎಂ

108 ಅಡಿ ಎತ್ತರದ ಕೆಂಪೇಗೌಡ ಗೌಡ ಕಂಚಿನ ಪ್ರತಿಮೆ, ಬೆಂಗಳೂರು-ಮೈಸೂರು-ಚೆನ್ನೈ ವಂದೇ ಭಾರತ ರೈಲಿಗೆ ಚಾಲನೆ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮೋದಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಕಾಶಿ ದರ್ಶನ ಹಾಗೂ ದಕ್ಷಿಣ ಭಾರದ ಮೊದಲ ಬೆಂಗಳೂರು-ಮೈಸೂರು-ಚೆನ್ನೈ ರೈಲಿಗೆ ಹಸರು ನಿಶಾನೆ ತೋರಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ಕನಕದಾಸ ಪ್ರತಿಮೆಗೆ ಶಿರ ಭಾಗಿ ವಂದಿಸಿದ್ದು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ, ಸಾಮಾಜಿಕ ಏಕತೆ ಸಾರಿದ ಸಂತ ಎಂದು ಟ್ವೀಟ್ ಮಾಡಿದ್ದಾರೆ. ಅತ್ಯಾಧುನಿಕ ಸೌಲಭ್ಯವುಲ್ಳ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟನೆಗೊಳಿಸಿದ್ದಾರೆ. ನಂತರ 108 ಅಡಿ ಎತ್ತರದ ಕೆಂಪೇಗೌಡ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಸಾರ್ವಜನಿಕರನ್ನು ಉದ್ದೇಶಿಸಿ, ಮೋದಿ ಮಾತನಾಡಿದ್ದು, ಬೆಂಗಳೂರನ್ನು ಸ್ಟಾರ್ಟ್ ಅಪ್ ಕ್ಯಾಪಿಟಲ್ ಎಂದು ಬಣ್ಣಿಸಿದ್ದು, ಹೊಸ ಹೊಸ ಐಡಿಯಾಗಳು ಮೊಳಕೆ ಒಡೆಯುವುದೇ ಇಲ್ಲಿ ಅಂದಿದ್ದಾರೆ. 

1:37 PM

ಕೋವಿಡ್‌ ಕಾಲದಲ್ಲೂ ಬೆಂಗಳೂರಲ್ಲಿ ಹೂಡಿಕೆ: ಮೋದಿ

ನಾಡಪ್ರಭುವಿಗೆ ನಮೋ ನಮಃ ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿ ಮೋದಿ, ಜನತೆಗೆ ಮೋದಿ ಧನ್ಯವಾದ ಹೇಳಿದ್ದಾರೆ. ಕರ್ನಾಟಕ ಹಾಗೂ ಬೆಂಗಳೂರನ್ನು ಹಾಡಿ ಹೊಗಳಿದ್ದಾರೆ. ಬೆಂಗಳೂರು ವಿವಿಧ ವಿಷಯಗಳಲ್ಲಿ ಜಗತ್ತಿಗೇ ಪ್ರೇರಣೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ವಂದೇ ಭಾರತ್‌ ಎಕ್ಸಪ್ರೆಸ್‌ ನವ ಭಾರತದ ಹೆಗ್ಗುರುತು. ರೈಲು ಪ್ರಯಾಣಕ್ಕೆ ವೇಗ ದೊರಕಿದ್ದು, ಇದ ದೇಶದ ಪ್ರಗತಿಯ ಸಂಕೇತ. ಬೆಂಗಳೂರು ದೇಶದ ಸ್ಟಾರ್ಟ್‌ಅಪ್‌ ರಾಜಧಾನಿ . ಬೆಂಗಳೂರಿಂದ ಭಾರತಕ್ಕೆ ಶಕ್ತಿ. ಬೆಂಗ್ಳೂರು ಸ್ಟಾರ್ಟ್‌ಅಪ್‌ ಪ್ರತಿನಿಧಿ ಎಂದೂ ಹೇಳಿದರು. 

ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಸರಕಾರವಿದೆ. ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ಕೋವಿಡ್‌ ಕಾಲದಲ್ಲೂ ಹೂಡಿಕೆಯಾಗಿದೆ. 2014ರ ಮುಂಚೆ ಪ್ರಗತಿಯ ದೂರದೃಷ್ಟಿಯೇ ಇರಲಿಲ್ಲ. ಇದೀಗ ಮೂಲಸೌಕರ್ಯ ಅಭಿವೃದ್ಧಿಯಾಗಿದ್ದು. 1.1ಲಕ್ಷ ರೂ. ಹೂಡಿಕೆ ಗುರಿ ಹೊಂದಿದೆ. ದೇಶಾದ್ಯಂತ 3.5 ಕೋಟಿ ಮನೆ,.ಕರ್ನಾಟಕದಲ್ಲಿ 8ಲಕ್ಷ ಮನೆ ನೀಡುವ ಗುರಿ ಇದೆ ಎಂದಿದ್ದಾರೆ ಮೋದಿ. 

1:27 PM

ಪ್ರಧಾನಿ ಮೋದಿ ವಿಶ್ವ ನಾಯಕ:ನಿರ್ಮಲಾನಂದ ಶ್ರೀ -

ವಿಶ್ವನಾಯಕರಾಗಿರುವ ಪ್ರಧಾನಿ ಮೋದಿಯವರೆ ಎಂದು ಉಲ್ಲೇಖ ಮಾಡಿದ ಶ್ರೀ ನಿರ್ಮಲಾನಂದ ಶ್ರೀಗಳು. ಜೂನ್ 20, 2020 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರತಿಮೆ ಕೆಲಸ ಆರಂಭವಾಯಿತು. ಕೋವಿಡ್ ಸಮಯದಲ್ಲೂ ಕೆಲಸ ನಿಲ್ಲಿಸಲಿಲ್ಲ. ಭಾರತ ಉಳಿದರೆ ನಾಡು ಉಳಿಯುತ್ತದೆ. ನಾಡು ಉಳಿದರೆ ಭಾರತ ಉಳಿಯುತ್ತದೆ ಎಂದು ವಿವೇಕಾನಂದ ಹೇಳಿದ್ದಾರೆ. ಒಂದು ಕಾಲದಲ್ಲಿ ಜಗತ್ತನ್ನು ಕೇಳಿ ಭಾರತ ಆಡಳಿತ ನಡೆಸಬೇಕಿತ್ತು. ಇಂದು ಭಾರತ ಸಲಹೆ ಪಡೆದು ಜಗತ್ತು ಆಡಳಿತ ಮಾಡ್ತಿದೆ ಕರ್ಮ ಮತ್ತು ಜ್ಞಾನ ಮೋದಿ ಅಳವಡಿಸಿಕೊಂಡಿದ್ದಾರೆ, ಎಂದು ಮೋದಿಯನ್ನು ಹೊಗಳಿದ ನಿರ್ಮಲಾನಂದ ಶ್ರೀಗಳು.

ಪ್ರತಿಮೆ ಅನಾವರಣ ಮಾಡಿದ್ದಕ್ಕೆ ಪ್ರಧಾನಿ ಮೋದಿಗೆ ಅಭಿನಂದನೆ. ಮನುಷ್ಯ ಶಕ್ತಿಯನ್ನು ಕೆಂಪೇಗೌಡರು ಕೂಡಿಸಿದ್ರು. ಇಂದು ಅದೇ ಕೆಲಸವನ್ನು ಪ್ರಧಾನಿ ಮೋದಿ ಮಾಡ್ತಾ ಇದ್ದಾರೆ.
ತಮ್ಮ ಭಾಷಣದಲ್ಲಿ ದೇವೆಗೌಡ, ಎಸ್ ಎಂಕೆ ಯಡಿಯೂರಪ್ಪರನ್ನು ನೆನೆದ ಶ್ರೀಗಳು.

1:25 PM

ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿರುವ ಮೋದಿಗೆ ಧನ್ಯವಾದಗಳು: ಬೊಮ್ಮಾಯಿ

ಕೆಂಪೇಗೌಡ ಏರ್ಪೋಟ್ ದೇಶದ ಎರಡನೇ ಅತಿ ದೊಡ್ಡ ಏರ್ಪೋಟ್ ಆಗಿ ಪರಿವರ್ತನೆ ಆಗಿದೆ. ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ವಿಶ್ವಮಾನ್ಯವಾಗಿದೆ. ದೂರದೃಷ್ಟಿಯ ನಾಯಕ ಕೆಂಪೇಗೌಡರು. ಪ್ರಗತಿಪರ ಚಿಂತನೆಗೆ, ಅಭಿವೃದ್ಧಿ ಗೆ ಗೌರವ ಇಂದು ಸಲ್ಲಿಸಿದಂತಾಗಿದೆ. ಕೆಂಪೇಗೌಡರ ಮಾಧ್ಯಮದಲ್ಲಿ ನಮ್ಮ ಸರ್ಕಾರ ಅಭಿವೃದ್ಧಿ ಮಾಡ್ತದೆ. ಅದಕ್ಕಾಗಿಯೆ ಪ್ರಗತಿಯ ಪ್ರತಿಮೆ ಎಂದು ಹೆಸರು ಇಟ್ಟಿದ್ದೇವೆ. ಇಂದು ಮೋದಿ ಭಾರತವನ್ನ ಬಹಳ ಎತ್ತರಕ್ಕೆ ತೆಗೆದುಕೊಂಡ ಹೋಗಿದ್ದಾರೆ. ನವ ಭಾರತ ನಿರ್ಮಾಣ ಮಾಡುತ್ತಿರುವ ಮೋದಿಯವರ ಮೂಲಕ ಕೆಂಪೇಗೌಡ ಪ್ರತಿಮೆ ಅನಾವರಣ ಆಗಿದ್ದು ದೈವ ಇಚ್ಛ. ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿರುವ ಮೋದಿಗೆ ಧನ್ಯವಾದಗಳು ಎಂದಿದ್ದಾರೆ. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ. 

1:14 PM

ದೇಶದ ಪ್ರಗತಿಗೆ ಅಗತ್ಯವಾದ ಹೊಸ ಆಲೋಚನೆಗಳು ಹುಟ್ಟುವುದೇ ಬೆಂಗಳೂರಲ್ಲಿ: ಮೋದಿ

ಸಿಲಿಕಾನ ಸಿಟಿ, ಉದ್ಯಾನ ನಗರಿ ಎಂದೇ ಖ್ಯಾತಿ ಪಡೆದ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಸಾರ್ಟ್ ಅಪ್ ಕ್ಯಾಪಿಟಲ್ ಎಂಬ ಹೊಸ ಹೆಸರು ನೀಡಿದ್ದು, ಬೆಂಗಳೂರು ಭಾರತೀಯ ಆರ್ಥಿಕ ಪ್ರಗತಿಗೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದ್ದಾರೆ. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

1:10 PM

ಬೆಂಗಳೂರು ಸ್ಟಾರ್ಟ್ ಅಪ್‌ ಕಂಪನಿಗಳನ್ನು ಪ್ರತಿನಿಧಿಸುತ್ತದೆ: ಮೋದಿ

ಕೆಂಪೇಗೌಡ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದು, ಬೆಂಗಳೂರು ಸ್ಟಾರ್ಟ್‌ಅಪ್ ಅನ್ನು ಪ್ರತಿನಿಧಿಸುತ್ತಿದೆ. ಯುವ ಶಕ್ತಿ ಬಳಕೆಗೆ ಹೇಳಿ ಮಾಡಿಸಿದ ನಗರವೆಂದು ಮೋದಿ ಹೇಳಿದ್ದಾರೆ. 

12:59 PM

'ಭಾರತ್ ಗೌರವ್ ಕಾಶಿ ಯಾತ್ರಾ ರೈಲು ಸಂಚಾರ ಸೌಲಭ್ಯ ಪಡೆದ ಮೊದಲ ರಾಜ್ಯ'

ಕರ್ನಾಟಕ-ಕಾಶಿ ಗೌರವ್ ದರ್ಶನ ರೈಲಿಗೆ ಚಾಲನೆ ನೀಡಿದ ಮೋದಿ. 
 
ಭಾರತ್ ಗೌರವ್ ಕಾಶಿ ಯಾತ್ರಾ ರೈಲು ಸಂಚಾರ ಸೌಲಭ್ಯವನ್ನು ಪಡೆದ ಮೊದಲ ರಾಜ್ಯವಾದ ಕರ್ನಾಟಕಕ್ಕೆ ಅಭಿನಂದನೆಗಳು. ಈ ರೈಲು ಕಾಶಿಯನ್ನು ಕರ್ನಾಟಕಕ್ಕೆ ಹತ್ತಿರವಾಗಿಸುತ್ತದೆ. ಯಾತ್ರಿಗಳು ಮತ್ತು ಪ್ರವಾಸಿಗರು ಕಾಶಿ, ಅಯೋಧ್ಯಾ ಹಾಗು ಪ್ರಯಾಗ್ ರಾಜ್ ಗೆ ಭೇಟಿ ನೀಡುವುದು ಸುಲಭವಾಗುತ್ತದೆ. pic.twitter.com/oTymcVgXTs

— Narendra Modi (@narendramodi)

12:48 PM

ಮೋದಿಗೆ ಕರ್ನಾಟಕದ ವಿಶೇಷ ಕಲಾಕೃತಿ ಕಿನ್ನಾಳ ಕಲಾಕೃತಿ ಗಿಫ್ಟ್ ನೀಡಿದ ಶಶಿಕಲಾ ಜೊಲ್ಲೆ

ಹಲವು ಯೋಜನೆಗಳ ಉದ್ಘಾಟನೆ ಹಿನ್ನೆಲೆಯಲ್ಲಿ  ಉದ್ಯಾನನಗರಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಕೊಪ್ಪಳದ ಕಿನ್ನಾಳ ಕಲಾಕೃತಿಯನ್ನು ಕೊಡುಗೆಯಾಗಿ ನೀಡಲಾಯಿತು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

12:22 PM

ಬೆಂಗಳೂರಿನ ಭೇಟಿಯನ್ನು ಸ್ಮರಣೀಯವಾಗಿಸಿದ್ದಕ್ಕೆ ಧನ್ಯವಾದಗಳು: ಮೋದಿ ಟ್ವೀಟ್

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಮೋದಿಗೆ ಬೆಂಗಳೂರಿಗರು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದ್ದು, ಧನ್ಯವಾದ ಹೇಳಿ ಮೋದಿ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ. 

ಈ ಕ್ರಿಯಾಶೀಲ ಬೆಂಗಳೂರಿನ ಭೇಟಿಯನ್ನು ಅತ್ಯಂತ ಸ್ಮರಣೀಯವಾಗಿಸಿದ್ದಕ್ಕೆ ಧನ್ಯವಾದಗಳು pic.twitter.com/z8I4bcBZzy

— Narendra Modi (@narendramodi)

12:19 PM

ಕೆಂಪೇಗೌಡ ಕಂಚಿನ ಪ್ರತಿಮೆ ಉದ್ಘಾಟಿಸಿದ ಮೋದಿ

ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ನಗರಾದ್ಯಂತ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2 ಉದ್ಘಾಟಿಸಿದ ನಂತರ ಕೆಂಪೇಗೌಡರ ಪ್ರತಿಮೆ ಉದ್ಘಾಟಿಸಿದರು. 108 ಅಡಿ ಎತ್ತರದ ಪ್ರತಿಮೆ ಇದಾಗಿದ್ದು ಪ್ರಗತಿಯ ಪ್ರತೀಕವಾಗಿದೆ. 

11:19 AM

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2 ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2 ಉದ್ಘಾಟಿಸಿದ್ದಾರೆ. 13,000 ಕೋಟಿ ವೆಚ್ಚದಲ್ಲಿ ಟರ್ಮಿನಲ್‌ 2 ಸಿದ್ಧವಾಗಿದ್ದು 3.5 ಕೋಟಿ ಪ್ರಯಾಣಿಕೆರಿಗೆ ಇದು ಅನುಕೂಲಕರವಾಗಲಿದೆ. ಅತ್ಯಾಧುನಿಕ ವಿನ್ಯಾಸ ಹಾಗೂ ಸೌಲಭ್ಯವಿರುವ ಈ ಟರ್ಮಿನಲ್ ವಿದೇಶ ವಿಮಾನ ನಿಲ್ದಾಣಕ್ಕೆ ಸಮನಾಗಿದೆ. 

ಸುದ್ಗಿಗೆ ಇಲ್ಲಿ ಕ್ಲಿಕ್ ಮಾಡಿ

11:15 AM

ಅತ್ಯಾಧುನಿಕ ತಂತ್ರಜ್ಞಾನಉಳ್ಳ  ಟರ್ಮಿನಲ್ 2 ನಿಲ್ದಾಣವನ್ನು ಉದ್ಘಾಟಿಸಿದ ಮೋದಿ

ಅತ್ಯಾಧುನಿಕ ತಂತ್ರಜ್ಞಾನಉಳ್ಳ  ಟರ್ಮಿನಲ್ 2 ನಿಲ್ದಾಣವನ್ನು ಉದ್ಘಾಟಿಸಿದ ಮೋದಿ. ಪ್ರಧಾನಿಗೆ ಸಾಥ್ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ , ಸಂಪುಟ ಸಚಿವರು. ಟರ್ಮಿನಲ್ 2 ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್.

10:37 AM

ಮಹರ್ಷಿ ವಾಲ್ಮಿಕಿ ಪ್ರತಿಮೆಗೆ ಗೌರವ ಸಲ್ಲಿಸಿದ ಮೋದಿ

ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕನಕದಾಸರ ಜಯಂತಿಯಂದು ಮೋದಿ ದಾಸರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಜೊತೆಗೆ, ಮಹರ್ಷಿ ವಾಲ್ಮಿಕಿ ಪ್ರತಿಮೆಗೂ ನಮನ ಸಲ್ಲಿಸಿದ್ದಾರೆ. 

Paid tributes to Maharshi Valmiki Ji in Bengaluru today morning. pic.twitter.com/CreEfRB8Tb

— Narendra Modi (@narendramodi)

10:34 AM

ವಿಮಾನ ನಿಲ್ದಾಣದ ಸುತ್ತ ತುಂತುರು ಮಳೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮೋಡ ಕವಿದ ವಾತಾವರಣವಿದ್ದು, ವಿಮಾನನಿಲ್ದಾಣದ ಬಳಿ ತುಂತುರು ಮಳೆಯಾಗುತ್ತಿದೆ. ಪ್ರಧಾನಿ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. 11-20 ರ ಸುಮಾರಿಗೆ ಏರ್ ಪೋರ್ಟ್ ಗೆ ಆಗಮಿಸುತ್ತಾರೆ ಪ್ರಧಾನಿ ಮೋದಿ. ವಿಐಪಿ ಗೇಟ್ ಮೂಲಕ ನೇರವಾಗಿ ಟರ್ಮಿನಲ್ 2 ಗೆ ಆಗಮಿಸುವ ಪ್ರಧಾನಿ. ಟರ್ಮಿನಲ್ 2 ಉದ್ಘಾಟನೆ ಮಾಡಿ ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ ತೆರಳುವ ಮೋದಿ.

10:33 AM

ಮೋದಿ ಸಮಾವೇಶಕ್ಕೆ ಆಗಮಿಸೋ ಕಾರ್ಯಕರ್ತರಿಗೆ ವಿಶೇಷ ಭೋಜನದ ವ್ಯವಸ್ಥೆ

ಮೋದಿ ಸಮಾವೇಶಕ್ಕೆ ಆಗಮಿಸೋ ಕಾರ್ಯಕರ್ತರಿಗೆ ವಿಶೇಷ ಭೋಜನದ ವ್ಯವಸ್ಥೆ. ಬರೋಬ್ಬರಿ 3 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನದ ಊಟಕ್ಕೆ ಸಿದ್ಧಗೋಳ್ತೀರೋ ಪಲಾವ್, ಮೈಸೂರ್ಪಾಕ್, ಟೊಮೊಟೊ ಬಾತ್, ಮೊಸರನ್ನ. ಸಮಾವೇಶ ನಡೆಯುವ ಸ್ಥಳದ ಸಮೀಪವೇ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. 120 ಕೌಂಟರ್ ಗಳ ಮೂಲಕ ಊಟ ಬಡಿಸಲು ಸಿದ್ಧತೆ. ಸಮಾವೇಶಕ್ಕೆ ಆಗಮಿಸಿರೋ ಎಲ್ಲರಿಗೂ ಸಹ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ. 

10:30 AM

ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಕನಸಾಗಿತ್ತು: ಪ್ರಯಾಣಿಕರು

ವಂದೇಭಾರತ್ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿಕೆ. ಈ ರೈಲಿನಲ್ಲಿ ಪ್ರಯಾಣಮಾಡಲಿಕ್ಕೆ ತುಂಬಾ ದಿನಗಳಿಂದ ಕಾಯುತ್ತಿದ್ವಿ. ಇದೀಗ ದಕ್ಷಿಣ ಭಾರತಕ್ಕೆ ಮೊದಲ ರೈಲು ಬಂದಿದೆ..ಬಹಳ ಸಂತೋಷವಾಗುತ್ತಿದೆ. ಟ್ರೈನ್ ನಲ್ಲಿ ಹೋಗಲಿಕ್ಕೆ ಬಹಳ ಅರಾಮಾಗಿದೆ ಇದೆ...ತುಂಬಾ ಐಷಾರಾಮಿಯಾಗಿದೆ..ನಮಗೆ ಬಹಳ ಸಂತೋಷವಾಗುತ್ತಿದೆ. ದೇಶಕ್ಕೆ ಇದೇ ರೀತಿ ಟ್ರೈನ್ ಸಂಖ್ಯೆ ಹೆಚ್ಚಾಗಲಿ.

10:19 AM

ಪ್ರಗತಿಯ ಪ್ರತಿಮೆ | Statue of Prosperity

10:17 AM

ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಮೋದಿ ಚಾಲನೆ

ದಕ್ಷಿಣ ಭಾರತದ ಮೊಟ್ಟಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಚಾಲನೆ ನೀಡಿದರು. ಅದರೊಂದಿಗೆ ಕಾಶಿ ದರ್ಶನ ಯಾತ್ರೆಯ ಭಾರತ್‌ ಗೌರವ್‌ ಟ್ರೇನ್‌ಅನ್ನೂ ಮೋದಿ ಅನಾವರಣ ಮಾಡಿದರು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ಸಂಪರ್ಕ ಸೌಲಭ್ಯದ ಜತೆಗೆ ವಾಣಿಜ್ಯ ಚಟುವಟಿಕೆಗಳನ್ನೂ ಹೆಚ್ಚಿಸುತ್ತದೆ. ಅದು ಜೀವನವನ್ನು ಹೆಚ್ಚು ಸುಗಮಗೊಳಿಸುತ್ತದೆ. ಈ ರೈಲಿನ ಸಂಚಾರಕ್ಕೆ ಬೆಂಗಳೂರಿನಲ್ಲಿ ಹಸಿರು ನಿಶಾನೆ ತೋರಿಸಿದ್ದಕ್ಕೆ ಸಂತಸವಾಗಿದೆ. pic.twitter.com/GtAxs6E846

— Narendra Modi (@narendramodi)

10:16 AM

ಕಾಶಿ ದರ್ಶನ ರೈಲಿಗೂ ಚಾಲನೆ ನೀಡಿದ ಮೋದಿ, ಹೇಗಿದ ಇರದ ವಿಶೇಷತೆ?

ಕರ್ನಾಟಕ-ಭಾರತ್‌ ಗೌರವ್‌ ಕಾಶಿ ದರ್ಶನ ರೈಲಿನ ಮೊದಲ ಪ್ರವಾಸ ನವೆಂಬರ್‌ 11ರಂದು ಬೆಂಗಳೂರಿನಿಂದ ಆರಂಭಗೊಳ್ಳುತ್ತಿದ್ದು, ಈಗಾಗಲೇ ಯಾತ್ರಿಗಳ ಬುಕಿಂಗ್‌ ಆರಂಭವಾಗಿದ, ಭರ್ಜರಿ ಪ್ರತಿಕ್ರಿಯೆ ಲಭ್ಯವಾಗಿದೆ. ಪ್ರಯಾಣಿಕರು ಇರುವ ರೈಲಿಗೆ ಮೋದಿ ಚಾಲನೆ ನೀಡಿದ್ದಾರೆ. 

ಈ ಟ್ರೈನಿನ ವಿಶೇಷತೆ ಏನು?

10:09 AM

ಪ್ರಧಾನಿ ಮೋದಿ ಕಾರ್ಯಕ್ರಮದ ಲೈವ್‌

10:08 AM

ಮೋದಿ ಬೆಂಗಳೂರಲ್ಲಿ ಇದ್ದಾರೆ, ಎಲ್ಲರೂ ಮೆಟ್ರೋ ಬಳಸಿದರೆ ಒಳಿತು

ಮೋದಿ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರಿನ ರಸ್ತೆ ಸಂಚಾರ ಬದಲಾಯಿಸಿದ್ದು, ಸಾಧ್ಯವಾದಷ್ಟು ಮೆಟ್ರೋ ಬಳಸಿದರೆ ಒಳಿತು. 

ಮಾರ್ಗ ಬದಲಾವಣೆ

10:07 AM

ದಕ್ಷಿಣದ ಮೊದಲ ವಂದೇ ಭಾರತ್‌ ರೈಲಿಗೆ ಇಂದು ಮೋದಿ ಚಾಲನೆ

ದೇಶದ ಐದನೇ ಮತ್ತು ದಕ್ಷಿಣ ಭಾರತದ ಮೊದಲ ಹೈಸ್ಪೀಡ್‌ ವಂದೇ ಭಾರತ್‌ ರೈಲಿಗೆ ಪ್ರಧಾನಿ ಮೋದಿ, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ನಿಲ್ದಾಣದಲ್ಲಿ ಶುಕ್ರವಾರ ಚಾಲನೆ ನೀಡಲಿದ್ದಾರೆ. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:06 AM

ವಂದೇ ಭಾರತ್ ರೈಲು ಹತ್ತಿದ ಮೋದಿ

ಮೈಸೂರು-ಚೆನ್ನೈ ಸೂಪರ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದು, ಈ ದೃಶ್ಯ ಹೀಗಿರಲಿದೆ. 

Beautiful early morning views of Express at KSR Bengaluru today

The inaugural special train of Mysuru - Chennai will be flagged off by Hon'ble PM Shri Ji today from KSR Bengaluru. pic.twitter.com/D0EypWgtg6

— Office of Raosaheb Patil Danve (@raosaheboffice)

10:03 AM

ರೈಲ್ವೆ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ

ರೈಲ್ವೆ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ. ರೈಲು ನಿಲ್ದಾಣದ ಸುತ್ತ ಪೊಲೀಸರ ಸರ್ಪಗಾವಲು. ಸಾರ್ವಜನಿಕರತ್ತ ಕೈ ಬೀಸಿದ ಪ್ರಧಾನಿ ನರೇಂದ್ರ ಮೋದಿ. ವಂದೇ ಭಾರತ್ ,ಕಾಶಿ ದರ್ಶನ ರೈಲುಗಳಿಗೆ ಚಾಲನೆ ನೀಡಲಿರೋ ಪ್ರಧಾನಿ.

10:03 AM

ತಮ್ಮ ಶೂ ಬಿಚ್ಚಿಟ್ಟು ಕನಕದಾಸರ ಪ್ರತಿಮೆಗೆ ಪುಶ್ಪಾರ್ಚನೆ ಮಾಡಿದ ಮೋದಿ

ತಮ್ಮ ಶೂ ಬಿಚ್ಚಿಟ್ಟು ಕನಕದಾಸರ ಪ್ರತಿಮೆಗೆ ಪುಶ್ಪಾರ್ಚನೆ. ಹೆಗಲಲ್ಲಿ ಕಂಬಳಿ ಹಾಕಿಕೊಂಡು ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ. ಕಾರಿನಿಂದ ಕೆಳಗಿಳಿದು ಕೈಬೀಸಿದ ಪ್ರಧಾನಿ. 

9:51 AM

ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಆಗೋ ಸಾಧ್ಯತೆ

ಬೆಂಗಳೂರಿಗೆ ಪ್ರಧಾನಿ ಮೊದಿ ಆಗಮನ ಹಿನ್ನಲೆಯಲ್ಲಿ ಎಲ್ಲೆಡೆ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಬದಲಿ ವ್ಯವಸ್ಥೆ ಮಾಡಲಾಗಿದೆ. ಬೆಳ್ಳಂಬೆಳಗ್ಗೆ ಏರ್ಪೋರ್ಟ್ ಗೆ ಆಗಮಿಸಿದ ಪ್ರಯಾಣಿಕರು. ಏರ್ಪೋರ್ಟ್ ನ ಡಿಪಾರ್ಚರ್ ಬಳಿ ಪ್ರಯಾಣಿಕರ ದಂಡು. ಮಧ್ಯಾಹ್ನ, ಸಂಜೆ ಸಮಯದ ವಿಮಾನಗಳಿಗೆ ಬೆಳಿಗ್ಗೆ ಯೇ ಬಂದು ಕಾದುಕುಳಿತ ಪ್ರಯಾಣಿಕರು ತಮ್ಮ ಗಮ್ಯ ತಲುಪಲು ಪರದಾಡುತ್ತಿದ್ದಾರೆ. 

9:49 AM

ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದ ಕೇಂದ್ರ ರೈಲ್ವೆ ಸಚಿವ

ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದ ಕೇಂದ್ರ ರೈಲ್ವೆ ಸಚಿವ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣನ್ ಆಗಮನ. ವಂದೇ ಭಾರತ್ ಹಾಗೂ ಭಾರತ್ ಗೌರವ್ ರೈಲಿಗೆ ಚಾಲನೆ ಹಿನ್ನಲೆ‌. ಕೆಲವೇ ಕ್ಷಣಗಳಲ್ಲಿ ಮೋದಿ ಆಗಮನ ಹಿನ್ನಲೆ ಕೇಂದ್ರ ರೈಲ್ವೇ ‌ಸಚಿವರಿಂದ ಪೂರ್ವ ಸಿದ್ದತೆ ಪರಿಶೀಲನೆ.

9:48 AM

ಮೋದಿ ಕಾರ್ಯಕ್ರಮ: ಬಿಎಂಟಿಸಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತ

ಮೋದಿ ಕಾರ್ಯಕ್ರಮ ಹಿನ್ನಲೆಯಲ್ಲಿ ಬಿಎಂಟಿಸಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿವೆ. ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ಹಿನ್ನಲೆ ಬೆಳಗ್ಗೆ 10 ಗಂಟೆಯಿಂದ 12ಗಂಟೆವರೆಗೂ ಬಸ್ ಸಂಚಾರ ಸ್ಥಗಿತವಾಗಿವೆ. ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬರುವ ವಾಹನಗಳ ಕಾರ್ಯಾಚರಣೆ ಸ್ಥಗಿತ. ಮೆಜೆಸ್ಟಿಕ್ ಬರುವ ಪ್ರಯಾಣಿಕರನ್ನು ಹತ್ತಿರದ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಸೂಚನೆ.  ಕಾನೂನು ಸುವ್ಯವಸ್ಥೆ ಹಿನ್ನಲೆ 2 ಗಂಟೆ ಮೆಜೆಸ್ಟಿಕ್‌ಗೆ ಬರುವ ಬಸ್ ಸಂಚಾರ ಸ್ಥಗಿತ ಮಾಡುವಂತೆ ಪೊಲೀಸರಿಂದ ಮನವಿ. ಉಪ್ಪಾರ್‌ಪೇಟೆ ಪೊಲೀಸ್ ಸ್ಟೇಷನ್‌ನಿಂದ ಸಾರಿಗೆ ನಿಗಮಕ್ಕೆ ಮನವಿ ಮಾಡಲಾಗಿದೆ. ಪ್ರಯಾಣಿಕರು ಸಹಕರಿಸುವಂತೆ ಮನವಿ‌ ಮಾಡಿದ ಸಾರಿಗೆ ಇಲಾಖೆ.

9:47 AM

ಮೋದಿ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗೋ ಸಾಧ್ಯತೆ

ಮೋದಿ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗುತ್ತಾ? ಈಗಾಗಲೇ ರಾಜಧಾನಿಯ ಹಲವೆಡೆ ತುಂತುರು ಮಳೆ ಆರಂಭವಾಗಿದ್ದು, ರಾಜ್ಯದಲ್ಲಿ ಹಿಂಗಾರು ಮಳೆ ಚುರುಕುಗೊಂಡ ಹಿನ್ನೆಲೆ ಮಳೆ . ಬೆಂಗಳೂರು ಸುತ್ತಮುತ್ತ ಇವತ್ತು ಮಳೆ ಮುನ್ಸೂಚನೆ ನೀಡಲಾಗಿದ್ದು, ಒಟ್ಟು 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ನವೆಂಬರ್‌ 13 ಮತ್ತು 14ರಂದು ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ. ದಕ್ಷಿಣ ಒಳನಾಡು ಭಾಗದ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ತೀವ್ರವಾಗಿ ಮಳೆಯಾಗುತ್ತಿದೆ. 

9:37 AM

ಮೋದಿ ಆಗಮನ: ಟ್ವೀಟ್ ಮಾಡಿದ ಪ್ರಧಾನಿ ಆಫೀಸ್

ಮೋದಿ ಬೆಂಗಳೂರಿಗೆ ಬಂದಿಳಿದಿದ್ದು, ಪ್ರಧಾನಿ ಕಚೇರಿ ಟ್ವೀಟ್ ಮಾಡಿದ್ದು ಹೀಗೆ. 

PM landed in Bengaluru a short while ago, where he was received by Governor , CM , Minister and other dignitaries as well as officials. pic.twitter.com/om0JZyEl4w

— PMO India (@PMOIndia)

1:37 PM IST:

ನಾಡಪ್ರಭುವಿಗೆ ನಮೋ ನಮಃ ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿ ಮೋದಿ, ಜನತೆಗೆ ಮೋದಿ ಧನ್ಯವಾದ ಹೇಳಿದ್ದಾರೆ. ಕರ್ನಾಟಕ ಹಾಗೂ ಬೆಂಗಳೂರನ್ನು ಹಾಡಿ ಹೊಗಳಿದ್ದಾರೆ. ಬೆಂಗಳೂರು ವಿವಿಧ ವಿಷಯಗಳಲ್ಲಿ ಜಗತ್ತಿಗೇ ಪ್ರೇರಣೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ವಂದೇ ಭಾರತ್‌ ಎಕ್ಸಪ್ರೆಸ್‌ ನವ ಭಾರತದ ಹೆಗ್ಗುರುತು. ರೈಲು ಪ್ರಯಾಣಕ್ಕೆ ವೇಗ ದೊರಕಿದ್ದು, ಇದ ದೇಶದ ಪ್ರಗತಿಯ ಸಂಕೇತ. ಬೆಂಗಳೂರು ದೇಶದ ಸ್ಟಾರ್ಟ್‌ಅಪ್‌ ರಾಜಧಾನಿ . ಬೆಂಗಳೂರಿಂದ ಭಾರತಕ್ಕೆ ಶಕ್ತಿ. ಬೆಂಗ್ಳೂರು ಸ್ಟಾರ್ಟ್‌ಅಪ್‌ ಪ್ರತಿನಿಧಿ ಎಂದೂ ಹೇಳಿದರು. 

ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಸರಕಾರವಿದೆ. ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ಕೋವಿಡ್‌ ಕಾಲದಲ್ಲೂ ಹೂಡಿಕೆಯಾಗಿದೆ. 2014ರ ಮುಂಚೆ ಪ್ರಗತಿಯ ದೂರದೃಷ್ಟಿಯೇ ಇರಲಿಲ್ಲ. ಇದೀಗ ಮೂಲಸೌಕರ್ಯ ಅಭಿವೃದ್ಧಿಯಾಗಿದ್ದು. 1.1ಲಕ್ಷ ರೂ. ಹೂಡಿಕೆ ಗುರಿ ಹೊಂದಿದೆ. ದೇಶಾದ್ಯಂತ 3.5 ಕೋಟಿ ಮನೆ,.ಕರ್ನಾಟಕದಲ್ಲಿ 8ಲಕ್ಷ ಮನೆ ನೀಡುವ ಗುರಿ ಇದೆ ಎಂದಿದ್ದಾರೆ ಮೋದಿ. 

1:27 PM IST:

ವಿಶ್ವನಾಯಕರಾಗಿರುವ ಪ್ರಧಾನಿ ಮೋದಿಯವರೆ ಎಂದು ಉಲ್ಲೇಖ ಮಾಡಿದ ಶ್ರೀ ನಿರ್ಮಲಾನಂದ ಶ್ರೀಗಳು. ಜೂನ್ 20, 2020 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರತಿಮೆ ಕೆಲಸ ಆರಂಭವಾಯಿತು. ಕೋವಿಡ್ ಸಮಯದಲ್ಲೂ ಕೆಲಸ ನಿಲ್ಲಿಸಲಿಲ್ಲ. ಭಾರತ ಉಳಿದರೆ ನಾಡು ಉಳಿಯುತ್ತದೆ. ನಾಡು ಉಳಿದರೆ ಭಾರತ ಉಳಿಯುತ್ತದೆ ಎಂದು ವಿವೇಕಾನಂದ ಹೇಳಿದ್ದಾರೆ. ಒಂದು ಕಾಲದಲ್ಲಿ ಜಗತ್ತನ್ನು ಕೇಳಿ ಭಾರತ ಆಡಳಿತ ನಡೆಸಬೇಕಿತ್ತು. ಇಂದು ಭಾರತ ಸಲಹೆ ಪಡೆದು ಜಗತ್ತು ಆಡಳಿತ ಮಾಡ್ತಿದೆ ಕರ್ಮ ಮತ್ತು ಜ್ಞಾನ ಮೋದಿ ಅಳವಡಿಸಿಕೊಂಡಿದ್ದಾರೆ, ಎಂದು ಮೋದಿಯನ್ನು ಹೊಗಳಿದ ನಿರ್ಮಲಾನಂದ ಶ್ರೀಗಳು.

ಪ್ರತಿಮೆ ಅನಾವರಣ ಮಾಡಿದ್ದಕ್ಕೆ ಪ್ರಧಾನಿ ಮೋದಿಗೆ ಅಭಿನಂದನೆ. ಮನುಷ್ಯ ಶಕ್ತಿಯನ್ನು ಕೆಂಪೇಗೌಡರು ಕೂಡಿಸಿದ್ರು. ಇಂದು ಅದೇ ಕೆಲಸವನ್ನು ಪ್ರಧಾನಿ ಮೋದಿ ಮಾಡ್ತಾ ಇದ್ದಾರೆ.
ತಮ್ಮ ಭಾಷಣದಲ್ಲಿ ದೇವೆಗೌಡ, ಎಸ್ ಎಂಕೆ ಯಡಿಯೂರಪ್ಪರನ್ನು ನೆನೆದ ಶ್ರೀಗಳು.

1:25 PM IST:

ಕೆಂಪೇಗೌಡ ಏರ್ಪೋಟ್ ದೇಶದ ಎರಡನೇ ಅತಿ ದೊಡ್ಡ ಏರ್ಪೋಟ್ ಆಗಿ ಪರಿವರ್ತನೆ ಆಗಿದೆ. ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ವಿಶ್ವಮಾನ್ಯವಾಗಿದೆ. ದೂರದೃಷ್ಟಿಯ ನಾಯಕ ಕೆಂಪೇಗೌಡರು. ಪ್ರಗತಿಪರ ಚಿಂತನೆಗೆ, ಅಭಿವೃದ್ಧಿ ಗೆ ಗೌರವ ಇಂದು ಸಲ್ಲಿಸಿದಂತಾಗಿದೆ. ಕೆಂಪೇಗೌಡರ ಮಾಧ್ಯಮದಲ್ಲಿ ನಮ್ಮ ಸರ್ಕಾರ ಅಭಿವೃದ್ಧಿ ಮಾಡ್ತದೆ. ಅದಕ್ಕಾಗಿಯೆ ಪ್ರಗತಿಯ ಪ್ರತಿಮೆ ಎಂದು ಹೆಸರು ಇಟ್ಟಿದ್ದೇವೆ. ಇಂದು ಮೋದಿ ಭಾರತವನ್ನ ಬಹಳ ಎತ್ತರಕ್ಕೆ ತೆಗೆದುಕೊಂಡ ಹೋಗಿದ್ದಾರೆ. ನವ ಭಾರತ ನಿರ್ಮಾಣ ಮಾಡುತ್ತಿರುವ ಮೋದಿಯವರ ಮೂಲಕ ಕೆಂಪೇಗೌಡ ಪ್ರತಿಮೆ ಅನಾವರಣ ಆಗಿದ್ದು ದೈವ ಇಚ್ಛ. ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿರುವ ಮೋದಿಗೆ ಧನ್ಯವಾದಗಳು ಎಂದಿದ್ದಾರೆ. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ. 

1:14 PM IST:

ಸಿಲಿಕಾನ ಸಿಟಿ, ಉದ್ಯಾನ ನಗರಿ ಎಂದೇ ಖ್ಯಾತಿ ಪಡೆದ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಸಾರ್ಟ್ ಅಪ್ ಕ್ಯಾಪಿಟಲ್ ಎಂಬ ಹೊಸ ಹೆಸರು ನೀಡಿದ್ದು, ಬೆಂಗಳೂರು ಭಾರತೀಯ ಆರ್ಥಿಕ ಪ್ರಗತಿಗೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದ್ದಾರೆ. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

1:10 PM IST:

ಕೆಂಪೇಗೌಡ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದು, ಬೆಂಗಳೂರು ಸ್ಟಾರ್ಟ್‌ಅಪ್ ಅನ್ನು ಪ್ರತಿನಿಧಿಸುತ್ತಿದೆ. ಯುವ ಶಕ್ತಿ ಬಳಕೆಗೆ ಹೇಳಿ ಮಾಡಿಸಿದ ನಗರವೆಂದು ಮೋದಿ ಹೇಳಿದ್ದಾರೆ. 

12:59 PM IST:

ಕರ್ನಾಟಕ-ಕಾಶಿ ಗೌರವ್ ದರ್ಶನ ರೈಲಿಗೆ ಚಾಲನೆ ನೀಡಿದ ಮೋದಿ. 
 
ಭಾರತ್ ಗೌರವ್ ಕಾಶಿ ಯಾತ್ರಾ ರೈಲು ಸಂಚಾರ ಸೌಲಭ್ಯವನ್ನು ಪಡೆದ ಮೊದಲ ರಾಜ್ಯವಾದ ಕರ್ನಾಟಕಕ್ಕೆ ಅಭಿನಂದನೆಗಳು. ಈ ರೈಲು ಕಾಶಿಯನ್ನು ಕರ್ನಾಟಕಕ್ಕೆ ಹತ್ತಿರವಾಗಿಸುತ್ತದೆ. ಯಾತ್ರಿಗಳು ಮತ್ತು ಪ್ರವಾಸಿಗರು ಕಾಶಿ, ಅಯೋಧ್ಯಾ ಹಾಗು ಪ್ರಯಾಗ್ ರಾಜ್ ಗೆ ಭೇಟಿ ನೀಡುವುದು ಸುಲಭವಾಗುತ್ತದೆ. pic.twitter.com/oTymcVgXTs

— Narendra Modi (@narendramodi)

12:48 PM IST:

ಹಲವು ಯೋಜನೆಗಳ ಉದ್ಘಾಟನೆ ಹಿನ್ನೆಲೆಯಲ್ಲಿ  ಉದ್ಯಾನನಗರಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಕೊಪ್ಪಳದ ಕಿನ್ನಾಳ ಕಲಾಕೃತಿಯನ್ನು ಕೊಡುಗೆಯಾಗಿ ನೀಡಲಾಯಿತು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

12:22 PM IST:

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಮೋದಿಗೆ ಬೆಂಗಳೂರಿಗರು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದ್ದು, ಧನ್ಯವಾದ ಹೇಳಿ ಮೋದಿ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ. 

ಈ ಕ್ರಿಯಾಶೀಲ ಬೆಂಗಳೂರಿನ ಭೇಟಿಯನ್ನು ಅತ್ಯಂತ ಸ್ಮರಣೀಯವಾಗಿಸಿದ್ದಕ್ಕೆ ಧನ್ಯವಾದಗಳು pic.twitter.com/z8I4bcBZzy

— Narendra Modi (@narendramodi)

12:19 PM IST:

ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ನಗರಾದ್ಯಂತ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2 ಉದ್ಘಾಟಿಸಿದ ನಂತರ ಕೆಂಪೇಗೌಡರ ಪ್ರತಿಮೆ ಉದ್ಘಾಟಿಸಿದರು. 108 ಅಡಿ ಎತ್ತರದ ಪ್ರತಿಮೆ ಇದಾಗಿದ್ದು ಪ್ರಗತಿಯ ಪ್ರತೀಕವಾಗಿದೆ. 

11:24 AM IST:

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2 ಉದ್ಘಾಟಿಸಿದ್ದಾರೆ. 13,000 ಕೋಟಿ ವೆಚ್ಚದಲ್ಲಿ ಟರ್ಮಿನಲ್‌ 2 ಸಿದ್ಧವಾಗಿದ್ದು 3.5 ಕೋಟಿ ಪ್ರಯಾಣಿಕೆರಿಗೆ ಇದು ಅನುಕೂಲಕರವಾಗಲಿದೆ. ಅತ್ಯಾಧುನಿಕ ವಿನ್ಯಾಸ ಹಾಗೂ ಸೌಲಭ್ಯವಿರುವ ಈ ಟರ್ಮಿನಲ್ ವಿದೇಶ ವಿಮಾನ ನಿಲ್ದಾಣಕ್ಕೆ ಸಮನಾಗಿದೆ. 

ಸುದ್ಗಿಗೆ ಇಲ್ಲಿ ಕ್ಲಿಕ್ ಮಾಡಿ

11:15 AM IST:

ಅತ್ಯಾಧುನಿಕ ತಂತ್ರಜ್ಞಾನಉಳ್ಳ  ಟರ್ಮಿನಲ್ 2 ನಿಲ್ದಾಣವನ್ನು ಉದ್ಘಾಟಿಸಿದ ಮೋದಿ. ಪ್ರಧಾನಿಗೆ ಸಾಥ್ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ , ಸಂಪುಟ ಸಚಿವರು. ಟರ್ಮಿನಲ್ 2 ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್.

10:37 AM IST:

ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕನಕದಾಸರ ಜಯಂತಿಯಂದು ಮೋದಿ ದಾಸರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಜೊತೆಗೆ, ಮಹರ್ಷಿ ವಾಲ್ಮಿಕಿ ಪ್ರತಿಮೆಗೂ ನಮನ ಸಲ್ಲಿಸಿದ್ದಾರೆ. 

Paid tributes to Maharshi Valmiki Ji in Bengaluru today morning. pic.twitter.com/CreEfRB8Tb

— Narendra Modi (@narendramodi)

10:34 AM IST:

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮೋಡ ಕವಿದ ವಾತಾವರಣವಿದ್ದು, ವಿಮಾನನಿಲ್ದಾಣದ ಬಳಿ ತುಂತುರು ಮಳೆಯಾಗುತ್ತಿದೆ. ಪ್ರಧಾನಿ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. 11-20 ರ ಸುಮಾರಿಗೆ ಏರ್ ಪೋರ್ಟ್ ಗೆ ಆಗಮಿಸುತ್ತಾರೆ ಪ್ರಧಾನಿ ಮೋದಿ. ವಿಐಪಿ ಗೇಟ್ ಮೂಲಕ ನೇರವಾಗಿ ಟರ್ಮಿನಲ್ 2 ಗೆ ಆಗಮಿಸುವ ಪ್ರಧಾನಿ. ಟರ್ಮಿನಲ್ 2 ಉದ್ಘಾಟನೆ ಮಾಡಿ ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ ತೆರಳುವ ಮೋದಿ.

10:33 AM IST:

ಮೋದಿ ಸಮಾವೇಶಕ್ಕೆ ಆಗಮಿಸೋ ಕಾರ್ಯಕರ್ತರಿಗೆ ವಿಶೇಷ ಭೋಜನದ ವ್ಯವಸ್ಥೆ. ಬರೋಬ್ಬರಿ 3 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನದ ಊಟಕ್ಕೆ ಸಿದ್ಧಗೋಳ್ತೀರೋ ಪಲಾವ್, ಮೈಸೂರ್ಪಾಕ್, ಟೊಮೊಟೊ ಬಾತ್, ಮೊಸರನ್ನ. ಸಮಾವೇಶ ನಡೆಯುವ ಸ್ಥಳದ ಸಮೀಪವೇ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. 120 ಕೌಂಟರ್ ಗಳ ಮೂಲಕ ಊಟ ಬಡಿಸಲು ಸಿದ್ಧತೆ. ಸಮಾವೇಶಕ್ಕೆ ಆಗಮಿಸಿರೋ ಎಲ್ಲರಿಗೂ ಸಹ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ. 

10:30 AM IST:

ವಂದೇಭಾರತ್ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿಕೆ. ಈ ರೈಲಿನಲ್ಲಿ ಪ್ರಯಾಣಮಾಡಲಿಕ್ಕೆ ತುಂಬಾ ದಿನಗಳಿಂದ ಕಾಯುತ್ತಿದ್ವಿ. ಇದೀಗ ದಕ್ಷಿಣ ಭಾರತಕ್ಕೆ ಮೊದಲ ರೈಲು ಬಂದಿದೆ..ಬಹಳ ಸಂತೋಷವಾಗುತ್ತಿದೆ. ಟ್ರೈನ್ ನಲ್ಲಿ ಹೋಗಲಿಕ್ಕೆ ಬಹಳ ಅರಾಮಾಗಿದೆ ಇದೆ...ತುಂಬಾ ಐಷಾರಾಮಿಯಾಗಿದೆ..ನಮಗೆ ಬಹಳ ಸಂತೋಷವಾಗುತ್ತಿದೆ. ದೇಶಕ್ಕೆ ಇದೇ ರೀತಿ ಟ್ರೈನ್ ಸಂಖ್ಯೆ ಹೆಚ್ಚಾಗಲಿ.

10:19 AM IST:

11:39 AM IST:

ದಕ್ಷಿಣ ಭಾರತದ ಮೊಟ್ಟಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಚಾಲನೆ ನೀಡಿದರು. ಅದರೊಂದಿಗೆ ಕಾಶಿ ದರ್ಶನ ಯಾತ್ರೆಯ ಭಾರತ್‌ ಗೌರವ್‌ ಟ್ರೇನ್‌ಅನ್ನೂ ಮೋದಿ ಅನಾವರಣ ಮಾಡಿದರು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ಸಂಪರ್ಕ ಸೌಲಭ್ಯದ ಜತೆಗೆ ವಾಣಿಜ್ಯ ಚಟುವಟಿಕೆಗಳನ್ನೂ ಹೆಚ್ಚಿಸುತ್ತದೆ. ಅದು ಜೀವನವನ್ನು ಹೆಚ್ಚು ಸುಗಮಗೊಳಿಸುತ್ತದೆ. ಈ ರೈಲಿನ ಸಂಚಾರಕ್ಕೆ ಬೆಂಗಳೂರಿನಲ್ಲಿ ಹಸಿರು ನಿಶಾನೆ ತೋರಿಸಿದ್ದಕ್ಕೆ ಸಂತಸವಾಗಿದೆ. pic.twitter.com/GtAxs6E846

— Narendra Modi (@narendramodi)

10:16 AM IST:

ಕರ್ನಾಟಕ-ಭಾರತ್‌ ಗೌರವ್‌ ಕಾಶಿ ದರ್ಶನ ರೈಲಿನ ಮೊದಲ ಪ್ರವಾಸ ನವೆಂಬರ್‌ 11ರಂದು ಬೆಂಗಳೂರಿನಿಂದ ಆರಂಭಗೊಳ್ಳುತ್ತಿದ್ದು, ಈಗಾಗಲೇ ಯಾತ್ರಿಗಳ ಬುಕಿಂಗ್‌ ಆರಂಭವಾಗಿದ, ಭರ್ಜರಿ ಪ್ರತಿಕ್ರಿಯೆ ಲಭ್ಯವಾಗಿದೆ. ಪ್ರಯಾಣಿಕರು ಇರುವ ರೈಲಿಗೆ ಮೋದಿ ಚಾಲನೆ ನೀಡಿದ್ದಾರೆ. 

ಈ ಟ್ರೈನಿನ ವಿಶೇಷತೆ ಏನು?

10:09 AM IST:

10:08 AM IST:

ಮೋದಿ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರಿನ ರಸ್ತೆ ಸಂಚಾರ ಬದಲಾಯಿಸಿದ್ದು, ಸಾಧ್ಯವಾದಷ್ಟು ಮೆಟ್ರೋ ಬಳಸಿದರೆ ಒಳಿತು. 

ಮಾರ್ಗ ಬದಲಾವಣೆ

10:07 AM IST:

ದೇಶದ ಐದನೇ ಮತ್ತು ದಕ್ಷಿಣ ಭಾರತದ ಮೊದಲ ಹೈಸ್ಪೀಡ್‌ ವಂದೇ ಭಾರತ್‌ ರೈಲಿಗೆ ಪ್ರಧಾನಿ ಮೋದಿ, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ನಿಲ್ದಾಣದಲ್ಲಿ ಶುಕ್ರವಾರ ಚಾಲನೆ ನೀಡಲಿದ್ದಾರೆ. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:06 AM IST:

ಮೈಸೂರು-ಚೆನ್ನೈ ಸೂಪರ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದು, ಈ ದೃಶ್ಯ ಹೀಗಿರಲಿದೆ. 

Beautiful early morning views of Express at KSR Bengaluru today

The inaugural special train of Mysuru - Chennai will be flagged off by Hon'ble PM Shri Ji today from KSR Bengaluru. pic.twitter.com/D0EypWgtg6

— Office of Raosaheb Patil Danve (@raosaheboffice)

10:03 AM IST:

ರೈಲ್ವೆ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ. ರೈಲು ನಿಲ್ದಾಣದ ಸುತ್ತ ಪೊಲೀಸರ ಸರ್ಪಗಾವಲು. ಸಾರ್ವಜನಿಕರತ್ತ ಕೈ ಬೀಸಿದ ಪ್ರಧಾನಿ ನರೇಂದ್ರ ಮೋದಿ. ವಂದೇ ಭಾರತ್ ,ಕಾಶಿ ದರ್ಶನ ರೈಲುಗಳಿಗೆ ಚಾಲನೆ ನೀಡಲಿರೋ ಪ್ರಧಾನಿ.

10:41 AM IST:

ತಮ್ಮ ಶೂ ಬಿಚ್ಚಿಟ್ಟು ಕನಕದಾಸರ ಪ್ರತಿಮೆಗೆ ಪುಶ್ಪಾರ್ಚನೆ. ಹೆಗಲಲ್ಲಿ ಕಂಬಳಿ ಹಾಕಿಕೊಂಡು ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ. ಕಾರಿನಿಂದ ಕೆಳಗಿಳಿದು ಕೈಬೀಸಿದ ಪ್ರಧಾನಿ. 

9:50 AM IST:

ಬೆಂಗಳೂರಿಗೆ ಪ್ರಧಾನಿ ಮೊದಿ ಆಗಮನ ಹಿನ್ನಲೆಯಲ್ಲಿ ಎಲ್ಲೆಡೆ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಬದಲಿ ವ್ಯವಸ್ಥೆ ಮಾಡಲಾಗಿದೆ. ಬೆಳ್ಳಂಬೆಳಗ್ಗೆ ಏರ್ಪೋರ್ಟ್ ಗೆ ಆಗಮಿಸಿದ ಪ್ರಯಾಣಿಕರು. ಏರ್ಪೋರ್ಟ್ ನ ಡಿಪಾರ್ಚರ್ ಬಳಿ ಪ್ರಯಾಣಿಕರ ದಂಡು. ಮಧ್ಯಾಹ್ನ, ಸಂಜೆ ಸಮಯದ ವಿಮಾನಗಳಿಗೆ ಬೆಳಿಗ್ಗೆ ಯೇ ಬಂದು ಕಾದುಕುಳಿತ ಪ್ರಯಾಣಿಕರು ತಮ್ಮ ಗಮ್ಯ ತಲುಪಲು ಪರದಾಡುತ್ತಿದ್ದಾರೆ. 

9:49 AM IST:

ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದ ಕೇಂದ್ರ ರೈಲ್ವೆ ಸಚಿವ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣನ್ ಆಗಮನ. ವಂದೇ ಭಾರತ್ ಹಾಗೂ ಭಾರತ್ ಗೌರವ್ ರೈಲಿಗೆ ಚಾಲನೆ ಹಿನ್ನಲೆ‌. ಕೆಲವೇ ಕ್ಷಣಗಳಲ್ಲಿ ಮೋದಿ ಆಗಮನ ಹಿನ್ನಲೆ ಕೇಂದ್ರ ರೈಲ್ವೇ ‌ಸಚಿವರಿಂದ ಪೂರ್ವ ಸಿದ್ದತೆ ಪರಿಶೀಲನೆ.

9:48 AM IST:

ಮೋದಿ ಕಾರ್ಯಕ್ರಮ ಹಿನ್ನಲೆಯಲ್ಲಿ ಬಿಎಂಟಿಸಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿವೆ. ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ಹಿನ್ನಲೆ ಬೆಳಗ್ಗೆ 10 ಗಂಟೆಯಿಂದ 12ಗಂಟೆವರೆಗೂ ಬಸ್ ಸಂಚಾರ ಸ್ಥಗಿತವಾಗಿವೆ. ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬರುವ ವಾಹನಗಳ ಕಾರ್ಯಾಚರಣೆ ಸ್ಥಗಿತ. ಮೆಜೆಸ್ಟಿಕ್ ಬರುವ ಪ್ರಯಾಣಿಕರನ್ನು ಹತ್ತಿರದ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಸೂಚನೆ.  ಕಾನೂನು ಸುವ್ಯವಸ್ಥೆ ಹಿನ್ನಲೆ 2 ಗಂಟೆ ಮೆಜೆಸ್ಟಿಕ್‌ಗೆ ಬರುವ ಬಸ್ ಸಂಚಾರ ಸ್ಥಗಿತ ಮಾಡುವಂತೆ ಪೊಲೀಸರಿಂದ ಮನವಿ. ಉಪ್ಪಾರ್‌ಪೇಟೆ ಪೊಲೀಸ್ ಸ್ಟೇಷನ್‌ನಿಂದ ಸಾರಿಗೆ ನಿಗಮಕ್ಕೆ ಮನವಿ ಮಾಡಲಾಗಿದೆ. ಪ್ರಯಾಣಿಕರು ಸಹಕರಿಸುವಂತೆ ಮನವಿ‌ ಮಾಡಿದ ಸಾರಿಗೆ ಇಲಾಖೆ.

9:47 AM IST:

ಮೋದಿ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗುತ್ತಾ? ಈಗಾಗಲೇ ರಾಜಧಾನಿಯ ಹಲವೆಡೆ ತುಂತುರು ಮಳೆ ಆರಂಭವಾಗಿದ್ದು, ರಾಜ್ಯದಲ್ಲಿ ಹಿಂಗಾರು ಮಳೆ ಚುರುಕುಗೊಂಡ ಹಿನ್ನೆಲೆ ಮಳೆ . ಬೆಂಗಳೂರು ಸುತ್ತಮುತ್ತ ಇವತ್ತು ಮಳೆ ಮುನ್ಸೂಚನೆ ನೀಡಲಾಗಿದ್ದು, ಒಟ್ಟು 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ನವೆಂಬರ್‌ 13 ಮತ್ತು 14ರಂದು ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ. ದಕ್ಷಿಣ ಒಳನಾಡು ಭಾಗದ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ತೀವ್ರವಾಗಿ ಮಳೆಯಾಗುತ್ತಿದೆ. 

9:36 AM IST: