
ಬೆಂಗಳೂರು (ಜ.29) :
ಹೆಣ್ಣೂರು ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಸಾವಿನ ಘಟನೆ ಬಳಿಕ ಈ ಮಾರ್ಗದ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿಯ ಪ್ರತಿ ಹಂತಕ್ಕೂ ಪ್ರಾಮಾಣಿಕೃತ ಕಾರ್ಯಾಚರಣೆ ವಿಧಾನ ಅಂತಿಮಗೊಳಿಸಿದ ಬಳಿಕ ಕಾಮಗಾರಿ ಮರು ಆರಂಭಿಸಲು ಬಿಎಆರ್‌ಸಿಎಲ್ ನಿರ್ಧರಿಸಿದೆ.
ಕಳೆದ ಜ.10ರಂದು ಪಿಲ್ಲರ್ ಕುಸಿದು ಸಂಭವಿಸಿದ ಅವಘಡದ ಬಳಿಕ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಕೆ.ಆರ್.ಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿರುವ ಮೆಟ್ರೋ ಮಾರ್ಗ ಇದಾಗಿದೆ. ಅವಘಡದ ಬಳಿಕ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರು, ಗುತ್ತಿಗೆ ಸಂಸ್ಥೆಯ ನೌಕರರು ಭಯದಿಂದ ಕೆಲಸಕ್ಕೆ ಮರಳುತ್ತಿಲ್ಲ ಎಂಬ ಸಂಗತಿಯೂ ಬೆಳಕಿಗೆ ಬಂದಿದೆ.
Namma Metro ಪಿಲ್ಲರ್ ದುರಂತದ ಕಾರಣ ಇನ್ನೂ ನಿಗೂಢ!
ದುರಂತಕ್ಕೂ ಮುನ್ನ ಹೆಬ್ಬಾಳ- ನಾಗವಾರದವರೆಗೆ ನಿಲ್ಲಿಸಲಾದ ಪಿಲ್ಲರ್‌ನ ಸ್ಟೀಲ್, ಕಬ್ಬಿಣದ ಚೌಕಟ್ಟುಗಳು ಯಾವ ಸ್ಥಿತಿಯಲ್ಲಿದ್ದವೋ ಇಂದಿಗೂ ಹಾಗೆಯೆ ಉಳಿದಿವೆ. ಕಲ್ಯಾಣ ನಗರದಿಂದ ಎಚ್‌ಬಿಆರ್ ಲೇಔಟ್ ನಡುವಿನ 13 ಕಂಬಗಳು ಸಿದ್ಧವಾಗಿದ್ದು, ಎಚ್‌ಬಿಆರ್ ಲೇಔಟ್‌ನಿಂದ ಹೊರಮಾವುವರೆಗಿನ 23 ಹಾಗೂ ಹೊರಮಾವಿನಿಂದ ಕಸ್ತೂರಿ ನಗರದವರೆಗಿನ 12 ಕಂಬಗಳಿಗಾಗಿ ಕಬ್ಬಿಣದ ಚೌಕಟ್ಟನ್ನು ನಿಲ್ಲಿಸಲಾಗಿದೆ.
ಘಟನೆಯಿಂದ ಎಚ್ಚೆತ್ತ ಬಿಎಂಆರ್‌ಸಿಎಲ್, ಕಾಮಗಾರಿಯ ಎಲ್ಲ ಹಂತಕ್ಕೂ ಪ್ರತ್ಯೇಕವಾಗಿ ಎಸ್‌ಒಪಿ ರೂಪಿಸಲು ಮುಂದಾಗಿದೆ. ಎತ್ತರಿಸಿದ ಮಾರ್ಗ ನಿರ್ಮಾಣದಲ್ಲಿ ಕಂಬಗಳ ಎತ್ತರ ಎಷ್ಟಿರಬೇಕು? ಅದಕ್ಕೆ ಬಲವರ್ಧನೆ ಯಾವ ರೀತಿ ನೀಡಬೇಕು ಎಂಬುದು ಸೇರಿ ನಿರ್ಮಾಣ ಕಾಮಗಾರಿ ವೇಳೆ ಸುರಕ್ಷತಾ ವಿಧಾನವನ್ನು ಇನ್ನಷ್ಟುಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿದೆ. ಇದನ್ನು ಅಂತಿಮಗೊಳಿಸಿದ ಬಳಿಕವೇ ಕಾಮಗಾರಿ ಮರು ಪ್ರಾರಂಭಿಸಲಾಗುವುದು. ಕಾರ್ಮಿಕರು, ಎಂಜಿನಿಯರ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಆರಂಭಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. Namma Metro ಪಿಲ್ಲರ್ ದುರಂತ: ಮೆಟ್ರೋ ಎಂಡಿ ಅಜುಂ ಪರ್ವೇಜ್‌ಗೆ ಪೊಲೀಸರ ಗ್ರಿಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ