ಫೋನ್ ಕದ್ದಾಲಿಕೆ: 54 ಇನ್ಸ್‌ಪೆಕ್ಸರ್‌ಗಳಿಗೆ CBI ನೊಟೀಸ್

By Kannadaprabha NewsFirst Published Nov 3, 2019, 8:44 AM IST
Highlights

ಫೋನ್ ಕದ್ದಾಲಿಕೆ ಸಂಬಂಧ 54 ಜನ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ಸಿಬಿಐ ನೋಟಿಸ್ ಜಾರಿಗೊಳಿಸಿದೆ. ನ.4 ಮತ್ತು 5ರಂದು ವಿಚಾರಣೆಗೆ ಹಾಜರಾಗುವಂತೆ ಇನ್ಸ್‌ಪೆಕ್ಟರ್‌ಗಳಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು(ನ.03): ಫೋನ್‌ ಕದ್ದಾಲಿಕೆ ಪ್ರಕರಣ ಸಂಬಂಧ ಬೆಂಗಳೂರು ನಗರ ಸೇರಿದಂತೆ ರಾಜ್ಯದ 54 ಇನ್ಸ್‌ಪೆಕ್ಟರ್‌ಗಳಿಗೆ ವಿಚಾರಣೆ ಹಾಜರಾಗುವಂತೆ ಸಿಬಿಐ ನೋಟಿಸ್‌ ಜಾರಿಗೊಳಿಸಿದೆ. ವಿವಿಧ ಅಪರಾಧ ಪ್ರಕರಣಗಳ ತನಿಖಾಧಿಕಾರಿಗಳಾಗಿದ್ದ ಇನ್ಸ್‌ಪೆಕ್ಟರ್‌ಗಳು, ತನಿಖೆ ಸಂದರ್ಭದಲ್ಲಿ ಕೆಲವರ ಫೋನ್‌ ಕದ್ದಾಲಿಕೆ ನಡೆಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಸಿಬಿಐ, ಇನ್ಸ್‌ಪೆಕ್ಟರ್‌ಗಳಿಂದ ವಿವರಣೆ ಪಡೆಯಲು ಮುಂದಾಗಿದೆ. ಅದರಂತೆ ನ.4 ಮತ್ತು 5ರಂದು ವಿಚಾರಣೆಗೆ ಹಾಜರಾಗುವಂತೆ ಇನ್ಸ್‌ಪೆಕ್ಟರ್‌ಗಳಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.

ಫೋನ್‌ ಕದ್ದಾಲಿಕೆ : ಮತ್ತಷ್ಟು ಅಧಿಕಾರಿಗಳಿಗೆ ಎದುರಾಗಿದೆ ಸಂಕಷ್ಟ

ತಾವು ತನಿಖೆ ನಡೆಸಿದ ಪ್ರಕರಣಗಳಲ್ಲಿ ಯಾವ ಕಾರಣಕ್ಕೆ ಕದ್ದಾಲಿಕೆ ನಡೆಸಲಾಯಿತು? ಆ ಪ್ರಕರಣದಲ್ಲಿ ಕದ್ದಾಲಿಕೆಗೆ ಒಳಗಾದ ವ್ಯಕ್ತಿಯ ಪಾತ್ರವೇನು? ಕದ್ದಾಲಿಕೆ ಬಳಿಕ ಆ ವ್ಯಕ್ತಿ ಮೇಲೆ ಕೈಗೊಂಡ ಕ್ರಮವೇನು ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಸಿಬಿಐ ಕೇಳಿ ಸ್ಪಷ್ಟೀಕರಣ ಪಡೆಯಲು ಸಿದ್ಧವಾಗಿದೆ ಎಂದು ಮೂಲಗಳು ಹೇಳಿವೆ.

ಯಾರೇ ಫೋನ್‌ ಟ್ಯಾಪ್‌ ಮಾಡಿದ್ದರೂ ಸುಮ್ಮನಿರಲ್ಲ!

click me!