ಬೆಂಗಳೂರು: PF ಹಣವನ್ನೇ ನುಂಗಿದ ಖಾಸಗಿ ಕಂಪನಿ ಸಿಬ್ಬಂದಿ

By Kannadaprabha NewsFirst Published Nov 3, 2019, 7:56 AM IST
Highlights

ಅಕ್ರಮವಾಗಿ ಕಾರ್ಮಿಕರ ಪಿಎಫ್‌ ಮೊತ್ತವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಕಂಪನಿ ಸಿಬ್ಬಂದಿ ಕಾರ್ಮಿಕರ ಭವಿಷ್ಯ ನಿಧಿಯನ್ನೇ ಗುಳುಂ ಮಾಡಿದ್ದು. ಇದೀಗ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು(ನ.03): ಅಕ್ರಮವಾಗಿ ಕಾರ್ಮಿಕರ ಪಿಎಫ್‌ (ಭವಿಷ್ಯ ನಿಧಿ) ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ಖಾಸಗಿ ಕಂಪನಿ ಅಧಿಕಾರಿಗಳ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋರಮಂಗಲದ ಕ್ವೆಸ್‌ ಕಾಪ್‌ರ್‍ ಲಿಮಿಟೆಡ್‌ ಕಂಪನಿಯ ಸಿಇಒ ಸುಬ್ರತ್‌ ನಾಗಕುಮಾರ್‌, ಹಿರಿಯ ವ್ಯವಸ್ಥಾಪಕ ಎಂ.ಗಣೇಶ್‌ಕುಮಾರ್‌ ಹಾಗೂ ಇಪಿಎಫ್‌ ಮೇಲ್ವಿಚಾರಕ ಕೆ. ಎಲ್ಲಪ್ಪನ್‌ ಮೇಲೆ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಕೋರಮಂಗಲದ ಇಪಿಎಫ್‌ ಕಚೇರಿಯ ಜಾರಿ ನಿರ್ದೇಶನಾಲಯ ಅಧಿಕಾರಿ ಎನ್‌.ಮಂಜುನಾಥ್‌ ದೂರು ನೀಡಿದ್ದಾರೆ.

ಸಿನಿಮೀಯ ರೀತಿಯಲ್ಲಿ ಚೇಸಿಂಗ್: ರೈಲಿನಲ್ಲಿ ಕಾಲ್ಕಿತ್ತ ಕಳ್ಳನ ವಿಮಾನದಲ್ಲಿ ಬೆನ್ನಟ್ಟಿದ ಪೊಲೀಸರು!

ಇದೇ ವರ್ಷದ ಜುಲೈ ತಿಂಗಳಲ್ಲಿ ಪಿಎಫ್‌ ಹಣ ಪಡೆಯಲು ಆನ್‌ಲೈನ್‌ನಲ್ಲಿ ಕ್ವೆಸ್‌ ಕಾಪ್‌ರ್‍ ಲಿಮಿಟೆಡ್‌ ಕಂಪನಿಯ ನಾಲ್ವರು ನೌಕರರು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ಸ್ವೀಕರಿಸಿ ಪರಿಶೀಲಿಸಿದ ಆರೋಪಿ ಎಲ್ಲಪ್ಪನ್‌, ನೌಕರರ ಬ್ಯಾಂಕ್‌ ಖಾತೆ ಬದಲಿಗೆ ತನ್ನ ಬ್ಯಾಂಕ್‌ ಖಾತೆಯನ್ನು ಅಪ್‌ಡೇಟ್‌ ಮಾಡಿ ಪಿಎಫ್‌ ಕಚೇರಿಗೆ ರವಾನಿಸಿದ್ದರು. ಪಿಎಫ್‌ ಅಧಿಕಾರಿಗಳು ನೌಕರರ ಅರ್ಜಿಯಲ್ಲಿದ್ದ ಬ್ಯಾಂಕ್‌ ಖಾತೆಗೆ 53,158 ವರ್ಗಾಯಿಸಿದ್ದರು.

ಮದ್ಯ ಪ್ರಿಯರಿಗೆ ಬಿಗ್ ಶಾಕ್: ಡ್ರಿಂಕ್ಸ್ ನಿಷೇಧದ ಬಗ್ಗೆ BSY ವಿಚಾರ ಬಹಿರಂಗಪಡಿಸಿದ ಬಿಜೆಪಿ MP

ಕೆಲವು ದಿನಗಳ ಬಳಿಕ ನೌಕರರು ಪಿಎಫ್‌ ಹಣ ತಲುಪಿಲ್ಲ ಎಂದು ದೂರು ನೀಡಿದ್ದರು. ಈ ಬಗ್ಗೆ ಸ್ಪಷ್ಟನೆ ಕೇಳಿ ಕ್ವೆಸ್‌ ಕಾಪ್‌ರ್‍ ಲಿಮಿಟೆಡ್‌ ಕಂಪನಿಗೆ ಪಿಎಫ್‌ ಅಧಿಕಾರಿಗಳು ನೋಟಿಸ್‌ ನೀಡಿದ್ದರು. ಆಗ ಪರಿಶೀಲಿಸಿದಾಗ ಎಲ್ಲಪ್ಪನ್‌ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗಿರುವುದು ಬೆಳಕಿಗೆ ಬಂದಿದೆ. ಈ ಕೃತ್ಯವನ್ನು ಗಂಭೀರವಾಗಿ ತೆಗೆದುಕೊಂಡ ಅಧಿಕಾರಿಗಳು, ಕ್ವೆಸ್‌ ಕಾಪ್‌ರ್‍ ಕಂಪನಿಯ ನಾಲ್ವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

click me!