
ಬೆಂಗಳೂರು (ನ.16) : ಹೈಕೋರ್ಚ್ ಸೂಚನೆಯಂತೆ ಸದ್ಯ ಓಲಾ, ಉಬರ್ ಹಾಗೂ ರಾರಯಪಿಡೋ ಆಟೋರಿಕ್ಷಾಗಳು ಪಡೆಯುತ್ತಿರುವ ದರವನ್ನೇ ಕಡ್ಡಾಯವಾಗಿ ಜಾರಿಗೊಳಿಸುವಂತೆ ಸಾರ್ವಜನಿಕರು ಬಲವಾಗಿ ಒತ್ತಾಯಿಸಿದ್ದಾರೆ. ಆ್ಯಪ್ ಆಧಾರಿತ ಕಂಪನಿಗಳ (ಅಗ್ರಿಗೇಟರ್ಸ್) ಆಟೋರಿಕ್ಷಾ ದರ ನಿಗದಿ ಕುರಿತು ಸೋಮವಾರ ಆಯಾ ಕಂಪನಿಗಳ ಜತೆ ಸಭೆ ನಡೆಸಿದ್ದ ಸಾರಿಗೆ ಇಲಾಖೆಯು ಮಂಗಳವಾರ ಶಾಂತಿನಗರದ ಸಾರಿಗೆ ಕಚೇರಿಯಲ್ಲಿ ಸಾರ್ವಜನಿಕರ ಸಭೆ ನಡೆಸಿತು.
ಸಭೆಯಲ್ಲಿ ನಗರದ ಸಾರಿಗೆ ವಲಯಗಳಿಂದ ನಾಗರಿಕ ಸಮಿತಿಗಳ ಸದಸ್ಯರು ಭಾಗಿಯಾಗಿ, ಕಂಪನಿಗಳು ಸುಲಿಗೆಯನ್ನು ತೀವ್ರವಾಗಿ ಖಂಡಿಸಿ, ಸದ್ಯ ಹೈಕೋರ್ಚ್ ಸೂಚನೆಯಿಂದ ಓಲಾ, ಉಬರ್ ಹಾಗೂ ರಾರಯಪಿಡೋ ಆ್ಯಪ್‌ಗಳು ಆಟೋರಿಕ್ಷಾ ದರ ತಗ್ಗಿಸಿವೆ. ಮೀಟರ್ ದರಕ್ಕಿಂತ ಶೇ.10ರಷ್ಟುಹೆಚ್ಚುವರಿ ಶುಲ್ಕ ಹಾಗೂ ಜಿಎಸ್‌ಟಿ (ಶೇ.5) ಮಾತ್ರ ಪಡೆಯುತ್ತಿವೆ. ಹೈಕೋರ್ಚ್ ತಾತ್ಕಾಲಿಕವಾಗಿ ನಿಗದಿ ಮಾಡಿರುವ ಈ ದರವನ್ನು ನೀಡಲು ಹೆಚ್ಚಿನ ಹೊರೆಯಾಗುವುದಿಲ್ಲ. ಇದೇ ದರವನ್ನೇ ಕಡ್ಡಾಯಗೊಳಿಸಿ ಎಂದು ಒತ್ತಾಯಿಸಿದರು. ಅಕ್ಟೋಬರ್ 13ರಂದು ಅಂತಿಮ ದರ ನಿಗದಿ ಮಾಡುವವರೆಗೂ ತಾತ್ಕಲಿಕವಾಗಿ ದರ ನಿಗದಿ ಮಾಡಿ ಅದಕ್ಕಿಂತ ಹೆಚ್ಚು ದರ ಪಡೆಯದಂತೆ ಹೈಕೋರ್ಚ್ ನಿರ್ದೇಶಿಸಿತ್ತು..
ಆ್ಯಪ್ ಆಟೋ ದರ ನಿಗದಿಗೆ 4 ವಾರ ಅವಕಾಶ; ಹೈಕೋರ್ಟ್ ಸಮ್ಮತಿ
ಇಂದು ಕೋರ್ಟ್‌ಗೆ ಸಲ್ಲಿಕೆ
ಹೈಕೋರ್ಟ್ ಸೂಚನೆ ಮೇರೆಗೆ ಸೋಮವಾರ ಆ್ಯಪ್ ಕಂಪನಿಗಳು, ಆಟೋ ಚಾಲಕರ ಯೂನಿಯನ್ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ವರದಿಯನ್ನು ಬುಧವಾರ ಹೈಕೋರ್ಚ್‌ಗೆ ಸಲ್ಲಿಸುತ್ತೇವೆ. ಬಳಿಕ ದರ ನಿಗದಿಯಾಗಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ಸಾರಿಗೆ ಇಲಾಖೆಯಿಂದಲೇ ಆ್ಯಪ್ ಆರಂಭ ಅಸಾಧ್ಯ
ಸಭೆಯಲ್ಲಿ ಸಾರಿಗೆ ಇಲಾಖೆಯಿಂದಲೇ ಆಟೋರಿಕ್ಷಾ, ಕಾರ್ ಕ್ಯಾಬ್ ಸೇವೆ ನೀಡುವ ಆ್ಯಪ್ ಆರಂಭಿಸಬೇಕು ಎಂಬ ಮನವಿಗೆ ಪ್ರತಿಕ್ರಿಸಿದ ಅಧಿಕಾರಿಗಳು, ಸಾರಿಗೆ ಇಲಾಖೆಯಿಂದ ಈ ರೀತಿ ಆ್ಯಪ್ ಆರಂಭಿಸುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದರು. ಕೊನೆಗೂ ಓಲಾ ಆಟೋ ದರ ಇಳಿಕೆ: ಮೀಟರ್ ದರಕ್ಕಿಂತ ಕೊಂಚ ಅಧಿಕ ದರಕ್ಕೆ ಓಲಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ