ಪರೀಕ್ಷೆ ಮಾಡಿಸದೆ ಗ್ರಾಮಕ್ಕೆ ಬಂದ್ರೆ 25000 ದಂಡ!| ಮಧ್ಯಾಹ್ನದ ನಂತರ ಗ್ರಾಮ ಲಾಕ್‌ಡೌನ್! ಮೈಸೂರು ಜಿಲ್ಲೆಯ ಗ್ರಾಮದಲ್ಲಿನ ನಿಯಮ.
ಟಿ.ನರಸೀಪುರ(ಜ.12): ಮಾಸ್ಕ್ ಧರಿಸದೇ ಓಡಾಡಿದರೆ 500 ದಂಡ, ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೆ ಹೊರಗಿನಿಂದ ಬರುವವರಿಗೆ 25 ಸಾವಿರ ದಂಡ. ಮಧ್ಯಾಹ್ನದ ನಂತರ ಗ್ರಾಮ ಲಾಕ್‌ಡೌನ್!
ಇದು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡು ಹೋಬಳಿಯ ಕಲಿಯೂರು ಗ್ರಾಮದಲ್ಲಿನ ನಿಯಮ. ಉಲ್ಲಂಘಿಸಿದರೆ ಮುಲಾಜಿಲ್ಲದೆ ಬೀಳುತ್ತೆ ದಂಡ. ಕೊರೋನಾ ನಿಯಂತ್ರಿಸುವ ಬಗ್ಗೆ ಗ್ರಾಮದ ಹಿರಿಯರು ಹಾಗೂ ಮುಖಂಡರು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
undefined
ಕೊರೋನಾ ವೈರಸ್ ಚೀನಾ ಬೇಕಂತಲೆ ಮುಚ್ಚಿಟ್ಟಿತು: ವಿಜ್ಞಾನಿ!
ಕಾವೇರಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ನಡೆಸಿದರೆ ಹಾಗೂ ಜೂಜಾಟ ಆಡುವವರಿಗೆ .25,000 ದಂಡ ವಿಧಿಸುವ ಕಠಿಣ ನಿರ್ಧಾರವನ್ನು ಗ್ರಾಮದಲ್ಲಿ ತೆಗೆದುಕೊಳ್ಳಲಾಗಿದೆ. ಸುಳಿವು ನೀಡುವವರಿಗೆ .5,000 ಬಹುಮಾನ ನೀಡುವುದಾಗಿಯೂ ತಿಳಿಸಲಾಗಿದೆ.
ಆರೋಗ್ಯದ ಬಗ್ಗೆ ವೈದ್ಯರಿಂದ ದೃಢೀಕರಣ ಪತ್ರ ತರುವವರು ಗ್ರಾಮಕ್ಕೆ ಬರಲು ಆಕ್ಷೇಪವಿಲ್ಲ. ಕೊರೋನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ಕಠಿಣ ಕ್ರಮಗಳಲ್ಲಿ ಯಾವುದೇ ರಾಜಿ ಇಲ್ಲ ಎಂದು ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಹೇಳಿದ್ದಾರೆ.