ರಾಜ್ಯ ಮತ್ತೆ ಲಾಕ್‌ಡೌನ್ ಆಗುತ್ತಾ? ಅಂತರ್ ಜಿಲ್ಲಾ ಸಂಚಾರ ಬಂದ್? ಸಿಎಂ ನಡೆ ಏನು..?

By Suvarna News  |  First Published Jul 12, 2020, 3:42 PM IST

ಲಾಕ್‌ಡೌನ್ ಆಗುತ್ತಾ..? ಅಂತರ್ ಜಿಲ್ಲಾ ಸಂಚಾರ ಬಂದ್ ಆಗುತ್ತಾ? ಅಥವಾ ಕೇವಲ ಸಾವಿರಕ್ಕಿಂತ ಹೆಚ್ಚು ಕೊರೋನಾ ಕೇಸ್ ಇರುವ ಜಿಲ್ಲೆಗಳನ್ನ ಮಾತ್ರ ಲಾಕ್‌ಡೌನ್ ಮಾಡಲಾಗುತ್ತಾ? 


ಬೆಂಗಳೂರು, (ಜುಲೈ.12): ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ಮತ್ತೆ ಲಾಕ್ ಡೌನ್ ಘೋಷಣೆ ಮಾಡುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಕುರಿತಂತೆ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಕೊರೋನಾ ವೈರಸ್ ಸೋಂಕು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ. ಜೊತೆಗೆ ಕೊರೋನಾ ಹೆಚ್ಚಾಗಿರುವ ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗುವುದು ಎಂದು ಹೇಳಿದರು.

Latest Videos

undefined

ಒಂದು ವಾರ ಬೆಂಗಳೂರು ಕಂಪ್ಲೀಟ್ ಲಾಕ್‌ಡೌನ್; ಸರ್ಕಾರದ ಅಧಿಕೃತ ಆದೇಶ

ಇನ್ನು ನಾಳೆ (ಜುಲೈ.3) ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿನ ಕೋವಿಡ್ 19 ಸ್ಥಿತಿಗತಿಯ ಅವಲೋಕನಕ್ಕಾಗಿ ಎಲ್ಲಾ ಜಿಲ್ಲಾಡಳಿತದೊಂದಿಗೆ ಮಹತ್ವದ ವಿಡಿಯೋ ಸಂವಾದ ನಡೆಸಲಿದ್ದು, ಸೋಮವಾರ ಏನ್ಮಾಡ್ಬೇಕು ಎನ್ನುವುದು ಫೈನಲ್ ಆಗಲಿದೆ ಎಂದು ತಿಳಿಸಿದರು.

ಅಂತರ್ ಜಿಲ್ಲಾ ಸಂಚಾರ ಬಂದ್?
ಹೌದು..ರಾಜ್ಯದಲ್ಲಿ ಲಾಕ್‌ಡೌನ್ ಬದಲಾಗಿ ಅಂತರ್ ಜಿಲ್ಲಾ ಸಂಚಾರವನ್ನು ನಿಷೇಧಿಸುವ ಚಿಂತನೆಗಳ ಸಹ ನಡೆದಿವೆ. ಡಿಸಿಗಳ ಜೊತೆ ಸಭೆಯ ನಂತರ ತಜ್ಞರು ಹಾಗೂ ಹಿರಿಯ ಸಚಿವ ಜೊತೆ ಸಿಎಂ ಒಂದು ತೀರ್ಮಾನ ಕೈಗೊಳ್ಳವು ಸಾಧ್ಯತೆಗಳಿವೆ. ಇನ್ನು ಸಾವಿರಾರಕ್ಕಿಂತ ಹೆಚ್ಚು ಕೇಸ್ ದಾಖಲಾಗಿರುವ ಜಿಲ್ಲೆಗಳನ್ನ ಮಾತ್ರ ಲಾಕ್ ಡೌನ್ ಮಾಡುವ ಪ್ಲಾನ್‌ ಸಹ ಸಿಎಂ ಮುಂದಿವೆ.

ಒಟ್ಟಿನಲ್ಲಿ ಸೋಮವಾರ ನಡೆಯುವ ಜಿಲ್ಲಾಧಿಕಾರಿಗಳ ಸಭೆ ಮಹತ್ವದ ಪಡೆದುಕೊಂಡಿದ್ದು, ಲಾಕ್‌ಡೌನ್ ಆಗುತ್ತಾ..? ಅಂತರ್ ಜಿಲ್ಲಾ ಸಂಚಾರ ಬಂದ್ ಆಗುತ್ತಾ? ಅಥವಾ ಕೇವಲ ಸಾವಿರಕ್ಕಿಂತ ಹೆಚ್ಚು ಕೊರೋನಾ ಕೇಸ್ ಇರುವ ಜಿಲ್ಲೆಗಳನ್ನ ಮಾತ್ರ ಲಾಕ್‌ಡೌನ್ ಮಾಡಲಾಗುತ್ತಾ? ಇವೆಲ್ಲಾ ಪ್ರಶ್ನೆಗಳಿಗೆ ಸೋಮವಾರ ಉತ್ತರ ಸಿಗಲಿದೆ.

click me!