ಹೊಸ ವರ್ಷ: ದೇವರ ದರ್ಶನಕ್ಕೆ ಮುಂದಾದ ಜನ..!

Published : Jan 01, 2023, 10:28 AM IST
ಹೊಸ ವರ್ಷ: ದೇವರ ದರ್ಶನಕ್ಕೆ ಮುಂದಾದ ಜನ..!

ಸಾರಾಂಶ

ಇಂದು(ಭಾನುವಾರ) ಹಾಗೂ ನಾಳೆ(ಸೋಮವಾರ) ಎರಡು ದಿನ ಬೆಳಗಿನ ಜಾವ 3 ಗಂಟೆಯಿಂದ ರಾತ್ರಿ 12 ರವರೆಗೂ ನಿರಂತರವಾಗಿ ಪೂಜೆಗಳು ನಡೆಯಲಿವೆ. ಎರಡು ದಿನಗಳ ಕಾಲ ರಾತ್ರಿ 12ಗಂಟೆವರೆಗೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಬೆಂಗಳೂರು(ಜ.01):  ಹೊಸ ವರ್ಷದ ಹಿನ್ನಲೆಯಲ್ಲಿ ಜನರು ದೇವಾಲಯದತ್ತ ಮುಖ ಮಾಡಿದ್ದಾರೆ. ನಗರದ ವೈಯ್ಯಾಲಿಕಾವಲ್ ಟಿಟಿಡಿಯಲ್ಲಿ ಇಂದು(ಭಾನುವಾರ) ವಿಶೇಷ ಪೂಜೆ ನಡೆದಿದೆ. ಬೆಳಗಿನ ಜಾವ 3 ಗಂಟೆಯಿಂದಲೇ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಇಂದು(ಭಾನುವಾರ) ಹಾಗೂ ನಾಳೆ(ಸೋಮವಾರ) ಎರಡು ದಿನ ಬೆಳಗಿನ ಜಾವ 3 ಗಂಟೆಯಿಂದ ರಾತ್ರಿ 12 ರವರೆಗೂ ನಿರಂತರವಾಗಿ ಪೂಜೆಗಳು ನಡೆಯಲಿವೆ. ಎರಡು ದಿನಗಳ ಕಾಲ ರಾತ್ರಿ 12ಗಂಟೆವರೆಗೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಎರಡೂ ದಿನ ಭಕ್ತರಿಗೆ 1 ಲಕ್ಷ ಉಚಿತ ಲಡ್ಡು ವಿತರಣೆ ಮಾಡಲಾಗುತ್ತದೆ.  ಹೊಸ ವರ್ಷ ಹಾಗೂ ನಾಳೆ ವೈಕುಂಠ ಏಕಾದಶಿ ಇರುವ ಹಿನ್ನಲೆಯಲ್ಲಿ 1 ಲಕ್ಷ ಭಕ್ತರು‌ ಬರುವ ನಿರೀಕ್ಷೆ ಇದೆ. 

ಅಣ್ಣಾವ್ರು ಅತಿ ಹೆಚ್ಚು ನಂಬುತ್ತಿದ್ದ ಬೂದುಬಾಳು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ದೊಡ್ಮನೆ ಕುಟುಂಬ

ನಾಡಿನೆಲ್ಲೆಡೆ ಇಂದು ಹೊಸವರ್ಷದ ಸಂಭ್ರಮ

ಇಂದು ವರ್ಷದ ಮೊದಲ ದಿನ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಜನರು ದೇವಸ್ಥಾನಗಳಿಗೆ ಆಗಮಿಸುತ್ತಿದ್ದಾರೆ. ವರ್ಷದ ಮೊದಲ ದಿನ ದೇವರ ದರ್ಶನ ಪಡೆದು ಧನ್ಯರಾಗುತ್ತಿರುವ ಜನರು. ಬೆಂಗಳೂರಿನ ಮಲ್ಲೇಶ್ವರಂ ಸಾಯಿಬಾಬಾ ದೇವಾಲಯದಲ್ಲಿ ಸಂಭ್ರಮ ಮನೆ ಮಾಡಿದೆ. ದೇವಾಲಯಗಳು ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿವೆ. 

ನಿನ್ನೆ ಸಂಜೆಯಿಂದ ನಿರಂತರವಾಗಿ ಸಾಯಿಬಾಬಾರಿಗೆ ಪೂಜೆ ನಡೆಯುತ್ತಿದೆ. ರಾತ್ರಿ 1 ಗಂಟೆಯವರೆಗೆ ವಿಷ್ಣು ಸಹಸ್ರನಾಮ ಪ್ರಾರ್ಥನೆ ಮೂಲಕ ಭಕ್ತರು ಹೊಸ ವರ್ಷವನ್ನ ಬರಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ 6 ಗಂಟೆಯಿಂದ ದೇವರಿಗೆ ನಿರಂತರವಾಗಿ ಪೂಜೆಗಳು ನಡೆಯುತ್ತಿವೆ. ಇಂದು ದಿನಪೂರ್ತಿ ದೇವಸ್ಥಾನ ಓಪನ್ ಇದ್ದು ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌