ನಾನು ಮಾಜಿ ಪ್ರಧಾನಿ ಎಂಬುದೇ ಜನರಿಗೆ ಮರೆತು ಹೋಗಿದೆ: ದೇವೇಗೌಡ ವಿಷಾದ

By Web Desk  |  First Published Oct 17, 2019, 7:49 AM IST

ನಾನು ಮಾಜಿ ಪ್ರಧಾನಿ ಎಂಬುದೇ ಜನರಿಗೆ ಮರೆತು ಹೋಗಿದೆ: ಗೌಡ| ಮೋದಿ ಹೆಸರಲ್ಲೇ ರಾಜ್ಯದಲ್ಲಿ ಉಪಚುನಾವಣೆ| ಅವರಿಗೆ ಸರಿಸಮನಾದ ನಾಯಕ ಬೇಕಾಗಿದೆ


ಬೆಂಗಳೂರು[ಅ.17]: ರಾಜ್ಯದ ಉಪ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿಯೇ ನಡೆಯಲಿದ್ದು, ಅವರಿಗೆ ಸರಿಸಮನಾದ ನಾಯಕನ ಅಗತ್ಯ ಇದೆ. ಆದರೆ, ನಾನು ಮಾಜಿ ಪ್ರಧಾನಿ ಎಂಬುದು ಎಷ್ಟೋ ಜನರಿಗೆ ಮರೆತು ಹೋಗಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ವಿಷಾದಿಸಿದ್ದಾರೆ.

ಬಿಜೆಪಿ ಶಾಸಕ ಪಿ.ರಾಜೀವ್‌ಗೆ ಮಹತ್ವದ ಹುದ್ದೆ ನೀಡಿದ ರಾಜ್ಯ ಸರ್ಕಾರ

Tap to resize

Latest Videos

undefined

ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯು ರಾಜ್ಯದ ನಾಯಕತ್ವದ ವ್ಯಕ್ತಿತ್ವದ ಮೇಲೆ ನಡೆಯಲ್ಲ. ಏನಿದ್ದರೂ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ನಡೆಯಲಿದೆ. ಅವರಿಗೆ ಸರಿಸಮನಾದ ನಾಯಕನ ಅಗತ್ಯ ಇದೆ. ನಾನು ಮಾಜಿ ಪ್ರಧಾನಿ ಎಂಬುದು ಎಷ್ಟೋ ಜನರಿಗೆ ಮರೆತೇ ಹೋಗಿದೆ. ಮೋದಿಯನ್ನು ಎದುರಿಸಲು ಸಮರ್ಥ ನಾಯಕ ಬೇಕಿದೆ. ಉಪಚುನಾವಣೆಯಲ್ಲಿ ಅನರ್ಹಗೊಂಡಿರುವ ಶಾಸಕರ ಪೈಕಿ ಎಷ್ಟುಮಂದಿ ಗೆಲ್ಲುತ್ತಾರೋ ಎಂಬುದು ಗೊತ್ತಿಲ್ಲ ಎಂದು ಹೇಳಿದರು.

'ನನ್ನ ಮೇಲೆ ಐಟಿ ದಾಳಿಯಾದ್ರೆ ಅದಕ್ಕೆ ಹೆಚ್. ಡಿ.ದೇವೇಗೌಡ್ರೆ ಕಾರಣ'

ಉಪಚುನಾವಣೆ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಇರುತ್ತೋ, ಇಲ್ಲವೋ ಎಂಬ ಖಾತ್ರಿ ಇಲ್ಲ. ನಮ್ಮದು ಪ್ರಾದೇಶಿಕ ಪಕ್ಷ, ರಾಷ್ಟ್ರೀಯ ಪಕ್ಷವಲ್ಲ. ಪಕ್ಷವನ್ನು ಸದೃಢ ಹಾಗೂ ಸಂಘಟನೆಗೊಳಿಸಲು ಅವಿರತವಾಗಿ ಶ್ರಮಿಸುತ್ತೇನೆ ಎಂದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪತಿಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದೇವೇಗೌಡ, ದೇಶದ ಆರ್ಥಿಕತೆ ಸುಧಾರಣೆಗಾಗಿ ಮಾಜಿ ಪ್ರಧಾನಿಗಳಾದ ನರಸಿಂಹರಾವ್‌, ಮನಮೋಹನ್‌ ಸಿಂಗ್‌ ಆಡಳಿತಾವಧಿಯಲ್ಲಿ ಏನು ಮಾಡಿದ್ದರು ಎಂಬುದು ಗೊತ್ತಿದೆ. ಪ್ರಧಾನಿ ಮೋದಿಗೆ ಅದು ಗೊತ್ತಿಲ್ಲ ಎಂದು ಹೇಳುವುದಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದರು.

ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಹಿಂಪಡೆಯಲು ಜನಸಂಘದ ಒತ್ತಾಯ ಇರಬೇಕು. ಮಾಜಿ ಪ್ರಧಾನಿ ದಿವಂಗತ ಎ.ಬಿ.ವಾಜಪೇಯಿ ಅವರ ಕಾಲದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ಸಂಬಂಧ ಎಷ್ಟುಅಧಿಕಾರ ಬಿಟ್ಟುಕೊಡಬಹುದು ಎಂಬುದರ ಬಗ್ಗೆ ಚರ್ಚಿಸಲಾಗಿತ್ತು. ಆಗ ಉಪಪ್ರಧಾನಿಯಾಗಿದ್ದ ಎಲ್‌.ಕೆ.ಅಡ್ವಾಣಿ ಅವರು ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡು ಬರುವಂತೆ ಸೂಚಿಸಿದರು. ಈಗ ಎರಡು ಸಭೆಯಲ್ಲಿ ತಮ್ಮ ನಿರ್ಧಾರವನ್ನು ಪಾಸ್‌ ಮಾಡಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಪಕ್ಷದ ಸೂಚನೆ ಪಾಲನೆ:

ಬಿಜೆಪಿ ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಕೆಲವು ಸಚಿವರು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಹೈಕಮಾಂಡ್‌ ಸೂಚನೆ ಪಾಲನೆ ಮಾಡಲಾಗಿದೆ. ಎಲ್ಲರಿಗೂ ಪಕ್ಷ ಮುಖ್ಯವಾಗಿರುತ್ತದೆ ಎಂದರು.

click me!