Mysore ಹಿಂದೂ ಧರ್ಮ ಮಾತ್ರ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಕೆಲಸವಾಗುತ್ತಿದೆ

Kannadaprabha News   | Asianet News
Published : Mar 05, 2022, 04:45 AM IST
Mysore ಹಿಂದೂ ಧರ್ಮ ಮಾತ್ರ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಕೆಲಸವಾಗುತ್ತಿದೆ

ಸಾರಾಂಶ

- ಸಾಂಸ್ಕೃತಿಕ ದಾಳಿ ಕುರಿತು ನಾಳೆ ಜನಜಾಗೃತಿ - ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ವಿಚಾರ ಸಂಕಿರಣ - ಹಿಂದೂ ಧರ್ಮಕ್ಕಿಂತ ಹೆಚ್ಚಾಗಿ ಜೈನ, ಬೌದ್ಧ ಧರ್ಮ ಕೆಲಸ ಮಾಡಿದೆ

ಮೈಸೂರು (ಮಾ.5): ಕಲೆ (Art), ಸಾಹಿತ್ಯ (Literature), ಸಂಗೀತ (Music) ಮತ್ತು ಶಿಕ್ಷಣ (Education) ಕ್ಷೇತ್ರದ ಮೇಲೆ ಉಂಟಾಗುತ್ತಿರುವ ಸಾಂಸ್ಕೃತಿಕ ದಾಳಿ (cultural attacks) ಮತ್ತು ಅದರ ಅಪಾಯಗಳ ಕುರಿತು ಜನಜಾಗೃತಿ (People Awareness) ಮೂಡಿಸಲು ಮಾ. 6 ರಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದವತಿಯಿಂದ (Progressive organization) ವಿಚಾರ ಸಂಕಿರಣ (Seminar) ಆಯೋಜಿಸಲಾಗಿದೆ. ಇತ್ತೀಚೆಗೆ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು ಹೆಚ್ಚಾಗಿದೆ. ಜಾತಿ ಆಧಾರದ ಮೇಲೆ ಆಡಳಿತ ನಡೆಸಲಾಗುತ್ತಿದೆ. ಹಿಂದೂ (Hindu) ಧರ್ಮಕ್ಕಿಂತ ಹೆಚ್ಚಾಗಿ ಜೈನ, ಬೌದ್ಧ ಧರ್ಮ ಕೆಲಸ ಮಾಡಿವೆ. ಆದರೆ ಎಲ್ಲಾ ಧರ್ಮಗಳು ನಾಶವಾಗಿ ಕೇವಲ ಹಿಂದೂ ಧರ್ಮ ಮಾತ್ರ ಉಳಿಯಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಜನಮಾನಸವನ್ನು ಹಿಂದೂ ಧರ್ಮದ ಕಡೆಗೆ ಕರೆದೊಯ್ಯುವ ಸಂಚು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಹಿರಿಯ ಸಮಾಜವಾದಿ ಪ. ಮಲ್ಲೇಶ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿಂದೂ ಧರ್ಮಕ್ಕಿಂತ ಹೆಚ್ಚಾಗಿ ಜೈನ, ಬೌದ್ಧ ಧರ್ಮ ಕೆಲಸ ಮಾಡಿವೆ. ಆದರೆ, ಎಲ್ಲಾ ಧರ್ಮಗಳು ನಾಶವಾಗಿ ಕೇವಲ ಹಿಂದೂ ಧರ್ಮ ಮಾತ್ರ ಉಳಿಯಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಎನ್‌ಇಟಿಯಲ್ಲೂ ಇದೇ ಹುನ್ನಾರವಿದ್ದು, ಇದಕ್ಕೆ ನಮ್ಮ ಪ್ರತಿರೋಧವಿದೆ. ರಂಗಾಯಣ ನಿರ್ದೇಶಕರನ್ನು ಬದಲಿಸಬೇಕೆಂಬ ನಮ್ಮ ಒತ್ತಾಯದ ಹೊರತಾಗಿಯೂ ಸರ್ಕಾರ ಅವರನ್ನೇ ಮುಂದುವರಿಸಿದೆ. ಅವರ ಏಕಮುಖ ಚಿಂತನೆ, ಪ್ರತಿರೋಧ ಶಕ್ತಿಯನ್ನು ಹತ್ತಿಕ್ಕುವ ಸಂಚಿನ ವಿರುದ್ಧ ಸಂಘಟನೆಯಾಗಿ ಹೋರಾಟ ಮಾಡಬೇಕಿರುವುದರಿಂದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಇಂತಹ ಮನಸ್ಸುಗಳು ರಂಗಾಯಣದ ಕಡೆಗೆ ಸುಳಿಯದಂತೆ ಮಾಡಬೇಕು. ಮೈಸೂರಿನಿಂದ ಏನೇ ಹೋರಾಟ ಮಾಡಿದರೂ ರಾಷ್ಟ್ರಮಟ್ಟಕ್ಕೆ ಹೋಗುವುದರಿಂದ ನಮ್ಮ ಈ ಹೋರಾಟವೂ ದೇಶಕ್ಕೆ ತಲುಪಲಿದೆ ಎಂದು ಅವರು ಹೇಳಿದರು.

ರಂಗಾಯಣ (Rangayana) ಮಾಜಿ ನಿರ್ದೇಶಕ ಬಸವಲಿಂಗಯ್ಯ (Basavalingaih)ಮಾತನಾಡಿ, ರಂಗಾಯಣ ನಾಟಕದ ಮೂಲಕ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ, ಪ್ರತಿಯೊಬ್ಬರ ಅಭಿಪ್ರಾಯ ವ್ಯಕ್ತಪಡಿಸುವ ಅಭಿವ್ಯಕ್ತ ವೇದಿಕೆ. ಆದರೆ, ಈ ಅಭಿವ್ಯಕ್ತಿಯೇ ಸಂಕಷ್ಟದಲ್ಲಿದೆ. ಸಂಸ್ಕೃತಿ ಬಿಕ್ಕಟ್ಟು ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಹಿಂದೆ ನಾನು ರಂಗಾಯಣದ ನಿರ್ದೇಶಕನಾಗಿದ್ದಾಗ ಪೊಲಿಟಿಕಲ್‌ ಅಜೆಂಡಾ ಹೇರುವ ಕೆಲಸ ಮಾಡಿರಲಿಲ್ಲ. ಆದರೆ, ಈಗಿನ ನಿರ್ದೇಶಕರು ನೇರವಾಗಿಯೇ ಪೊಲಿಟಿಕಲ್‌ ಅಜೆಂಡಾ ಹೇರುತ್ತಿದ್ದು, ಜಾತಿವಾದಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಚರಿತ್ರೆಯನ್ನು ವಿಕೃತಿಗೊಳಿಸಲಾಗುತ್ತಿದ್ದು, ಯುವಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರಶ್ನಿಸುವವರನ್ನೇ ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಸಂಸ್ಕೃತಿ ಮೇಲೆ ಆಗುತ್ತಿರುವ ಈ ಎಲ್ಲಾ ದಾಳಿಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದರು.

'ಇಷ್ಟು ವರ್ಷ ಏನೆಲ್ಲಾ ಚಿಂತನೆಗಳನ್ನ ಮಾಡಿದ್ದೇವೋ ಆ ವಿಚಾರಕ್ಕೆ ಪೂಕರವಾಗಿ ಸರ್ಕಾರ ನಡೆಯುತ್ತಿದೆ'
ರಂಗಾಯಣ ಮಾಜಿ ನಿರ್ದೇಶಕ ಎಚ್‌. ಜನಾರ್ಧನ್‌ ಮಾತನಾಡಿ, ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ತಾಯಿ ಶೀರ್ಷಿಕೆಯಡಿ ನಡೆಯುತ್ತಿದ್ದರೂ ತಾಯಿ ಕುರಿತು ಒಂದು ಒಂದು ನಾಟಕವೂ ಇಲ್ಲ. ಸಲಹೆ ನೀಡಿದರೆ ಸ್ವೀಕರಿಸುವ ಮನೋಧರ್ಮವೂ ಇಲ್ಲದ ನಿರ್ದೇಶಕರು ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ. ಪ್ರಸ್ತುತ ಪ್ರಜ್ಞಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತಿದ್ದು, ಸಾರ್ವಜನಿಕ, ಸಾಂವಿಧಾನಿಕ ಸಂಸ್ಥೆಗಳು ವಿಚಿತ್ರ, ವಿಕೃತ ಸಂಸ್ಕೃತಿ ಹುಟ್ಟುಹಾಕುತ್ತಿವೆ. ಕನ್ನಡ, ಸಂಸ್ಕೃತಿ ವಿವಿ ಮುಚ್ಚುವ ಸ್ಥಿತಿಗೆ ತಲುಪಿವೆ. ರಂಗಾಯಣ ನಡೆಸುತ್ತಿರುವುದು ಬಹುರೂಪಿಯೋ, ಬಹುವಿರೂಪಿಯೋ ತಿಳಿಯುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.

ಮಚ್ಚು ಲಾಂಗು ಹಿಡ್ಕೊಂಡು ಹೊಡೆದಾಡುತ್ತೇವೆ ಎಂದರೆ ಇದು ಅಷ್ಘಾನಿಸ್ತಾನವಲ್ಲ: ಮುತಾಲಿಕ್‌
ಪ್ರಸ್ತುತ ಸಾಂಸ್ಕೃತಿಕ ಬಿಕ್ಕಟ್ಟುಗಳು ಕುರಿತು ಮಾ. 6 ರಂದು ಬೆಳಗ್ಗೆ 10.30ಕ್ಕೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದ್ದು, ಸಾಹಿತಿ ಪೊ›.ಎಸ್‌.ಜಿ. ಸಿದ್ದರಾಮಯ್ಯ ಉದ್ಘಾಟಿಸುವರು. ಹಿರಿಯ ಸಮಾಜವಾದಿ ಪ. ಮಲ್ಲೇಶ್‌ ಅಧ್ಯಕ್ಷತೆ ವಹಿಸಲಿದ್ದು, ರಂಗಾಯಣದ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ ಪ್ರಾಸ್ತಾವಿಕ ಭಾಷಣ ಮಾಡುವರು. ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ, ಜೆ. ಲೋಕೇಶ್‌ ಅತಿಥಿಯಾಗಿ ಪಾಲ್ಗೊಳ್ಳುವುದಾಗಿ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚಿಂತಕ ನಾ. ದಿವಾಕರ್‌, ಕೆ.ಆರ್‌. ಗೋಪಾಲಕೃಷ್ಣ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್