ಪರಸ್ಪರ ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ ಜೋಡಿಗೆ ಯುವತಿ ಪೋಷಕರು ಅಡ್ಡಿಯಾಗಿರುವ ಹಿನ್ನೆಲೆ ಪ್ರೇಮಿಗಳು ರಕ್ಷಣೆ ಕೋರಿ ಎಸ್‌ಪಿ ಕಚೇರಿ ಮೆಟ್ಟಿಲೇರಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ (ಜು.16): ಪರಸ್ಪರ ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ ಜೋಡಿಗೆ ಯುವತಿ ಪೋಷಕರು ಅಡ್ಡಿಯಾಗಿರುವ ಹಿನ್ನೆಲೆ ಪ್ರೇಮಿಗಳು ರಕ್ಷಣೆ ಕೋರಿ ಎಸ್‌ಪಿ ಕಚೇರಿ ಮೆಟ್ಟಿಲೇರಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ರವಿಕಿರಣ್, ಸುಪ್ರೀತಾ ಯಾದಗಿರಿ ಜಿಲ್ಲಾ ಎಸ್‌ಪಿ ಕಚೇರಿ ಮುಂದೆ ಅಳಲು ತೋಡಿಕೊಂಡ ಪ್ರೇಮಿಗಳು. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುಲಕಲ್ ಗ್ರಾಮದವನಾದ ರವಿಕಿರಣ್, ಧಾರವಾಡ ಯುವತಿಯಾಗಿರುವ ಸುಪ್ರಿತಾ ಇಬ್ಬರು ಕಳೆದೊಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಇಬ್ಬರ ಜಾತಿ ಬೇರೆಬೇರೆಯಾಗಿರುವುದರಿಂದ ಯುವತಿ ಪೋಷಕರು ಮದುವೆಗೆ ನಿರಾಕರಿಸಿದ್ದಾರೆ. ರವಿಕಿರಣ ಜೊತೆ ಮದುವೆಯಾಗೋದಾಗಿ ಪೋಷಕರಿಗೆ ತಿಳಿಸಿರುವ ಯುವತಿ. ಯುವತಿಯ ಮಾತಿಗೆ ವಿರೋಧ ವ್ಯಕ್ತಪಡಿಸಿರುವ ಕುಟುಂಬಸ್ಥರು. ಈ ಹಿನ್ನೆಲೆ ಮನೆಬಿಟ್ಟು ಯುವಕನೊಂದಿಗೆ ಯಾದಗಿರಿಗೆ ಬಂದಿರುವ ಯುವತಿ ಸುಪ್ರಿತಾ.
undefined
ಮಾಟ ತೆಗಿಸೋದಾಗಿ ಇಡೀ ಕುಟುಂಬಕ್ಕೆ ಲಕ್ಷ ಲಕ್ಷ ಉಂಡೆನಾಮ; ಸ್ನೇಹಿತನಿಂದಲೇ ವಂಚನೆ!
ಪರಿಚಯ ಆಗಿದ್ದು ಹೇಗೆ?
ಯಾದಗಿರಿ ಜಿಲ್ಲೆಯ ಹುಲಕಲ್ ಗ್ರಾಮದ ಯುವಕ ರವಿಕಿರಣ ಸಹೋದರ ಭೀಮರಾಯ ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಆಗಾಗ ಸಹೋದರನ ಮಾತಾಡಿಸಿಕೊಂಡು ಬರಲು ಧಾರವಾಡಕ್ಕೆ ಹೋಗುತ್ತಿದ್ದ ರವಿಕಿರಣ. ಹೀಗೆ ಧಾರವಾಡಕ್ಕೆ ಬಂದ ವೇಳೆ ಯುವತಿ ಸುಪ್ರಿತಾ ಪರಿಚಯವಾಗಿದ್ದಾಳೆ. ಬಳಿಕ ಇಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದಾರೆ. ಒಂದು ವರ್ಷದ ಬಳಿಕ ಮದುವೆಯಾಗುವ ತೀರ್ಮಾನಕ್ಕೆ ಬಂದಿರುವ ಜೋಡಿಗಳು. ಆದರೆ ಮದುವೆಗೆ ಜಾತಿ ಬೇರೆಯಾಗಿದೆ ಎಂದು ಪೋಷಕರು ನಿರಾಕರಿಸಿದ್ದಾರೆ. ಹೀಗಾಗಿ ತಮ್ಮ ಮದುವೆಗೆ ಪೊಲೀಸರು ರಕ್ಷಣೆ ನೀಡುವಂತೆ ಎಸ್‌ಪಿಗೆ ಮನವಿ ಮಾಡಿರವ ಜೋಡಿ.
ಪ್ರೀತಿಸಿ ಮದುವೆಯಾದ ಕುಟುಂಬದಲ್ಲಿ ಗಂಡ ಸಾವು; ಮಗನನ್ನು ನೇಣು ಬಿಗಿದು, ತಾನೂ ಆತ್ಮಹತ್ಯೆಗೆ ಶರಣಾದ ತಾಯಿ!
ಹುಡುಗನ ಕುಟುಂಬದಿಂದ ಗ್ರೀನ್ ಸಿಗ್ನಲ್
ಯುವತಿಯ ಪೋಷಕರು ವಿರೋಧದ ನಡುವೆಯೂ ಯುವಕ ರವಿಕಿರಣ ಪೋಷಕರು ಅಂತರ್ಜಾತಿ ವಿವಾಹಕ್ಕೆ ಒಪ್ಪಿಗೆ ನೀಡಿದ್ದಾರೆ. ಯುವತಿಯ ಪೋಷಕರು ಒಪ್ಪದಿದ್ದಲ್ಲಿ ರಿಜಿಸ್ಟ್ರಾರ್ ಮದುವೆ ಮಾಡಲು ಮುಂದಾಗಿರುವ ಪೋಷಕರು. ಈ ನಡುವೆ ಯುವತಿಯ ಪೋಷಕರಿಂದ ಬೆದರಿಕೆ ಜೀವ ಭಯಕ್ಕೆ ಪೊಲೀಸರ ರಕ್ಷಣೆ ಕೋರಿರುವ ಪ್ರೇಮಿಗಳು.
'ನಮ್ಮ ಪೋಷಕರ ಬಳಿ ಪ್ರೀತಿ ಬಗ್ಗೆ ಹೇಳಿದ್ರೂ ಮದುವೆಗೆ ಒಪ್ಪುತ್ತಿಲ್ಲ. ಹೀಗಾಗಿ ನಾನೇ ಸ್ವಇಚ್ಛೆಯಿಂದ ಮನೆಬಿಟ್ಟು ಪ್ರಿಯಕರನ ಜೊತೆಗೆ ಮದುವೆ ಆಗಲು ಬಂದಿದ್ದೇನೆ' ಎಂದಿರುವ ಯುವತಿ ಸುಪ್ರಿತಾ.