ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ : ಬೆಂಗಳೂರಲ್ಲಿ ವ್ಯಕ್ತಿ ಅರೆಸ್ಟ್

By Suvarna NewsFirst Published Sep 20, 2021, 1:05 PM IST
Highlights
  • ಮಿಲಿಟರಿ ಇಂಟೆಲಿಜೆನ್ಸ್ ಮಾಹಿತಿ ಮೇಲೆ‌ ಸಿಸಿಬಿ ಪೊಲೀಸರು ಕಾರ್ಯಾಚರಣೆ  
  • ದೇಶದ ಪ್ರಮುಖ ಸ್ಥಳ, ಕಟ್ಟಡ, ರಕ್ಷಣಾ ಸಂಸ್ಥೆಯ ಫೋಟೋ ತೆಗೆದ ವ್ಯಕ್ತಿ ಬಂಧನ

 ಬೆಂಗಳೂರು (ಸೆ.20): ಮಿಲಿಟರಿ ಇಂಟೆಲಿಜೆನ್ಸ್ ಮಾಹಿತಿ ಮೇಲೆ‌ ಸಿಸಿಬಿ ಪೊಲೀಸರು ಕಾರ್ಯಾಚರಣೆ  ನಡೆಸಿ ದೇಶದ ಪ್ರಮುಖ ಸ್ಥಳ, ಕಟ್ಟಡ, ರಕ್ಷಣಾ ಸಂಸ್ಥೆಯ ಫೋಟೋ ತೆಗೆದ ವ್ಯಕ್ತಿಯನ್ನು ಬಂಧಿಸಲಾಗಿದೆ. 

ರಾಜಸ್ಥಾನ ಮೂಲದ ವ್ಯಕ್ತಿಯನ್ನಿಂದು ಬಂಧಿಸಲಾಗಿದೆ.  ಈತನನ್ನು ಜೀತೇಂದ್ರ ರಾಥೋಡ್ ಎಂದು ಗುರುತಿಸಲಾಗಿದೆ.  ತೆಗೆದ ಫೋಟೋಗಳನ್ನು ವಿದೇಶಿ ಏಜೆನ್ಸಿಗಳಿಗೆ ಕಳುಹಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ. 

ಬೆಂಗಳೂರಿನ  ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ  ಆರೋಪಿ ಬಂಧನವಾಗಿದೆ.

ಅಫೀಷಿಯಲ್ ಸೀಕ್ರೆಟ್‌ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿದ್ದು,  ಮಿಲಿಟರಿ ಮಾಹಿತಿ ಆಧಾರದಲ್ಲಿ   ಆರೋಪಿ ಬೆಂಗಳೂರಿನಲ್ಲಿರೋ ಬಗ್ಗೆ ಮಿಲಿಟರಿ ಇಂಟೆಲಿಜೆನ್ಸ್‌ ಮಾಹಿತಿ ನೀಡಿದ್ದು, ಇದೇ ಮಾಹಿತಿ ಆಧಾರದಲ್ಲಿ ಬಂಧನವಾಗಿದೆ.

ತಾಲಿಬಾನ್ ಉಗ್ರಕೋಟೆಯಲ್ಲಿ ಪಾಕ್ ಏಜೆಂಟ್, ಇಂಡಿಯಾ ಆನ್ ಹೈ ಅಲರ್ಟ್.!
 
ರಾಜಸ್ಥಾನದ ಬಾರ್ಮರ್ ಹಳ್ಳಿಯವನಾಗಿದ್ದು, ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ.  ಪಾಕಿಸ್ತಾನದ ಐಎಸ್ಐ ಅಧಿಕಾರಿಗಳ ಜೊತೆ ನೇರ ಸಂಪರ್ಕ ಹೊಂದಿದ್ದು,  ವಾಟ್ಸಪ್ ಸಂದೇಶ, ಕಾಲ್ ಮೂಲಕ ಸೇನೆಯ ಸ್ಥಳ ಹಾಗೂ ಮಾಹಿತಿ ಕಳುಹಿಸಿದ್ದ. 

ಈತನ ಬಂಧನದ ಬಳಿಕ ಮಿಲಿಟರಿಯ ಕ್ಯಾಪ್ಟನ್ ಯೂನಿಫಾರ್ಮ್ ಕೂಡ ವಶಕ್ಕೆ ಪಡೆಯಲಾಗಿದೆ.  

ಇನ್ನು ಬಾರ್ಮರ್ ನಲ್ಲಿರುವ ಮಿಲಿಟರಿ ಸ್ಟೇಷನ್ ನ ಎಲ್ಲಾ ಮಾಹಿತಿಯನ್ನೂ ಈತ ಶೇರ್ ಮಾಡಿದ್ದನೆನ್ನಲಾಗಿದೆ. ಬಾರ್ಮರ್ ನ ವೆಹಿಕಲ್ ಮೂವ್ ಮೆಂಟ್ ಸೇರಿ ಹಲವು ವಿಡಿಯೋ ಐಎಸ್ಐ ಅಧಿಕಾರಿಗಳಿಗೆ ಕಳುಹಿಸಿದ್ದ. ಸದ್ಯ  ಈತನನ್ನು ಸಿಸಿಬಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. 

click me!