Hijab Row: ಕಾಲೇಜು ಆರಂಭವೇ ನಮ್ಮ ಮೊದಲ ಆದ್ಯತೆ: ಸಿಎಂ ಬೊಮ್ಮಾಯಿ

Kannadaprabha News   | Asianet News
Published : Feb 13, 2022, 04:57 AM IST
Hijab Row: ಕಾಲೇಜು ಆರಂಭವೇ ನಮ್ಮ ಮೊದಲ ಆದ್ಯತೆ: ಸಿಎಂ ಬೊಮ್ಮಾಯಿ

ಸಾರಾಂಶ

*  ಭೇದ- ಭಾವ ಇಲ್ಲದೆ ವಿದ್ಯಾರ್ಜನೆ ಮಾಡುವ ವಾತಾವರಣ ಸೃಷ್ಟಿಸುತ್ತೇವೆ *  ಹಿಜಾಬ್‌ ವಿವಾದ ಕೋರ್ಟಲ್ಲಿದೆ, ಮಾತಾಡಲ್ಲ: ಬೊಮ್ಮಾಯಿ *  ವಿವಾದ ನಿಲ್ಲಿಸಿ, ಶಿಕ್ಷಣ ನೀಡಿ: ಹೋರಾಟಗಾರ್ತಿ ಸಹಪಾಠಿ  

ಬೆಳಗಾವಿ/ಹಾವೇರಿ(ಫೆ.13): ಹಿಜಾಬ್‌-ಕೇಸರಿ(Hijab-Safrron) ಶಾಲು ವಿವಾದ ಕುರಿತ ಪ್ರಕರಣ ನ್ಯಾಯಾಲಯದಲ್ಲಿದೆ. ಆ ಕುರಿತು ಹೆಚ್ಚು ಮಾತನಾಡುವುದಿಲ್ಲ. ಸದ್ಯ ರಾಜ್ಯದಲ್ಲಿ ಶಾಂತಿ ನೆಲೆಸಬೇಕು. ಮಕ್ಕಳಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಮೂಡದಂತೆ ಕಾಲೇಜು ಆರಂಭವಾಗಬೇಕು ಎಂಬುದೇ ನನ್ನ ಮೊದಲ ಆದ್ಯತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದರು.

ರಾಜ್ಯದ(Karnataka)ಶಾಲಾ-ಕಾಲೇಜುಗಳಲ್ಲಿ(School-Colleges) ತೀವ್ರ ಸಂಘರ್ಷಕ್ಕೆ ಕಾರಣವಾಗಿರುವ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿ ಬೆಳಗಾವಿ(Belagavi) ಹಾಗೂ ಹಾವೇರಿಯಲ್ಲಿ(Haveri) ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಮಕ್ಕಳು ಯಾವುದೇ ಭೇದ-ಭಾವವಿಲ್ಲದೆ ಒಮ್ಮನಸ್ಸಿನಿಂದ ಮೊದಲಿನಂತೆ ವಿದ್ಯಾರ್ಜನೆ ಮಾಡುವ ವಾತಾವರಣ ನಿರ್ಮಾಣ ಆಗಬೇಕು. ಅದೇ ನನ್ನ ಮೊದಲ ಆದ್ಯತೆ. ಹೈಕೋರ್ಟ್‌ ಕೂಡ ಇದನ್ನೇ ಹೇಳಿದೆ. ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಯೇ ನನ್ನ ಮೊದಲ ಆದ್ಯತೆ. ಈ ಕುರಿತು ರಾಜ್ಯ ಸರ್ಕಾರದಿಂದ(Government of Karnataka) ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

Hijab Row: ಕೋರ್ಟ್‌ ತೀರ್ಪು ಬರುವರೆಗೂ ಕಾಯೋಣ: ಸಚಿವ ಕಾರಜೋಳ

ಹಿಜಾಬ್‌-ಕೇಸರಿ ಶಾಲು ಸಂಘರ್ಷದ ವಿವಾದ ನ್ಯಾಯಾಲಯದಲ್ಲಿದ್ದು, ನಿತ್ಯ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಮಧ್ಯಂತರ ಆದೇಶ ನೀಡಲಾಗಿದೆ. ಹೈಕೋರ್ಟ್‌ ಆದೇಶವನ್ನು ಎಲ್ಲರೂ ಸಂಪೂರ್ಣವಾಗಿ ಪಾಲಿಸಬೇಕು ಎಂದು ಹೇಳಿದರು.

ಇದೇ ವೇಳೆ ಹಿಜಾಬ್‌ ಸಂಘರ್ಷದ ಹಿಂದೆ ಕೆಲ ಸಂಘಟನೆಗಳ ಕೈವಾಡ ಇರುವ ಕುರಿತ ಪ್ರಶ್ನೆಗೆ ಅದನ್ನು ತನಿಖಾ ಸಂಸ್ಥೆಗಳು ನೋಡಿಕೊಳ್ಳುತ್ತವೆ ಎಂದಷ್ಟೇ ಪ್ರತಿಕ್ರಿಯಿಸಿದರು.

ಪಿಯು ವಿದ್ಯಾರ್ಥಿಗಳಿಗೂ 15ರವರೆಗೆ ರಜೆ ವಿಸ್ತರಣೆ

ಬೆಂಗಳೂರು:  ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೂ (PUC) ಫೆ.15ರವರೆಗೆ ರಜೆ ವಿಸ್ತರಣೆ ಮಾಡಿ ಶಿಕ್ಷಣ ಇಲಾಖೆ(Department of Education) ಆದೇಶ ಹೊರಡಿಸಿದೆ.

ಶುಕ್ರವಾರ ಕೇವಲ ಡಿಪ್ಲೊಮಾ, ಎಂಜಿನಿಯರಿಂಗ್‌ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ(Students) ಫೆ.16ರವರೆಗೆ ರಜೆ ವಿಸ್ತರಣೆ ಮಾಡಿ ಆದೇಶಿಸಲಾಗಿತ್ತು.

Global remarks on hijab row: ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ, ವಿದೇಶಗಳಿಗೆ ಭಾರತದ ಖಡಕ್ ಎಚ್ಚರಿಕೆ

ಇದೀಗ ಶನಿವಾರ ಆದೇಶ ಹೊರಡಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಫೆ.8ರಂದು ಹೊರಡಿಸಿದ್ದ ಸುತ್ತೋಲೆಯನ್ನು ಮುಂದುವರೆಸುವ ಜೊತೆಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಫೆ.12ರಿಂದ ಫೆ.15ರವರೆಗೆ ಇಲಾಖೆ ವ್ಯಾಪ್ತಿಗೆ ಬರುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ರಜೆ ವಿಸ್ತರಿಸಿ ಆದೇಶ ಹೊರಡಿಸಿದೆ.

ವಿವಾದ ನಿಲ್ಲಿಸಿ, ಶಿಕ್ಷಣ ನೀಡಿ: ಹೋರಾಟಗಾರ್ತಿ ಸಹಪಾಠಿ

ಉಡುಪಿ(Udupi):  ‘ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದೆ. ಪರೀಕ್ಷೆಗೆ(Exam) ಇನ್ನು ಎರಡೇ ತಿಂಗಳು ಇವೆ. ಈ ರೀತಿ ನಿತ್ಯ ಕಾಲೇಜಿನಲ್ಲಿ ಹಿಜಾಬ್‌ ಅಂತ ವಿವಾದ ಮಾಡಿದರೆ ನಮಗೆ ಏಕಾಗ್ರತೆಯಿಂದ ಕಲಿಕೆ ಮಾಡಲು ಸಾಧ್ಯವಿಲ್ಲ. ದಯವಿಟ್ಟು ಈ ಹಿಜಾಬ್‌ ವಿವಾದವನ್ನು(Hijab Controversy) ನಿಲ್ಲಿಸಿ, ನಮ್ಮ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಿ’ ಎಂದು ಉಡುಪಿ ಬಾಲಕಿಯರ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ವಿನಂತಿಸಿದ್ದಾಳೆ. 
ಹಿಜಾಬ್‌ ಹೋರಾಟಗಾರ್ತಿಯರ ಸಹಪಾಠಿ ವಿದ್ಯಾರ್ಥಿನಿಯೊಬ್ಬಳು ಮಾಧ್ಯಮದ ಮುಂದೆ ಬಂದು, ಹಿಜಾಬ್‌ ವಿವಾದದಿಂದ ತಮ್ಮ ಶಿಕ್ಷಣ(Education) ಹಾಳಾಗುತ್ತಿರುವ ಬಗ್ಗೆ ಈ ರೀತಿ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ನಾವು ಚೆನ್ನಾಗಿ ಕಲಿಯಬೇಕು, ಅವರೂ ಚೆನ್ನಾಗಿ ಕಲಿಯಬೇಕು. ಆದ್ದರಿಂದ ಸರ್ಕಾರ ಹಿಜಾಬ್‌ ವಿವಾದವನ್ನು ಬೇಗ ಮುಗಿಸಿ, ತರಗತಿಗಳನ್ನು ಆರಂಭಿಸಿ ಎಂದು ಮನವಿ ಮಾಡಿದ್ದಾಳೆ.

ಕಾಲೇಜು ಆರಂಭವಾದಾಗ ಕಾಲೇಜಿನ ಸಮವಸ್ತ್ರದ(Uniform) ನಿಯಮ ಗೊತ್ತಿಲ್ಲದವರು ಹಿಜಾಬ್‌ ಹಾಕಿಕೊಂಡು ಬರುತ್ತಿದ್ದರು. ಕಾಲೇಜಿನಲ್ಲಿ ನಿಯಮ ತಿಳಿದ ಮೇಲೆ, ತರಗತಿಯಲ್ಲಿ ಎಲ್ಲರೂ ಹಿಜಾಬ್‌ ತೆಗೆದಿರಿಸಿ ಪಾಠ ಕೇಳುತಿದ್ದರು. ಈಗ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರು ಕೂಡ ಕಳೆದ ಒಂದೂವರೆ ವರ್ಷದಿಂದ ಹಿಜಾಬ್‌ ಧರಿಸಿರಲಿಲ್ಲ. ಇಲ್ಲಿವರೆಗೆ ನಮ್ಮ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಯಾವುದೇ ಸಮಸ್ಯೆ ಇಲ್ಲ. ಈಗ ಇವರಿಗೆ ಯಾರೋ ಪ್ರೇರಣೆ ಕೊಟ್ಟು ವಿವಾದ ಮಾಡಿಸಿದ್ದಾರೆ ಎಂದಾಕೆ ಹೇಳಿದ್ದಾಳೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು
ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ