Kageri Emotional ಸುದ್ದಿಗೊಷ್ಠಿಯಲ್ಲಿ ಕಣ್ಣೀರಿಟ್ಟ ಸ್ಪೀಕರ್ ಕಾಗೇರಿ, ಕಾರಣ ಏನು?

Published : Feb 12, 2022, 07:41 PM IST
Kageri  Emotional ಸುದ್ದಿಗೊಷ್ಠಿಯಲ್ಲಿ ಕಣ್ಣೀರಿಟ್ಟ ಸ್ಪೀಕರ್ ಕಾಗೇರಿ, ಕಾರಣ ಏನು?

ಸಾರಾಂಶ

* ಸುದ್ದಿಗೊಷ್ಠಿಯಲ್ಲಿ ಕಣ್ಣೀರಿಟ್ಟ ಸ್ಪೀಕರ್ ಕಾಗೇರಿ * ವ್ಯವಸ್ಥೆಯ ಬಗ್ಗೆ ಮಾತಾಡುತ್ತಾ ವಿಶ್ವೇಶ್ವರ ಹೆಗಡೆ ಕಾಗೇರಿ ಭಾವುಕ * ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುವ ಸಂದರ್ಭದಲ್ಲಿ ಕಣ್ಣೀರು

ಬೆಂಗಳೂರು, (ಫೆ.12): ಚುನಾವಣಾ ಸುಧಾರಣೆ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshvar Hegde Kageri)  ಅವರು ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ.

ಹೌದು..ಸೋಮವಾರದಿಂದ ವಿಧಾನಸಭೆಯ ಜಂಟಿ ಅಧಿವೇಶನ (Joint Session) ಆರಂಭವಾಗಲಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಇಂದು(ಶನಿವಾರ)  ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುವ ಸಂದರ್ಭದಲ್ಲಿ ಕಾಗೇರಿ ಅವರು ಹದಗೆಡುತ್ತಿರುವ ಸಮಾಜವನ್ನು ನೆನೆದು ಭಾವುಕರಾದರು.

ಚುನಾವಣೆ ವ್ಯವಸ್ಥೆ ಸುಧಾರಿಸಬೇಕು: ಸ್ಪೀಕರ್‌ ಕಾಗೇರಿ

ಚುನಾವಣಾ ಸುಧಾರಣೆ ಬಹಳ ದೊಡ್ಡ ಜವಾಬ್ದಾರಿ.ಇದರ ಗಾಂಭೀರ್ಯತೆ ಗೊತ್ತಿರೋದ್ರಿಂದ ಸದನದಲ್ಲಿ ಚರ್ಚೆ ಮಾಡೋದು ಅಗತ್ಯ. ರೆಗ್ಯೂಲರ್ ಬಿಸಿನೆಸ್ ನ್ನ ಬದಿಗಿಟ್ಟು ಇದನ್ನ ಚರ್ಚೆ ಮಾಡೋದಿಲ್ಲ.ಸಂವಿಧಾನದ ಬಗ್ಗೆ ಚರ್ಚೆ ಮಾಡಿದ್ದೇವೆ. ಎಷ್ಟು ಒಳ್ಳೆಯ ಚರ್ಚೆ ಮಾಡಿದ್ದೇವೆ.ಎಷ್ಟು ಸದಸ್ಯರು ಸಂತೋಷ ಪಟ್ಟರು.ಬೇರೆ ಬೇರೆ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ಸ್ವಾಭವ ನಮ್ಮದಾಗಬೇಕು. ಬಸವಣ್ಣನ ನಾಡಿನವರು ನಾವು ಅನುಭವ ಮಂಟಪದಲ್ಲಿ ಚರ್ಚೆಯಾಗಿತ್ತು.ಮುಕ್ತವಾದ ವೇದಿಕೆಗಳಲ್ಲಿ ಚರ್ಚೆಗಳು ಅಗಬೇಕು ಎಂದರು.

ಕೇವಲ ದೋಷಾರೋಪಣೆ ಮತ್ತು ಟೀಕೆಗಳು ಆಗಬಾರದು.ವ್ಯವಸ್ಥೆಗಳ ರೂಪಿಸೋದಕ್ಕೆ ನಮ್ಮ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು. ಸೃಷ್ಟಿಯ ಸತ್ಯದ ಅರಿವನ್ನ ಮುಡಿಸಿಕೊಳ್ಳುವ ಹಂತಕ್ಕೆ ಹೋಗಬೇಕು.ಇಂಗ್ಲಿಷ್ -ಬ್ರಿಟಿಷ್ ಶಿಕ್ಷಣದ ಪದ್ದತಿಯಿಂದ ನಮ್ಮ ಜೀವನದ ನಂಬಿಕೆಗಳೇ ಇಲ್ಲ. ನಮ್ಮ ಸಾರ್ಥಕತೆಯೇ ಇಲ್ಲದಂತೆ ಆಗಿದೆ. ನಂಬಿಕೆಗಳು ಮತ್ತು ವಿಶ್ವಾಸಗಳು ಬರದೆ ಹೋದರೆ ಈ ವ್ಯವಸ್ಥೆಯನ್ನ ಚನ್ನಾಗಿ ನಡೆಸಲು ಸಾಧ್ಯವಿಲ್ಲ. ಯಾವ ವ್ಯವಸ್ಥೆಯಲ್ಲಿ ನಾವು ಇದ್ದೇವೆ ಸರಿಯಾಗಿ ನಡೆಸಬೇಕು ಎಂದಾದರೆ ನಮ್ಮ‌ ಜ್ಞಾನ ವಿಸ್ತಾರಗೋಳಿಸುವ ಪ್ರಯತ್ನವಾಗಬೇಕು ಎಂದು ಭಾವುಕರಾದರು.

ಬ್ರಿಟಿಷ್ ಕಾಲದ ಶಿಕ್ಷಣ ಪದ್ಧತಿಯನ್ನೇ ನಾವು ಈಗಲೂ ಅನುಸರಿಸುತ್ತಿರುವ ಬಗ್ಗೆ ಕಾಗೇರಿ ಅವರು ಬೇಸರಗೊಂಡಿದ್ದರು. ಆ ಶಿಕ್ಷಣ ಪದ್ಧತಿಯಿಂದಾಗಿ ನಮ್ಮ ವ್ಯವಸ್ಥೆಯಲ್ಲಿ ಸುಧಾರಣೆಯಾಗುತ್ತಿಲ್ಲ ಮತ್ತು ನಮ್ಮಗಳ ಬದುಕಿನಲ್ಲಿ ಸಾರ್ಥಕತೆಯ ಭಾವ ಮೂಡುತ್ತಿಲ್ಲ ಅಂತ ಅವರು ನೊಂದುಕೊಂಡಿದ್ದಾರೆ. ಹಾಗಾಗೇ ನಮ್ಮ ಜ್ಞಾನದ ವಿಸ್ತಾರ ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.

ಇನ್ನು ಇದೇ ವೇಳೆ ಹಿಜಾಬ್ ವಿವಾದದ ಬಗ್ಗೆಯೂ ಮಾತಾಡಿರುವ ಅವರು, ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದೆ, ವಿದ್ಯಾರ್ಥಿಗಳು ನ್ಯಾಯಾಂಗದ ಮೇಲೆ ವಿಶ್ವಾಸ ಇಟ್ಟುಕೊಳ್ಳಬೇಕು ಮತ್ತು ಅದು ನೀಡಿರುವ ಆದೇಶವನ್ನು ಪಾಲಿಸಬೇಕು ಎಂದರು.

ಚುನಾವಣೆ ವ್ಯವಸ್ಥೆ ಬಗ್ಗೆ ಮಾತನಾಡಿದ್ದ ಕಾಗೇರಿ 
ಜಾತಿ ಬಲ, ಹಣ ಬಲ, ತೋಳ್ಬಲ ಹಾಗೂ ಪಕ್ಷಾಂತರ ಬಲಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ(Democratic System)ಕುಸಿತಗೊಳ್ಳುತ್ತಿರುವುದನ್ನು ತಡೆಯಲು ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವಿದೆ ಎಂದು ಇತ್ತೀಚೆಗೆ ಹೇಳಿದ್ದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಲು ಎಲ್ಲೆಡೆ ವ್ಯಾಪಕ ಸಮಾಲೋಚನಾ ಸಭೆ ಮತ್ತು ಚರ್ಚೆಗಳು ಪ್ರಾರಂಭವಾಗಬೇಕಿದೆ. 17 ಲೋಕಸಭಾ ಚುನಾವಣೆಗಳನ್ನು(Lok Sabha Elections) ನೋಡಿದ್ದೇವೆ ಮತ್ತು ರಾಜ್ಯದಲ್ಲಿ(Karnataka) 15 ವಿಧಾನಸಭಾ ಚುನಾವಣೆಗಳನ್ನು(Assembly Elections) ನೋಡಿದ್ದೇವೆ. ಇತ್ತೀಚೆಗೆ ನಡೆದ ವಿಧಾನಪರಿಷತ್‌ ಚುನಾವಣೆ ನಮ್ಮ ಕಣ್ಣಮುಂದೆ ಇದೆ. ಮುಂದೆ ಬೇರೆ ಬೇರೆ ಚುನಾವಣೆಗಳು ಸಹ ಎದುರಾಗಲಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಸುಧಾರಣೆಗಳ ಅಗತ್ಯತೆ ಬಗ್ಗೆ ಹಿರಿಯರು ಹೇಳಿದ್ದಾರೆ. ಸುಧಾರಣೆ ನಿಟ್ಟಿನಲ್ಲಿ ಚರ್ಚೆ ಶುರುವಾಗುವ ವಿಚಾರ ಸಂಬಂಧ ಸರ್ಕಾರಕ್ಕೆ(Government of Karnataka) ಪತ್ರ ಬರೆಯುತ್ತೇನೆ’ ಎಂದಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ನೈತಿಕ ಅಧಃಪತನ ಕುರಿತು ಕೇವಲ ರಾಜಕಾರಣಿಗಳ(Politicians) ವಿರುದ್ಧ ಬೊಟ್ಟು ಮಾಡುವ ಸಂಸ್ಕೃತಿ ದೂರವಾಗಬೇಕು. ರಾಜಕೀಯದ ವಿವಿಧ ಮಜಲುಗಳಲ್ಲಿ ಅಧಿ​ಕಾರವನ್ನು ಅನುಭವಿಸಿ ಉತ್ತುಂಗದಲ್ಲಿರುವ ಸಮಾಜದ ಹಿರಿಯರು ಮೌನ ಮುರಿಯಬೇಕು. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮಾತ್ರವಲ್ಲದೇ ಸಾಹಿತ್ಯ ಹಾಗೂ ಮಾಧ್ಯಮ ಕ್ಷೇತ್ರದ ಗಣ್ಯರೂ ಕೂಡಾ ನೈತಿಕ ಹೊಣೆಗಾರರಾಗಿ ಚುನಾವಣಾ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಮಾರ್ಗದರ್ಶನ ಹಾಗೂ ಸಲಹೆಗಳನ್ನು ದೊರಕಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!