ರಾಜ್ಯದಲ್ಲಿ ಕೋರೋನಾ ಹೊಸ ಸೋಂಕು ಪ್ರಕರಣಗಳು ಇಳಿಕೆಯಾಗುತ್ತಿದ್ದು, ಶನಿವಾರ 3202 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜ.4ರ ಬಳಿಕ (2479) ಕನಿಷ್ಠ ಪ್ರಕರಣ ಇದಾಗಿದೆ. ಪಾಸಿಟಿವಿಟಿ ದರ ಶೇ.2.95ಕ್ಕೆ ಕುಸಿದಿದೆ. 38 ಮಂದಿ ಮರಣವನ್ನಪ್ಪಿದ್ದಾರೆ.
ಬೆಂಗಳೂರು (ಫೆ.13): ರಾಜ್ಯದಲ್ಲಿ ಕೋರೋನಾ ಹೊಸ ಸೋಂಕು ಪ್ರಕರಣಗಳು (Coronavirus cases) ಇಳಿಕೆಯಾಗುತ್ತಿದ್ದು, ಶನಿವಾರ 3202 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜ.4ರ ಬಳಿಕ (2479) ಕನಿಷ್ಠ ಪ್ರಕರಣ ಇದಾಗಿದೆ. ಪಾಸಿಟಿವಿಟಿ ದರ (Positivity Rate) ಶೇ.2.95ಕ್ಕೆ ಕುಸಿದಿದೆ. 38 ಮಂದಿ ಮರಣವನ್ನಪ್ಪಿದ್ದಾರೆ. 8,988 ಮಂದಿ ಚೇತರಿಸಿಕೊಂಡಿದ್ದಾರೆ. ದೈನಂದಿನ ಕೋವಿಡ್ (Covid19) ಪರೀಕ್ಷೆಗಳ ಸಂಖ್ಯೆ ಒಂದು ಲಕ್ಷಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 38,747ಕ್ಕೆ ಇಳಿದಿದೆ.
ಬೆಂಗಳೂರು (Bengaluru) ನಗರದಲ್ಲಿ 1,293 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಉಳಿದಂತೆ ಬೆಳಗಾವಿ (250), ಮೈಸೂರು (197), ಶಿವಮೊಗ್ಗ (155), ತುಮಕೂರು (142) ಮತ್ತು ಬಳ್ಳಾರಿ (126) ಜಿಲ್ಲೆಯಲ್ಲಿ ತುಸು ಹೆಚ್ಚು ಪ್ರಕರಣ ಪತ್ತೆಯಾಗಿದೆ. ಶನಿವಾರ 1.12 ಲಕ್ಷ ಮಂದಿ ಕೋವಿಡ್ ಲಸಿಕೆ (Covid Vaccine) ಪಡೆದಿದ್ದಾರೆ. ಯಾದಗಿರಿಯಲ್ಲಿ ಕೇವಲ ಐದು ಪ್ರಕರಣ ಬೆಳಕಿಗೆ ಬಂದಿದ್ದು ಉಳಿದ ಜಿಲ್ಲೆಗಳಲ್ಲಿ ಎರಡಂಕಿಯಲ್ಲಿ ಹೊಸ ಪ್ರಕರಣಗಳಿವೆ.
ಬೆಂಗಳೂರು ನಗರದಲ್ಲಿ 10, ದಕ್ಷಿಣ ಕನ್ನಡ 4, ಹಾವೇರಿ 3, ತುಮಕೂರು, ಮೈಸೂರು, ರಾಯಚೂರು, ಧಾರವಾಡ, ಬೀದರ್ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ತಲಾ ಇಬ್ಬರು, ಬೆಳಗಾವಿ, ಚಾಮರಾಜನಗರ, ಚಿತ್ರದುರ್ಗ, ಹಾಸನ, ಕೊಡಗು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಮತ್ತು ವಿಜಯಪುರ ಜಿಲ್ಲೆಯಲ್ಲಿ ತಲಾ ಒಬ್ಬರು ಕೋವಿಡ್‌ನಿಂದ ಮರಣ ಹೊಂದಿದ್ದಾರೆ. ಈವರೆಗೆ ಒಟ್ಟು 39.24 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 38.45 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 39,613 ಮಂದಿ ಮರಣವನ್ನಪ್ಪಿದ್ದಾರೆ.
Covid Crisis: 2 ದಿನದಲ್ಲಿ ಪಾಸಿಟಿವಿಟಿ ಭಾರಿ ಇಳಿಕೆ: ಕೋವಿಡ್ ತಹಬದಿಗೆ
ನಗರದಲ್ಲಿ 2718 ಹೊಸ ಕೇಸ್: ಶೇ.6ಕ್ಕೆ ಇಳಿದ ಪಾಸಿಟಿವಿಟಿ: ರಾಜಧಾನಿಯಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಸೋಮವಾರ 2718 ಮಂದಿ ಸೋಂಕು ತಗುಲಿದ್ದು, 15 ಸೋಂಕಿತರು ಸಾವಿಗೀಡಾಗಿದ್ದಾರೆ. 6,726 ಮಂದಿ ಗುಣಮುಖರಾಗಿದ್ದಾರೆ. ನಗರದಲ್ಲಿ ಸದ್ಯ 35,631 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ.
46,000 ಸೋಂಕು ಪರೀಕ್ಷೆ ನಡೆದಿದ್ದು, ಶೇ.6ರಷ್ಟು ಪಾಸಿಟಿವಿಟಿ ದರ(Positivity Rate) ದಾಖಲಾಗಿದೆ. ಒಂದು ಲಕ್ಷಕ್ಕೂ ಅಧಿಕ ನಡೆಸುತ್ತಿದ್ದ ಸೋಂಕು ಪರೀಕ್ಷೆಗಳು ಈಗ 46 ಸಾವಿರಕ್ಕೆ ತಗ್ಗಿವೆ. ಇದರಿಂದ ಹೊಸ ಪ್ರಕರಣಗಳು ಇಳಿಕೆಯಾಗುತ್ತಾ ಎರಡೂವರೆ ಸಾವಿರಕ್ಕೆ ತಗ್ಗಿವೆ. ಆದರೆ, ಸೋಂಕಿತರ ಸಾವು ಮಾತ್ರ 15 ಆಸುಪಾಸಿನಲ್ಲಿಯೇ ಮುಂದುವರೆದಿದೆ.
318 ಮಂದಿ ಗಂಭೀರ: ಜನವರಿ ಮೂರನೇ ವಾರ ಸೋಂಕು ಪ್ರಕರಣ ಎರಡು ಲಕ್ಷ ಗಡಿದಾಟಿತ್ತು. ಹೊಸ ಪ್ರಕರಣಗಳು ಇಳಿಕೆಯಾಗಿ, ಗುಣಮುಖರು ಹೆಚ್ಚಳವಾದ ಹಿನ್ನೆಲೆ ಸಕ್ರಿಯ ಸೋಂಕು ಪ್ರಕರಣಗಳು 35 ಸಾವಿರಕ್ಕಿಂತ ಕಡಿಮೆಯಾಗಿವೆ. ಸಕ್ರಿಯ ಸೋಂಕಿತರ ಪೈಕಿ 1,291 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 318 ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿದ್ದಾರೆ.
ಉಳಿದ 33 ಸಾವಿರಕ್ಕೂ ಅಧಿಕ ಸೋಂಕಿತರು ಮನೆ ಆರೈಕೆಯಲ್ಲಿದ್ದಾರೆ. ನಗರದಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 17.6 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.07 ಲಕ್ಷಕ್ಕೆ ಹಾಗೂ ಸಾವಿನ ಸಂಖ್ಯೆ 16,692ಕ್ಕೆ ಏರಿಕೆಯಾಗಿದೆ. ಕ್ಲಸ್ಟರ್ ಮತ್ತು ಕಂಟೈನ್ಮೆಂಟ್ ವಲಯಗಳ ಸಂಖ್ಯೆ 61ಕ್ಕೆ ಇಳಿಕೆಯಾಗಿದೆ.
Covid Crisis: 71365 ಕೇಸ್, 1217 ಸಾವು, ಸಕ್ರಿಯ ಕೇಸಿನ ಸಂಖ್ಯೆ 8.9 ಲಕ್ಷಕ್ಕಿಳಿಕೆ
ಬಿಎ.2ಗಿಂತ ಬಿಎ.1 ಒಮಿಕ್ರೋನ್ ಉಪತಳಿ ಅಬ್ಬರ: ರಾಜ್ಯದಲ್ಲಿ ಮೂರನೇ ಅಲೆಯನ್ನು ಒಮಿಕ್ರೋನ್‌ನ ನ ಬಿಎ1. 1.529 ಉಪ ತಳಿ ಹೆಚ್ಚು ಪ್ರಭಾವಿಸಿದೆ ಎಂಬುದು ತಳಿ ಪತ್ತೆ ಪರೀಕ್ಷೆಯಿಂದ ತಿಳಿದು ಬಂದಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 1,115 ಒಮಿಕ್ರೋನ್ ಪ್ರಕರಣ ಪತ್ತೆ ಆಗಿದ್ದು ಈ ಪೈಕಿ 807 ಪ್ರಕರಣಗಳು ಬಿಎ 1. 1.529 ಉಪತಳಿಗೆ ಸೇರಿದೆ. ಉಳಿದಂತೆ 219 ಪ್ರಕರಣ ಇನ್ನೊಂದು ಉಪತಳಿ ಬಿಎ2 ಗೆ ಸೇರಿದೆ. ಬಿಎ1 ರ 89 ಪ್ರಕರಣ ಪತ್ತೆಯಾಗಿದೆ.