* ರಾಜ್ಯದಲ್ಲಿ ಹತೋಟಿಗೆ ಬಂದ ಕೊರೋನಾ
* ಸಾವಿನ ಸಂಖ್ಯೆ, ಪಾಸಿಟಿವ್ ಕೇಸ್‌ನಲ್ಲಿ ಭಾರೀ ಇಳಿಕೆ
* ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
ಬೆಂಗಳೂರು, (ಅ.17): ಕರ್ನಾಟಕದಲ್ಲಿ (Karnataka) ಕೊರೋನಾ ಸೋಂಕು (Coroanvirus) ಹತೋಟಿಗೆ ಬಂದಿದೆ. ಇಂದು (ಅ.17) ಹೊಸದಾಗಿ ಕೇವಲ 326 ಪಾಸಿಟಿವ್ ಕೇಸ್ (Passtive Case) ಪತ್ತೆಯಾಗಿದ್ದು, 4 ಜನರು ಮಾತ್ರ ಸಾವನ್ನಪ್ಪಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 29,83,459 ಕ್ಕೆ ಏರಿಕೆಯಾಗಿದ್ರೆ, ಈವರೆಗೆ ಕೊರೊನಾದಿಂದ 37,941 ಜನ ಸಾವನ್ನಪ್ಪಿದ್ದಾರೆ.
undefined
ಮಹಾ, ಕೇರಳ ಗಡಿ ನಿರ್ಬಂಧ ಸಡಿಲಿಕೆ ಶೀಘ್ರ : ಸಿಎಂ
ಸೋಂಕಿತರ ಪೈಕಿ 29,36,039 ಜನ ಗುಣಮುಖರಾಗಿ (recovery) ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 9,450 ಜನರಲ್ಲಿ ಸಕ್ರಿಯ ಪ್ರಕರಣಗಳಿವೆ (Active Cases). ಇನ್ನು ಪಾಸಿಟಿವಿಟಿ(positivity) ದರ 0.41%ರಷ್ಟು ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ (Bengaluru) ಇಂದು (ಭಾನುವಾರ) ಒಂದೇ ದಿನ 173 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, ಸೋಂಕಿನಿಂದ ಒಬ್ಬರು ಮಾತ್ರ ಬಲಿಯಾಗಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಟ್ಟ 12,49,418 ಸೋಂಕಿತರ ಪೈಕಿ 12,26,390 ಜನರು ಗುಣಮುಖರಾಗಿದ್ದು, 6,817 ಸಕ್ರಿಯ ಕೇಸ್ ಇವೆ.
ಜಿಲ್ಲಾವಾರು ಕೊರೋನಾ ಪ್ರಕರಣಗಳು
ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 5, ಬೆಂಗಳೂರು ನಗರ 173, ಬೀದರ್ 0, ಚಾಮರಾಜನಗರ 1, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 3, ಚಿತ್ರದುರ್ಗ 1, ದಕ್ಷಿಣ ಕನ್ನಡ 22, ದಾವಣಗೆರೆ 0, ಧಾರವಾಡ 4, ಗದಗ 0, ಹಾಸನ 12, ಹಾವೇರಿ 0, ಕಲಬುರಗಿ 1, ಕೊಡಗು 8, ಕೋಲಾರ 5, ಕೊಪ್ಪಳ 0, ಮಂಡ್ಯ 4, ಮೈಸೂರು 42, ರಾಯಚೂರು 1, ರಾಮನಗರ 0, ಶಿವಮೊಗ್ಗ 5, ತುಮಕೂರು 17, ಉಡುಪಿ 12, ಉತ್ತರ ಕನ್ನಡ 4, ವಿಜಯಪುರ 0, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.