- ಅಡಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ .10 ಕೋಟಿ
- ಕಳಪೆ ಬಿತ್ತನೆ ಬೀಜ ಮಾರುವ ಕಂಪನಿಗಳ ವಿರುದ್ಧ ಕ್ರಮ
‘ಏಷ್ಯಾನೆಟ್ ಸುವರ್ಣ ನ್ಯೂಸ್ ಹಲೋ ಮಿನಿಸ್ಟರ್’ನಲ್ಲಿ ಮುನಿರತ್ನ
ಬೆಂಗಳೂರು (ಅ. 17): ರಾಜ್ಯದಲ್ಲಿ ಅಡಕೆ ಬೆಳೆಗೆ ಕಾಡುತ್ತಿರುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಸರ್ಕಾರದಿಂದ 10 ಕೋಟಿ ರು. ಅನುದಾನ ನೀಡಲಿದ್ದು, ಈಗಾಗಲೇ 2.75 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ.
ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿ ಶನಿವಾರ ಹಮ್ಮಿಕೊಂಡಿದ್ದ ‘ಹಲೋ ಮಿನಿಸ್ಟರ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲೆ ಚುಕ್ಕಿ ರೋಗ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 2.75 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, ಇನ್ನುಳಿದ ಮೊತ್ತ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
undefined
ಫುಟ್‌ಪಾತ್‌ನಲ್ಲಿ ಇಡ್ಲಿ ಮಾರುತ್ತಿದ್ದ ಹುಡುಗ, ಮಿನಿಸ್ಟರ್ ಮುನಿರತ್ನ ಆಗಿದ್ಹೇಗೆ.?
ಶೀತಲ ಕೇಂದ್ರ:
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ರೈತರ ಬೇಡಿಕೆಯಂತೆ ಶೀತಲ ಕೇಂದ್ರ ಪ್ರಾರಂಭದ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಸಂಸ್ಕರಣಾ ಘಟಕ ಮತ್ತು ಶೀತಲ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಜೊತೆಗೆ, ಕೃಷಿ ಹೊಂಡಗಳ ಅಗತ್ಯವಿರುವ ರೈತರು ಸ್ಥಳೀಯ ತೋಟಗಾರಿಕೆ ಇಲಾಖೆಗೆ ಮನವಿ ಸಲ್ಲಿಸಿದಲ್ಲಿ ತಕ್ಷಣ ಅನುದಾನ ಒದಗಿಸಲಾಗುವುದು ಎಂದರು.
ಶುಂಠಿ ನಾಶಕ್ಕೆ ಪರಿಹಾರ:
ಮಳೆಯಿಂದ ಶುಂಠಿ ನಾಶವಾಗಿರುವ 2,226 ರೈತರಿಗೆ ಪರಿಹಾರ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದು ಅನ್ಯಾಯವಾಗಿದ್ದಲ್ಲಿ ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸಹಾಯಕ ತೋಟಗಾರಿಕೆ ನಿರ್ದೇಶಕರ ನೇಮಕಾತಿ ಸಂಬಂಧ ಹಣಕಾಸು ಇಲಾಖೆಯಿಂದ ಅನುಮತಿ ಪಡೆದು ಮುಂದಿನ 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಜೊತೆಗೆ, ಶೀಘ್ರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಹನಿ ನೀರಾವರಿಗಾಗಿ ಎಸ್ಸಿ, ಎಸ್ಟಿಗೆ ಶೇ.90 ರಷ್ಟುಸಬ್ಸಿಡಿ ನೀಡಲಾಗುತ್ತಿದೆ. ಐದು ಎಕರೆ ಮೇಲ್ಪಟ್ಟವರಿಗೆ ಶೇ.45 ರಷ್ಟುಮಾತ್ರ ನೀಡಲಾಗಿದೆ. ಕೊರೋನಾ ಸಂದರ್ಭದಲ್ಲಿ ಹಣಕಾಸಿನ ತೊಂದರೆಯಿಂದ ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. ಶೀಘ್ರದಲ್ಲಿ ಈ ವ್ಯವಸ್ಥೆಯನ್ನು ಹಿಂದಿನ ಸ್ಥಿತಿಗೆ ತರಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ನಕಲಿ ದಾಖಲೆಗಳನ್ನು ಸೃಷ್ಟಿಮಾಡುವುದು ಬೆಳಕಿಗೆ ಬಂದಿದೆ. ಇದಕ್ಕೆ ಕಡಿವಾಣ ಹಾಕಲು ಮೂಲ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಹನಿ ನೀರಾವರಿ ಜಾರಿಗೆ ಅನುದಾನ ಕೋರಿ 23 ಸಾವಿರ ಅರ್ಜಿಗಳು ಬಂದಿದ್ದು, ಅವರ ನೈಜತೆ ತಿಳಿದು ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಕಳಪೆ ಬೀಜ ಕೊಟ್ಟರೆ ಕ್ರಮ:
ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಣೆ ಮಾಡುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬೀಜಗಳನ್ನು ಪರಿಶೀಲನೆ ನಡೆಸಿ ಕಳಪೆ ಎಂದು ಗೊತ್ತಾದ ತಕ್ಷಣ ಕ್ರಮ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರಿನಲ್ಲಿ 350 ಎಕರೆ ವಿಸ್ತೀರ್ಣದ ಉದ್ಯಾನವನ
- ಜಾರಕಬಂಡೆ ಕಾವಲ್‌ನಲ್ಲಿ ಉದ್ಯಾನ ನಿರ್ಮಾಣ
ಬೆಂಗಳೂರು: ರಾಜಧಾನಿ ಬೆಂಗಳೂರು ನಗರಕ್ಕೆ 24 ಕಿಲೋಮೀಟರ್ ದೂರದಲ್ಲಿರುವ ಜಾರಕಬಂಡೆ ಕಾವಲ್ ಅರಣ್ಯ ಪ್ರದೇಶದಲ್ಲಿ 185 ಎಕರೆ ಜಮೀನನ್ನು ತೋಟಗಾರಿಕೆ ಇಲಾಖೆಗೆ ಪಡೆದುಕೊಳ್ಳಲಾಗುವುದು. ಈ ಪ್ರದೇಶಕ್ಕೆ ಹೊಂದಿಕೊಂಡಿರುವ 85 ಎಕರೆ ಕಂದಾಯ ಭೂಮಿ ಮತ್ತು ಇನ್ನುಳಿದ 80 ಎಕರೆ ಜಮೀನನ್ನು ಸ್ಥಳೀಯರಿಂದ ಸ್ವಾಧೀನ ಪಡೆದು ಒಟ್ಟು 350 ಎಕರೆ ಪ್ರದೇಶದ ಬೃಹತ್ ಉದ್ಯಾನವನ ನಿರ್ಮಿಸಲಾಗುವುದು ಎಂದು ಸಚಿವ ಮುನಿರತ್ನ ತಿಳಿಸಿದರು.
ಗೊರಗೊಂಟೆ ಪಾಳ್ಯ ಸಿಗ್ನಲ್ ಫ್ರೀ:
ಅಲ್ಲದೆ, ಬೆಂಗಳೂರು ನಗರಕ್ಕೆ ಶೇ.70 ರಷ್ಟುವಾಹನಗಳು ತುಮಕೂರು ರಸ್ತೆ ಮೂಲಕ ಬರುತ್ತಿದ್ದು, ವಾಹನ ಸವಾರರಿಗೆ ನೆರವಾಗಲು ಗೊರಗುಂಟೆ ಪಾಳ್ಯದಲ್ಲಿ ಸಿಗ್ನಲ್ ಫ್ರೀ ಕಾರಿಡಾರ್ ಮಾಡಲಾಗುವುದು ಎಂದು ಮುನಿರತ್ನ ಹೇಳಿದರು.